- Home
- Sports
- Cricket
- ಕ್ರುನಾಲ್ ಪಾಂಡ್ಯ ಅಲ್ಲೇ ಸಾಯಲಿ, RCB ವಿರುದ್ದ ಕಮೆಂಟ್ರಿ ಹೇಳಿದ ಬದ್ರಿನಾಥ್ ವಜಾಗೆ ಹೆಚ್ಚಿದ ಆಕ್ರೋಶ
ಕ್ರುನಾಲ್ ಪಾಂಡ್ಯ ಅಲ್ಲೇ ಸಾಯಲಿ, RCB ವಿರುದ್ದ ಕಮೆಂಟ್ರಿ ಹೇಳಿದ ಬದ್ರಿನಾಥ್ ವಜಾಗೆ ಹೆಚ್ಚಿದ ಆಕ್ರೋಶ
ಆರ್‌ಸಿಬಿ ಗೆಲುವು ಕಾಣುತ್ತಿದ್ದಂತೆ ತಮಿಳು ಕಮೆಂಟೇಟರ್ ಎಸ್ ಬದ್ರಿನಾತ್ ವಿಷ ಕಕ್ಕಿದ್ದಾರೆ. ಕ್ರುನಾಲ್ ಪಾಂಡ್ಯ ಇಂಜುರಿಯಿದ್ದ ಪಿಚ್ ಮೇಲೆ ಬಿದ್ದಾಗ, ಆತ ಅಲ್ಲೆ ಸಾಯಲಿ, ಆರ್‌ಸಿಬಿ ಸೋಲಲಿ ಎಂದು ಕಮೆಂಟ್ರಿ ಹೇಳಿದ್ದಾನೆ.

ವಿಷ ಕಾರಿದ ತಮಿಳು ಕಮೆಂಟೇಟರ್ ಎಸ್ ಬದ್ರಿನಾಥ್
ಮುಂಬೈ ಇಂಡಿಯನ್ಸ್ ವಿರುದ್ದ ಕ್ರುನಾಲ್ ಪಾಂಡ್ಯ ದಿಟ್ಟ ಹೋರಾಟ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿತ್ತು. ಇದರ ನಡುವೆ ಇಂಜುರಿಗೆ ತುತ್ತಾದ ಕ್ರುನಾಲ್ ಪಿಚ್‌ನಲ್ಲಿ ಬಿದ್ದಿದ್ದರು. ಈ ವೇಳೆ ತಮಿಳು ಕಮೆಂಟೇಟರ್, ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ಕಮೆಂಟ್ರಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಮಾತಿ ಮಾತಿಗೂ ವಿಷ ಕಾರಿದ ಬದ್ರಿನಾತ್ ಕ್ರುನಾಲ್ ಪಾಂಡ್ಯ ಅಲ್ಲೆ ಸಾಯಲಿ ಎಂದು ಕಮೆಂಟ್ರಿ ಹೇಳಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

ಮುಂಬೈ ಕ್ರೀಡಾಸ್ಪೂರ್ತಿ ಮೆರೆದೆರೆ, ಕಮೆಂಟೇಟರ್ ವಿಷ ಕಕ್ಕಿದ
ಈ ರೋಚಕ ಪಂದ್ಯದ ಕೊನೆಯ ಎಸೆತದಲ್ಲಿ ಆರ್‌ಸಿಬಿ ಎರಡು ವಿಕೆಟ್‌ಗಳ ಜಯ ಸಾಧಿಸಿತು. ತೀವ್ರ ಕಾಲಿನ ನೋವಿನೊಂದಿಗೆ ಹೋರಾಡಿದ ಕೃನಾಲ್ ಪಾಂಡ್ಯ, 46 ಎಸೆತಗಳಲ್ಲಿ 73 ರನ್ ಗಳಿಸಿ ಆರ್‌ಸಿಬಿ ಗೆಲುವಿಗೆ ಕಾರಣರಾದರು. ಬ್ಯಾಟಿಂಗ್ ವೇಳೆ ಕೃುನಾಲ್ ಪಾಂಡ್ಯ ನೋವಿನಿಂದ ಕ್ರೀಸ್‌ನಲ್ಲೇ ಕುಸಿದುಬಿದ್ದರು. ಆಗ ಎದುರಾಳಿ ತಂಡದ ವಿಕೆಟ್‌ಕೀಪರ್, ಮುಂಬೈ ಇಂಡಿಯನ್ಸ್‌ನ ರಿಯಾನ್ ರಿಕೆಲ್ಟನ್ ತಕ್ಷಣವೇ ಪಾಂಡ್ಯ ಬಳಿ ಓಡಿಬಂದು ಸಹಾಯ ಮಾಡಲು ಮುಂದಾದರು. ಇದು ಅವರ ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಗಿತ್ತು.
ತಮಿಳು ಕಮೆಂಟೇಟರ್ ಬದ್ರಿನಾಥ್ ಕಮೆಂಟ್ರಿಯಲ್ಲಿ ವ್ಯಂಗ್ಯ ಹಾಗೂ ವಿಷ
ತಮಿಳು ಕಾಮೆಂಟರಿ ಮಾಡುತ್ತಿದ್ದ ಬದ್ರಿನಾಥ್, "ರಿಯಾನ್ ರಿಕೆಲ್ಟನ್ ಪಾಂಡ್ಯಗೆ ಸಹಾಯ ಮಾಡಬಾರದು, ಅವನು ಅಲ್ಲೇ ಸಾಯಲಿ,ಆರ್‌ಸಿಬಿ ತಂಡ ಸೋಲುತ್ತದೆ ಎಂದು ಕಮೆಂಟ್ರಿ ಹೇಳಿದ್ದಾರೆ. ಬದ್ರಿನಾಥ್ ಅವರ ಈ ಮಾತು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್‌ನ ಮೂಲ ಆಶಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬದ್ರಿನಾಥ್ ಅಮಾನತಿಗೆ ಆಗ್ರಹ
ಕಮೆಂಟೇಟರ್‌ನಿಂದ ತಕ್ಷಣವೇ ಎಸ್ ಬದ್ರಿನಾಥ್ ವಜಾ ಮಾಡಬೇಕು. ಇಷ್ಟೇ ಅಲ್ಲ ಯಾವುದೇ ಕ್ರಿಕೆಟಿಂಗ್ ಹುದ್ದೆ ನೀಡಬಾರದು. ಕ್ರೀಡಾಸ್ಪೂರ್ತಿಯೇ ಇಲ್ಲದ ಎಸ್ ಬದ್ರಿನಾಥ್ ಕ್ರಿಕೆಟರ್ ಆಗಿರುವ ಅರ್ಹರಲ್ಲ ಎಂಬ ಆಕ್ರೋಶಗಳು ವ್ಯಕ್ತವಾಗಿದೆ.
ಸ್ಪಷ್ಟನೆ ನೀಡಿದ ಬದ್ರಿನಾಥ್
ಭಾರಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಸ್ ಬದ್ರಿನಾಥ್ ಸ್ಪಷ್ಟನೆ ನೀಡಿದ್ದಾರೆ. ತನ್ನ ಹೇಳಿಕೆ ತಿರುಚಿ ಅರ್ಥೈಸಲಾಗಿದೆ. ವೈರಿ ತಂಡಗಳು ಪರಸ್ಪರ ಹೇಗೆ ಸಹಾಯ ಮಾಡುತ್ತಿದೆ ಅನ್ನೋ ಕುರಿತು ಕಮೆಂಟರಿಯಲ್ಲಿ ಹೇಳಿದ್ದೇನೆ. ಇದರಲ್ಲಿ ಸಾಯಲಿ ಅನ್ನೋ ಅರ್ಥವಿಲ್ಲ ಎಂದೆಲ್ಲಾ ಸ್ಪಷ್ಟನೆ ನೀಡಿದ್ದಾರೆ.ಆದರೆ ಬದ್ರಿನಾಥ್ ಕಮೆಂಟರಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಮಹಾಪೂರ
"ತುಂಬಾ ಅವಮಾನಕಾರಿ ಹೇಳಿಕೆ. ಕ್ರಿಕೆಟ್ ಅಂದರೆ ಗೌರವ, ನೋವನ್ನು ಅಣಕಿಸುವುದಲ್ಲ."
"ರಿಕೆಲ್ಟನ್ ನಿಜವಾದ ಕ್ರೀಡಾಸ್ಫೂರ್ತಿ ತೋರಿಸಿದರು, ಬದ್ರಿನಾಥ್‌ನಲ್ಲಿ ಅದು ಇರಲಿಲ್ಲ."
"ಕಾಮೆಂಟರಿಯಲ್ಲಿ ಇಂತಹ ಅಸಂವೇದನಾಶೀಲ ಜೋಕ್‌ಗಳಿಗೆ ಜಾಗವಿಲ್ಲ."
"ಕೃನಾಲ್ ನೋವಿನಲ್ಲೂ ಹೋರಾಡಿದ್ದಾರೆ, ಅವರಿಗೆ ಚಪ್ಪಾಳೆ ಸಿಗಬೇಕು."
"ಆಟಗಾರರಿಗೆ ನಿಮ್ಮ ಕಮೆಂಟ್ರಿ ಬೇಕಿಲ್ಲ, ವೀಕ್ಷಕರಿಗೆ ನಿಮ್ಮ ವಿಷ ಬೇಕಾಗಿಲ್ಲ
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಮಹಾಪೂರ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
