- Home
- Entertainment
- "ಅದು ಭಯಾನಕ, ನೋವಿನ ಕ್ಷಣವಾಗಿತ್ತು": ಕಾರು ಅಪಘಾತದ ಬಗ್ಗೆ ಮೌನ ಮುರಿದ 'ದಿಲ್‌ಬರ್' ಬೆಡಗಿ ನೋರಾ ಫತೇಹಿ
"ಅದು ಭಯಾನಕ, ನೋವಿನ ಕ್ಷಣವಾಗಿತ್ತು": ಕಾರು ಅಪಘಾತದ ಬಗ್ಗೆ ಮೌನ ಮುರಿದ 'ದಿಲ್‌ಬರ್' ಬೆಡಗಿ ನೋರಾ ಫತೇಹಿ
Nora Fatehi car accident: ಇದೀಗ ಅಪಘಾತದ ನಂತರ ನೋರಾ ಫತೇಹಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಮಾತನಾಡಿದ್ದು, ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಅವರ ಕಾರಿಗೆ ಡಿಕ್ಕಿ ಹೊಡೆದ ನಂತರ ಅಸಮಾಧಾನಗೊಂಡಿರುವುದಾಗಿ ತಿಳಿಸಿದ್ದಾರೆ.

ಸನ್ ಬರ್ನ್ ಫೆಸ್ಟಿವಲ್‌ಗೆ ತೆರಳುತ್ತಿದ್ದ ನೋರಾ ಫತೇಹಿ
ಬಾಲಿವುಡ್ ನಟಿ ನೋರಾ ಫತೇಹಿ ಪ್ರಯಾಣಿಸುತ್ತಿದ್ದ ಕಾರು ಮುಂಬೈನಲ್ಲಿ ಶುಕ್ರವಾರ (ಡಿಸೆಂಬರ್ 20) ಅಪಘಾತಕ್ಕೀಡಾಗಿದೆ. ನೋರಾ ಫತೇಹಿ ಸನ್ ಬರ್ನ್ ಫೆಸ್ಟಿವಲ್‌ಗೆ ತೆರಳುತ್ತಿದ್ದರು. ಅಲ್ಲಿ ಅವರು ಡೇವಿಡ್ ಗುಟ್ಟಾ ಅವರೊಂದಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡಬೇಕಿತ್ತು.
ಘಟನೆಯ ಕುರಿತು ಮಾತನಾಡಿದ ನೋರಾ ಫತೇಹಿ
ಇದೀಗ ಅಪಘಾತದ ನಂತರ, ನೋರಾ ಫತೇಹಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಮಾತನಾಡಿದ್ದು, ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಅವರ ಕಾರಿಗೆ ಡಿಕ್ಕಿ ಹೊಡೆದ ನಂತರ ಅಸಮಾಧಾನಗೊಂಡಿರುವುದಾಗಿ ತಿಳಿಸಿದ್ದಾರೆ.
ಮದ್ಯವನ್ನು ದ್ವೇಷಿಸುತ್ತೇನೆ
ಅಪಘಾತವಾಗಿ ಕೆಲವು ಗಂಟೆಗಳ ನಂತರ, ನೋರಾ ಫತೇಹಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, "ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬರು ನನ್ನ ಕಾರಿಗೆ ಡಿಕ್ಕಿ ಹೊಡೆದರು. ಅದರ ಪರಿಣಾಮವು ತುಂಬಾ ತೀವ್ರವಾಗಿತ್ತು. ಅಪಘಾತದಲ್ಲಿ ನನ್ನ ತಲೆ ಕಿಟಕಿಗೆ ಡಿಕ್ಕಿ ಹೊಡೆಯಿತು. ಕೆಲವು ಸಣ್ಣಪುಟ್ಟ ಗಾಯಗಳು, ಊತ ಮತ್ತು ತಲೆಗೆ ಸ್ವಲ್ಪ ಗಾಯವನ್ನು ಹೊರತುಪಡಿಸಿ ನಾನು ಚೆನ್ನಾಗಿದ್ದೇನೆ. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನೀವು ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಎಂದು ಹೇಳಲು ನಾನಿಲ್ಲಿ ಬಯಸುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಮದ್ಯವನ್ನು ದ್ವೇಷಿಸುತ್ತೇನೆ." ಎಂದು ತಿಳಿಸಿದ್ದಾರೆ.
ಭಯಾನಕ ಮತ್ತು ನೋವಿನ ಕ್ಷಣವಾಗಿತ್ತು
ತಾನು ಎಂದಿಗೂ ಮದ್ಯ ಸೇವಿಸಿಲ್ಲ, ಮಾದಕ ದ್ರವ್ಯ ಅಥವಾ ಗಾಂಜಾ ಬಳಸುವುದಿಲ್ಲ. ಕುಡಿದು ವಾಹನ ಚಲಾಯಿಸುವುದರಿಂದ ಜನರು ಅಪಾಯಕ್ಕೆ ಸಿಲುಕುತ್ತಾರೆ. ಸ್ವಲ್ಪ ಸಮಯದವರೆಗೆ ನಾನು ನೋವಿನಿಂದ ಬಳಲಿದೆ. ನಾನು ಜೀವಂತವಾಗಿರುವುದರಿಂದ ದೇವರಿಗೆ ಧನ್ಯವಾದಗಳು ಹೇಳಲು ಬಯಸುತ್ತೇನೆ. ನಾನು ಸುಳ್ಳು ಹೇಳುವುದಿಲ್ಲ. ಅದು ತುಂಬಾ ಭಯಾನಕ ಮತ್ತು ನೋವಿನ ಕ್ಷಣವಾಗಿತ್ತು. ನನಗೆ ಇನ್ನೂ ಸ್ವಲ್ಪ ಆಘಾತವಾಗಿದೆ ಎಂದು ನೋರಾ ಹೇಳಿದ್ದಾರೆ.
ಪ್ರದರ್ಶನದಲ್ಲಿ ಭಾಗವಹಿಸಿದ ನೋರಾ
ಕೊನೆಗೂ ಸನ್‌ಬರ್ನ್ 2025 ರಲ್ಲಿ ಡೇವಿಡ್ ಗೆಟ್ಟಾ ಅವರೊಂದಿಗೆ ವೇದಿಕೆಯಲ್ಲಿ ನೋರಾ ಪ್ರದರ್ಶನ ನೀಡಿದ್ದು, ಘಟನೆಯ ನಂತರ ಇಷ್ಟು ಬೇಗ ಪ್ರದರ್ಶನ ನೀಡಿದ್ದಕ್ಕೆ ಅನೇಕರು ಪ್ರಶ್ನಿಸಿದ್ದಾರೆ. ಅದಕ್ಕೆ ನೋರಾ, ತನ್ನ ಕೆಲಸಕ್ಕೆ ಏನೂ ಅಡ್ಡಿಯಾಗಲು ಬಿಡುವುದಿಲ್ಲ. ಕುಡಿದ ಚಾಲಕ ತಾನು ಕಷ್ಟಪಟ್ಟು ದುಡಿದ ಕ್ಷಣಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

