MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಹೆಣ್ಣಾಗಿ ಹೀಗೆ ಮಾಡ್ತಾರಾ? ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿದ ನಟಿ ವಿಷ್ಣುಪ್ರಿಯಾ!

ಹೆಣ್ಣಾಗಿ ಹೀಗೆ ಮಾಡ್ತಾರಾ? ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿದ ನಟಿ ವಿಷ್ಣುಪ್ರಿಯಾ!

ತಮ್ಮ ಬಗ್ಗೆ ಕೆಟ್ಟದಾಗಿ ಮಾತಾಡಿ, ಅಸಭ್ಯ ವಿಡಿಯೋ ಮಾಡಿದ ಯೂಟ್ಯೂಬ್ ಚಾನೆಲ್ ವಿರುದ್ಧ ನಟಿ ವಿಷ್ಣುಪ್ರಿಯಾ ಗರಂ ಆಗಿದ್ದಾರೆ. 'ಪ್ಲೇ ಲೈಕ್ ಇನ್‌ಕಾಗ್ನಿಟೋ' ಚಾನೆಲ್ ವಿರುದ್ಧ ಹೈದರಾಬಾದ್‌ನ ಮಿಯಾಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

2 Min read
Author : Govindaraj S
Published : May 22 2026, 11:28 PM IST
Share this Photo Gallery
  • FB
  • TW
  • Linkdin
  • Whatsapp
15
ಯೂಟ್ಯೂಬ್ ಚಾನೆಲ್ ಮೇಲೆ ಪೊಲೀಸ್ ಕೇಸ್
Image Credit : Instagram/Vishnupriya

ಯೂಟ್ಯೂಬ್ ಚಾನೆಲ್ ಮೇಲೆ ಪೊಲೀಸ್ ಕೇಸ್

ಚಿತ್ರರಂಗದ ನಟ-ನಟಿಯರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುವವರ ವಿರುದ್ಧ ಆ್ಯಂಕರ್ ಹಾಗೂ ನಟಿ ವಿಷ್ಣುಪ್ರಿಯಾ ಭೀಮನೇನಿ ಗರಂ ಆಗಿದ್ದಾರೆ. ತಮ್ಮ ಬಗ್ಗೆ ನಿರಂತರವಾಗಿ ಸುಳ್ಳು ಸುದ್ದಿ ಹಬ್ಬಿಸಿ, ಅಸಭ್ಯ ಕಾಮೆಂಟ್‌ಗಳಿಂದ ನಿಂದಿಸುತ್ತಿದ್ದ 'ಪ್ಲೇ ಲೈಕ್ ಇನ್‌ಕಾಗ್ನಿಟೋ' ಎಂಬ ಯೂಟ್ಯೂಬ್ ಚಾನೆಲ್ ವಿರುದ್ಧ ಅವರು ಕಾನೂನು ಕ್ರಮ ಕೈಗೊಂಡಿದ್ದಾರೆ. ಹೈದರಾಬಾದ್‌ನ ಮಿಯಾಪುರ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Add Asianetnews Kannada as a Preferred SourcegooglePreferred
25
ದೂರಿನ ಹಿಂದಿನ ಅಸಲಿ ಕಾರಣ
Image Credit : Instagram/VishnuPriya

ದೂರಿನ ಹಿಂದಿನ ಅಸಲಿ ಕಾರಣ

ಈ ಪ್ರಕರಣದ ಬಗ್ಗೆ ವಿಷ್ಣುಪ್ರಿಯಾ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸರು ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವುದಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ. ಅದರಲ್ಲೂ, ಈ ಯೂಟ್ಯೂಬ್ ಚಾನೆಲ್ ಅನ್ನು ಒಬ್ಬ ಮಹಿಳೆಯೇ ನಡೆಸುತ್ತಿದ್ದು, ಇನ್ನೊಬ್ಬ ಮಹಿಳಾ ಸೆಲೆಬ್ರಿಟಿ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ತಮಗಾಗಿ ಮಾತ್ರವಲ್ಲ, ಇಂತಹ ಕೆಲಸ ಮಾಡುವ ಬೇರೆ ಚಾನೆಲ್‌ಗಳಿಗೂ ಪಾಠವಾಗಬೇಕು ಎಂಬ ಉದ್ದೇಶದಿಂದ ಈ ಹೆಜ್ಜೆ ಇಟ್ಟಿದ್ದಾಗಿ ಅವರು ಹೇಳಿದ್ದಾರೆ.

Related Articles

Related image1
ಮಾಜಿ ಬಾಯ್‌ಫ್ರೆಂಡ್‌ಗಳನ್ನ ಸಾಯೋವರೆಗೂ ಪ್ರೀತಿಸ್ತೀನಿ.. ಅದಕ್ಕೇ ಸಂಬಂಧ ಬೆಳೆಸಿದ್ದು: ನಟಿ ವಿಷ್ಣುಪ್ರಿಯಾ
Related image2
'ನಂಬಿದ್ದೇ ತಪ್ಪಾಯ್ತು, ಕೊಟ್ಟ ಪ್ರೀತಿ ವಾಪಸ್ ಸಿಗಲಿಲ್ಲ': ಕಣ್ಣೀರಿಟ್ಟಿದ್ಯಾಕೆ ನಟಿ ಅಪ್ಸರಾ!
35
ಸಹನೆ ಮೀರಿ ತೆಗೆದುಕೊಂಡ ನಿರ್ಧಾರ
Image Credit : Asianet News

ಸಹನೆ ಮೀರಿ ತೆಗೆದುಕೊಂಡ ನಿರ್ಧಾರ

ನಿಜ ಹೇಳಬೇಕೆಂದರೆ ಈ ಕ್ರಮವನ್ನು ಹಿಂದೆಯೇ ತೆಗೆದುಕೊಳ್ಳಬೇಕಿತ್ತು, ಆದರೆ ಇಷ್ಟು ದಿನ ತಾಳ್ಮೆಯಿಂದ ಇದ್ದೆ ಎಂದು ವಿಷ್ಣುಪ್ರಿಯಾ ಹೇಳಿದ್ದಾರೆ. ದಿನದಿಂದ ದಿನಕ್ಕೆ ನಿಂದನೆ ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ತಮ್ಮ ಬಗ್ಗೆ ನೆಗೆಟಿವ್ ಪಬ್ಲಿಸಿಟಿ ನೀಡಿ, ತಪ್ಪು ಮಾಹಿತಿ ಹರಡುತ್ತಿರುವುದನ್ನು ಕಂಡು ಇನ್ನು ಸುಮ್ಮನಿದ್ದರೆ ಪ್ರಯೋಜನವಿಲ್ಲ ಎಂದು ತೀರ್ಮಾನಿಸಿದ್ದಾಗಿ ವಿವರಿಸಿದ್ದಾರೆ. ಸುಳ್ಳನ್ನು ಸತ್ಯವೆಂದು ನಂಬಿಸಿ ಪ್ರೇಕ್ಷಕರನ್ನು ದಾರಿ ತಪ್ಪಿಸುತ್ತಿದ್ದ ಕಾರಣಕ್ಕೆ ಈ ದೂರು ನೀಡಬೇಕಾಯಿತು ಎಂದಿದ್ದಾರೆ.

45
ಮಾತನಾಡುವುದು ಅಕ್ಷಮ್ಯ
Image Credit : Asianet News

ಮಾತನಾಡುವುದು ಅಕ್ಷಮ್ಯ

ನಾವು ಚಿತ್ರರಂಗಕ್ಕೆ ಬಂದಿರುವುದು ಪ್ರೇಕ್ಷಕರನ್ನು ರಂಜಿಸಲು, ಅವರ ನೋವನ್ನು ಮರೆಸಿ ಸಂತೋಷಪಡಿಸಲು ಎಂದು ವಿಷ್ಣುಪ್ರಿಯಾ ನೆನಪಿಸಿದ್ದಾರೆ. ನಮ್ಮ ಕೆಲಸದಲ್ಲಿ ಏನಾದರೂ ತಪ್ಪಿದ್ದರೆ, ಟೀಕೆ ಮಾಡಿದರೆ ತಲೆಬಾಗಿ ಸ್ವೀಕರಿಸುತ್ತೇವೆ. ಆದರೆ, ಯಾವುದೇ ತಪ್ಪು ಮಾಡದಿದ್ದರೂ ಕ್ಯಾರೆಕ್ಟರ್ ಅಸಾಸಿನೇಷನ್ ಮಾಡಿ, ಹಣಕ್ಕಾಗಿ ಯಾವುದಕ್ಕೂ ಸಿದ್ಧರಿರುತ್ತಾರೆ ಎಂಬಂತೆ ದೊಡ್ಡ ದೊಡ್ಡ ಚಾನೆಲ್‌ಗಳು ಮಾತನಾಡುವುದು ಅಕ್ಷಮ್ಯ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

55
ಬಾಯಿ ಮುಚ್ಚಿ ಕೂರುವ ಪ್ರಶ್ನೆಯೇ ಇಲ್ಲ
Image Credit : our own

ಬಾಯಿ ಮುಚ್ಚಿ ಕೂರುವ ಪ್ರಶ್ನೆಯೇ ಇಲ್ಲ

ಇನ್ನು ಮುಂದೆ ಇಂತಹ ವಿಷಯಗಳಲ್ಲಿ ಬಾಯಿ ಮುಚ್ಚಿಕೊಂಡು ಕೂರುವ ಪ್ರಶ್ನೆಯೇ ಇಲ್ಲ. ಯಾವುದೇ ಹೆಣ್ಣುಮಕ್ಕಳ ಬಗ್ಗೆ ಇಷ್ಟ ಬಂದಂತೆ ಮಾತನಾಡಿದರೆ ಸುಮ್ಮನಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಒಬ್ಬರ ವಿರುದ್ಧ ಈ ಹೋರಾಟ ಆರಂಭಿಸಿದ್ದೇನೆ. ಮುಂದೆ ಯಾರಾದರೂ ಈ ರೀತಿ ಗಡಿ ಮೀರಿ ವರ್ತಿಸಿದರೆ, ಅವರ ಯೂಟ್ಯೂಬ್ ಚಾನೆಲ್‌ಗಳನ್ನು ಮುಚ್ಚಿಸಲು ಸ್ಟ್ರೈಕ್ ಹಾಕಿಸುತ್ತೇನೆ. ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಟಿ
ಯೂಟ್ಯೂಬರ್
ಪೊಲೀಸ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಸ್ಟಾರ್ ಮಕ್ಕಳೂ ಯಾಕೆ ಸರಳವಾಗಿದ್ದಾರೆ? ಇಲ್ಲಿದೆ ನಟ ಮೋಹನ್‌ಲಾಲ್ ಪೇರೆಂಟಿಂಗ್ ಸೀಕ್ರೆಟ್!
Recommended image2
ಮದುವೆ ನನ್ನ ಜೀವನದ ದೊಡ್ಡ ತಪ್ಪು ಅಂತ ಅಮಿತಾಭ್ ಹೇಳಬಹುದು: ಜಯಾ ಬಚ್ಚನ್ ಹೇಳಿಕೆ ವೈರಲ್!
Recommended image3
PM Modi: ಮೋದಿ 'ಇಂಧನ ಮಂತ್ರ'ಕ್ಕೆ ಕಮಲ್ ಹಾಸನ್ ಸಾಥ್.. ರಾಜಕೀಯ ಮರೆತು ರಾಷ್ಟ್ರಭಕ್ತಿ ಮೆರೆದ ಕಮಲ್ ಹಾಸನ್!
Related Stories
Recommended image1
ಮಾಜಿ ಬಾಯ್‌ಫ್ರೆಂಡ್‌ಗಳನ್ನ ಸಾಯೋವರೆಗೂ ಪ್ರೀತಿಸ್ತೀನಿ.. ಅದಕ್ಕೇ ಸಂಬಂಧ ಬೆಳೆಸಿದ್ದು: ನಟಿ ವಿಷ್ಣುಪ್ರಿಯಾ
Recommended image2
'ನಂಬಿದ್ದೇ ತಪ್ಪಾಯ್ತು, ಕೊಟ್ಟ ಪ್ರೀತಿ ವಾಪಸ್ ಸಿಗಲಿಲ್ಲ': ಕಣ್ಣೀರಿಟ್ಟಿದ್ಯಾಕೆ ನಟಿ ಅಪ್ಸರಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved