ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿ ಸಿಂಪಲ್ ಎನರ್ಜಿ ಇದೀಗ ಹೊಸ ಫ್ಯಾಮಿಲಿ ಇವಿ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಎಥರ್ ರಿಜ್ತಾಗೆ ಪ್ರತಿಸ್ಪರ್ಧಿಯಾಗಿ ಈ ಸ್ಕೂಟರ್ ಬಿಡುಗಡೆಯಾಗಲಿದೆ. ವಿಶೇಷ ಅಂದರೆ 400 ಕಿ.ಮಿ ಮೈಲೇಜ್ ನೀಡಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಪೈಪೋಟಿ ತೀವ್ರಗೊಳ್ಳುತ್ತಿದೆ. ಈಗಾಗಲೇ ಎಥರ್, ಟಿವಿಎಸ್, ಬಜಾಜ್ ಸೇರಿದಂತೆ ಹಲವು ಬ್ರ್ಯಾಂಡ್ ಇವಿ ಸ್ಕೂಟರ್ ಭಾರತದ ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಸಿಂಪಲ್ ಎನರ್ಜಿ ಮಾರುಕಟ್ಟೆಯಲ್ಲಿ ಎರಡು ಸ್ಕೂಟರ್ ಮೂಲಕ ಸದ್ದು ಮಾಡುತ್ತಿದೆ. ಇದೀಗ ಎಥರ್ ಎನರ್ಜಿಯ ಫ್ಯಾಮಿಲಿ ಸ್ಕೂಟರ್ ರಿಜ್ತಾಗೆ ಪೈಪೋಟಿ ನೀಡಲು ಹೊಸ ಸಿಂಪಲ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ.

ಸೆಪ್ಟೆಂಬರ್ 2ಕ್ಕೆ ಹೊಸ ಫ್ಯಾಮಿಲಿ ಸ್ಕೂಟರ್

ಸಿಂಪಲ್ ಎನರ್ಜಿಯಿಂದ ಬಿಡುಗಡೆಯಾಗುತ್ತಿರುವ ಹೊಸ ಸ್ಕೂಟರ್ ಹೆಸರನ್ನು ಇನ್ನು ಬಹಿರಂಗಪಡಿಸಿಲ್ಲ. ಸೆಪ್ಟೆಂಬರ್ 2ರಂದು ಹೊಸ ಫ್ಯಾಮಿಲಿ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಸ್ಕೂಟರ್ ಈಗಾಗಲೇ ಟೆಸ್ಟಿಂಗ್ ಮುಗಿಸಿದೆ. ಹೊಸ ವಿನ್ಯಾಸ, ಹೊಸ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳ ಸ್ಕೂಟರ್ ಬಿಡುಗಡೆಯಾಗಲಿದೆ.

400 ಕಿ.ಮಿ ಮೈಲೇಜ್ ರೇಂಜ್

ಸಿಂಪಲ್ ಎನರ್ಜಿ ಬಿಡುಗಡೆ ಮಾಡಿರುವ ಸಿಂಪಲ್ ಅಲ್ಟ್ರಾ ಸ್ಕೂಟರ್ ಐಡಿಸಿ ಪ್ರಕಾರ ಒಂದು ಬಾರಿ ಚಾರ್ಜ್ ಮಾಡಿದರೆ 400 ಕಿ.ಮೀ ಮೈಲೇಜ್ ನೀಡಲಿದೆ. ಸೆಪ್ಟೆಂಬರ್ 2 ರಂದು ಬಿಡುಗಡೆಯಾಗಲಿರುವ ಫ್ಯಾಮಿಲಿ ಸ್ಕೂಟರ್ ಇದೇ ಮೈಲೇಜ್ ರೇಂಜ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಇತರ ಸ್ಕೂಟರ್‌ಗಳಿಂತ ಪ್ರಾಕ್ಟಿಲ್ ರೇಂಜ್ ಹೆಚ್ಚೇ ನೀಡಲಿದೆ.

ಸ್ಪೋರ್ಟ್ಸ್‌ನಿಂದ ಫ್ಯಾಮಿಲಿ ಸ್ಕೂಟರ್

ಸಿಂಪಲ್ ಎನರ್ಜಿಯ ಸಿಂಪಲ್ ಒನ್ ಹಾಗೂ ಸಿಂಪಲ್ ಅಲ್ಟ್ರಾ ಸ್ಕೂಟರ್ ಯಶಸ್ವಿಯಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಖರೀದಿಗೆ ಲಭ್ಯವಿದೆ. ಆನ್‌ಲೈನ್ ಮೂಲಕ ಸ್ಕೂಟರ್ ಬುಕ್ ಮಾಡಬಹುದು. ಬುಕಿಂಗ್ ಮೊದಲು ಟೆಸ್ಟ್ ರೈಡ್ ಕೂಜ ಲಭ್ಯವಿದೆ. ಹೆಚ್ಚು ಸ್ಪೋರ್ಟೀವ್ ರೀತಿ ಇದ್ದ ಸಿಂಪಲ್ ಎನರ್ಜಿಯ ಎರಡು ಸ್ಕೂಟರ್ ಇದೀಗ ಫ್ಯಾಮಿಲಿ ಸ್ಕೂಟರ್ ಮೂಲಕ ಗ್ರಾಹಕರ ಸಂಖ್ಯೆ ವಿಸ್ತರಿಸಲು ಮುಂದಾಗಿದೆ.

ಹೊಸ ಸ್ಕೂಟರ್ ಬೆಲೆ

ಸಿಂಪಲ್ ಎನರ್ಜಿ ಬಿಡುಗಡೆ ಮಾಡಲಿರುವ ಫ್ಯಾಮಿಲಿ ಸ್ಕೂಟರ್ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಸಿಂಪಲ್ ಒನ್ ಸ್ಕೂಟರ್ ಬೆಲೆ 1.94 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. ಇದೇ ರೇಂಜ್‌‌ನಲ್ಲಿ ಫ್ಯಾಮಿಲಿ ಸ್ಕೂಟರ್ ಬೆಲೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಫ್ಯಾಮಿಲಿ ಸ್ಕೂಟರ್‌ಗಳಲ್ಲಿ ಪೈಪೋಟಿ

ಎಥರ್ ಎನರ್ಜಿಯ ರಿಜ್ತಾ ಫ್ಯಾಮಿಲಿ ಸ್ಕೂಟರ್ ದೇಶದಲ್ಲಿ ಭಾರಿ ಜನಪ್ರಿಯತೆ ಪಡೆದಿದೆ. ಇವಿ ಸ್ಕೂಟರ್ ಹೆಚ್ಚಾಗಿ ಸ್ಪೋರ್ಟ್ಸ್ ಅಥವಾ ಚಿತ್ರ ವಿಚಿತ್ರ ವಿನ್ಯಾಸಗಳ ಮೂಲಕ ಬಿಡುಗಡೆಯಾಗುತ್ತದೆ. ಈ ಪೈಕಿ ರಿಜ್ತಾ, ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್ ಮಾತ್ರ ಫ್ಯಾಮಿಲಿ ಸ್ಕೂಟರ್ ಆಗಿ ಗುರುತಿಸಿಕೊಂಡಿದೆ. ಈ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಸಿಂಪಲ್ ಎನರ್ಜಿ ಹೊಸ ಇವಿ ಬಿಡುಗಡೆ ಮಾಡುತ್ತಿದೆ.