ಎಂಎ, ಎಂಬಿಎ ಓದಿಕೊಂಡು 6 ವರ್ಷದಲ್ಲಿ 5 ಮರ್ಡರ್ ಮಾಡಿ ಓಡಾಡಿಕೊಂಡಿದ್ದವ ಸೆರೆ ಸಿಕ್ಕ ಕತೆ
* 6 ವರ್ಷದಲ್ಲಿ ಐದು ಕೊಲೆ ಮಾಡಿ ಹಾಯಾಗಿದ್ದ
* ಜಾಸ್ತಿ ಓದಿಕೊಂಡು ಸೀರಿಯಸ್ ಕಿಲ್ಲರ್ ಆಗಿದ್ದ
* ಮಹಿಳೆಯ ಚಿನ್ನದ ಸರಕ್ಕಾಗಿ ಕೊಲೆ ಮಾಡಿದ್ದ
ತಿರುವನಂತಪುರ(ಫೆ. 13) 6 ವರ್ಷದಲ್ಲಿ (2014-2019) ಐದು ಕೊಲೆ (Murder) ಮಾಡಿ ಹಾಯಾಗಿ ಓಡಾಡಿಕೊಂಡಿದ್ದ 'ಶಿಕ್ಷಣವಂತ' ಕೊನೆಗೂ ಬಲೆಗೆ ಬಿದ್ದಿದ್ದಾನೆ. ಕನ್ಯಾಕುಮಾರಿಯ (Kanyakumari) ತೋವಾಲದ ನಿವಾಸಿ ರಾಜೇಂದ್ರನ್ ಅಲಿಯಾಸ್ ರಾಜೇಶ್ (39) ಸೀರಿಯಲ್ ಕಿಲ್ಲರ್ ಕೊನೆಗೂ ಸೆರೆ ಸಿಕ್ಕಿದ್ದಾನೆ.
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಜತೆಗೆ ಎಂಬಿಎ ಮಾಡಿಕೊಂಡು ಕೊಲೆ ಮಾಡುವುದನ್ನು ಕರಗತ ಮಾಡಿಕೊಂಡಿದ್ದ. ಈತ ಕೊಲೆ ಮಾಡುತ್ತಿದ್ದುದ್ದು ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡುವುದಕ್ಕೆ.
ತಮಿಳುನಾಡಿನ ನಾಗರ್ ಕೋಯಿಲ್ ಜಿಲ್ಲೆಯ 37 ವರ್ಷದ ಮಹಿಳೆ ಕೊಲೆ ಸೇರಿ 5 ಕೊಲೆ ಮಾಡಿದ್ದಾನೆ. 2014 ರಲ್ಲಿ ಕಸ್ಟಮ್ಸ್ ಅಧಿಕಾರಿ ಸೇರಿ ಆತನ ಕುಟುಂಬದ ಮೂವರನ್ನು ಹತ್ಯೆ ಮಾಡಿದ್ದ. ಪ್ರಕರಣ ದಾಖಲಾಗಿ ವಿಚಾರಣೆಗೆ ಬರುವ ಮುನ್ನವೇ ಕೇರಳಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ.
ಆನ್ ಲೈನ್ ನಲ್ಲಿ ಹೂಡಿಕೆ ಮಾಡಿದ ಹಣವೆಲ್ಲಾ ಖಾಲಿಯಾಗುತ್ತಿದ್ದಂತೆ ಮತ್ತೊಂದು ಕೊಲೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಹಣವೆಲ್ಲಾ ಖಾಲಿ ಆದ ಮೇಲೆ ಮತ್ತೆ ತಮಿಳುನಾಡಿಗೆ ಬಂದು ಚಹಾ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಮಹಿಳೆಯೊಬ್ಬಳು ಧರಿಸಿದ್ದ ಚಿನ್ನದ ಸರದ ಮೇಲೆ ಈತನ ಕಣ್ಣು ಬೀಳುತ್ತದೆ. ವಿನೀತಾ ಎನ್ನುವ ಮಹಿಳೆ ಹತ್ಯೆ ಮಾಡಿ ಸರ ಪಡೆದುಕೊಂಡು 95 ಸಾವಿರ ರೂ. ಹಣ ನಗದು ಪಡೆದುಕೊಂಡು ಆನ್ ಲೈನ್ ಟ್ರೆಡಿಂಗ್ ಗೆ ಹಾಕಿದ್ದ.
ಮಹಿಳೆಯ ಕೊಲೆ ಬೆನ್ನು ಹತ್ತಿದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಆದರೆ ರಾಜೇಶ್ ನ ಮೂಲ ಸುಲಭಕ್ಕೆ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಅಲ್ಲಿಂದ ಆತ ಆಟೋ ಏರಿದ್ದು ಕಂಡಿತ್ತು. ಆಟೋ ಚಾಲಕನ ವಿಚಾರಣೆ ಮಾಡಿದಾಗ ತಾನು ಚಹಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದರ ಬಗ್ಗೆ ಮಾಹಿತಿ ಸಿಕ್ಕಿದೆ. ಇದೆಲ್ಲ ಸುಳಿವನ್ನು ಆಧರಿಸಿ ರಾಜೇಶನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹಳೆಯ ಕೊಲೆಯ ರಹಸ್ಯೆಗಳೆಲ್ಲ ಬಹಿರಂಗವಾಗಿದೆ.
Animal Cruelty : ಬೀದಿ ನಾಯಿಗಳ ಜತೆ ಮತ್ತೆ ಜಗಳ ತೆಗೆದ ಉದ್ಯಮಿ ಮೊಮ್ಮಗ.. ಕಾರು ಹತ್ತಿಸಲು ಯತ್ನ
ಬೆಂಗಳೂರಿನ ಕಿರಾತಕರು: ಇವರು ಅಂತಿಂಥ ಕಿರಾತಕರಲ್ಲ. ಒಂದೇ ಹುಡುಗಿಯನ್ನ ಲವ್ ಮಾಡಿದ್ದ ಕಳ್ಳರ ಗ್ಯಾಂಗ್.. ಪ್ರೀತಿ ಹೆಸರಲ್ಲಿ ಚಿನ್ನಾಭರಣ ದೋಚಿತ್ತು. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು, ಬಸವರಾಜ, ವಿಜಯಕುಮಾರ,ಸಂಜಯ್ ಬಂಧಿತ ಆರೋಪಿಗಳು.. ಮೊದಲಿಗೆ ಲವ್ವು ಆಮೇಲೆ ಬದುಕೋಕೆ ಕಷ್ಟ ಕಷ್ಟ ಅಂತ ರಾಗ ಎಳೆಯುತ್ತಿದ್ದರು. ಲವರ್ ಬಾಯ್ಸ್ ಕೇಳಿದಷ್ಟು ಹಣ, ಮನೆಯಲ್ಲಿಟ್ಟಿದ್ದ ಚಿನ್ನಾಭರಣವನ್ನು ಹುಡುಗಿ ತಂದುಕೊಟ್ಟಿದ್ದಳು.
ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ: ಮುಂಬೈ ಪೊಲೀಸರಿಗೆ (Mumbai Police) ಸವಾಲಾಗಿದ್ದ ಮಲಾಡ್ ದರೋಡೆ ಪ್ರಕರಣದಲ್ಲಿ ಸಿಕ್ಕ ಸುಳಿವನ್ನು ಆಧರಿಸಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಐವರನ್ನು ಬಂಧಿಸಿದ್ದಾರೆ. 60 ವರ್ಷದ ಮಹಿಳೆ ಮನೆಯಿಂದ 21 ಲಕ್ಷ ರೂ. ದರೋಡೆ (Robbery) ಮಾಡಿದ್ದ ತಂಡದ ಸದಸ್ಯರು ಸರೆ ಸಿಕ್ಕಿದ್ದಾರೆ. ಮಹಿಳೆ ತಮ್ಮ ಜನ್ಮದಿನ ಆಚರಣೆ ಮಾಡಿಕೊಳ್ಳಲು ಹೊರಗೆ ಹೋಗಿದ್ದಾಗ ಜನವರಿ 31 ರಂದು ಆಕೆ ಮನೆಯನ್ನು ದರೋಡೆ ಮಾಡಿದ ತಂಡ ಪರಾರಿಯಾಗಿತ್ತು.
ಕಳ್ಳತನವೇ ಕುಲಕಸುಬು: ಮಸಾಜ್ ಪಾರ್ಲರ್ ಗೆ ಹೋಗಲೆಂದೇ ಮನೆ ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ ಆಸಾಮಿಗಳು ಬಲೆಗೆ ಬಿದ್ದಿದ್ದಾರೆ. ಮಾಡ್ತಾ ಇದ್ದಿದ್ದು ಕಳ್ಳತನ..ಆದ್ರೆ ಮಾಡ್ತಿದ್ದ ಜೀವನ ಮಾತ್ರ ರಾಯಲ್ ಆಗಿತ್ತು. ಹುಡುಗಿಯರ ಕೈಯಲ್ಲಿ ಮೈಕೈ ಮುಟ್ಟಿಸಿಕೊಳ್ಳಲು ಮನೆಕಳ್ಳತನಕ್ಕೆ ಇಳಿದಿದ್ದರು.
ಹೆಣ್ಣು ಮಕ್ಕಳ ಶೋಕಿಗೆ ಬಿದ್ದು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಮಸಾಜ್ ಪಾರ್ಲರ್ ಹೋಗೊಕೆ ಅಂತಲೇ ಮನೆ ಬೀಗ ಒಡಿಯುತ್ತಿದ್ದರು. ಇಬ್ಬರು ಖತರ್ನಾಕ್ ಮನೆಗಳ್ಳರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದರು.