ಅತಿಹೆಚ್ಚು ಐಪಿಎಲ್ ಮ್ಯಾಚ್ ಆಡಿಯೂ ಒಂದೂ ಕಪ್ ಗೆಲ್ಲದ ಟಾಪ್ 6 ದಿಗ್ಗಜ ಕ್ರಿಕೆಟಿಗರಿವರು!
ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 28ರಿಂದ ಆರಂಭವಾಗಲಿದೆ. ಈ ಟೂರ್ನಿ ಆರಂಭಕ್ಕೂ ಮೊದಲು ಅತಿಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿಯೂ ಟ್ರೋಫಿ ಗೆಲ್ಲದ ಆರು ದಿಗ್ಗಜ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

1. ಎಬಿ ಡಿವಿಲಿಯರ್ಸ್: 184 ಮ್ಯಾಚ್
ಆರ್‌ಸಿಬಿ ತಂಡದ ಆಪತ್ಬಾಂಧವನಾಗಿ ಗುರುತಿಸಿಕೊಂಡು ಒಂದು ದಶಕಗಳ ಕಾಲ ಆಡಿದರೂ ಎಬಿ ಡಿವಿಲಿಯರ್ಸ್ ಪಾಲಿಗೆ ಐಪಿಎಲ್ ಟ್ರೋಫಿ ಗಗನ ಕುಸುಮವಾಗಿಯೇ ಉಳಿಯಿತು. ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಆರ್‌ಸಿಬಿ ತಂಡದ ಪರ ಒಟ್ಟು 184 ಮ್ಯಾಚ್ ಆಡಿದರೂ, ಎಬಿಡಿಗೆ ಕಪ್ ಗೆಲ್ಲಲು ಸಾಧ್ಯವಾಗದೇ ನಿವೃತ್ತಿ ಘೋಷಿಸಿದರು.
2. ಸಂಜು ಸ್ಯಾಮ್ಸನ್: 177 ಮ್ಯಾಚ್
ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಇದುವರೆಗೂ 177 ಐಪಿಎಲ್ ಮ್ಯಾಚ್ ಆಡಿದ್ದರೂ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಡೆಲ್ಲಿ ಡೇರ್‌ಡೆವಿಲ್ಸ್, ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರೂ ಸಂಜು ಐಪಿಎಲ್ ಟ್ರೋಫಿ ಗೆದ್ದಿಲ್ಲ. ಇದೀಗ 19ನೇ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯಲು ರೆಡಿಯಾಗಿದ್ದು, ಸಿಎಸ್‌ಕೆ ಪರವಾದರೂ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ತಾರಾ ಕಾದು ನೋಡಬೇಕಿದೆ.
3. ಅಮಿತ್ ಮಿಶ್ರಾ: 162 ಮ್ಯಾಚ್
ಭಾರತದ ದಿಗ್ಗಜ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಐಪಿಎಲ್‌ನಲ್ಲಿ ಒಟ್ಟು 162 ಮ್ಯಾಚ್ ಆಡಿ 174 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಆದರೆ ಐಪಿಎಲ್ ಟ್ರೋಫಿ ಮಾತ್ರ ಗೆಲ್ಲಲು ಸಾಧ್ಯವಾಗಲಿಲ್ಲ. ಅಮಿತ್ ಮಿಶ್ರಾ, ಡೆಲ್ಲಿ ಕ್ಯಾಪಿಟಲ್ಸ್, ಡೆಕ್ಕನ್ ಚಾರ್ಜಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರೂ ಕಪ್ ಗೆಲ್ಲದೇ ಐಪಿಎಲ್‌ಗೆ ವಿದಾಯ ಘೋಷಿಸಿದರು.
4. ಅಕ್ಷರ್ ಪಟೇಲ್: 162 ಮ್ಯಾಚ್
ಮುಂಬೈ ಇಂಡಿಯನ್ಸ್ ಮೂಲಕ ಐಪಿಎಲ್‌ಗೆ ಎಂಟ್ರಿಕೊಟ್ಟ ಅಕ್ಷರ್ ಪಟೇಲ್, ಬಳಿಕ ಪಂಜಾಬ್ ಕಿಂಗ್ಸ್ ಆ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ 162 ಪಂದ್ಯಗಳನ್ನಾಡಿರುವ ಅಕ್ಷರ್ ಪಟೇಲ್ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರೂ, ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.
5. ಕೆ ಎಲ್ ರಾಹುಲ್: 145 ಮ್ಯಾಚ್
ಕರ್ನಾಟಕದ ಅನುಭವಿ ಆಟಗಾರ ಕೆ ಎಲ್ ರಾಹುಲ್, ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರೂ, ಐಪಿಎಲ್ ಟ್ರೋಫಿ ಎನ್ನುವುದು ಗಗನಕುಸುಮವಾಗಿದೆ. ರಾಹುಲ್ 145 ಐಪಿಎಲ್ ಮ್ಯಾಚ್ ಆಡಿಯೂ ಕಪ್ ಇದುವರೆಗೂ ಗೆದ್ದಿಲ್ಲ.
6. ಕ್ರಿಸ್ ಗೇಲ್: 142 ಮ್ಯಾಚ್
ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ಕೆಕೆಆರ್ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿ, ಆ ಬಳಿಕ ಆರ್‌ಸಿಬಿ ತಂಡದ ದೈತ್ಯ ಆಟಗಾರನಾಗಿ ಬೆಳೆದು ನಿಂತರು. ಕೊನೆಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದರು. ಒಟ್ಟು 142 ಐಪಿಎಲ್ ಮ್ಯಾಚ್ ಆಡಿಯೂ ಗೇಲ್‌ಗೆ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶ ಸಿಗಲೇಯಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

