- Home
- Entertainment
- Cine World
- ಈ ಬಿಗ್ ಬಾಸ್ ವಿನ್ನರ್‌ಗೆ ಇನ್ನೂ ಸಿಕ್ಕಿಲ್ಲ ಕಾರು, ತಮಾಷೆ ಮಾಡುತ್ತಲೇ ನೋವು ತೋಡಿಕೊಂಡ ಸ್ಪರ್ಧಿ
ಈ ಬಿಗ್ ಬಾಸ್ ವಿನ್ನರ್‌ಗೆ ಇನ್ನೂ ಸಿಕ್ಕಿಲ್ಲ ಕಾರು, ತಮಾಷೆ ಮಾಡುತ್ತಲೇ ನೋವು ತೋಡಿಕೊಂಡ ಸ್ಪರ್ಧಿ
ಈ ಬಿಗ್ ಬಾಸ್ ವಿನ್ನರ್‌ಗೆ ಇನ್ನೂ ಸಿಕ್ಕಲ್ಲ ಕಾರು, ತಮಾಷೆ ಮಾಡುತ್ತಲೇ ನೋವು ತೋಡಿಕೊಂಡ ಸ್ಪರ್ಧಿ, ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿ ಬಹುಮಾನ ಜೊತೆಗೆ ಕಾರು ಕೂಡ ಆಫರ್ ಮಾಡಲಾಗಿತ್ತು. ಆದರೆ ಇದುವರೆಗೂ ಕಾರು ಸಿಕ್ಕಿಲ್ಲ ಎಂದು ಸ್ವತಃ ವಿನ್ನರ್ ಹೇಳಿದ್ದಾರೆ.

ಬಿಗ್ ಬಾಸ್ ವಿನ್ನರ್ ಬಹುಮಾನ
ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದ ಸ್ಪರ್ಧಿಗಳಿಗೆ 50 ಲಕ್ಷ ರೂಪಾಯಿ ಬಹುಮಾನ ಹಾಗೂ ಕಾರು ಬಹುಮಾನವಾಗಿ ನೀಡಲಾಗುತ್ತದೆ. ಆದರೆ ಈ ಬಿಗ್ ಬಾಸ್ ವಿನ್ನರ್‌ಗೆ ಇನ್ನೂ ಬಹುಮಾನದ ಕಾರು ಸಿಕ್ಕಿಲ್ಲ ಎಂದಿದ್ದಾರೆ. ಸ್ವತಃ ಬಿಗ್ ಬಾಸ್ ವಿನ್ನರ್ ಈ ನೋವು ತೋಡಿಕೊಂಡಿದ್ದಾರೆ. ತಮಾಷೆ ಮಾಡುತ್ತಲೇ ಬಿಗ್ ಬಾಸ್ ವಿನ್ನರ್ ಈ ನೋವು ತೋಡಿಕೊಂಡಿದ್ದಾರೆ.
ಏನಿದು ಬಹುಮಾನ ವಿವಾದ?
ಹಿಂದಿ ಬಿಗ್ ಬಾಸ್ 19ರ ವಿನ್ನರ್ ಗೌರವ್ ಖನ್ನ ತಮಗೆ ಬಹುಮಾನದ ಕಾರು ಸಿಕ್ಕಿಲ್ಲ ಎಂದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೌರವ್ ಖನ್ನ ವಿನ್ನರ್ ಆಗಿದ್ದರು. ಬಿಗ್ ಬಾಸ್ ವೇದಿಕೆಯಲ್ಲಿ ಗೌರವ್ ಖನ್ನಗಾ 50 ಲಕ್ಷ ರೂಪಾಯಿ ಚೆಕ್ ನೀಡಲಾಗಿತ್ತು. ಇದೇ ವೇಳೆ ಕಾರು ಬಹುಮಾನದ ಭರವಸೆ ನೀಡಲಾಗಿತ್ತು. ಆದರೆ ಕಾರು ಇದುವರೆಗೆ ಸಿಕ್ಕಿಲ್ಲ ಎಂದು ಗೌರವ್ ಖನ್ನ ತಮಾಷೆ ಮಾಡಿದ್ದಾರೆ.
ಪ್ರಣಿತ್ ಮೋರೆ ಭೇಟಿ ವೇಳೆ ಹೇಳಿಕೆ
ಹೊಟೆಲ್ ಡಿನ್ನರ್ ಮೀಟ್‍ನಲ್ಲಿ ಬಿಗ್ ಬಾಸ್ 19ರ ಸ್ಪರ್ಧಿ ಪ್ರಣಿತ್ ಮೋರೆ ಹಾಗೂ ಗೌರವ್ ಖನ್ನ ಭೇಟಿಯಾಗಿದ್ದಾರೆ. ಈ ವೇಳೆಯ ಮಾತುಕತೆಯಲ್ಲಿ ತಮಾಷೆಯಾಗಿ ಗೌರವ್ ಖನ್ನ ಈ ಮಾತು ಹೇಳಿದ್ದಾರೆ. ಒಂದು ತಿಂಗಳಾಯಿತು ಆದರೆ ಬಹುಮಾನದ ಕಾರು ಸಿಕ್ಕಿಲ್ಲ ಎಂದಿದ್ದಾರೆ.
ಬಿಗ್ ಬಾಸ್ ಪ್ರತಿಕ್ರಿಯೆ ಏನು?
ಗೌರವ್ ಖನ್ನ ಹೇಳಿಕೆ ಕುರಿತು ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ ಬಿಗ್ ಬಾಸ್ ವಿನ್ನರ್‌ಗೆ ನೀಡುವ ಕಾರು ಅಥವ ಇನ್ಯಾವುದೇ ಬಹುಮಾನಗಳ ಪ್ರಕ್ರಿಯೆ, ವಿತರಣೆಗೆ ಸರಿಸುಮಾರು 3 ತಿಂಗಳ ಕಾಲಾವಕಾಶ ಬೇಕು ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಪ್ರತಿಕ್ರಿಯೆ ಏನು?
ರೋಚಕತೆ ಹೆಚ್ಚಿಸಿದ ಕನ್ನಡ ಬಿಗ್ ಬಾಸ್
ಹಿಂದಿ ಬಿಗ್ ಬಾಸ್ ಮುಕ್ತಾಯಗೊಂಡಿದ್ದರೆ, ಇತ್ತ ಕನ್ನಡ ಬಿಗ್ ಬಾಸ್ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಗಿಲ್ಲಿ ನಟ, ಕಾವ್ಯ, ಅಶ್ವಿನಿ ಗೌಡ, ಆಶಿಕಾ ಸೇರಿದಂತೆ ಪ್ರಮುಖ ಸ್ಪರ್ಧಿಗಳ ಆಟ, ಯಾರು ಫಿನಾಲೆ ವೇದಿಕೆ ಪ್ರವೇಶಿಸುತ್ತಾರೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ.
ರೋಚಕತೆ ಹೆಚ್ಚಿಸಿದ ಕನ್ನಡ ಬಿಗ್ ಬಾಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

