MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Yash Dharmasthala Visit
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • Automobile
  • Deals on Wheels
  • 151 KM ರೇಂಜ್, ಅಡ್ವಾನ್ಸ್ ಫೀಚರ್ಸ್ ಜೊತೆ ಹೋಂಡಾದ ಹೊಸ QC3 ಎಲೆಕ್ಟ್ರಿಕ್ ಸ್ಕೂಟರ್

151 KM ರೇಂಜ್, ಅಡ್ವಾನ್ಸ್ ಫೀಚರ್ಸ್ ಜೊತೆ ಹೋಂಡಾದ ಹೊಸ QC3 ಎಲೆಕ್ಟ್ರಿಕ್ ಸ್ಕೂಟರ್

ಭಾರತದ ಮಾರುಕಟ್ಟೆಗೆ ಹೋಂಡಾ ಕಂಪನಿಯು ತನ್ನ ಹೊಸ QC3 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಈ ಸ್ಕೂಟರ್ ಒಂದು ಪೂರ್ಣ ಚಾರ್ಜ್‌ನಲ್ಲಿ 151 ಕಿ.ಮೀ ರೇಂಜ್ ನೀಡಲಿದ್ದು, 32 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಮತ್ತು ಸ್ಮಾರ್ಟ್ ಕೀ ಸಿಸ್ಟಮ್‌ನಂತಹ ಆಧುನಿಕ ಫೀಚರ್‌ಗಳನ್ನು ಹೊಂದಿದೆ.

1 Min read
Author : Mahmad Rafik
Published : Jul 26 2026, 12:47 PM IST
Share this Photo Gallery
  • FB
  • TW
  • Linkdin
  • Whatsapp
15
ಹೊಸ ಎಲೆಕ್ಟ್ರಿಕ್ ಸ್ಕೂಟರ್
Image Credit : honda QC3 Electric Scooter

ಹೊಸ ಎಲೆಕ್ಟ್ರಿಕ್ ಸ್ಕೂಟರ್

ಭಾರತದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಏರಿಕೆಯಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದಾಗಿ ಜನರು ಬಜೆಟ್ ಫ್ರೆಂಡ್ಲಿ ಮತ್ತು ಉತ್ತಮ ಮೈಲೇಜ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇದೀಗ ಭಾರತದ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಂದಿದೆ. ಹೋಂಡಾ ಕಂಪನಿ QC3 Electric Scooter ಪರಿಚಯಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
151 ಕಿ.ಮೀ ವರೆಗೆ IDC ರೇಂಜ್
Image Credit : honda QC3 Electric Scooter

151 ಕಿ.ಮೀ ವರೆಗೆ IDC ರೇಂಜ್

ಈ ಸ್ಕೂಟರ್‌ನ್ನು ಭಾರತದ ನಗರವಾಸಿಗಳು, ಪ್ರತಿನಿತ್ಯ ಆಫಿಸ್, ಕಾಲೇಜಿಗೆ ತೆರಳುವ ವರ್ಗದವರನ್ನು ಗುರಿಯಾಗಿಸಿಕೊಂಡು ತಯಾರಿಸಲಾಗಿದೆ. ಈ ಸ್ಕೂಟರ್ ಒಂದು ಫುಲ್ ಚಾರ್ಜ್‌ನಲ್ಲಿ 151 ಕಿ.ಮೀ ವರೆಗೆ IDC ರೇಂಜ್ ನೀಡುತ್ತದೆ. ಇದರಿಂದ ಪದೇ ಪದೇ ಚಾರ್ಜಿಂಗ್ ಮಾಡುವ ಕಿರಿಕಿರಿ ಇರಲ್ಲ ಎಂದು ಹೋಂಡಾ ಹೇಳಿದೆ.

Related Articles

Related image1
Honda Activa: 20 ಸಾವಿರ ರೂ.ಯಲ್ಲಿ ಮನೆಗೆ ತನ್ನಿ ನಿಮಿಷ್ಟದ ಹೋಂಡಾ ಆಕ್ಟಿವಾ ಸ್ಕೂಟಿ
Related image2
400 ಕಿ.ಮೀ ಮೈಲೇಜ್, ಬೆಂಗಳೂರಿನ ಸಿಂಪಲ್ ಎನರ್ಜಿಯಿಂದ ಸೆ.2ಕ್ಕೆ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್
35
ಬ್ಯಾಟರಿ ಚಾರ್ಜಿಂಗ್ ಸಮಯ
Image Credit : honda QC3 Electric Scooter

ಬ್ಯಾಟರಿ ಚಾರ್ಜಿಂಗ್ ಸಮಯ

Honda QC3ನಲ್ಲಿ 3kWh ಫಿಕ್ಸಡ್ ಲಿಥಿಯಂ-ಅಯಾನ್ ಬ್ಯಾಟರಿ ಫಿಕ್ಸ್ ಮಾಡಲಾಗಿದೆ. ಪ್ರತಿದಿನ 30 ರಿಂದ 40 ಕಿಮೀ ಪ್ರಯಾಣಿಸುವ ಜನರಿಗೆ ಈ ಸ್ಕೂಟರ್ ಒಳ್ಳೆಯ ಆಯ್ಕೆಯಾಗಲಿದೆ ಎಂಬುವುದು ಕಂಪನಿಯ ಹೇಳಿಕೆಯಾಗಿದೆ. 

ಇನ್ನು Honda QC3 ಬ್ಯಾಟರಿ ಶೂನ್ಯದಿಂದ ಶೇ.80ರಷ್ಟು ಚಾರ್ಜ್ ಆಗಲು 2 ಗಂಟೆ 40 ನಿಮಿಷ ತೆಗೆದುಕೊಳ್ಳುತ್ತದೆ. ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು 4 ಗಂಟೆ ಸಮಯ ತೆಗೆದುಕೊಳ್ಳುತ್ತದೆ.

45
32 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್
Image Credit : honda QC3 Electric Scooter

32 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್

Honda QC3 ಮತ್ತೊಂದು ವಿಶೇಷತೆ ಅಂದ್ರೆ ಇದು 32 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ. ಈ ಸ್ಟೋರೇಜ್‌ನಲ್ಲಿ ಹೆಲ್ಮೇಟ್, ಬ್ಯಾಗ್ ಸೇರಿದಂತೆ ಇನ್ನಿತರ ಅವಶ್ಯಕ ವಸ್ತುಗಳನ್ನು ಇರಿಸಬಹುದಾಗಿದೆ. ಹೊಸ ಸ್ಕೂಟರ್ ಗಮನಿಸುತ್ತಿದ್ರೆ, ಇದನ್ನು ಮಿಸ್ ಮಾಡಿಕೊಳ್ಳಬೇಡಿ.

55
ಬೆಲೆ ಎಷ್ಟು?
Image Credit : honda QC3 Electric Scooter

ಬೆಲೆ ಎಷ್ಟು?

Honda QC3 ಮಾಡರ್ನ್ ಫೀಚರ್ ಹೊಂದಿದ್ದು, ಇದು Smart Key ಸಿಸ್ಟಮ್ ಒಳಗೊಂಡಿದೆ. ಇದರ ಜೊತೆಯಲ್ಲಿ 5 ಇಂಚಿನ TFT Display ನೀಡಲಾಗಿದೆ. ಕನೆಕ್ಟೆಡ್ ಫೀಚರ್ಸ್ ಮತ್ತು ನ್ಯಾವಿಗೇಷನ್ ಸಪೋರ್ಟ್ ನೀಡಲಾಗಿದ್ದು, ಸವಾರರಿಗೆ ಬೆಸ್ಟ್ ರೈಡಿಂಗ್ ಎಕ್ಸ್‌ಪಿರೀಯನ್ಸ್ ನೀಡುತ್ತದೆ. QC3 Electric Scooter ಎಕ್ಸ್ ಶೋರೂಂ ಬೆಲೆ 1,20,000 ರೂಪಾಯಿ ಆಗಿದೆ. ಇದೇ ವರ್ಷ ಡಿಸೆಂಬರ್‌ನಲ್ಲಿ ಗ್ರಾಹಕರಿಗೆ ಈ ಸ್ಕೂಟರ್ ಸಿಗಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಆಟೋಮೊಬೈಲ್
ಬೈಕ್

Latest Videos
Recommended Stories
Recommended image1
ಇನ್ನು ವಿಮಾನ ಟಿಕೆಟ್ ಬೆಲೆ ಕೇವಲ 500 ರೂ, 1000 ರೂ, ಮೊದಲ ಎಲೆಕ್ಟ್ರಿಕ್ ಫ್ಲೈಟ್ ಹಾರಾಟ ಆರಂಭ
Recommended image2
Mahindra Thar Facelift: ಹೊಸ ಲುಕ್, ಹೈ-ಟೆಕ್ ಫೀಚರ್‌ಗಳೊಂದಿಗೆ ರಸ್ತೆಗಿಳಿಯಲು ಸಜ್ಜಾದ ಹೊಸ ಥಾರ್
Recommended image3
ಅಕ್ಟೋಬರ್ 2028ರಿಂದ ವಾಹನಗಳ ನಡುವೆ ವಿ2ವಿ ಕಡ್ಡಾಯ, ಏನಿದು ಕೇಂದ್ರ ಸರ್ಕಾರದ ಹೊಸ ನೀತಿ?
Related Stories
Recommended image1
Honda Activa: 20 ಸಾವಿರ ರೂ.ಯಲ್ಲಿ ಮನೆಗೆ ತನ್ನಿ ನಿಮಿಷ್ಟದ ಹೋಂಡಾ ಆಕ್ಟಿವಾ ಸ್ಕೂಟಿ
Recommended image2
400 ಕಿ.ಮೀ ಮೈಲೇಜ್, ಬೆಂಗಳೂರಿನ ಸಿಂಪಲ್ ಎನರ್ಜಿಯಿಂದ ಸೆ.2ಕ್ಕೆ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved