- Home
- Entertainment
- Photos: ಹುಡುಗಿಗೋಸ್ಕರ 'ಭರ್ಜರಿ ಬ್ಯಾಚುಲರ್ಸ್'ಗೆ ಬಂದಿದ್ದ 'ಗಾಬರಿ ಸಿಂಗ್'ಗೆ ಕಂಕಣಭಾಗ್ಯ ಕೂಡಿ ಬಂತು!
Photos: ಹುಡುಗಿಗೋಸ್ಕರ 'ಭರ್ಜರಿ ಬ್ಯಾಚುಲರ್ಸ್'ಗೆ ಬಂದಿದ್ದ 'ಗಾಬರಿ ಸಿಂಗ್'ಗೆ ಕಂಕಣಭಾಗ್ಯ ಕೂಡಿ ಬಂತು!
Comedy Khiladigalu Show Bhuvanesh: ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಮೂಲಕ ಮನೆಮಾತಾಗಿದ್ದ ಹಾಸ್ಯ ನಟ ಭುವನೇಶ್ ಹೊಳೇನರಸೀಪುರ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬುಲೆಟ್ ರಕ್ಷಕ್ ಕೂಡ ಈ ಮದುವೆಗೆ ಹೋಗಿ ಶುಭ ಹಾರೈಸಿದ್ದಾರೆ.

ಹೊಸ ಬಾಳಿಗೆ ಕಾಲಿಟ್ಟರು
ಹಾಸನದ ಹೊಳೇನರಸೀಪುರದಲ್ಲಿ ಈ ಮದುವೆ ನಡೆದಿದೆ. ಇಬ್ಬರು ಕುಟುಂಬಸ್ಥರ ಮಧ್ಯೆ ಈ ಮದುವೆ ನಡೆದಿದೆ. ಭುವನೇಶ್ ಅವರು ಕುಟುಂಬಸ್ಥರು, ಆಪ್ತರ ಮಧ್ಯೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ನಿಶ್ಚಿತಾರ್ಥ ಮಾಡಿಕೊಂಡಿದ್ರು
ಭುವನೇಶ್ ಅವರು ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿತ್ತು.
ಭುವನೇಶ್ ರೀಲ್ಸ್ ಮಾಡುತ್ತಿದ್ದರು
ಹುಡುಗರ ಒಂದು ತಂಡ ಕಟ್ಟಿಕೊಂಡು, ಭುವನೇಶ್ ಅವರು ರೀಲ್ಸ್ ಮಾಡುತ್ತಿದ್ದರು. ಈ ರೀಲ್ಸ್ ನೋಡಿದ ಅನೇಕರು ಕಾಮಿಡಿ ಕಿಲಾಡಿಗಳು ಶೋಗೆ ಆಡಿಷನ್ ಕೊಡಿ ಎಂದು ಹೇಳಿದ್ದರು. ಅದರಂತೆ ಅವರು ಆಯ್ಕೆಯಾಗಿದ್ದರು.
ಗಾಬರಿ ಸಿಂಗ್ ಎಂದು ಹೆಸರು
ಜಗ್ಗೇಶ್ ಅವರು ಭುವನೇಶ್‌ಗೆ ಗಾಬರಿ ಸಿಂಗ್ ಎಂದು ತಮಾಷೆಗೆ ಕರೆದಿದ್ದರು. ಅಲ್ಲಿಂದ ಅವರು ಗಾಬರಿ ಸಿಂಗ್ ಆಗಿಯೇ ಫೇಮಸ್ ಆಗಿದ್ದಾರೆ.
ಜನಪ್ರಿಯತೆ ಗಳಿಸಿದರು
ಭುವನೇಶ್ ಅವರು ಕೆಲವು ಕಿರುತೆರೆ ಕಾರ್ಯಕ್ರಮಗಳು ಹಾಗೂ ಸಿನಿಮಾಗಳಲ್ಲೂ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು, ಜನಪ್ರಿಯತೆ ಗಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

