- Home
- Entertainment
- ಮಾಜಿ ಬಾಯ್‌ಫ್ರೆಂಡ್‌ಗಳನ್ನ ಸಾಯೋವರೆಗೂ ಪ್ರೀತಿಸ್ತೀನಿ.. ಅದಕ್ಕೇ ಸಂಬಂಧ ಬೆಳೆಸಿದ್ದು: ನಟಿ ವಿಷ್ಣುಪ್ರಿಯಾ
ಮಾಜಿ ಬಾಯ್‌ಫ್ರೆಂಡ್‌ಗಳನ್ನ ಸಾಯೋವರೆಗೂ ಪ್ರೀತಿಸ್ತೀನಿ.. ಅದಕ್ಕೇ ಸಂಬಂಧ ಬೆಳೆಸಿದ್ದು: ನಟಿ ವಿಷ್ಣುಪ್ರಿಯಾ
ನಟಿ ಹಾಗೂ ನಿರೂಪಕಿ ವಿಷ್ಣುಪ್ರಿಯಾ ತನ್ನ ಮಾಜಿ ಬಾಯ್‌ಫ್ರೆಂಡ್‌ಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತನ್ನೆಲ್ಲಾ ಮಾಜಿ ಬಾಯ್‌ಫ್ರೆಂಡ್‌ಗಳನ್ನು ಸಾಯುವವರೆಗೂ ಪ್ರೀತಿಸುತ್ತೇನೆ ಎಂದಿದ್ದಾರೆ. ಅವರು ಹೀಗೆ ಹೇಳಿದ್ದೇಕೆ? ಈ ಫೋಟೋ ಸ್ಟೋರಿ ಓದಿ.

ಗ್ಲಾಮರಸ್ ಬ್ಯೂಟಿ
ಟಾಲಿವುಡ್‌ನ ಜನಪ್ರಿಯ ನಿರೂಪಕಿಯರಲ್ಲಿ ವಿಷ್ಣುಪ್ರಿಯಾ ಕೂಡ ಒಬ್ಬರು. ಇವರು ಕಿರುತೆರೆಯಲ್ಲಿ ಹಲವು ಟಿವಿ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ನಿರೂಪಕಿ ಮಾತ್ರವಲ್ಲದೆ, ನಟಿ ಮತ್ತು ಡ್ಯಾನ್ಸರ್ ಆಗಿಯೂ ವಿಷ್ಣುಪ್ರಿಯಾ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಸದ್ಯ ಗ್ಲಾಮರಸ್ ಬ್ಯೂಟಿ ಅಂತಾನೇ ಯುವಕರಲ್ಲಿ ಇವರು ಸಖತ್ ಕ್ರೇಜ್ ಹೊಂದಿದ್ದಾರೆ. ವಿಷ್ಣುಪ್ರಿಯಾ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಕಾಮೆಂಟ್‌ಗಳು ವೈರಲ್
ವಿಷ್ಣುಪ್ರಿಯಾ ವೈಯಕ್ತಿಕ ವಿಚಾರಗಳು ಮತ್ತು ವಿವಾದಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಬೆಟ್ಟಿಂಗ್ ಆ್ಯಪ್‌ಗಳ ವಿವಾದದಲ್ಲಿ ವಿಷ್ಣುಪ್ರಿಯಾ ಹೆಸರು ಕೇಳಿಬಂದಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿ, ಸಬ್‌ಸ್ಕ್ರಿಪ್ಷನ್ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಈ ನಡುವೆ, ವಿಷ್ಣುಪ್ರಿಯಾ ಈ ಹಿಂದೆ ತನ್ನ ಬಾಯ್‌ಫ್ರೆಂಡ್‌ಗಳ ಬಗ್ಗೆ ಮಾಡಿದ ಕಾಮೆಂಟ್‌ಗಳು ವೈರಲ್ ಆಗುತ್ತಿವೆ.
ಮಾತುಕತೆ ಮುಂದುವರಿಸಿದ್ದೀರಾ
ಹಿಂದೆ ವಿಷ್ಣುಪ್ರಿಯಾ ಹಲವು ಬಾಯ್‌ಫ್ರೆಂಡ್‌ಗಳ ಜೊತೆ ಸಂಬಂಧ ಹೊಂದಿದ್ದರಂತೆ. ಅವರೆಲ್ಲರ ಜೊತೆ ಬ್ರೇಕಪ್ ಕೂಡ ಆಗಿದೆ. ಈ ವಿಚಾರವನ್ನು ಸ್ವತಃ ವಿಷ್ಣುಪ್ರಿಯಾ ಅವರೇ ಬಹಿರಂಗಪಡಿಸಿದ್ದಾರೆ. ಬ್ರೇಕಪ್ ಆದಮೇಲೆ ನಿಮ್ಮ ಮಾಜಿ ಬಾಯ್‌ಫ್ರೆಂಡ್‌ಗಳ ಜೊತೆ ಮಾತುಕತೆ ಮುಂದುವರಿಸಿದ್ದೀರಾ, ಮತ್ತೆ ಸಂಬಂಧ ಮುಂದುವರಿಸಲು ಪ್ರಯತ್ನಿಸಿದ್ದೀರಾ ಎಂದು ಕೇಳಿದಾಗ, ವಿಷ್ಣುಪ್ರಿಯಾ ಆಸಕ್ತಿದಾಯಕ ಉತ್ತರ ನೀಡಿದ್ದರು.
ಸ್ನೇಹ ಮಾತ್ರ ಖಂಡಿತಾ
ನನ್ನ ಎಲ್ಲಾ ಮಾಜಿ ಬಾಯ್‌ಫ್ರೆಂಡ್‌ಗಳ ಜೊತೆ ನಾನು ಈಗಲೂ ಮಾತನಾಡುತ್ತೇನೆ. ಅವರೆಲ್ಲರೂ ನನಗೆ ಬೆಸ್ಟ್ ಫ್ರೆಂಡ್ಸ್. ಅವರಲ್ಲಿನ ಕೆಲವು ಗುಣಗಳು ಇಷ್ಟವಾದ ಕಾರಣಕ್ಕೇ ನಾನು ಸಂಬಂಧದಲ್ಲಿದ್ದೆ. ಬ್ರೇಕಪ್ ಆದ ತಕ್ಷಣ ಎಲ್ಲವೂ ಮುಗಿದುಹೋಯ್ತು ಅಂತಲ್ಲ. ಹಾಗಂತ ಭವಿಷ್ಯದಲ್ಲಿ ಅವರೊಂದಿಗೆ ಮತ್ತೆ ಸಂಬಂಧ ಬೆಳೆಸಲು ಸಾಧ್ಯವಿಲ್ಲ. ಆದರೆ ಸ್ನೇಹ ಮಾತ್ರ ಖಂಡಿತಾ ಮುಂದುವರಿಯುತ್ತದೆ.
ಬೇರೆಯಾದೆವು ಅಷ್ಟೇ
'ಸಾಯುವವರೆಗೂ ನಾನು ಅವರನ್ನು ಪ್ರೀತಿಸುತ್ತಲೇ ಇರುತ್ತೇನೆ. ನಾವು ಸಂಬಂಧದಲ್ಲಿರಲು ಹಲವು ಒಳ್ಳೆಯ ಕಾರಣಗಳಿದ್ದವು. ಕೇವಲ ಕೆಲವು ಕಾರಣಗಳಿಂದ ನಾವು ಬೇರೆಯಾದೆವು ಅಷ್ಟೇ' ಎಂದು ವಿಷ್ಣುಪ್ರಿಯಾ ಹೇಳಿದ್ದಾರೆ. 'ಬೇರೆಯಾದ ಮಾತ್ರಕ್ಕೆ ಅವರ ಮೇಲೆ ನನಗಾಗಲಿ, ನನ್ನ ಮೇಲೆ ಅವರಿಗಾಗಲಿ ದ್ವೇಷವಿಲ್ಲ' ಎಂದು ವಿಷ್ಣುಪ್ರಿಯಾ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

