Asianet Suvarna News Asianet Suvarna News

ದಿನವೂ ರಕ್ತದಲ್ಲೇ ಸ್ನಾನ: 600 ಹೆಣ್ಣುಮಕ್ಕಳನ್ನ ಕೊಂದ ಸಿರಿಯಲ್‌ ಕಿಲ್ಲರ್‌ ಕಹಾನಿ

Elizabeth Bathory: ಹಂಗೇರಿಯ ಈ ಮಹಿಳೆ ಕೇವಲ ಇಪ್ಪತ್ತು ವರ್ಷಕ್ಕೆ ಸುಮಾರು ಆರುನೂರು ಕೊಲೆ ಮಾಡಿದ್ದಾಳೆ.

Elizabeth Bathory  worlds worst female serial killer who bathed in victims blood mnj
Author
Bengaluru, First Published Jul 29, 2022, 6:25 PM IST

ಹಂಗೇರಿ (ಜು. 29): ಪ್ರಪಂಚದ ಎಲ್ಲಾ ಜನರು ವಿಭಿನ್ನ ಸ್ವಭಾವದವರು, ಕೆಲವರು ತುಂಬಾ ಶುದ್ಧ ಹೃದಯದರಾಗಿದ್ದರೆ ಇನ್ನೂ ಕೆಲವರು ಮೋಸ- ವಂಚನೆಯನ್ನೇ ವೃತ್ತಿ ಮಾಡಿಕೊಂಡಿರುತ್ತಾರೆ. ಆದರೆ ಇದನ್ನು ಮನುಷ್ಯರ ಹೋರನೋಟ ನೋಡಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ನಾವು ಅವರೊಂದಿಗೆ ಸ್ವಲ್ಪ ಸಮಯ ಕಳೆಯುವವರೆಗೆ ಅವರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವುದು ಕಷ್ಟ. ಹೀಗೆ ನೋಟದಲ್ಲಿ ತುಂಬಾ ಸಾಧಾರಣವಾಗಿ ಕಾಣುವ ಆದರೆ ಸಿರಿಯಲ್‌ ಕಿಲ್ಲರ್‌ ಆಗಿರುವ ಹಂಗೇರಿಯನ್ ಮಹಿಳೆ ಕಥೆ ಎಲ್ಲರನ್ನೂ ಬೆಚ್ಚೆಬೀಳಿಸುವಂತಿದೆ. 

ಜನರನ್ನು ಕೊಲ್ಲಲು ಇಷ್ಟಪಡುವ ಮಹಿಳೆಯ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಮಹಿಳೆಯನ್ನು ನೋಡಿದಾಗ ಆಕೆಯ ಭಯಾನಕ ಉದ್ದೇಶಗಳ ಬಗ್ಗೆ ಬಹುಶಃ ಯಾರೂ ಊಹಿಸಲು ಸಹ ಸಾಧ್ಯವಿಲ್ಲ. ಹಂಗೇರಿಯ ಈ ಮಹಿಳೆ ಕೇವಲ ಇಪ್ಪತ್ತು ವರ್ಷಕ್ಕೆ ಸುಮಾರು ಆರುನೂರು ಕೊಲೆ ಮಾಡಿದ್ದಾಳೆ. ವಿಚಿತ್ರವೆಂದರೆ ಮಹಿಳೆಯ ಹತ್ಯೆಯ ಹಿಂದೆ ಯಾವುದೇ ಸಂಚು ಇರಲಿಲ್ಲ. ಕೇವಲ ದೇಹದಿಂದ ರಕ್ತವನ್ನು ಹೊರಹಾಕಲು ಮಾತ್ರ ಅವಳು ಜನರನ್ನು ಕೊಲ್ಲುತ್ತಿದ್ದಳು. 

ವಿಶ್ವದ ಅತ್ಯಂತ ಭಯಾನಕ ಮಹಿಳಾ ಸಿರಿಯಲ್‌ ಕಿಲ್ಲರ್‌: ಈ ಭಯಾನಕ ಮಹಿಳೆಯ ಹೆಸರು ಎಲಿಜಬೆತ್ ಬಟೋರಿ (Elizabeth Bathory). 1560ರಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದ್ದ ಈ ಮಹಿಳೆ  ವಿಶ್ವದ ಅತ್ಯಂತ ಭಯಾನಕ ಮಹಿಳಾ ಸಿರಿಯಲ್‌ ಕಿಲ್ಲರ್‌ ಪಟ್ಟಿಗೆ ಸೇರ್ಪಡೆಯಾಗುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ. 

ಎಂಎ, ಎಂಬಿಎ ಓದಿಕೊಂಡು 6 ವರ್ಷದಲ್ಲಿ 5  ಮರ್ಡರ್‌ ಮಾಡಿ ಓಡಾಡಿಕೊಂಡಿದ್ದವ ಸೆರೆ ಸಿಕ್ಕ ಕತೆ

ಎಲಿಜಬೆತ್ ಬಟೋರಿ ಹಲವಾರು ಸೇವಕರ ನಡುವೆ ತನ್ನ ಸ್ವಂತ ಅರಮನೆಯಲ್ಲಿ ತನ್ನ ಜೀವನವನ್ನು ಸಾಗಿಸುತ್ತಿದ್ದಳು. ತನ್ನ ಸ್ಥಾನಮಾನವನ್ನು ಬಳಸಿಕೊಂಡು ಬಡ ರೈತರ ಹೆಣ್ಣು ಮಕ್ಕಳನ್ನು ಅಪಹರಿಸುತ್ತಿದ್ದಳು. ನಂತರ  ಅವರನ್ನು ಕೊಲ್ಲುತ್ತಿದ್ದಳು. ಅಷ್ಟೇ ಅಲ್ಲದೆ ಕೊಂದ ನಂತರ ಆಕೆ ತುಂಬಾ ಘೋರ ಕೃತ್ಯಗಳನ್ನು ಎಸಗುತ್ತಿದ್ದಳು. 

ಶ್ರೀಮಂತ ಕುಟುಂಬಕ್ಕೆ ಸೇರಿದ ಎಲಿಜಬೆತ್ ತನ್ನ ಸ್ಥಾನಮಾನದ ಲಾಭವನ್ನು ಪಡೆದು, ಬಡ ಹುಡುಗಿಯರಿಂದ ಅರಮನೆಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದಳು.  ಆದರೆ ಅವರನ್ನು ಅಲ್ಲಿಗೆ ಕರೆಸಿ ಬಂಧಿಯಾಗಿಸಿ ಹಲವು ದಿನಗಳಿಂದ ಊಟವನ್ನೂ ನೀಡುದೇ ಚಿತ್ರಹಿಂಸೆ ನೀಡುತ್ತಿದ್ದಳು.  ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಹಸಿವಿನಿಂದ ಸಾಯುತ್ತಿದ್ದರು. 

ರಕ್ತ ತುಂಬಿದ ಟಬ್‌ನಲ್ಲಿ ಎಲಿಜಬೆತ್ ಬಟೋರಿ ಸ್ನಾನ: ಹೆಣ್ಣು ಮಕ್ಕಳ ಸಾವಿನ ಬಳಿಕ ಎಲಿಜಬೆತ್ ಮಾಡುತ್ತಿದ್ದ ಕೃತ್ಯವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಎಲಿಜಬೆತ್‌ಳ ಈ ವಿಚಿತ್ರ ಕೆಲಸವನ್ನು ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಎಲಿಜಬೆತ್ ಈ ಹುಡುಗಿಯರನ್ನು ಕೊಂದು ಅವರ ರಕ್ತದಿಂದ ಸ್ನಾನ ಮಾಡುತ್ತಿದ್ದಳು. 

ಅಷ್ಟೇ ಅಲ್ಲ, ಹೆಣ್ಣು ಮಕ್ಕಳನ್ನು ಕೊಲ್ಲುವ ಮುನ್ನ ಇಕ್ಕಳದಿಂದ ಉಗುರುಗಳನ್ನು ಎಳೆಯುವುದು, ಎದೆಯ ಮೇಲೆ ಬಿಸಿ ಬಾರ್‌ಗಳು ಇಡುವುದು ಸೇರಿದಂತೆ ಚಿತ್ರಹಿಂಸೆ ನೀಡುತ್ತಿದ್ದಳು. ಕೆಲವೊಮ್ಮೆ ಹುಡುಗಿಯರನ್ನು ಜೇನುತುಪ್ಪದಿಂದ ಸ್ನಾನ ಮಾಡಿಸಿ ಅವರ ಮೇಲೆ ಜೇನುನೊಣಗಳೊಂದಿಗೆ ಬಿಡಲಾಗುತ್ತಿತ್ತು. 

ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!

ಬಾಲಕಿಯರ ಮರಣದ ನಂತರ, ಅವರ ದೇಹದಿಂದ ರಕ್ತವನ್ನು ತೆಗೆದು ದೊಡ್ಡ ಟಬ್‌ನಲ್ಲಿ ತುಂಬಿಸಲಾಗುತಿತ್ತು. ಅದರಲ್ಲಿ ಎಲಿಜಬೆತ್ ಸ್ನಾನ ಮಾಡುತ್ತಿದ್ದಳು. ಇದು ತನ್ನ ಸೌಂದರ್ಯವನ್ನು ಸದಾ ಯೌವನವಾಗಿರಿಸುತ್ತದೆ ಎಂದು ಎಲಿಜಬೆತ್ ನಂಬಿದ್ದರು. 

Follow Us:
Download App:
  • android
  • ios