ರಿಷಭ್ ಪಂತ್, ಊರ್ವಶಿ ರೌಟೇಲಾ ಲಿಂಕ್-ಅಪ್: ಬಾಯಿ ಬಿಟ್ಟ ಶುಭಮನ್ ಗಿಲ್
ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಮತ್ತು ಟೀಮ್ ಇಂಡಿಯಾ ಆಟಗಾರ ರಿಷಬ್ ಪಂತ್ (Rishabh Pant) ಅವರ ಸಂಬಧದ ಬಗ್ಗೆ ವರದಿಗಳು ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇರುತ್ತವೆ. ಈಗ ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ (Shubman Gill) ಅವರು ಪಂಜಾಬಿ ಚಾಟ್ ಶೋನಲ್ಲಿ ರಿಷಬ್ ಪಂತ್-ಊರ್ವಶಿ ರೌಟೇಲಾ ಲಿಂಕ್-ಅಪ್ ಮೇಲೆ ಬೆಳಕು ಚೆಲ್ಲಿದ್ದಾರೆ. ಅಷ್ಷಕ್ಕೂ .ರಿಷಬ್ ಪಂತ್, ಊರ್ವಶಿ ರೌಟೇಲಾ ಅವರ ಸಂಬಂಧದ ರೂಮರ್ ಬಗ್ಗೆ ಶುಭಮನ್ ಗಿಲ್ ಏನು ಹೇಳಿದ್ದಾರೆ ನೋಡಿ.
ರಿಷಬ್ ಪಂತ್ ಮತ್ತು ಊರ್ವಶಿ ರೌಟೇಲಾ ಅವರ ರೂಮರ್ಡ್ ಆಫೇರ್ ಇಂಟರ್ನೆಟ್ ಮೀಮ್‌ಗಳ ವಿಷಯ. ರಿಷಬ್ ಪಂತ್ ಮತ್ತು ಊರ್ವಶಿ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ (Social Media posts) ನಂತರ ಅನುಮಾನ ಇನ್ನೂ ಹೆಚ್ಚಿದೆ.
ಸಂದರ್ಶನವೊಂದರಲ್ಲಿ, 'ಮಿಸ್ಟರ್ ಆರ್‌ಪಿ' ಕುರಿತು ಊರ್ವಶಿ ಅವರ ಕಾಮೆಂಟ್‌ಗಳು ಮತ್ತು ವಿವಾದಾತ್ಮಕ Instagram ಪೋಸ್ಟ್‌ಗಳು ಹಾಗೂ ಇಬ್ಬರ Instagram ಸ್ಟೋರಿಗಳು ಇನ್ನಷ್ಟು ರೂಮರ್‌ಗಳಿಗೆ ದಾರಿ ಮಾಡಿದ್ದವು.
ಆದರೆ ಈಗ ಚಾಟ್ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ರಿಷಬ್ ಪಂತ್ ಅವರ ಟೀಮ್ ಮೇಟ್ ಕ್ರಿಕೆಟರ್ ಶುಭಮನ್ ಗಿಲ್ ಈ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಮತ್ತು ನಿಜ ವಿಷಯ ಬಹಿರಂಗ ಪಡಿಸಿದ್ದಾರೆ.
ಸೋನಮ್ ಬಾಜ್ವಾ ಪ್ರಸ್ತುತಪಡಿಸಿದ ಪಂಜಾಬಿ ಟಾಕ್ ಪ್ರೋಗ್ರಾಂ ದಿಲ್ ದಿಯಾನ್ ಗಲ್ಲಾನ್‌ನಲ್ಲಿ ಊರ್ವಶಿ-ರಿಷಭ್ ಘಟನೆಯನ್ನು ವಿವರಿಸಲು ಶುಭ್‌ಮಾನ್ ಅವರನ್ನು ಕೇಳಲಾಯಿತು. ರಿಷಭ್ ಕಡೆಯಿಂದ ಹೇಳಲು ಏನೂ ಇಲ್ಲ ಎಂದು ಶುಭ್ಮನ್ ಗಿಲ್ ಉತ್ತರಿಸಿದ್ದಾರೆ.
ಸೋನಮ್ ಬಾಜ್ವಾ ಪ್ರಸ್ತುತಪಡಿಸಿದ ಪಂಜಾಬಿ ಟಾಕ್ ಪ್ರೋಗ್ರಾಂ ದಿಲ್ ದಿಯಾನ್ ಗಲ್ಲಾನ್‌ನಲ್ಲಿ ಊರ್ವಶಿ-ರಿಷಭ್ ಘಟನೆಯನ್ನು ವಿವರಿಸಲು ಶುಭ್‌ಮಾನ್ ಅವರನ್ನು ಕೇಳಲಾಯಿತು. ರಿಷಭ್ ಕಡೆಯಿಂದ ಹೇಳಲು ಏನೂ ಇಲ್ಲ ಎಂದು ಶುಭ್ಮನ್ ಗಿಲ್ ಉತ್ತರಿಸಿದ್ದಾರೆ.
ಅವಳ ಚಟುವಟಿಕೆಗಳಿಂದ ರಿಷಬ್ ಪಂತ್‌ನ ಗಮನ ಬೇರೆಡೆಗೆ ತಿರುಗುವುದಿಲ್ಲ. ಊರ್ವಶಿರಿಗೆ ಕೀಟಲೆ ಮಾಡಲು ಯಾರಾದರೂ ಬೇಕು ಎಂದು ಶುಭ್ಮನ್ ಗಿಲ್ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಿಸ್ಟರ್ ಆರ್‌ಪಿ ನನ್ನನ್ನು ನೋಡಲು ಕಾಯುತ್ತಿದ್ದರು ಮತ್ತು ವರಿಂದ 16 ರಿಂದ 17 ಮಿಸ್ಡ್ ಕಾಲ್‌ಗಳು ಇದ್ದವು ಎಂದು ಊರ್ವಶಿ ರೌಟೇಲಾ ಬಾಲಿವುಡ್ ಹಂಗಾಮಾದೊಂದಿಗಿನ ಸಂದರ್ಶನದಲ್ಲಿ ಈ ಹಿಂದೆ ಬಹಿರಂಗಪಡಿಸಿದ್ದರು.
ನಂತರ, ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರ ಸಂದರ್ಶನಕ್ಕೆ ಪ್ರತಿಕ್ರಿಯಿಸಿದ ರಿಷಬ್, ಊರ್ವಶಿ ತನ್ನ ಕುಖ್ಯಾತಿಯ ಮೇಲೆ ಅವಲಂಬಿತವಾಗಿದ್ದಾಳೆ ಎಂದು ಟೀಕಿಸಿದರು.
ಗಮನ ಸೆಳೆಯಲು ಮತ್ತು ಸಣ್ಣ ಪ್ರಮಾಣದ ಖ್ಯಾತಿಯನ್ನು ಪಡೆಯಲು ಸಂದರ್ಶನಗಳ ಸಮಯದಲ್ಲಿ ವ್ಯಕ್ತಿಗಳು ಹೇಗೆ ಕಥೆಗಳನ್ನು ನಿರ್ಮಿಸುತ್ತಾರೆ ಎಂಬುದು ತಮಾಷೆಯಾಗಿದೆ. ದುರದೃಷ್ಟವಶಾತ್, ಕೆಲವರು ಹೆಸರನ್ನು ಗುರುತಿಸುವ ಹಂಬಲವನ್ನು ಹೊಂದಿರುತ್ತಾರೆ. ದೇವರು ಅವರನ್ನು ಆಶೀರ್ವದಿಸಲಿ ಎಂದು ರಿಷಬ್ ಪಂತ್ ಹೇಳಿದ್ದರು.
ಅದೇ ಸಮಯದಲ್ಲಿ ಷಬ್ ಪಂತ್ ಅವರ ಳಿಕೆಗೆ ಊರ್ವಶಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಚೋಟು ಭಯ್ಯಾ ಬ್ಯಾಟ್ ಬಾಲ್ ಆಡಬೇಕು ಎಂದು ಹೇಳಿದ್ದಾರೆ. ಪುಟ್ಟ ಮಗುವೇ ನಿನಗೆ ರಕ್ಷಾ ಬಂಧನ ಶುಭಾಶಯಗಳು, ನಾನು ಕುಖ್ಯಾತಿ ಹೊಂದಲು ಮುನ್ನಿ ಅಲ್ಲ' ಎಂದೂ ನಟಿ ಬರೆದಿದ್ದರು.
ಆದರೆ ಇಬ್ಬರ ನಡುವಿನ ಈ ಎಲ್ಲಾ ಲಿಂಕ್‌ಅಪ್ ವರದಿಗಳ ನಂತರ ಗೇಮಿಂಗ್ ವೆಬ್‌ಸೈಟ್‌ಗೆ ಆರ್‌ಪಿ ಸಂಚಿಕೆಯು ಪ್ರಚಾರ ತಂತ್ರವಾಗಿದೆ ಎಂದು ಊರ್ವಶಿ ಬಹಿರಂಗಪಡಿಸಿದ್ದಾರೆ.