- Home
- Entertainment
- Priyanka Pandit: ಕೆಲವೇ ಸೆಕೆಂಡ್‌ಗಳ ವೈರಲ್ ವಿಡಿಯೋ, ನಟಿಯ ಕೆರಿಯರ್ ಸರ್ವನಾಶ! ಈಗ ಎಲ್ಲಿದ್ದಾರೆ ಗೊತ್ತಾ?
Priyanka Pandit: ಕೆಲವೇ ಸೆಕೆಂಡ್‌ಗಳ ವೈರಲ್ ವಿಡಿಯೋ, ನಟಿಯ ಕೆರಿಯರ್ ಸರ್ವನಾಶ! ಈಗ ಎಲ್ಲಿದ್ದಾರೆ ಗೊತ್ತಾ?
Priyanka Pandit: ಒಂದು ಕಾಲದಲ್ಲಿ ಭೋಜ್‌ಪುರಿ ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿಯೊಬ್ಬರು, ಕೇವಲ ಒಂದು ವೈರಲ್ MMS ವಿವಾದದಿಂದಾಗಿ ತಮ್ಮ ಕೆರಿಯರ್ ಅನ್ನೇ ಕಳೆದುಕೊಂಡರು. ಕೊನೆಗೆ ಗ್ಲಾಮರ್ ಲೋಕವನ್ನೇ ಬಿಟ್ಟು ಹೋಗಬೇಕಾಯ್ತು.

ಕೆರಿಯರ್‌ಗೆ ದೊಡ್ಡ ಹೊಡೆತ
ಭೋಜ್‌ಪುರಿ ಚಿತ್ರರಂಗದಲ್ಲಿ ತಮ್ಮ ಸೌಂದರ್ಯ, ನಟನೆ ಮತ್ತು ಹಿಟ್ ಸಿನಿಮಾಗಳಿಂದ ಹೆಸರು ಮಾಡಿದ್ದ ಪ್ರಿಯಾಂಕಾ ಪಂಡಿತ್, ಒಂದು ಕಾಲದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. ಆದರೆ, ಅವರದ್ದು ಎನ್ನಲಾದ ಒಂದು MMS ವಿವಾದ ಅವರ ಕೆರಿಯರ್‌ಗೆ ದೊಡ್ಡ ಹೊಡೆತ ಕೊಡ್ತು. ಇದರಿಂದ ಅವರು ನಿಧಾನವಾಗಿ ಸಿನಿಮಾ ಲೋಕದಿಂದ ದೂರವಾದರು. ಒಂದು ಕಾಲದಲ್ಲಿ ದೊಡ್ಡ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಳ್ಳುತ್ತಿದ್ದ ಪ್ರಿಯಾಂಕಾ, ಇಂದು ಸಂಪೂರ್ಣವಾಗಿ ಬದಲಾಗಿದ್ದಾರೆ. ಗ್ಲಾಮರ್ ಮತ್ತು ಲೈಮ್‌ಲೈಟ್ ಬಿಟ್ಟು, ಅವರು ಈಗ ಆಧ್ಯಾತ್ಮದ ದಾರಿ ಹಿಡಿದಿದ್ದಾರೆ. ಸದ್ಯ ಅವರು ವೃಂದಾವನದಲ್ಲಿ ಕೃಷ್ಣನ ಭಕ್ತಿ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಯಾರು ಈ ಭೋಜ್‌ಪುರಿ ಮಾಜಿ ನಟಿ ಪ್ರಿಯಾಂಕಾ ಪಂಡಿತ್?
ಪ್ರಿಯಾಂಕಾ ಪಂಡಿತ್ ಭೋಜ್‌ಪುರಿ ಸಿನಿಮಾರಂಗದ ಜನಪ್ರಿಯ ಮುಖ. ಉತ್ತರ ಪ್ರದೇಶದ ಜೌನ್‌ಪುರ್‌ನಲ್ಲಿ ಬೆಳೆದ ಅವರು, ಭೋಜ್‌ಪುರಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ತಮ್ಮ ಕೆರಿಯರ್‌ನಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖೇಸಾರಿ ಲಾಲ್ ಯಾದವ್, ಪವನ್ ಸಿಂಗ್ ಮತ್ತು ರಿತೇಶ್ ಪಾಂಡೆ ಅವರಂತಹ ದೊಡ್ಡ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡಿದ್ದರು. ಕಡಿಮೆ ಸಮಯದಲ್ಲಿಯೇ ಅಪಾರ ಅಭಿಮಾನಿಗಳನ್ನು ಗಳಿಸಿದ ನಟಿಯರಲ್ಲಿ ಇವರೂ ಒಬ್ಬರು. ತಮ್ಮ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್‌ನಿಂದಾಗಿ ಪ್ರಾದೇಶಿಕ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು.
2022ರಲ್ಲಿ ಪ್ರಿಯಾಂಕಾ ಪಂಡಿತ್‌ಗೆ ಎದುರಾದ ದೊಡ್ಡ ಆಘಾತ
2022ನೇ ಇಸವಿ ಪ್ರಿಯಾಂಕಾ ಪಂಡಿತ್ ಅವರ ಕೆರಿಯರ್‌ನ ಅತ್ಯಂತ ಕಠಿಣ ವರ್ಷವಾಗಿತ್ತು. ಇದೇ ಸಮಯದಲ್ಲಿ, ಸೋಶಿಯಲ್ ಮೀಡಿಯಾ ಮತ್ತು ಹಲವು ವೆಬ್‌ಸೈಟ್‌ಗಳಲ್ಲಿ ಒಂದು ಆಕ್ಷೇಪಾರ್ಹ ಎನ್ನಲಾದ MMS ವಿಡಿಯೋ ವೈರಲ್ ಆಯ್ತು. ಆ ವಿಡಿಯೋದಲ್ಲಿ ಇರುವುದು ಪ್ರಿಯಾಂಕಾ ಪಂಡಿತ್ ಎಂದು ಹೇಳಲಾಯಿತು. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೇಗವಾಗಿ ಹರಡಿದ್ದರಿಂದ, ಅವರ ಇಮೇಜ್‌ಗೆ ದೊಡ್ಡ ಡ್ಯಾಮೇಜ್ ಆಯ್ತು. ವಿವಾದ ಹೆಚ್ಚಾದಂತೆ, ನಟಿಯ ಹೆಸರು ನಿರಂತರವಾಗಿ ಸುದ್ದಿಯಲ್ಲಿತ್ತು. ಆದರೆ, ಪ್ರಿಯಾಂಕಾ ಪಂಡಿತ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದರು. ಇದು ತಮ್ಮ ಇಮೇಜ್ ಹಾಳುಮಾಡಲು ಮಾಡಿದ ಷಡ್ಯಂತ್ರ ಎಂದು ಅವರು ಹೇಳಿದ್ದರು. ಈ ವಿವಾದದಿಂದಾಗಿ ತಮ್ಮ ಕೆರಿಯರ್ ಮೇಲೆ ನೇರ ಪರಿಣಾಮ ಬೀರಿದೆ ಮತ್ತು ವೃತ್ತಿಪರವಾಗಿ ನಷ್ಟ ಅನುಭವಿಸಬೇಕಾಯಿತು ಎಂದು ಅವರು ಹೇಳಿಕೊಂಡಿದ್ದರು. ಈ ವೈರಲ್ MMS ಕೆಲವು ಸೆಕೆಂಡ್‌ಗಳಿಂದ ಹಿಡಿದು ಕೆಲವು ನಿಮಿಷಗಳವರೆಗೆ ಇತ್ತು ಎಂದು ಹೇಳಲಾಗುತ್ತದೆಯಾದರೂ, ಖಚಿತ ಮಾಹಿತಿ ಇಲ್ಲ.
ವಿವಾದದ ನಂತರ ಹೆಚ್ಚಾದ ಸಂಕಷ್ಟಗಳು
ವರದಿಗಳ ಪ್ರಕಾರ, ಈ ವಿವಾದದ ನಂತರ ಅವರ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಸಂಬಂಧಗಳ ಮೇಲೂ ಪರಿಣಾಮ ಬೀರಿತು. ಆ ಸಮಯದಲ್ಲಿ ಅವರ ಬಾಯ್‌ಫ್ರೆಂಡ್ ಅವರಿಂದ ದೂರವಾದರು ಮತ್ತು ಚಿತ್ರರಂಗದ ಅನೇಕರು ಕೂಡ ಅಂತರ ಕಾಯ್ದುಕೊಂಡರು ಎಂದು ಹೇಳಲಾಗುತ್ತೆ. ಈ ಮಾತುಗಳಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ವಿವಾದದ ನಂತರ ಪ್ರಿಯಾಂಕಾ ಅವರ ಸಿನಿಮಾ ಕೆರಿಯರ್ ಮೊದಲಿನಂತೆ ಇರಲಿಲ್ಲ ಅನ್ನೋದು ಮಾತ್ರ ಸತ್ಯ.
ಗ್ಲಾಮರ್ ಬಿಟ್ಟು ವೃಂದಾವನ ಸೇರಿದ ನಟಿ, ಪ್ರೇಮಾನಂದ ಮಹಾರಾಜ್ ಶಿಷ್ಯೆ
ಸಿನಿಮಾ ಲೋಕದಿಂದ ದೂರವಾದ ನಂತರ, ಪ್ರಿಯಾಂಕಾ ಪಂಡಿತ್ ತಮ್ಮ ಜೀವನಕ್ಕೆ ಹೊಸ ದಿಕ್ಕು ನೀಡಲು ನಿರ್ಧರಿಸಿದರು. 2024ರಲ್ಲಿ ಅವರು ಸಿನಿಮಾಗಳಿಗೆ ವಿದಾಯ ಹೇಳಿ, ವೃಂದಾವನದಲ್ಲಿ ನೆಲೆಸಿದರು ಮತ್ತು ಆಧ್ಯಾತ್ಮಿಕ ಜೀವನದತ್ತ ಹೆಜ್ಜೆ ಹಾಕಿದರು. ಶ್ರೀಕೃಷ್ಣನ ಭಕ್ತಿ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಅವರ ಆಸಕ್ತಿ ಹೆಚ್ಚಾಗುತ್ತಾ ಹೋಯಿತು. ಈಗ ಪ್ರಿಯಾಂಕಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಸಿನಿಮಾ ವಿಚಾರಗಳ ಬದಲು ಧಾರ್ಮಿಕ ಕಾರ್ಯಕ್ರಮಗಳು, ಪೂಜೆ ಮತ್ತು ಭಕ್ತಿಯ ಕ್ಷಣಗಳೇ ಹೆಚ್ಚಾಗಿ ಕಾಣಿಸುತ್ತವೆ. ವರದಿಗಳ ಪ್ರಕಾರ, ಅವರು ಈಗ ಸಾಧ್ವಿಯಂತೆ ಜೀವನ ನಡೆಸುತ್ತಿದ್ದು, ತಮ್ಮ ಹೆಚ್ಚಿನ ಸಮಯವನ್ನು ಪೂಜೆ ಮತ್ತು ಸೇವಾ ಕಾರ್ಯಗಳಲ್ಲಿ ಕಳೆಯುತ್ತಿದ್ದಾರೆ. ಅವರು ಪ್ರೇಮಾನಂದ ಮಹಾರಾಜ್ ಅವರ ಶಿಷ್ಯೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

