MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಆರ್‌ಸಿಬಿ ಪ್ಲೇ ಆಫ್‌ ಖಚಿತಪಡಿಸಲು ಇನ್ನೆಷ್ಟು ಗೆಲುವು ಬೇಕು? ಈ ಬಾರಿಯ ಐಪಿಎಲ್ ಲೆಕ್ಕಾಚಾರ

ಆರ್‌ಸಿಬಿ ಪ್ಲೇ ಆಫ್‌ ಖಚಿತಪಡಿಸಲು ಇನ್ನೆಷ್ಟು ಗೆಲುವು ಬೇಕು? ಈ ಬಾರಿಯ ಐಪಿಎಲ್ ಲೆಕ್ಕಾಚಾರ

ಮಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಆರ್‌ಸಿಬಿ ಟೇಬಲ್ ಟಾಪರ್ ಆಗಿದೆ. 14 ಅಂಕಗಳಿಸಿದೆ. ಆದರೆ ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಗೊಂಡಿಲ್ಲ. ಪ್ಲೇ ಆಫ್ ಗೆಲುವಿಗೆ ಇನ್ನು ಎಷ್ಟು ಗೆಲುವು ಬೇಕು, ಟೇಬಲ್ ಟಾಪ್‌ನಲ್ಲಿ ಉಳಿಯಲು ಲೆಕ್ಕಾಚಾರವೇನು?

2 Min read
Author : Chethan Kumar
Published : May 11 2026, 07:55 AM IST
Share this Photo Gallery
  • FB
  • TW
  • Linkdin
  • Whatsapp
15
ಕೊನೆಯ ಎಸೆತದಲ್ಲಿ ಗೆಲುವು, ಟೇಬಲ್ ಟಾಪ್
Image Credit : IPL MEDIA

ಕೊನೆಯ ಎಸೆತದಲ್ಲಿ ಗೆಲುವು, ಟೇಬಲ್ ಟಾಪ್

ಮುಂಬೈ ಇಂಡಿಯನ್ಸ್ ನೀಡಿದ 167 ರನ್ ಚೇಸ್ ಮಾಡಿದ ಆರ್‌ಸಿಬಿ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿ ಸಂಭ್ರಮಿಸಿತ್ತು. ಈ ಗೆಲುವಿನೊಂದಿಗೆ ಆರ್‌ಸಿಬಿ 14 ಅಂಕ ಜೊತೆಗೆ ಉತ್ತಮ ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. 14 ಅಂಕ ಪಡೆದರೂ ಪ್ಲೇ ಆಫ್ ಅಧಿಕೃತಗೊಂಡಿಲ್ಲ ಯಾಕೆ, ಈ ಬಾರಿಯ ಪ್ಲೇ ಆಫ್ ಲೆಕ್ಕಾಚಾರ ಇಲ್ಲಿದೆ.

Add Asianetnews Kannada as a Preferred SourcegooglePreferred
25
ಮೂರು ತಂಡಕ್ಕೆ ಸೇಮ್ ಪಾಯಿಂಟ್ಸ್
Image Credit : X

ಮೂರು ತಂಡಕ್ಕೆ ಸೇಮ್ ಪಾಯಿಂಟ್ಸ್

ಅಂಕಪಟ್ಟಿಯಲ್ಲಿ ಟಾಪ್‌ನಲ್ಲಿರುವ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ಮೂರು ತಂಡಗಳು 11 ಪಂದ್ಯಗಳಿಂದ 14 ಅಂಕಗಳಿಸಿ ಕ್ರಮವಾಗಿ ಆರಂಭಿಕ 3 ಸ್ಥಾನದಲ್ಲಿದೆ. 4ನೇ ಸ್ಥಾನದಲ್ಲಿರುವ ಪಂಜಾಬ್ 10 ಪಂದ್ಯದಿಂದ 13 ಅಂಕಗಳಿಸಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಈ ಬಾರಿ ಪ್ಲೇ ಆಪ್ ಸ್ಥಾನಕ್ಕೇರಲು ಕನಿಷ್ಠ 16 ಅಂಕ ಬೇಕು.

Related Articles

Related image1
10 ವರ್ಷದ ಬಳಿಕ RCBಗೆ ಸಿಕ್ತು ವಿಶೇಷ ಸಿಕ್ಸರ್ ಗೆಲುವು; ಅಗ್ರಸ್ಥಾನಕ್ಕೇರಿದ ಬೆಂಗಳೂರು
Related image2
ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್‌ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್
35
ಬೆಂಗಳೂರಿಗೆ ಬೇಕು ಮತ್ತೊಂದು ಗೆಲುವು
Image Credit : AFP

ಬೆಂಗಳೂರಿಗೆ ಬೇಕು ಮತ್ತೊಂದು ಗೆಲುವು

ಬೆಂಗಳೂರು ತಂಡ ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಇನ್ನೊಂದು ಗೆಲುವು ಬೇಕಿದೆ. 2011 ಹಾಗೂ 2022 ರಿಂದ 2026ರ ವರೆಗಿನ ಐಪಿಎಲ್ ಟೂರ್ನಿ 10 ತಂಡಗಳೊಂದಿಗೆ ಆಡುತ್ತಿದೆ. ಈ ಆವೃತ್ತಿಗಳಲ್ಲಿ 16 ಅಂಕಗಳಿಸಿದ ತಂಡ ಪ್ಲೇ ಆಫ್ ಮಿಸ್ ಮಾಡಿಕೊಂಡಿಲ್ಲ. ಹೀಗಾಗಿ ಆರ್‌ಸಿಬಿ ಉಳಿದ 3 ಪಂದ್ಯದಲ್ಲಿ ಒಂದು ಗೆಲುವು ಕಂಡರೆ ಪ್ಲೇ ಆಫ್ ಸ್ಥಾನ ಖಚಿತಗೊಳ್ಳಲಿದೆ.

45
ಟೇಬಲ್ ಟಾಪ್‌ಗೆ ಎಷ್ಟು ಗೆಲುವು ಬೇಕು
Image Credit : X (Twitter)

ಟೇಬಲ್ ಟಾಪ್‌ಗೆ ಎಷ್ಟು ಗೆಲುವು ಬೇಕು

ಆರ್‌ಸಿಬಿ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಟಾಪ್ ಸ್ಥಾನ ಉಳಿಸಿಕೊಳ್ಳಲು. ಅಥವಾ ಟಾಪ್ 2 ಸ್ಥಾನದ ಮೂಲಕ ಪ್ಲೇ ಆಪ್‌ನಲ್ಲಿ ಎರಡು ಅವಕಾಶ ಪಡೆಯಲು ಕನಿಷ್ಠ 18 ಅಂಕ ಬೇಕು. ಆದರೆ ಈ ಬಾರಿ ಪಂಜಾಬ್ ಈಗಾಗಲೇ 10 ಪಂದ್ಯದಿಂದ 13 ಅಂಕ ಪಡೆದಿದೆ. ಹೀಗಾಗಿ ಆರ್‌ಸಿಬಿ ಮೂರರಲ್ಲಿ ಗೆದ್ದರೆ ನಂಬರ್ 1 ಸ್ಥಾನದಲ್ಲಿರಲಿದೆ. ಕನಿಷ್ಠ 2 ಗೆದ್ದರೆ ಟೇಬಲ್ 2 ಸ್ಥಾನ ದಕ್ಕಿಸಿಕೊಳ್ಳಲಿದೆ.

55
14 ಸೀಸನ್‌ಗಳಲ್ಲಿ ಮೊದಲ ಕ್ವಾಲಿಫೈಯರ್ ಆಡೋ ತಂಡಕ್ಕೆ ಟ್ರೋಫಿ
Image Credit : ANI

14 ಸೀಸನ್‌ಗಳಲ್ಲಿ ಮೊದಲ ಕ್ವಾಲಿಫೈಯರ್ ಆಡೋ ತಂಡಕ್ಕೆ ಟ್ರೋಫಿ

2011ರಲ್ಲಿ ಪ್ಲೇ ಆಫ್ ಪರಿಚಯಿಸಲಾಯಿತು. ಈ ಪೈಕಿ ಕಳೆದ 15 ಆವೃತ್ತಿಗಳಲ್ಲಿ 14ರಲ್ಲಿ ಟೇಬಲ್‌ನ ಟಾಪ್ 2 ತಂಡ, ಅಂದರೆ ಮೊದಲ ಕ್ವಾಲಿಫೈಯರ್ ಆಡೋ ಎರಡು ತಂಡಗಳ ಪೈಕಿ ಒಂದು ತಂಡ ಟ್ರೋಫಿ ಗೆದ್ದಿದೆ. ಕೇವಲ 2016ರಲ್ಲಿ ಮಾತ್ರ ಈ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿತ್ತು. ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ದಾಖಲಿಸಿತ್ತು.

14 ಸೀಸನ್‌ಗಳಲ್ಲಿ ಮೊದಲ ಕ್ವಾಲಿಫೈಯರ್ ಆಡೋ ತಂಡಕ್ಕೆ ಟ್ರೋಫಿ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆರ್‌ಸಿಬಿ
ಐಪಿಎಲ್
ಕ್ರಿಕೆಟ್

Latest Videos
Recommended Stories
Recommended image1
10 ವರ್ಷದ ಬಳಿಕ RCBಗೆ ಸಿಕ್ತು ವಿಶೇಷ ಸಿಕ್ಸರ್ ಗೆಲುವು; ಅಗ್ರಸ್ಥಾನಕ್ಕೇರಿದ ಬೆಂಗಳೂರು
Recommended image2
ಯುವರಾಜ್ ಸಿಂಗ್ ರೆಕಾರ್ಡ್ ಜಸ್ಟ್ ಮಿಸ್, ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಉರ್ವಿಲ್ ಪಟೇಲ್ ಯಾರು?
Recommended image3
ಬಿಸಿಸಿಐ ವಾರ್ನಿಂಗ್ ಬಳಿಕ ಪಂದ್ಯದ ನಡುವೆ ಲಖನೌ ಸ್ಟಾಫ್ ಫೋನ್ ಬಳಕೆ, ಫಿಕ್ಸಿಂಗ್ ಅನುಮಾನ
Related Stories
Recommended image1
10 ವರ್ಷದ ಬಳಿಕ RCBಗೆ ಸಿಕ್ತು ವಿಶೇಷ ಸಿಕ್ಸರ್ ಗೆಲುವು; ಅಗ್ರಸ್ಥಾನಕ್ಕೇರಿದ ಬೆಂಗಳೂರು
Recommended image2
ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್‌ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved