- Home
- Entertainment
- Amurthadhaare ಶಕುಂತಲಾ ಅರೆಸ್ಟ್: ಜೈಲಿಗೆ ಹೋಗೋ ಮುನ್ನ ಸೀರಿಯಲ್ ತಾರೆಯರ ಜೊತೆ ಫೋಟೋಶೂಟ್
Amurthadhaare ಶಕುಂತಲಾ ಅರೆಸ್ಟ್: ಜೈಲಿಗೆ ಹೋಗೋ ಮುನ್ನ ಸೀರಿಯಲ್ ತಾರೆಯರ ಜೊತೆ ಫೋಟೋಶೂಟ್
ಜನಪ್ರಿಯ ಅಮೃತಧಾರೆ ಸೀರಿಯಲ್ ಮುಕ್ತಾಯ ಹಂತ ತಲುಪಿದ್ದು, ಶಕುಂತಲಾ ಪಾತ್ರಧಾರಿ ಜೈಲು ಸೇರುವುದು ಖಚಿತವಾಗಿದೆ. ಹಿರಿಯ ನಟಿ ವನಿತಾ ವಾಸು ಅವರು ತಂಡದೊಂದಿಗಿನ ತಮ್ಮ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ಅಮೃತಧಾರೆ ಸೀರಿಯಲ್ ಮುಕ್ತಾಯ
ಅಮೃತಧಾರೆ ಸೀರಿಯಲ್ (Amruthadhaare Serial) ಇನ್ನೇನು ಮುಗಿಯಲಿದೆ. ಇದಾಗಲೇ ಇದರ ಅಂತಿಮ ಸಂಚಿಕೆಯ ಪ್ರೊಮೋ ಅನ್ನು ವಾಹಿನಿ ಶೇರ್ ಮಾಡಿಕೊಂಡಿದೆ.
ಶಕುಂತಲಾ ಜೈಲುಪಾಲು
ಈ ಪ್ರೋಮೋ ನೋಡಿದಾಗ ಹಾಗೂ ಎಲ್ಲರೂ ಅಂದುಕೊಂಡಂತೆ ಶಕುಂತಲಾ ಮತ್ತು ಜೈದೇವ ಜೈಲು ಪಾಲಾಗುವುದು ಖಂಡಿತ. ವಾಹಿನಿ ಶೇರ್ ಮಾಡಿರುವ ಪ್ರೊಮೋದಲ್ಲಿ ಕೂಡ ಶಕುಂತಲಾ ಪಾತ್ರಧಾರಿಯನ್ನು ಬಿಳಿಯ ಜೈಲಿನ ಸೀರೆಯಲ್ಲಿ ತೋರಿಸಲಾಗಿದೆ. ಅಲ್ಲಿಗೆ ಶಕುಂತಲಾ ಜೈಲಿಗೆ ಹೋಗುವುದು ಕನ್ಫರ್ಮ್ ಆಗಿದೆ.
ಅಮೃತಧಾರೆ ತಂಡದೊಂದಿಗೆ
ಇದರ ನಡುವೆಯೇ, ಶಕುಂತಲಾ ಪಾತ್ರಧಾರಿ, ಹಿರಿಯ ನಟಿ ವನಿತಾ ವಾಸು ಅವರು ಅಮೃತಧಾರೆ ಸೀರಿಯಲ್ ತಂಡದೊಂದಿಗೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ತಾರೆಯರ ಜೊತೆ ಬಾಂಧವ್ಯ
ಸುಮಾರು ಮೂರೂವರೆ ವರ್ಷಗಳವರೆಗೆ ಒಂದು ಸೀರಿಯಲ್ನಲ್ಲಿ ಕೆಲಸ ಮಾಡುವಾಗ, ಸಹಜವಾಗಿ ಸೀರಿಯಲ್ ಸಹೊದ್ಯೋಗಿಗಳ ನಡುವೆ ಒಂದು ರೀತಿಯ ಗಟ್ಟಿಯಾದ ಬಾಂಧವ್ಯ ಬರುವುದು ಸಹಜ. ಅದೇ ರೀತಿ ಸೀರಿಯಲ್ ಮುಗಿದಾಗ, ಒಬ್ಬೊಬ್ಬರು ಒಂದೊಂದು ಕಡೆ ಹೋಗುವಾಗ ತಂಡದವರ ಪೈಕಿ ಹಲವರು ಭಾವುಕರಾಗುವುದು ಸಹಜವೇ.
ಫೋಟೋಗಳ ಶೇರ್
ಇದೇ ಕಾರಣಕ್ಕೆ, ಸೀರಿಯಲ್ ಕಲಾವಿದರ ಜೊತೆಗಿನ ನೆನಪುಗಳನ್ನು ನಟಿ ವನಿತಾ ವಾಸು ಹಂಚಿಕೊಂಡಿದ್ದಾರೆ. ಸೀರಿಯಲ್ನ ಹಲವು ತಾರೆಯರನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ.
ನಟಿಯ ಕುರಿತು
ವನಿತಾ ವಾಸು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಚಿತ್ರರಂಗದಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿ ಕೂಡ ಅಭಿನಯಿಸಿದ್ದಾರೆ. 1987 ರಲ್ಲಿ ತೆರೆಕಂಡ ಸುರೇಶ್ ಹೆಬ್ಬಳಿಕರ್ ನಿರ್ದೇಶನದ ಅಗುಂತಕ' ಚಿತ್ರದ ಮೂಲಕ ಪ್ರಸಿದ್ಧಿಗೆ ಬಂದರು.ನಂತರ `ಚೀರಂಜೀವಿ ಸುಧಾಕರ್', ಶಕ್ತಿ',`ಕಾಡಿನ ಬೆಂಕಿ',ತರ್ಕ',`ಉತ್ಕರ್ಷ' ಮುಂತಾದ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದು, ಇದೀಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













