- Home
- Sports
- Cricket
- ಏಷ್ಯಾಕಪ್ ಟೂರ್ನಿಗೂ ಮುನ್ನ ಬೌಲರ್‌ಗಳನ್ನು ಚೆಂಡಾಡಿದ ರಿಂಕು ಸಿಂಗ್; ಕೇವಲ 45 ಎಸೆತಗಳಲ್ಲಿ ಸೆಂಚೂರಿ!
ಏಷ್ಯಾಕಪ್ ಟೂರ್ನಿಗೂ ಮುನ್ನ ಬೌಲರ್‌ಗಳನ್ನು ಚೆಂಡಾಡಿದ ರಿಂಕು ಸಿಂಗ್; ಕೇವಲ 45 ಎಸೆತಗಳಲ್ಲಿ ಸೆಂಚೂರಿ!
ಯುಪಿ ಟಿ20 ಲೀಗ್‌ನಲ್ಲಿ ರಿಂಕು ಸಿಂಗ್ ಕೇವಲ 45 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದ್ದಾರೆ. ಈ ಮೂಲಕ ಏಷ್ಯಾಕಪ್ ಟೂರ್ನಿಗೂ ಮುನ್ನ ಫಾರ್ಮ್‌ಗೆ ಮರಳಿದ್ದು ಮಾತ್ರವಲ್ಲದೇ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
15

Image Credit : Getty
ಯುಪಿ ಟಿ20 ಲೀಗ್‌ನಲ್ಲಿ ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ, ತಂಡಕ್ಕೆ ಗೆಲುವು ತಂದುಕೊಟ್ಟರು. ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿರುವ ರಿಂಕು ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
25
Image Credit : PTI
ರಿಂಕು ಸಿಂಗ್ 48 ಎಸೆತಗಳಲ್ಲಿ 108 ರನ್ ಗಳಿಸಿ ಅಜೇಯರಾಗಿ ಉಳಿದರು. 8 ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ ಅಬ್ಬರಿಸಿದರು.
35
Image Credit : PTI
ಗೋರಖ್‌ಪುರ್ ಲಯನ್ಸ್ 20 ಓವರ್‌ಗಳಲ್ಲಿ 167/9 ರನ್ ಗಳಿಸಿತು. ಮೀರಟ್ ತಂಡದ ಪರ ರಿಂಕು ಸಿಂಗ್ ಮತ್ತು ಸಾಹಬ್ ಯುವರಾಜ್ 130 ರನ್‌ಗಳ ಜೊತೆಯಾಟ ನೀಡಿದರು. ಯುವರಾಜ್ 22 ಎಸೆತಗಳಲ್ಲಿ 22 ರನ್ ಗಳಿಸಿದರು.
45
Image Credit : PTI
ಮೀರಟ್ ಮಾವರಿಕ್ಸ್ 18.5 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು. ರಿಂಕು ಸಿಂಗ್ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟರು. ಇದರ ಜತೆಗೆ ಏಷ್ಯಾಕಪ್ ತಂಡದಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
55
Image Credit : PTI
ಏಷ್ಯಾಕಪ್ 2025ರಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಭಾರತ ತಂಡದಲ್ಲಿ ಸೂರ್ಯಕುಮಾರ್ ನಾಯಕರಾಗಿದ್ದು, ಶುಭ್‌ಮನ್ ಗಿಲ್ ಉಪನಾಯಕರಾಗಿದ್ದಾರೆ. ರಿಂಕು ಸಿಂಗ್, ಶಿವಂ ದುಬೆ, ಹರ್ಷಿತ್ ರಾಣಾ ತಂಡದಲ್ಲಿದ್ದಾರೆ.
Latest Videos