- Home
- Sports
- Cricket
- ಔಟಾಗಿ ಹೋಗುತ್ತಿದ್ದ ಪಾಕ್ ಆಟಗಾರನ ಮೇಲೆ ಮುಗಿಬಿದ್ದ ವೈಭವ್ ಸೂರ್ಯವಂಶಿ! ಅಗ್ರೆಸ್ಸಿವ್‌ನಲ್ಲಿ ಕೊಹ್ಲಿ ನೆನಪಿಸಿದ 14 ವರ್ಷದ ಆಟಗಾರ
ಔಟಾಗಿ ಹೋಗುತ್ತಿದ್ದ ಪಾಕ್ ಆಟಗಾರನ ಮೇಲೆ ಮುಗಿಬಿದ್ದ ವೈಭವ್ ಸೂರ್ಯವಂಶಿ! ಅಗ್ರೆಸ್ಸಿವ್‌ನಲ್ಲಿ ಕೊಹ್ಲಿ ನೆನಪಿಸಿದ 14 ವರ್ಷದ ಆಟಗಾರ
ಬೆಂಗಳೂರು: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದು ಗುರುತಿಸಿಕೊಂಡಿರುವ ಭಾರತ-ಪಾಕಿಸ್ತಾನ ನಡುವೆ ರಾಜತಾಂತ್ರಿಕ ಬಿಕ್ಕಟು ಮತ್ತಷ್ಟು ಹೆಚ್ಚಾಗಿದೆ. ಹೀಗಿರುವಾಗಲೇ ಅಂಡರ್-19 ವಿಶ್ವಕಪ್‌ನಲ್ಲಿ ನಡೆದ ಒಂದು ಘಟನೆ 14 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ನಡೆ ಕೊಹ್ಲಿಯನ್ನು ನೆನಪಿಸುವಂತಿದೆ.

ತಾರಕಕ್ಕೇರಿದ ಭಾರತ-ಪಾಕಿಸ್ತಾನ ಕಿತ್ತಾಟ
ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಕೆಲ ತಿಂಗಳ ಹಿಂದೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಸೋಲಿಸಿ ಭಾರತ ಚಾಂಪಿಯನ್ ಆಗಿದ್ದರೂ ಟೀಂ ಇಂಡಿಯಾಗಿನ್ನು ಟ್ರೋಫಿ ಸಿಕ್ಕಿಲ್ಲ. ಟ್ರೋಫಿ ಕಳ್ಳ ಮೊಹ್ಸಿನ್ ನಖ್ವಿಯಿಂದ ಆರಂಭವಾದ ಆನ್‌ಫೀಲ್ಡ್ ಜಗಳ ಸದ್ಯ ಟಿ20 ವಿಶ್ವಕಪ್ ಟೂರ್ನಿಯವರೆಗೂ ಮುಂದುವರೆದಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ಎದುರು ಆಡೊಲ್ಲವೆಂದ ಪಾಕಿಸ್ತಾನ ಸರ್ಕಾರ
ಇದೀಗ ಫೆಬ್ರವರಿ 07ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿವೆ. ಪಾಕಿಸ್ತಾನ ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾದ ಕೊಲಂಬೊ ಮೈದಾನದಲ್ಲಿ ಆಡಲಿದೆ. ಆದರೆ ಫೆಬ್ರವರಿ 15ರಂದು ನಿಗದಿಯಾಗಿದ್ದ ಭಾರತ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ಮೈದಾನಕ್ಕಿಳಿಯುವುದಿಲ್ಲ ಎಂದು ಪಾಕ್ ಸರ್ಕಾರ ಘೋಷಿಸಿದೆ.
ಇಂಡೋ-ಪಾಕ್ ಮ್ಯಾಚ್ ರದ್ದಾದ್ರೆ ಐಸಿಸಿ, ಪಾಕಿಸ್ತಾನಕ್ಕೆ ದೊಡ್ಡ ಹೊಡೆತ
ಇದು ಸದ್ಯದ ಮಟ್ಟಿಗೆ ಐಸಿಸಿಯನ್ನು ಕೊಂಚ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಒಂದು ವೇಳೆ ಈ ಮ್ಯಾಚ್ ರದ್ದಾದರೇ, ಆರ್ಥಿಕವಾಗಿ ಐಸಿಸಿ ಹಾಗೂ ಬ್ರಾಡ್‌ಕಾಸ್ಟಿಂಗ್ ಸಂಸ್ಥೆಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಇದರ ಜತೆಗೆ ಪಾಕಿಸ್ತಾನಕ್ಕೂ ಐಸಿಸಿ ಬಲವಾದ ಪೆಟ್ಟು ನೀಡಲು ಈಗಾಗಲೇ ತಯಾರಿ ನಡೆಸುತ್ತಿದೆ.
ಅಂಡರ್-19 ಭಾರತ-ಪಾಕ್ ಮ್ಯಾಚ್
ಇನ್ನು ಇದೆಲ್ಲದರ ನಡುವೆ 2026ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು 58 ರನ್‌ಗಳಿಂದ ಬಗ್ಗುಬಡಿದ ಭಾರತದ ಯುವ ಪಡೆ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಇನ್ನು ಇದೇ ಪಂದ್ಯದ 37ನೇ ಓವರ್‌ನಲ್ಲಿ ಭಾರತ ಅಂಡರ್-19 ತಂಡದ ಉಪನಾಯಕ ವಿಹಾನ್ ಮಲ್ಹೋತ್ರಾ, ಪಾಕಿಸ್ತಾನದ ಬ್ಯಾಟರ್ ಅಲಿ ಹಸನ್ ಬಲೂಚ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೈಭವ್ ಸೂರ್ಯವಂಶಿ
ಈ ವಿಕೆಟ್ ಪತನವಾಗುತ್ತಿದ್ದಂತೆಯೇ ಪಾಕಿಸ್ತಾನದ ಸೋಲು ಬಹುತೇಕ ಖಚಿತವಾಯಿತು. ಇದರ ಬೆನ್ನಲ್ಲೇ ವೈಭವ್ ಸೂರ್ಯವಂಶಿ, ಪಾಕಿಸ್ತಾನದ ಬ್ಯಾಟರ್ ಕೆಣಕಿ ಕಾಲೆಳೆಯವಲ್ಲಿ ಯಶಸ್ವಿಯಾಗುತ್ತಾರೆ. ಔಟಾಗಿ ಪೆವಿಯನ್‌ನತ್ತ ಹೋಗುತ್ತಿದ್ದ ಅಲಿ ಹಸನ್ ಅವರ ಮೈಮೇಲೆ 14 ವರ್ಷದ ವೈಭವ್ ನುಗ್ಗಿ ಹೋಗುತ್ತಾರೆ. ಆಗ ವಿಹಾನ್ ಮಲ್ಹೋತ್ರಾ, ಸೂರ್ಯವಂಶಿಯನ್ನು ತಡೆದು ನಿಲ್ಲಿಸುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Man I love this Vaibhav Suryavanshi kid 🤣🤣🤣
zero holding back 🔥 pic.twitter.com/VeyxcihZ5n— CRICitism (@CRICitism) February 2, 2026
ಕೊಹ್ಲಿ ನೆನಪಿಸಿದ ಸೂರ್ಯವಂಶಿ
ಆದರೆ ವೈಭವ್ ಸೂರ್ಯವಂಶಿ, ಯಾವ ವಿಚಾರಕ್ಕೆ ಅಷ್ಟೊಂದು ತಾಳೆ ಕಳೆದಕೊಂಡು ಅಗ್ರೆಸ್ಸಿವ್ ವರ್ತನೆ ತೋರಿದರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ವೈಭವ್ ಸೂರ್ಯವಂಶಿಯ ಈ ವರ್ತನೆ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಮನೋಭಾವವನ್ನು ನೆನಪಿಸಿದ್ದಂತೂ ಸುಳ್ಳಲ್ಲ.
ಹೀಗಿತ್ತು ನೋಡಿ ವಿಡಿಯೋ:
Look at the face of Vihaan as he sees Vaibhav suryavanshi charging towards the Pakistani batsmen 😂
pic.twitter.com/1UB3Ay4CLX— Gangadhar (@90_andypycroft) February 2, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

