MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Bike News
  • Keeway Hypevolt-R: ಬಿಡುಗಡೆಯಾಯ್ತು ಪ್ರೀಮಿಯಂ ಸ್ಕೂಟರ್, ರೇಂಜ್, ಟಾಪ್ ಸ್ಪೀಡ್ ಎಷ್ಟು?

Keeway Hypevolt-R: ಬಿಡುಗಡೆಯಾಯ್ತು ಪ್ರೀಮಿಯಂ ಸ್ಕೂಟರ್, ರೇಂಜ್, ಟಾಪ್ ಸ್ಪೀಡ್ ಎಷ್ಟು?

ಕೀವೇ ಇಂಡಿಯಾ ತನ್ನ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಹೈಪ್‌ವೋಲ್ಟ್-ಆರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.  ಡ್ಯುಯಲ್-ಚಾನೆಲ್ ABS, TCS ನಂತಹ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳೊಂದಿಗೆ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ.

2 Min read
Author : Mahmad Rafik
Published : Jul 04 2026, 11:14 AM IST
Share this Photo Gallery
  • FB
  • TW
  • Linkdin
  • Whatsapp
15
ಭಾರತದಲ್ಲಿ ಎಲೆಕ್ಟ್ರಿಕ್ ಟು ವ್ಹೀಲರ್ ಮಾರುಕಟ್ಟೆ
Image Credit : Keeway India

ಭಾರತದಲ್ಲಿ ಎಲೆಕ್ಟ್ರಿಕ್ ಟು ವ್ಹೀಲರ್ ಮಾರುಕಟ್ಟೆ

ಭಾರತದಲ್ಲಿ ಎಲೆಕ್ಟ್ರಿಕ್ ಟು ವ್ಹೀಲರ್ ಮಾರುಕಟ್ಟೆ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಕೀವೇ ಇಂಡಿಯಾ (Keeway Hypevolt-R) ತನ್ನ ಹೊಸ ಪ್ರಮುಖ ಪ್ರೀಮಿಯಂ-ಸೆಗ್ಮೆಂಟ್ ಎಲೆಕ್ಟ್ರಿಕ್ ಸ್ಕೂಟರ್ ಹೈಪ್‌ವೋಲ್ಟ್-ಆರ್ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಸುಧಾರಿತ ತಂತ್ರಜ್ಞಾನ, ರೈಡರ್ ಫ್ರೆಂಡ್ಲಿ, ಪವರ್‌ಫುಲ್ ಪರ್ಫಾಮೆನ್ಸ್ ಹೊಂದಿರುವ ಪ್ರೀಮಿಯಂ ಸ್ಕೂಟರ್ ಇದಾಗಿದೆ ಎಂದು ಕೀವೇ ಹೇಳಿಕೊಂಡಿದೆ. ಪ್ರೀಮಿಯಂ ಸ್ಕೂಟರ್ ಹುಡುಕುತ್ತಿರೋರಿಗೆ ಇದು ಒಳ್ಳೆಯ ಆಯ್ಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬ್ಯಾಟರಿ, ಸ್ಪೀಡ್ ಇನ್ನಿತರ ಮಾಹಿತಿಗಳು
Image Credit : Keeway India

ಬ್ಯಾಟರಿ, ಸ್ಪೀಡ್ ಇನ್ನಿತರ ಮಾಹಿತಿಗಳು

5.04 kWh ಸಾಮರ್ಥ್ಯದ ಡ್ಯುಯಲ್ ರಿಮೂವೇಬಲ್ ಬ್ಯಾಟರಿ ಹೊಂದಿದೆ. NMC ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಸ್ಕೂಟರ್ ಎರಡು 72V 35Ah ಬ್ಯಾಟರಿ ಯುನಿಟ್ ಒಳಗೊಂಡಿದೆ. ಫುಲ್ ಚಾರ್ಜ್‌ನಲ್ಲಿ 180 ಕಿಮೀ ಐಡಿಸಿ ಪ್ರಮಾಣೀಕೃತ (IDC-certified) ರೈಡಿಂಗ್ ರೇಂಜ್ ನೀಡುತ್ತದೆ. ಹಾಗೆಯೇ ಮಿಡ್-ಮೌಂಟೆಡ್ ಪರಮಾನೆಂಟ್ ಮ್ಯಾಗ್ನೆಟ್ ಸಿಂಕ್ರೋನಸ್ ಮೋಟಾರ್ ಅಳವಡಿಕೆ ಮಾಡಲಾಗಿದೆ. ಇದು 6 kW ರೇಟೆಡ್ ಪವರ್ ಮತ್ತು 12 kW ಪೀಕ್ ಪವರ್ ಜನರೇಟ್ ಮಾಡುತ್ತದೆ. ಇದ ಪೀಕ್ ಟಾರ್ಕ್ 72 Nm ಇದೆ.

Related Articles

Related image1
44 ಸಾವಿರ ರೂ. ಡಿಸ್ಕೌಂಟ್ ಜೊತೆ RVX ಎಲೆಕ್ಟ್ರಿಕ್ ಬೈಕ್ ಬಿಡುಗಡೆ; 160 ಕಿ.ಮೀ ಮೈಲೇಜ್
Related image2
ಜನರ ನೆಚ್ಚಿನ ಬೈಕ್‌ ಮಾಡೆಲ್‌ಅನ್ನು ಹಠಾತ್‌ ಆಗಿ ನಿಲ್ಲಿಸಿದ ಕಂಪನಿ, ಡೀಲರ್‌ಗಳಿಗೆ ಸಪ್ಲೈ ಬಂದ್‌ ಮಾಡಿದ ಬಜಾಜ್‌!
35
 Eco, Normal ಮತ್ತು Sport ಮೂರು ಡ್ರೈವಿಂಗ್ ಮೋಡ್‌
Image Credit : Keeway India

Eco, Normal ಮತ್ತು Sport ಮೂರು ಡ್ರೈವಿಂಗ್ ಮೋಡ್‌

ಸ್ಪೋರ್ಟ್ ಮೋಡ್‌ನಲ್ಲಿ ಈ ಸ್ಕೂಟರ್ ಕೇವಲ 2.3 ಸೆಕೆಂಡ್‌ಗಳಲ್ಲಿ 0 ರಿಂದ 40 ಕಿಮೀ/ಗಂಟೆ ವೇಗ ಪಡೆದುಕೊಳ್ಳಲಿದೆ ಎಂದು ಕೀವೇ ಹೇಳಿಕೊಂಡಿದೆ. ಟಾಪ್ ಸ್ಪೀಡ್ ಗಂಟೆಗೆ 115 ಕಿಮೀ ಮತ್ತು 30 ಡಿಗ್ರಿ ಎತ್ತರ ಏರುವ ಸಾಮರ್ಥ್ಯವನ್ನು ಸ್ಕೂಟರ್ ಹೊಂದಿದೆ. ಬಳಕೆದಾರರು Eco, Normal ಮತ್ತು Sport ಮೂರು ಡ್ರೈವಿಂಗ್ ಮೋಡ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ರಿಮೂವೇಬಲ್ ಬ್ಯಾಟರಿ ಹೊಂದಿರುವ ಕಾರಣ ಹೊರಗೆ ತೆಗೆದು ಅಥವಾ ಸ್ಕೂಟರ್ ಒಳಗೆಯ ಚಾರ್ಜಿಂಗ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಆನ್‌ಬೋರ್ಡ್ ಚಾರ್ಜರ್ ಸುಮಾರು 3 ಗಂಟೆಗಳಲ್ಲಿ ಬ್ಯಾಟರಿಯನ್ನು ಶೇಕಡಾ 0 ರಿಂದ 80 ರಷ್ಟು ಚಾರ್ಜ್ ಮಾಡುತ್ತದೆ

45
ಹೈ-ಟೆಕ್ ರೈಡರ್ ಅಸಿಸ್ಟೆನ್ಸ್ ಮತ್ತು ಇತರೆ ಸೌಲಭ್ಯಗಳು
Image Credit : Keeway India

ಹೈ-ಟೆಕ್ ರೈಡರ್ ಅಸಿಸ್ಟೆನ್ಸ್ ಮತ್ತು ಇತರೆ ಸೌಲಭ್ಯಗಳು

ಹೈಪ್‌ವೋಲ್ಟ್-ಆರ್ ಸ್ಕೂಟರ್ ಡ್ಯುಯಲ್-ಚಾನೆಲ್ ABS, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಇಂಟೆಲಿಜೆಂಟ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ರಿಯರ್ ರಿವರ್ಸ್ ಕ್ಯಾಮೆರಾದಂತಹ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳನ್ನು ಹೊಂದಿದೆ. ಬ್ಲ್ಯೂ ಟೂತ್, 5-ಇಂಚಿನ TFT ಉಪಕರಣ ಕ್ಲಸ್ಟರ್ ಒಳಗೊಂಡಿದೆ. ಹಾಗೆಯೇ ಎಲ್‌ಇಡಿ ಲೈಟ್ ಸ್ಟ್ರಿಪ್‌ ಸಹ ಹೊಂದಿದೆ.

ಗ್ರೌಂಡ್ ಕ್ಲಿಯರೆನ್ಸ್: 130 ಮಿ.ಮೀ.

ಸೀಟ್ ಎತ್ತರ: 770 ಮಿ.ಮೀ.

ವೀಲ್‌ಬೇಸ್: 1,454 ಮಿ.ಮೀ

ಕರ್ಬ್ ತೂಕ: 140 ಕೆಜಿ

ಸೀಟಿನ ಕೆಳಗೆ ಶೇಖರಣಾ ಸ್ಥಳ (ಡಿಗ್ಗಿ): 27 ಲೀಟರ್‌ಗಳ ದೊಡ್ಡ ಸಾಮರ್ಥ್ಯ

55
ಬೆಲೆ ಮತ್ತು ಖರೀದಿ ಮಾಹಿತಿ
Image Credit : Keeway India

ಬೆಲೆ ಮತ್ತು ಖರೀದಿ ಮಾಹಿತಿ

ಹೈಪ್‌ವೋಲ್ಟ್-ಆರ್ ಸ್ಕೂಟರ್‌ನ್ನು ಟೋಕನ್ ಅಮೌಂಟ್ 5 ಸಾವಿರ ರೂಪಾಯಿ ನೀಡುವ ಮೂಲಕ ಬುಕ್ ಮಾಡಿಕೊಳ್ಳಬಹುದು. ಕೀವೇ ಹೈಪ್‌ವೋಲ್ಟ್-ಆರ್ ಅನ್ನು 1.99 ಲಕ್ಷ ರೂ.ಗಳ ಆರಂಭಿಕ ಎಕ್ಸ್-ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, Crystal White ಮತ್ತು Platinum Grey ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿ ಶೀಘ್ರದಲ್ಲಿಯೇ ಸ್ಕೂಟರ್ ವಿತರಣೆ ಮಾಡಲಿದೆ ಎಂದು ವರದಿಯಾಗಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೈಕ್
ಆಟೋಮೊಬೈಲ್
ವಿದ್ಯುತ್ ಚಾಲಿತ ವಾಹನ

Latest Videos
Recommended Stories
Recommended image1
Bike Ambulance: ಟ್ರಾಫಿಕ್ ನಡುವೆ ಜೀವ ರಕ್ಷಕ; ಬೈಕ್ ಆಂಬುಲೆನ್ಸ್‌ಗೆ ಮರುಜೀವ ನೀಡಿದ ಸರ್ಕಾರ!
Recommended image2
ಜು.4ರಿಂದ Amazon Prime Day Sale, ಭರ್ಜರಿ ಆಫರ್‌ನೊಂದಿಗೆ ನಿಮ್ಮ ನೆಚ್ಚಿನ 'ಯೆಜ್ಡಿ ಸ್ಕ್ರಾಂಬ್ಲರ್' ಎಂಟ್ರಿ!
Recommended image3
Yamaha NMAX 155: ಯಮಹಾದಿಂದ ಮತ್ತೊಂದು ಮ್ಯಾಕ್ಸಿ ಸ್ಕೂಟರ್? ಎನ್‌ಮ್ಯಾಕ್ಸ್-155 ಡಿಸೈನ್ ಪೇಟೆಂಟ್!
Related Stories
Recommended image1
44 ಸಾವಿರ ರೂ. ಡಿಸ್ಕೌಂಟ್ ಜೊತೆ RVX ಎಲೆಕ್ಟ್ರಿಕ್ ಬೈಕ್ ಬಿಡುಗಡೆ; 160 ಕಿ.ಮೀ ಮೈಲೇಜ್
Recommended image2
ಜನರ ನೆಚ್ಚಿನ ಬೈಕ್‌ ಮಾಡೆಲ್‌ಅನ್ನು ಹಠಾತ್‌ ಆಗಿ ನಿಲ್ಲಿಸಿದ ಕಂಪನಿ, ಡೀಲರ್‌ಗಳಿಗೆ ಸಪ್ಲೈ ಬಂದ್‌ ಮಾಡಿದ ಬಜಾಜ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved