MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • Vaibhav Suryavanshi ಇಂಗ್ಲೆಂಡ್‌ಗೆ ಹೋಗ್ತಿದ್ದಂತೆ ಇಂಡಿಯಾದಲ್ಲಿ ತಮ್ಮನ ಅಬ್ಬರ; 168 ರನ್ ಬಾರಿಸಿದ ಆಶೀರ್ವಾದ್!

Vaibhav Suryavanshi ಇಂಗ್ಲೆಂಡ್‌ಗೆ ಹೋಗ್ತಿದ್ದಂತೆ ಇಂಡಿಯಾದಲ್ಲಿ ತಮ್ಮನ ಅಬ್ಬರ; 168 ರನ್ ಬಾರಿಸಿದ ಆಶೀರ್ವಾದ್!

ಭಾರತೀಯ ಕ್ರಿಕೆಟ್‌ನಲ್ಲಿ ಸೂರ್ಯವಂಶಿ ಸಹೋದರರ ಹವಾ ಶುರುವಾಗಿದೆ. 15ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿ ವೈಭವ್ ಸೂರ್ಯವಂಶಿ (Vaibhav suryavanshi) ಇತಿಹಾಸ ಸೃಷ್ಟಿಸಿದರೆ, ಅವರ 10 ವರ್ಷದ ತಮ್ಮ ಆಶೀರ್ವಾದ್ ಸೂರ್ಯವಂಶಿ ಸ್ಥಳೀಯ ಪಂದ್ಯದಲ್ಲಿ 168 ರನ್ ಸಿಡಿಸಿ ಅಬ್ಬರಿಸಿದ್ದಾರೆ.

2 Min read
Author : Sathish Kumar KH
Published : Jun 24 2026, 09:09 PM IST
Share this Photo Gallery
  • FB
  • TW
  • Linkdin
  • Whatsapp
17
ಅಣ್ಣನ ಬಳಿಕ ತಮ್ಮನ ಅಬ್ಬರ ಶುರು
Image Credit : X

ಅಣ್ಣನ ಬಳಿಕ ತಮ್ಮನ ಅಬ್ಬರ ಶುರು

ಭಾರತೀಯ ಕ್ರಿಕೆಟ್‌ನಲ್ಲಿ ಈಗ ಸೂರ್ಯವಂಶಿ ಸಹೋದರರ ಹವಾ ಶುರುವಾಗಿದೆ. ಇತ್ತೀಚೆಗಷ್ಟೇ 15ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ (Vaibhav suryavanshi) ಇಂಗ್ಲೆಂಡ್ ಟೂರ್‌ಗೆ ಹೋಗ್ತಿದ್ದಂತೆ, ಇತ್ತ ಇಂಡಿಯಾದಲ್ಲಿ ತಮ್ಮನ ಹವಾ ಶುರುವಾಗಿದೆ. ವೈಭವ್‌ನ 10 ವರ್ಷದ ತಮ್ಮ ಆಶೀರ್ವಾದ್ ಸೂರ್ಯವಂಶಿ (Ashirwad suryavanshi) ಕೇವಲ 168 ರನ್‌ಗಳನ್ನು ಬಾರಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
119 ಎಸೆತಗಳಲ್ಲಿ 168 ರನ್: ಸಿಡಿಲಬ್ಬರದ ಬ್ಯಾಟಿಂಗ್
Image Credit : X

119 ಎಸೆತಗಳಲ್ಲಿ 168 ರನ್: ಸಿಡಿಲಬ್ಬರದ ಬ್ಯಾಟಿಂಗ್

ಬಿಹಾರದ ಸಮಸ್ತೀಪುರದಲ್ಲಿ ನಡೆದ ಸ್ಥಳೀಯ ಪಂದ್ಯವೊಂದರಲ್ಲಿ ಆಶೀರ್ವಾದ್ ಸೂರ್ಯವಂಶಿ (Ashirwad suryavanshi) ವೈಶಾಲಿ-11 ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಿಷಬ್-11 ತಂಡದ ಪರವಾಗಿ ಕಣಕ್ಕಿಳಿದಿದ್ದ ಆಶೀರ್ವಾದ್ ಕೇವಲ 119 ಎಸೆತಗಳಲ್ಲಿ ಬರೋಬ್ಬರಿ 168 ರನ್ ಸಿಡಿಸಿದ್ದಾರೆ. ಈ ಸ್ಫೋಟಕ ಇನಿಂಗ್ಸ್‌ನಲ್ಲಿ 19 ಬೌಂಡರಿ ಹಾಗೂ 6 ಬೃಹತ್ ಸಿಕ್ಸರ್‌ಗಳು ಸೇರಿದ್ದವು. ಅವರ ಈ ಬ್ಯಾಟಿಂಗ್ ದೆಸೆಯಿಂದ ಅವರ ತಂಡ ಭರ್ಜರಿ ಜಯ ದಾಖಲಿಸಿತು. ಈ ಮಾಹಿತಿಯನ್ನು ಸ್ವತಃ ಆಶೀರ್ವಾದ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಹಂಚಿಕೊಳ್ಳಲಾಗಿದೆ.

Related Articles

Related image1
ಟೀಮ್‌ ಇಂಡಿಯಾಗೆ ಸೆಲೆಕ್ಟ್‌ ಆದ್ರೂ ಡ್ರೆಸಿಂಗ್‌ ರೂಮ್‌ ಯೂಸ್‌ ಮಾಡೋ ಹಾಗಿಲ್ಲ Vaibhav Sooryavanshi
Related image2
ವಿರಾಟ್‌ ಕೊಹ್ಲಿ, ಸಚಿನ್‌ ಆಟ ಗೊತ್ತು; Vaibhav Suryavanshi ಮುಂದೆ ಹಾಗೆ ಆಗ್ತಾನೆ, ನೋಡ್ತಿರಿ: ಪಾಕ್ ಆಟಗಾರ
37
ತಿಂಗಳ ಆರಂಭದಲ್ಲೇ ಚೊಚ್ಚಲ ಶತಕ
Image Credit : Social Media

ತಿಂಗಳ ಆರಂಭದಲ್ಲೇ ಚೊಚ್ಚಲ ಶತಕ

ಆಶೀರ್ವಾದ್ ಕೇವಲ 168 ರನ್ ಇನಿಂಗ್ಸ್ ಮಾತ್ರವಲ್ಲದೆ, ಇದೇ ತಿಂಗಳ ಆರಂಭದಲ್ಲಿ ತಾಜ್‌ಪುರ ಕ್ರಿಕೆಟ್ ಅಕಾಡೆಮಿ ಪರವಾಗಿ ಆಡುವಾಗ 87 ಎಸೆತಗಳಲ್ಲಿ 103 ರನ್ ಗಳಿಸಿ ತಮ್ಮ ಮೊದಲ ಶತಕವನ್ನು ಪೂರೈಸಿದ್ದರು. 10ನೇ ವಯಸ್ಸಿನಲ್ಲೇ ಇಂತಹ ಪ್ರಬುದ್ಧ ಬ್ಯಾಟಿಂಗ್ ಮಾಡುತ್ತಿರುವ ಈ ಬಾಲಕನ ಬಗ್ಗೆ ಈಗ ಭಾರಿ ಚರ್ಚೆ ನಡೆಯುತ್ತಿದೆ.

47
ವೈಭವ್ ಸೂರ್ಯವಂಶಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವೀರ
Image Credit : Asianet News

ವೈಭವ್ ಸೂರ್ಯವಂಶಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವೀರ

ಆಶೀರ್ವಾದ್ ಅವರ ಅಣ್ಣ ವೈಭವ್ ಸೂರ್ಯವಂಶಿ ಈಗಾಗಲೆ ಭಾರತೀಯ ಕ್ರಿಕೆಟ್‌ನ ಹೊಸ ಸಂಚಲನ. ಕೇವಲ 15 ವರ್ಷ 71 ದಿನಗಳ ವಯಸ್ಸಿನಲ್ಲಿ ಭಾರತೀಯ ರಾಷ್ಟ್ರೀಯ ತಂಡಕ್ಕೆ (T20 ಸರಣಿ) ಆಯ್ಕೆಯಾಗುವ ಮೂಲಕ ಸಚಿನ್ ತೆಂಡೂಲ್ಕರ್ (16 ವರ್ಷ 194 ದಿನ) ಮತ್ತು ಶೆಫಾಲಿ ವರ್ಮಾ ಅವರ ದಾಖಲೆಯನ್ನು ವೈಭವ್ ಮುರಿದಿದ್ದಾರೆ.

57
ಅತಿವೇಗದ ಅರ್ಧಶತಕ
Image Credit : BCCI

ಅತಿವೇಗದ ಅರ್ಧಶತಕ

ಅಷ್ಟೇ ಅಲ್ಲದೆ, ವೈಭವ್ ಇತ್ತೀಚೆಗಷ್ಟೇ ಇಂಡಿಯಾ-ಎ ಪರವಾಗಿ ಆಡುವಾಗ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅತಿ ವೇಗದ ಫಿಫ್ಟಿ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಶ್ರೀಲಂಕಾ-ಎ ವಿರುದ್ಧ ಕೇವಲ 29 ಎಸೆತಗಳಲ್ಲಿ 94 ರನ್ ಬಾರಿಸಿದ್ದ ಇನಿಂಗ್ಸ್ ಇಂದಿಗೂ ಅಭಿಮಾನಿಗಳ ಮನದಲ್ಲಿದೆ.

67
ತಂದೆಯ ಕನಸು ಮತ್ತು ಸೂರ್ಯವಂಶಿ ಕುಟುಂಬದ ಶ್ರಮ
Image Credit : Social Media

ತಂದೆಯ ಕನಸು ಮತ್ತು ಸೂರ್ಯವಂಶಿ ಕುಟುಂಬದ ಶ್ರಮ

ವೈಭವ್ ಮತ್ತು ಆಶೀರ್ವಾದ್ ಅವರ ತಂದೆ ಸಂಜೀವ್ ಸೂರ್ಯವಂಶಿ ಅವರು ತಮ್ಮ ಮಕ್ಕಳ ಕ್ರಿಕೆಟ್ ವೃತ್ತಿಜೀವನಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. 'ವೈಭವ್ ನಂತರ ಆಶೀರ್ವಾದ್‌ನನ್ನು ಕೂಡ ಮುಂದಿನ ಎರಡು ವರ್ಷಗಳಲ್ಲಿ ಅತ್ಯುತ್ತಮ ಕ್ರಿಕೆಟಿಗನನ್ನಾಗಿ ರೂಪಿಸುವುದು ನನ್ನ ಗುರಿ' ಎಂದು ಸಂಜೀವ್ ಹೇಳಿದ್ದಾರೆ. ಆಶೀರ್ವಾದ್ ಬಲಗೈ ಬ್ಯಾಟರ್ ಆಗಿದ್ದರೆ, ವೈಭವ್ ಎಡಗೈ ಬ್ಯಾಟರ್. ಆದರೆ ಇಬ್ಬರ ಬ್ಯಾಟಿಂಗ್ ಶೈಲಿಯಲ್ಲಿ ಆಕ್ರಮಣಕಾರಿ ಗುಣವಿದ್ದು, ಇಬ್ಬರೂ ಪವರ್ ಹಿಟ್ಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

77
ಅಣ್ಣನ ಜೊತೆಗೆ ತಮ್ಮನೂ ತಂಡ ಸೇರಿದರೆ ಆಶ್ಚರ್ಯವಿಲ್ಲ
Image Credit : Vaibhav Suryavanshi

ಅಣ್ಣನ ಜೊತೆಗೆ ತಮ್ಮನೂ ತಂಡ ಸೇರಿದರೆ ಆಶ್ಚರ್ಯವಿಲ್ಲ

ಒಟ್ಟಾರೆಯಾಗಿ, ಸೂರ್ಯವಂಶಿ ಸಹೋದರರು ಭಾರತೀಯ ಕ್ರಿಕೆಟ್‌ನ ಮುಂದಿನ ಭವಿಷ್ಯ ಎಂದು ಹೇಳಲಾಗುತ್ತಿದೆ. ಅಣ್ಣನ ಹಾದಿಯಲ್ಲೇ ಸಾಗುತ್ತಿರುವ ಆಶೀರ್ವಾದ್, ಮುಂದೊಂದು ದಿನ ಅಣ್ಣನ ಜೊತೆಯೇ ಟೀಮ್ ಇಂಡಿಯಾದಲ್ಲಿ ಕಣಕ್ಕಿಳಿದರೆ ಅಚ್ಚರಿಯಿಲ್ಲ.

Proud of you, my little brother. Keep shining and making us proud every day ❤️ pic.twitter.com/VuKWZ7rroG

— Vaibhav Sooryavanshi (@Vaibhavsooryava) June 24, 2026

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ವೈಭವ್ ಸೂರ್ಯವಂಶಿ
ಭಾರತ ಸುದ್ದಿ
ಕ್ರಿಕೆಟ್
ಇಂಗ್ಲೆಂಡ್ ಕ್ರಿಕೆಟ್

Latest Videos
Recommended Stories
Recommended image1
ಟೀಮ್‌ ಇಂಡಿಯಾಗೆ ಸೆಲೆಕ್ಟ್‌ ಆದ್ರೂ ಡ್ರೆಸಿಂಗ್‌ ರೂಮ್‌ ಯೂಸ್‌ ಮಾಡೋ ಹಾಗಿಲ್ಲ Vaibhav Sooryavanshi
Recommended image2
Top 5 Richest Cricketers in World 2026: ಸಚಿನ್, ಕೊಹ್ಲಿ, ಧೋನಿ ನಡುವೆ ನಂಬರ್ 1 ಕುಬೇರ ಯಾರು? ಇಲ್ಲಿದೆ ವಿವರ
Recommended image3
5 ವರ್ಷದ ಹಿಂದೆ ತಾಯಿಯನ್ನು ಕಳೆದುಕೊಂಡ ಖ್ಯಾತ ಕ್ರಿಕೆಟಿಗನ ಮನೆಯಲ್ಲಿ ಮತ್ತೆ ಶೋಕ; ದುಃಖದಲ್ಲಿ ಮುಳುಗಿದ ದಿಗ್ಗಜ ಆಟಗಾರ!
Related Stories
Recommended image1
ಟೀಮ್‌ ಇಂಡಿಯಾಗೆ ಸೆಲೆಕ್ಟ್‌ ಆದ್ರೂ ಡ್ರೆಸಿಂಗ್‌ ರೂಮ್‌ ಯೂಸ್‌ ಮಾಡೋ ಹಾಗಿಲ್ಲ Vaibhav Sooryavanshi
Recommended image2
ವಿರಾಟ್‌ ಕೊಹ್ಲಿ, ಸಚಿನ್‌ ಆಟ ಗೊತ್ತು; Vaibhav Suryavanshi ಮುಂದೆ ಹಾಗೆ ಆಗ್ತಾನೆ, ನೋಡ್ತಿರಿ: ಪಾಕ್ ಆಟಗಾರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved