ಅತ್ಯಾಚಾರವೆಸಗಿ ನೆನಪಿಗಾಗಿ ರುಂಡ ಸಂಗ್ರಹಿಸುತ್ತಿದ್ದ: ಇಲ್ಲಿದೆ ವಿಶ್ವದ 10 ಭಯಾನಕ ಸಿರಿಯಲ್ ಕಿಲ್ಲರ್ಸ್ ಕಹಾನಿ
World Most Dangerous Serial Killers: ಇತಿಹಾಸದಲ್ಲಿ ಅನೇಕ ಸಿರಿಯಲ್ ಕಿಲ್ಲರ್‌ಗಳ ಕಥೆಗಳು ದಾಖಲಾಗಿವೆ. ಜಗತ್ತಿನಲ್ಲಿ ಒಬ್ಬರೊನ್ನಬ್ಬರು ಮೀರಿಸುವ ಸರಣಿ ಕೊಲೆಗಾರರಿದ್ದಾರೆ. ಸಿರಿಯಲ್ ಕಿಲ್ಲರ್‌ಗಳ ಅನೇಕ ದಂತಕಥೆಗಳೂ ನಮಗೆ ಸಿಗುತ್ತವೆ. ಸರಣಿ ಕೊಲೆಗಾರರು ತಾವು ಮಾಡಿದ ಕೊಲೆ, ಅತ್ಯಾಚಾರಗಳ ಬಗ್ಗೆ ಪಶ್ಚಾತ್ತಾಪ ಪಡುವುದು ಕಡಿಮೆ. ಅವರು ಮನುಷ್ಯರನ್ನು ಕೊಲ್ಲುವಲ್ಲಿ ಅನಾಗರಿಕತೆಯ ಎಲ್ಲಾ ಮಿತಿಗಳನ್ನು ದಾಟಿರುತ್ತಾರೆ. ಇಂಥಹ ವಿಶ್ವದ 10 ಅತ್ಯಂತ ಭಯಾನಕ ಸರಣಿ ಕೊಲೆಗಾರರ ಬಗ್ಗೆ ಇಲ್ಲಿದೆ ಮಾಹಿತಿ
ಟೆಡ್ ಬಂಡಿ (Ted Bundy): ಅಮೆರಿಕದ ಅತ್ಯಂತ ಭಯಾನಕ ಸರಣಿ ಕೊಲೆಗಾರರಲ್ಲಿ ಟೆಡ್ ಬಂಡಿ ಕೂಡ ಒಬ್ಬ. ಟೆಡ್ ಬಂಡಿ ವೃತ್ತಿಯಲ್ಲಿ ದೈಹಿಕ ತರಬೇತುದಾರನಾಗಿದ್ದ. ಆದರೆ ಶಾಲಾ ಬಾಲಕಿಯರ ಮೇಲಿನ ವ್ಯಾಮೋಹದಿಂದಾಗಿ ಸರಣಿ ಹಂತಕನಾದ. ಟೆಡ್ 12 ರಿಂದ 22 ವರ್ಷ ವಯಸ್ಸಿನ ಶಾಲಾ ಮತ್ತು ಕಾಲೇಜಿಗೆ ಹೋಗುವ ಹುಡುಗಿಯರನ್ನು ಅಪಹರಿಸುತ್ತಿದ್ದ. ಮೊದಲು 4-5 ದಿನಗಳ ಕಾಲ ಅವರ ಮೇಲೆ ಅತ್ಯಾಚಾರವೆಸಗಿ ನಂತರ ಬರ್ಬರವಾಗಿ ಕೊಂದು ಹಾಕುತ್ತಿದ್ದ.
ಕೊಲೆಯ ನಂತರ ಬಾಲಕಿಯರ ದೇಹದ ಪ್ರತಿಯೊಂದು ಭಾಗವನ್ನೂ ಪ್ರತ್ಯೇಕಿಸುತ್ತಿದ್ದ. ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಬಳಿಕ ಟೆಡ್ ಅವರ ತಲೆಯನ್ನು ಕತ್ತರಿಸಿ ತನ್ನ ಬಳಿ ಇಟ್ಟುಕೊಂಡು ಉಳಿದದ್ದನ್ನು ನದಿಗೆ ಎಸೆಯುತ್ತಿದ್ದ. 5 ವರ್ಷಗಳಲ್ಲಿ ಸುಮಾರು 30 ಹುಡುಗಿಯರನ್ನು ಟೆಡ್ ಕೊಂದಿದ್ದ. ಜನವರಿ 1989 ರಲ್ಲಿ ಟೆಡ್‌ಗೆ ಮರಣದಂಡನೆ ವಿಧಿಸಲಾಯಿತು.
ಪೆಡ್ರೊ ಲೋಪೆಜ್ (Pedro López): ಪೆಡ್ರೊ ಲೋಪೆಜ್ ಕೊಲಂಬಿಯಾದ ಅಪಾಯಕಾರಿ ಸರಣಿ ಕೊಲೆಗಾರ. ಈತನನ್ನು 'ಮಾನ್ಸ್ಟರ್ ಆಫ್ ದಿ ಆಂಡಿಸ್' ಅಂದರೆ ಆಂಡಿಸ್ ದೈತ್ಯ ಎಂದೂ ಕರೆಯುತ್ತಾರೆ. ಒಂದು ಅಂದಾಜಿನ ಪ್ರಕಾರ, ಈತ ಸುಮಾರು 350 ಜನರನ್ನು ಕೊಂದಿದ್ದಾನೆ. ಬಲಿಪಶುಗಳಲ್ಲಿ ಹೆಚ್ಚಿನವರು ಮಹಿಳೆಯರು. 1893 ರಲ್ಲಿ 118 ಹುಡುಗಿಯರ ಕೊಲೆಗಾಗಿ ಪೆಡ್ರೊವನ್ನು ಬಂಧಿಸಲಾಯಿತು. ಆತನ ಬಂಧನದ ನಂತರ ಆತನೇ ಇನ್ನೂ 240 ಕೊಲೆಗಳನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ.
ಇದನ್ನೂ ಓದಿ: ಅಯ್ಯಪ್ಪಾ, ಡೇಂಜರ್! ಹೆಚ್ಚಿನ Serial killers ಈ ರಾಶಿಯವರು!
ಹೆರಾಲ್ಡ್ ಶಿಪ್‌ಮ್ಯಾನ್ (Harold Shipman): ಇಂಗ್ಲೆಂಡಿನ ಹೆರಾಲ್ಡ್ ಶಿಪ್‌ಮ್ಯಾನ್ ವಿಶ್ವದ ಅತ್ಯಂತ ಭಯಾನಕ ಸರಣಿ ಕೊಲೆಗಾರರಲ್ಲೊಬ್ಬ. ಈತನನ್ನು ‘ಡಾಕ್ಟರ್ ಡೆತ್’ ಎಂದೂ ಕರೆಯುತ್ತಾರೆ. ಈತ ವೃತ್ತಿಯಲ್ಲಿ ಸಾಮಾನ್ಯ ವೈದ್ಯನಾಗಿದ್ದ. ಈತ ಒಟ್ಟು 218 ರೋಗಿಗಳನ್ನು ಕೊಂದಿದ್ದಾನೆ ಎಂದು ನಂಬಲಾಗಿದೆ. ಅವರಲ್ಲಿ 80 ವೃದ್ಧ ಮಹಿಳೆಯರೂ ಸೇರಿದ್ದಾರೆ. ಹೆರಾಲ್ಡ್ ಶಿಪ್‌ಮನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು ಬಳಿಕ ಈತ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ರಿಚರ್ಡ್ ರಾಮಿರೆಜ್(Richard Ramirez): ರಿಚರ್ಡ್ ರಾಮಿರೆಜ್ ಅಮೇರಿಕನ್ ಸರಣಿ ಕೊಲೆಗಾರ. ಕೊಲೆ ಮಾಡುವುದಲ್ಲದೆ ಅತ್ಯಾಚಾರ, ಅಪಹರಣ, ಕಳ್ಳತನದಲ್ಲೂ ಭಾಗಿಯಾಗಿದ್ದ. ಈತನನ್ನು 'ನೈಟ್ ಸ್ಟಾಕರ್' ಎಂದೂ ಕರೆಯಲಾಗುತ್ತಿತ್ತು, ಅಂದರೆ ರಾತ್ರಿಯ ಬೇಟೆಗಾರ. ಈತ 20 ರಿಂದ 80 ವರ್ಷ ವಯಸ್ಸಿನ ಜನರನ್ನು ಟಾರ್ಗೆಟ್ ಮಾಡುತ್ತಿದ್ದ. ಈತ 13 ಜನರನ್ನು ಕೊಂದಿದ್ದಾನೆ ಎಂದು ನಂಬಲಾಗಿದೆ.
ಇದನ್ನೂ ಓದಿ: ದಿನವೂ ರಕ್ತದಲ್ಲೇ ಸ್ನಾನ: 600 ಹೆಣ್ಣುಮಕ್ಕಳನ್ನ ಕೊಂದ ಸಿರಿಯಲ್ ಕಿಲ್ಲರ್ ಕಹಾನಿ
ಮಿಖಾಯಿಲ್ ಪಾಪ್ಕೋವ್ (Mikhail Popkov): ಮಿಖಾಯಿಲ್ ಪಾಪ್ಕೊವ್ ರಷ್ಯಾದ ಸರಣಿ ಕೊಲೆಗಾರ ಮತ್ತು ಅತ್ಯಾಚಾರಿ. ಈತನನ್ನು ದಿ ವೆರ್ವೂಲ್ಫ್ ಅಂದರೆ ಮಾನವ ತೋಳ ಎಂದೂ ಕರೆಯುತ್ತಾರೆ. ಈತ ರಷ್ಯಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಮಿಖಾಯಿಲ್ ರಷ್ಯಾದ ಅತ್ಯಂತ ಭಯಾನಕ ಸರಣಿ ಕೊಲೆಗಾರ. ಮುಗ್ಧ ಮಹಿಳೆಯರೇ ಈತನ ಟಾರ್ಗಟ್. ಮಹಿಳೆಯರನ್ನು ಕೊಲ್ಲುವ ಮೊದಲು ಕೊಡಲಿ, ಚಾಕು ಮತ್ತು ಹರಿತವಾದ ಆಯುಧಗಳಿಂದ ಗಂಟೆಗಟ್ಟಲೆ ಚಿತ್ರಹಿಂಸೆ ನೀಡುತ್ತಿದ್ದ. 1992 ಮತ್ತು 2010 ರ ನಡುವಿನ 18 ವರ್ಷಗಳಲ್ಲಿ ಮಹಿಳೆಯರನ್ನು ಮೊದಲು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡು ಸುಮಾರು 81 ಮಹಿಳೆಯರನ್ನು ನಿರ್ದಯವಾಗಿ ಕೊಂದಿದ್ದಾನೆ.
ಸ್ಯಾಮ್ಯುಯೆಲ್ ಲಿಟಲ್ (Samuel Little): ಸ್ಯಾಮ್ಯುಯೆಲ್ ಲಿಟಲ್ ಅಮೆರಿಕದ ಭಯಾನಕ ಸರಣಿ ಕೊಲೆಗಾರ. ಈತ 1970 ರಿಂದ 2005 ರವರೆಗೆ ನಿರಂತರವಾಗಿ ಅನೇಕ ಜನರನ್ನು ಕೊಂದಿದ್ದಾನೆ. ಈ ಸಮಯದಲ್ಲಿ 93 ಮಹಿಳೆಯರನ್ನು ಈತ ಕೊಲೆ ಮಾಡಿದ್ದಾನೆ ಎಂದು ನಂಬಲಾಗಿದೆ.
ಜಾವೇದ್ ಇಕ್ಬಾಲ್ ಉಮರ್ (Javed Iqbal Umayr): ಜಾವೇದ್ ಇಕ್ಬಾಲ್ ಉಮರ್ ಪಾಕಿಸ್ತಾನಿ ಸರಣಿ ಕೊಲೆಗಾರ ಮತ್ತು ಅತ್ಯಾಚಾರಿ. ಈತ 100 ಮಕ್ಕಳಿಗೆ ದೈಹಿಕವಾಗಿ ಕಿರುಕಳ ನೀಡಿ ಕೊಲೆ ಮಾಡಿದ್ದಾನೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು 6 ರಿಂದ 16 ವರ್ಷ ವಯಸ್ಸಿನ ಅಪ್ರಾಪ್ತ ಮಕ್ಕಳು ಮತ್ತು ಹದಿಹರೆಯದವರು. ಇಕ್ಬಾಲ್ ಸ್ವತಃ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಮೊದಲು ಮಕ್ಕಳನ್ನು ಕತ್ತು ಹಿಸುಕಿ, ಅವರ ದೇಹವನ್ನು ತುಂಡುಗಳಾಗಿ ಕತ್ತರಿಸಿ ಆಸಿಡ್ ಹಾಕಿರುವುದಾಗಿ ಈತ ಹೇಳಿಕೊಂಡಿದ್ದ.
ಲೂಯಿಸ್ ಗರಾವಿಟೊ (Luis Garavito): ಲೂಯಿಸ್ ಗರಾವಿಟೊ ಸಹ ಕೊಲಂಬಿಯಾದ ಸರಣಿ ಕೊಲೆಗಾರ ಮತ್ತು ಅತ್ಯಾಚಾರಿ. ಈತ 1983 ರಲ್ಲಿ ಹದಿಹರೆಯದ 138 ಜನರ ಮೇಲೆ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲ, ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದಾಗಿಯೂ ತಪ್ಪೊಪ್ಪಿಕೊಂಡಿದ್ದ. ಕ್ಯಾರವಿಟೊ ಸುಮಾರು 300 ಜನರನ್ನು ಕೊಂದಿದ್ದಾನೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಎಂಎ, ಎಂಬಿಎ ಓದಿಕೊಂಡು 6 ವರ್ಷದಲ್ಲಿ 5 ಮರ್ಡರ್ ಮಾಡಿ ಓಡಾಡಿಕೊಂಡಿದ್ದವ ಸೆರೆ ಸಿಕ್ಕ ಕತೆ
ಎಚ್‌ಎಚ್ ಹೋಮ್ಸ್ (H. H. Holmes): ಎಚ್‌ಎಚ್ ಹೋಮ್ಸ್ ಪೂರ್ಣ ಹೆಸರು ಹೆನ್ರಿ ಹೋವರ್ಡ್ ಹೋಮ್ಸ್. ಈತ ಅಮೇರಿಕನ್ ಸರಣಿ ಕೊಲೆಗಾರ. ಹೋಮ್ಸ್ ಹೋಟೆಲನ್ನು 'ಕಿರುಕುಳ ನೀಡುವ ಕೋಣೆ' ಆಗಿ ಪರಿವರ್ತಿಸಿದ್ದ ಎಂದು ಹೇಳಲಾಗುತ್ತದೆ. ಅಲ್ಲಿ ಜನರಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡುತ್ತಿದ್ದ ಈ ಸರಣಿ ಹಂತಕ ತನ್ನ ವ್ಯಾಪಾರ ಪಾಲುದಾರನನ್ನು ಸೇರಿಸಿ 30 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ.
ಚಿಸಾಕೋ ಕಾಕೇಹಿ ( Chisako Kakehi): ಭಯಾನಕ ಸರಣಿ ಕೊಲೆಗಾರರ ಪಟ್ಟಿಯಲ್ಲಿ ಪುರುಷರಷ್ಟೇ ಅಲ್ಲ, ಮಹಿಳೆಯರೂ ಸೇರಿದ್ದಾರೆ. ಜಪಾನ್‌ನ ಸರಣಿ ಹಂತಕಿ ಚಿಸಾಕೊ ಕಾಕೆಹಿ ತನ್ನ ಪತಿಯೊಂದಿಗೆ ಇತರ ಮೂವರನ್ನು ಕೊಂದಿದ್ದಾಳೆ. ಅಷ್ಟೇ ಅಲ್ಲ, ನಾಲ್ಕನೇ ವ್ಯಕ್ತಿಯನ್ನು ಕೊಲ್ಲಲು ಮುಂದಾಗಿದ್ದಳು, ಆದರೆ ಆಕೆಯನ್ನು ಬಂಧಿಸಿ ಮರಣದಂಡನೆ ವಿಧಿಸಲಾಯಿತು. ಕಾಕೇಹಿ ಒಟ್ಟು 10 ಸರಣಿ ಕೊಲೆಗಳನ್ನು ಮಾಡಿದ್ದಳು ಎಂದು ಹೇಳಲಾಗುತ್ತದೆ
ಇದನ್ನೂ ಓದಿ: ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!