ಊರ್ವಶಿಗೆ ಕೀಟಲೆ ಮಾಡಲು ಯಾರಾದರೂ ಬೇಕು: ರಿಷಭ್‌ ಪಂತ್‌ ಪರ ಬ್ಯಾಟ್‌ ಬೀಸಿದ ಶುಭ್‌ಮನ್‌ ಗಿಲ್‌

ರಿಷಭ್‌ ಪಂತ್‌ ಕಡೆಯಿಂದ ಏನೂ ಇಲ್ಲ. ಆಕೆಯ ಚಟುವಟಿಕೆಗಳಿಂದ ಆತ ವಿಚಲಿತರಾಗುವುದಿಲ್ಲ. ಊರ್ವಶಿಗೆ ಕೀಟಲೆ ಮಾಡಲು ಯಾರಾದರೂ ಬೇಕು ಎಂದು ಶುಭ್‌ಮನ್‌ ಗಿಲ್‌ ಹೇಳಿದ್ದಾರೆ. 

shubman gill lifts lid on rishabh pant urvashi rautela episode there is nothing from his side ash

ನೀವು ಕ್ರಿಕೆಟ್ - ಬಾಲಿವುಡ್‌ ಇದರಲ್ಲಿ ಯಾವುದಾದರೂ ಒಂದನ್ನು ಫಾಲೋ ಮಾಡುತ್ತಿದ್ದರೂ ನಿಮಗೆ ಭಾರತೀಯ ಕ್ರಿಕೆಟಿಗ (Indian Cricketer) ರಿಷಭ್‌ ಪಂತ್ (Rishabh Pant) ಹಾಗೂ ಬಾಲಿವುಡ್‌ ನಟಿ (Bollywood Actress) ಊರ್ವಶಿ ರೌಟೆಲಾ (Urvashi Rautela)  ಬಗ್ಗೆ ಕೆಲ ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ (Social Media) ಸುದ್ದಿಯಾಗುತ್ತಲೇ ಇದೆ. ಇವರಿಬ್ಬರೂ ಒಬ್ಬರನೊಬ್ಬರು ಪೋಸ್ಟ್‌ಗಳ ಮೂಲಕ ಆಗಾಗ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಬಾಲಿವುಡ್‌ ನಟಿ ಮಿಸ್ಟರ್‌ ಆರ್‌ಪಿ (Mr. RP) ಎಂದು ಹೇಳಿದ್ದರು. ನಂತರ ಅದೇ ರೀತಿ ಇನ್ಸ್ಟಾಗ್ರಾಮ್‌ ಪೋಸ್ಟ್‌ಗಳಲ್ಲಿ ಹಾಗೂ ಸ್ಟೋರಿಗಳಲ್ಲಿ ಏನಾದ್ರೂ ಪೋಸ್ಟ್‌ ಮಾಡುತ್ತಿರುತ್ತಾರೆ. ರಿಷಭ್‌ ಪಂತ್ ಸಹ ನಟಿ ವಿರುದ್ಧ ಪೋಸ್ಟ್‌ ಮಾಡಿರುವುದನ್ನು ನೀವು ನೋಡಿರಬಹುದು. ಈಗ ಅವರಿಬ್ಬರ ಬಗ್ಗೆ ಭಾರತೀಯ ಕ್ರಿಕೆಟಿಗ ಶುಭ್‌ಮನ್‌ ಗಿಲ್‌ (Shubhman Gill) ಮಾತನಾಡಿದ್ದು, ತಂಡದ ಇತರೆ ಸದಸ್ಯರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಅವರು ಬಾಯಿಬಿಟ್ಟಿದ್ದಾರೆ. 

ಈ ಹಿಂದೆ ಆಗಸ್ಟ್‌ ತಿಂಗಳಲ್ಲಿ ನಟಿ ಊರ್ವಶಿ ರೌಟೆಲಾ, ಬಾಲಿವುಡ್‌ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ, ಮಿಸ್ಟರ್‌ ಆರ್‌ಪಿ, ಹೊಸದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ನನ್ನನ್ನು ಭೇಟಿ ಮಾಡಲು ಹಲವು ಕಾಲ ಕಾಯುತ್ತಿದ್ದರು. ಹಾಗೂ, 16 - 17 ಬಾರಿ ಮಿಸ್‌ಕಾಲ್‌ ನೀಡಿದ್ದರು ಎಂದೂ ಪರೋಕ್ಷವಾಗಿ ರಿಷಭ್‌ ಪಂತ್ ಕಾಲೆಳೆದಿದ್ದರು. ಇದಕ್ಕೆ ಪ್ರತಿಕ್ರಿಯೆಯನ್ನೂ ನೀಡಿದ್ದ ಪಂತ್, ಹೆಸರು ಗಳಿಸಲು ಹಾಗೂ ಸುದ್ದಿಯಾಗಲು ಜನರು ಸಂದರ್ಶನಗಳಲ್ಲಿ ಏನೇನೆಲ್ಲ ಹೇಳುತ್ತಾರೆ. ಹೆಸರು ಹಾಗೂ ಖ್ಯಾತಿಗಾಗಿ ಎಷ್ಟು ಹಸಿವು ಹೊಂದಿದ್ದಾರೆ ಎಂದು ಬೇಸರವಾಗುತ್ತದೆ, ದೇವರು ಅವರನ್ನು ಆಶೀರ್ವಾದ ಮಾಡಲಿ ಎಂದು ಆ ವೈರಲ್‌ ಸಂದರ್ಶನದ ಬಗ್ಗೆ ಪೋಸ್ಟ್‌ ಮಾಡಿದ್ದರು. ನಂತರ, ಅದನ್ನು ಡಿಲೀಟ್‌ ಕೂಡ ಮಾಡಿದ್ದರು. 

ಇದನ್ನು ಓದಿ: Rishabh Pant ಹುಟ್ಟುಹಬ್ಬಕ್ಕೆ ಫ್ಲೈಯಿಂಗ್‌ ಕಿಸ್‌ ಕೊಟ್ಟು ಶುಭ ಕೋರಿದ ನಟಿ ಊರ್ವಶಿ ರೌಟೆಲಾ..!

ನಂತರ, ರಿಷಭ್‌ ಪಂತ್‌ ಪೋಸ್ಟ್‌ಗೆ ನಟಿ ಪ್ರತಿಕ್ರಿಯೆ ನೀಡಿದ್ದು, ಚಿಕ್ಕ ತಮ್ಮ ಬ್ಯಾಟ್‌ ಬಾಲ್‌ ಆಡಬೇಕು. ನಾನು ಕುಖ್ಯಾತಿ ಹೊಂದಲು ಮೂರ್ಖಳಲ್ಲ ಎಂದು ನಟಿ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹೇಳಿದ್ದರು. ಹಾಗೂ, ರಕ್ಷಾಬಂಧನ್‌ ಮುಬಾರಕ್‌ , ಲವ್, ಊರ್ವಶಿ ರೌಟೆಲಾ ಮುಂತಾದ ಹ್ಯಾಶ್‌ಟ್ಯಾಗ್‌ಗಳನ್ನು ಹಾಕಿದ್ದರು. ಹಾಗೂ, ಊರ್ವಶಿ ಸಹ ಅದನ್ನು ಡಿಲೀಟ್‌ ಮಾಡಿದ್ದರು. ನಂತರ ಪಂತ್‌ ಮತ್ತೆ ನಿಮ್ಮ ನಿಯಂತ್ರಣದಲ್ಲಿ ಇಲ್ಲದರ ಬಗ್ಗೆ ಯಾವ ಒತ್ತಡವನ್ನೂ ಪಡೆಯಬೇಡಿ ಎಂದೂ ಪೋಸ್ಟ್‌ ಮಾಡಿದ್ದರು. ಇದು ಕೂಡ ಊರ್ವಶಿ ರೌಟೆಲಾ ಅವರಿಗೆ ಹೇಳಿದ್ದು ಎಂದು ಹಲವು ನೆಟ್ಟಿಗರು ಹೇಳಿದ್ದರು. 

ರಿಷಭ್‌ ಪಂತ್ ಹುಟ್ಟುಹಬ್ಬದ ದಿನವೇ ನಟಿ ಊರ್ವಶಿ ರೌಟೆಲಾ ಹುಟ್ಟುಹಬ್ಬದ ಶುಭಾಶಯಗಳು ಎಂದು ಪೋಸ್ಟ್‌ ಮಾಡಿ ಫ್ಲೈಯಿಂಗ್ ಕಿಸ್‌ ಅನ್ನೂ ಕೊಟ್ಟಿದ್ದಳು. ಆದರೆ, ಯಾರಿಗೆ ಎಂದು ಮಾತ್ರ ಹಾಕಿರಲಿಲ್ಲ. ರಿಷಭ್‌ ಪಂತ್ ಪೋಸ್ಟ್‌ ಮಾಡಿ 3 ತಿಂಗಳ ನಂತರ ಈಗ ಟೀಂ ಇಂಡಿಯಾದ ಆಟಗಾರ ಶುಭ್‌ಮನ್‌ ಗಿಲ್‌, ಪಂತ್‌ ಹಾಗೂ ಊರ್ವಶಿ ಎಪಿಸೋಡ್‌ ಬಗ್ಗೆ ಮಾತನಾಡಿದ್ದಾರೆ. ದಿಲ್‌ ದಿಯಾನ್‌ ಗಲ್ಲಾನ್‌ ಎಂಬ ಚ್ಯಾಟ್‌ ಶೋ ವೇಳೆ ಸೋನಮ್‌ ಬಾಜ್ವಾ ಅವರೊಂದಿಗೆ ಶುಭ್‌ಮನ್‌ ಗಿಲ್‌ ಈ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: ಊರ್ವಶಿ ಕರೀತಾ ಇದಾಳೆ ಎಂದು ಪಂತ್ ಕಾಲೆಳೆದ ಫ್ಯಾನ್ಸ್‌..! ರಿಷಭ್ ನೀಡಿದ ಖಡಕ್ ರಿಪ್ಲೇ ವೈರಲ್‌..!

ಟೀಂ ಇಂಡಿಯಾದ ಇತರೆ ಆಟಗಾರರು ಈ ಗಲಾಟೆ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನೂ ಶುಭ್‌ಮನ್‌ ಗಿಲ್‌ ತಿಳಿಸಿದ್ದಾರೆ. ರಿಷಭ್‌ ಪಂತ್‌ ಕಡೆಯಿಂದ ಏನೂ ಇಲ್ಲ. ಆಕೆಯ ಚಟುವಟಿಕೆಗಳಿಂದ ಆತ ವಿಚಲಿತರಾಗುವುದಿಲ್ಲ. ಇನ್ನು, ಊರ್ವಶಿಗೆ ಕೀಟಲೆ ಮಾಡಲು ಯಾರಾದರೂ ಬೇಕು ಎಂದು ಬ್ಯಾಟ್ಸ್‌ಮನ್‌ ಹೇಳಿದ್ದಾರೆ. 

Latest Videos
Follow Us:
Download App:
  • android
  • ios