ಬಾಲಿವುಡ್ ದಂತಕಥೆ ಅನಿಲ್ ಕಪೂರ್ ದಾಂಪತ್ಯ ಎಲ್ಲರಿಗೂ ಸ್ಪೂರ್ತಿ. 53 ವರ್ಷಗಳಿಂದ ಸುನೀತಾ ಜೊತೆಗಿರುವ ಅನಿಲ್ ಕಪೂರ್, 42ನೇ ಮದುವೆ ವಾರ್ಷಿಕೋತ್ಸವದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಬಾಲಿವುಡ್ ಎವರ್ ಗ್ರೀನ್ ಆಕ್ಟರ್, ದಂತಕಥೆ ಅನಿಲ್ ಕಪೂರ್ ತಮ್ಮ 42 ನೇ ವೆಡ್ಡಿಂಗ್ ಆನಿವರ್ಸರಿ ಸಂಭ್ರಮದಲ್ಲಿದ್ದಾರೆ. ಅನಿಲ್ ಕಪೂರ್ ಮತ್ತು ಸುನೀತಾ ಕಪೂರ್ ಮದುವೆಯಾಗಿ ಮೂರು ದಶಕಗಳು ಕಳೆದಿವೆ. ಈ ಖುಷಿ ಸಮಯದಲ್ಲಿ ಅನಿಲ್ ಕಪೂರ್ ತಮ್ಮ ಮದುವೆಯ ಬಗ್ಗೆ ಇಂಟರೆಸ್ಟಿಂಗ್ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಅವರ ಮ್ಯಾರೇಜ್ ಕಥೆ ಸಿನಿಮಾ ಕಥೆಗಿಂತ ಭಿನ್ನವಾಗಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

30 ನಿಮಿಷದಲ್ಲಿ ನಡೆದಿತ್ತು ಅನಿಲ್ ಕಪೂರ್ ಮದುವೆ

ಬಾಲಿವುಡ್ ಆಕ್ಟರ್ ಅನಿಲ್ ಕಪೂರ್ ತಮ್ಮ 42 ನೇ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ, ಅನಿಲ್ ಮತ್ತು ಸುನೀತಾ ಮದುವೆಯಾಗ್ತಿರೋದನ್ನು ಕಾಣ್ಬಹುದು. ಉಳಿದ ಅಪರೂಪದ ಕೆಲ ಫೋಟೋಗಳನ್ನು ಅನಿಲ್ ಕಪೂರ್ ಪೋಸ್ಟ್ ಮಾಡಿದ್ದಾರೆ.

ಪೆದ್ದಿ’ಗಾಗಿ ಭರ್ಜರಿ ಟ್ರಾನ್ಸ್‌ಫಾರ್ಮೇಷನ್: ಸಲ್ಮಾನ್, ಅಮೀರ್‌ ಬಗ್ಗೆ ಯಾಕ್ ಹೀಗಂದ್ರು ರಾಮ್ ಚರಣ್!

ಅನಿಲ್ ಕಪೂರ್ ಹಾಗೂ ಸುನೀತಾ ಕಪೂರ್ ಲವ್ ಸ್ಟೋರಿ ಆಸಕ್ತಿಕರವಾಗಿದೆ. ಸುನೀತಾ, ಧ್ವನಿ ಕೇಳಿಯೇ ಅನಿಲ್ ಕಪೂರ್ ಲವ್ ನಲ್ಲಿ ಬಿದ್ದಿದ್ದರು. 11 ವರ್ಷಗಳ ಕಾಲ ಇಬ್ಬರೂ ಡೇಟ್ ಮಾಡಿದ್ರು. ಒಂದು ದಿನ ಸುನೀತಾ ಅವರಿಗೆ ಫೋನ್ ಮಾಡಿದ್ದ ಅನಿಲ್ ಕಪೂರ್, ನಾಳೆ ಮದುವೆ ಆಗೋಣ ಅಂದಿದ್ರು. ಸುನೀತಾ ಎರಡು ಮಾತನಾಡದೆ ಅದಕ್ಕೆ ಒಪ್ಪಿದ್ದರು. ಮರುದಿನ 30 ನಿಮಿಷದಲ್ಲಿ ಮದುವೆ ನಡೆದಿತ್ತು. ಹತ್ತು ಜನರು ಮದುವೆಯಲ್ಲಿ ಪಾಲ್ಗೊಂಡಿದ್ದರು.

ನಾವು 42 ವರ್ಷಗಳ ಹಿಂದೆ ಮದುವೆಯಾಗಿದ್ದೇವೆ, 53 ವರ್ಷಗಳಿಂದ ಒಟ್ಟಿಗಿದ್ದೇವೆ. ನಮ್ಮ ಮದುವೆ ತುಂಬಾ ಸರಳವಾಗಿತ್ತು. ಇದು ಸುಮಾರು 30 ನಿಮಿಷಗಳಲ್ಲಿ ನಡೆದುಹೋಯ್ತು. ಹನಿಮೂನ್ ಇಲ್ಲ, ಡ್ರಮ್ಸ್ ಇಲ್ಲ, ನಮ್ಮ ಪೋಷಕರು, ಕೆಲವು ಆಪ್ತರು ಮತ್ತು ನಾವಿಬ್ಬರು ಮಾತ್ರ ಅಂತ ಅನಿಲ್ ಕಪೂರ್ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮದುವೆ ಕಥೆ ಬರೆದಿದ್ದಾರೆ. ಆ 30 ನಿಮಿಷಗಳು 53 ವರ್ಷವಾಗುತ್ತವೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ, ಇದು ನಮ್ಮ ಜೀವನದಲ್ಲಿ ನಿಜವಾಗಿದೆ ಎಂದು ಅನಿಲ್ ಕಪೂರ್ ಬರೆದಿದ್ದಾರೆ.

ಪತ್ನಿಯನ್ನು ಹೊಗಳಿದ ಅನಿಲ್ ಕಪೂರ್

ಅನಿಲ್ ಕಪೂರ್ ಪತ್ನಿ ಮೇಲಿರುವ ಪ್ರೀತಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ನಾನು ಮತ್ತೊಮ್ಮೆ ಹೇಳುತ್ತೇನೆ, ನನ್ನ ಎಲ್ಲ ಕೆಲಸಕ್ಕೂ ನೀವೇ ಕಾರಣ. ನಿಮ್ಮ ಕಾರಣದಿಂದಾಗಿ, ನನ್ನ ಪ್ರತಿ ಕನಸು ಈಡೇರಿತು. ಸವಾಳುಗಳನ್ನು ಎದುರಿಸಲು, ಪ್ರತಿ ಸೆಟ್ ನಲ್ಲಿ ಶಾಂತವಾಗಿರಲು ಸಾಧ್ಯವಾಯ್ತು. ನೀವು ಎಲ್ಲವನ್ನೂ ಮೃದುವಾಗಿ, ಪ್ರೀತಿಯಿಂದ ನಿಭಾಯಿಸಿದ್ದೀರಿ. 53 ವರ್ಷಗಳಿಂದ ನೀವು ನನ್ನನ್ನು ಆಯ್ಕೆ ಮಾಡಿದ ಪ್ರತಿ ದಿನಕ್ಕೂ ಧನ್ಯವಾದಗಳು. ನಾನು ಒಂದೇ ಒಂದು ದಿನವನ್ನು ಎಂದಿಗೂ ಹಗುರವಾಗಿ ಪರಿಗಣಿಸಿಲ್ಲ. ನನ್ನ ಆತ್ಮೀಯ ಸ್ನೇಹಿತೆ, ನನ್ನ ಸಂಗಾತಿ, ನನ್ನ ಎಲ್ಲವೂ ಆದ ನಿಮಗೆ ವಾರ್ಷಿಕೋತ್ಸವದ ಶುಭಾಶಯಗಳು, ನನ್ನ ಪ್ರೀತಿ ಎಂದು ಅನಿಲ್ ಕಪೂರ್ ಬರೆದಿದ್ದಾರೆ.

'ಖತ್ರೋನ್ ಕೆ ಖಿಲಾಡಿ' ಶೋಗಾಗಿ ಬಿಕಿನಿ ವ್ಯಾಕ್ಸ್ ಮಾಡಿಸಿಕೊಂಡ ಓರಿ: ಅಷ್ಟಕ್ಕೂ ಯಾರೀತ?

ಅನಿಲ್ ಕಪೂರ್ ಮದುವೆ

ಅನಿಲ್ ಕಪೂರ್ ಮತ್ತು ಸುನೀತಾ ಮೇ 19, 1984 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನಿಲ್ ಕಪೂರ್ ಸಿನಿಮಾದಲ್ಲಿ ಬದುಕು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾಗ ಸುನೀತಾ ಯಶಸ್ವಿ ಮಾಡೆಲ್ ಆಗಿದ್ದರು. ಮದುವೆಗಿಂತ ಮೊದಲು ಕೆಲ್ಸವಿಲ್ಲದೆ ಖಾಲಿಯಿದ್ದ ಅನಿಲ್ ಕಪೂರ್ ಮದುವೆ ಆಗ್ತಿದ್ದಂತೆ ಬ್ಯುಸಿ ಆದ್ರು. ಮದುವೆ ಮರುದಿನ ಕೆಲಸಕ್ಕೆ ಹೋದವರು ಮೂರು ದಿನ ಬಿಟ್ಟು ಮನೆಗೆ ಬಂದ್ರು. ಆದ್ರೆ ಆಗ ಸುನೀತಾ ವಿದೇಶಕ್ಕೆ ಒಬ್ಬರೇ ಹನಿಮೂನ್ ಹೋಗಿದ್ರು.

View post on Instagram