MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಲಖನೌ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ಮರಳಿದ ರಿಷಬ್ ಪಂತ್‌ಗೆ 12 ಕೋಟಿ ರೂ ಸ್ಯಾಲರಿ ಕಟ್, ಟ್ರೇಡ್ ಪೂರ್ಣ

ಲಖನೌ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ಮರಳಿದ ರಿಷಬ್ ಪಂತ್‌ಗೆ 12 ಕೋಟಿ ರೂ ಸ್ಯಾಲರಿ ಕಟ್, ಟ್ರೇಡ್ ಪೂರ್ಣ

ಐಪಿಎಲ್ ಟೂರ್ನಿಯ ಅತೀ ದೊಡ್ದ ಟ್ರೇಡ್ ಡೀಲ್ ಪೂರ್ಣಗೊಂಡಿದೆ. ರಿಷಬ್ ಪಂತ್ ಲಖನೌ ಸೂಪರ್ ಜೈಂಟ್ಸ್ ತಂಡ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ. ಆದರೆ ಪಂತ್ ಸಂಭಾವನೆಯಲ್ಲಿ 12 ಕೋಟಿ ರೂಪಾಯಿ ಕಡಿತಗೊಂಡಿದೆ. 

2 Min read
Author : Chethan Kumar
Published : Jun 23 2026, 02:48 PM IST
Share this Photo Gallery
  • FB
  • TW
  • Linkdin
  • Whatsapp
16
ರಿಷಬ್ ಪಂತ್ ಸಂಭಾವನೆಯಲ್ಲಿ 12 ಕೋಟಿ ರೂ ಕಡಿತ
Image Credit : Getty

ರಿಷಬ್ ಪಂತ್ ಸಂಭಾವನೆಯಲ್ಲಿ 12 ಕೋಟಿ ರೂ ಕಡಿತ

ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಕಳೆದೆರಡು ವರ್ಷ ಮುನ್ನಡೆಸಿದ ರಿಷಬ್ ಪಂತ್ ಇದೀಗ ಟ್ರೇಡ್ ಡೀಲ್ ಮೂಲಕ ಡಿಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕುಲ್ದೀಪ್ ಯಾದವ್ ಹಾಗೂ ಲಖನೌ ತಂಡದ ರಿಷಬ್ ಪಂತ್ ಟ್ರೇಡ್ ಡೀಲ್ ಮೂಲಕ ತಂಡ ಅದಲು ಬದಲು ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಳುತ್ತಿದ್ದಂತೆ ರಿಷಬ್ ಪಂತ್ ಸಂಭಾವನೆಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿ ಕಡಿತಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಡೆಲ್ಲಿ ಕ್ಯಾಪಿಟಲ್ಸ್ ನೀಡಲಿರುವ ಸ್ಯಾಲರಿ ಎಷ್ಟು?
Image Credit : ANI

ಡೆಲ್ಲಿ ಕ್ಯಾಪಿಟಲ್ಸ್ ನೀಡಲಿರುವ ಸ್ಯಾಲರಿ ಎಷ್ಟು?

ಐಪಿಎಲ್ ಟೂರ್ನಿಯ ಅತೀ ದೊಡ್ಡ ಟ್ರೇಡ್ ಡೀಲ್ ಇದು. 2025ರಲ್ಲಿ ಲಖನೌ ತಂಡ ಸೇರಿಕೊಂಡ ರಿಷಬ್ ಪಂತ್ ಬರೋಬ್ಬರಿ 27 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಬಿಡ್ಡಿಂಗ್ ಅನ್ನೋ ದಾಖಲೆ ಬರೆದಿತ್ತು. ಆದರೆ ಡೆಲ್ಲಿ ತಂಡಕ್ಕೆ ಮರಳುವಾಗ ಪಂತ್ ಸ್ಯಾಲರಿಯಲ್ಲಿ 12 ಕೋಟಿ ಪೂಪಾಯಿ ಕಡಿತಗೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ 2027ರ ಐಪಿಎಲ್ ಟೂರ್ನಿಯಲ್ಲಿ ರಿಷಬ್ ಪಂತ್‌ಗೆ 15 ಕೋಟಿ ರೂಪಾಯಿ ಸಂಭಾವನೆ ನೀಡಲಿದೆ.

Related Articles

Related image1
ಮುಂದಿನ ಐಪಿಎಲ್‌ಗೂ ಮೊದಲೇ ತಂಡ ಬದಲಿಸುತ್ತಿರುವ ಟಾಪ್ 5 ಪ್ಲೇಯರ್, ಎಲ್ಲರಿಗೂ ಇದೆ ಕೆಟ್ಟ ಅನುಭವ
Related image2
ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗ್ತಾರಾ? ಸಂಚಲನ ಮೂಡಿಸಿದ ಎಸ್ ಬದ್ರಿನಾಥ್ ಮೆಗಾ ಟ್ರೇಡ್ ಐಡಿಯಾ!
36
ಟ್ರೇಡ್ ಪೂರ್ಣ, ಅಧಿಕೃತ ಘೋಷಣೆ
Image Credit : ANI

ಟ್ರೇಡ್ ಪೂರ್ಣ, ಅಧಿಕೃತ ಘೋಷಣೆ

ರಿಷಬ್ ಪಂತ್ ಹಾಗೂ ಕುಲ್ದೀಪ್ ಯಾದವ್ ಐಪಿಎಲ್ ಟ್ರೇಡ್ ಡೀಲ್ ಪೂರ್ಣಗೊಂಡಿದೆ ಎಂದು ಅಧಿಕೃತ ಘೋಷಣ ಹೊರಬಿದ್ದಿದೆ. ಟ್ರೇಡ್ ಮೂಲಕ ರಿಷಬ್ ಪಂತ್ ಮರಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡರೆ, ಕುಲ್ದೀಪ್ ಯಾದವ್ ಲಖನೌ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿದ್ದಾರೆ. 2016ರಿಂದ 2024ರ ವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ರಿಷಬ್ ಪಂತ್ 11 ಪಂದ್ಯ ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಗರಿಷ್ಠ ತಂಡ ಆಡಿದ ಸಾಧನೆ ಪಂತ್ ಹೆಸರಲ್ಲಿದೆ.

46
ಕುಲ್ದೀಪ್ ಸಂಭಾವನೆ ಎಷ್ಟು ?
Image Credit : Getty

ಕುಲ್ದೀಪ್ ಸಂಭಾವನೆ ಎಷ್ಟು ?

ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಬ್ ಫಂತ್ ವೇತನ ಪರಿಷ್ಕರಿಸಿದೆ. 2027ರ ಐಪಿಎಲ್ ಟೂರ್ನಿಯಲ್ಲಿ ರಿಷಬ್ ಪಂತ್‌ಗೆ 15 ಕೋಟಿ ರೂಪಾಯಿ ವೇತನ ನೀಡಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಲಖನೌ ತಂಡ ಸೇರಿಕೊಂಡ ಕುಲ್ದೀಪ್ ಯಾದವ್‌ಗೆ 13.50 ರೂಪಾಯಿ ಸಂಭಾವನೆ ನೀಡಲಿದೆ. ಕಳೆದ ಆವೃತ್ತಿಗಳಲ್ಲಿ ಇಬ್ಬರೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

56
ಕಳಪೆ ಪ್ರದರ್ಶನ ಜೊತೆ ಅವಮಾನ
Image Credit : X/@EmediaManoj

ಕಳಪೆ ಪ್ರದರ್ಶನ ಜೊತೆ ಅವಮಾನ

ರಿಷಬ್ ಪಂತ್ ಲಖನೌ ತಂಡ ಸೇರಿಕೊಂಡ ಬಳಿಕ ವೈಯುಕ್ತಿಕ ಪ್ರದರ್ಶನ ಹಾಗೂ ಲಖನೌ ತಂಡದ ಪ್ರದರ್ಶನ ಎರಡೂ ಕಳಪೆಯಾಗಿತ್ತು. ಎರಡು 2025 ಹಾಗೂ 2026ರ ಎರಡೂ ಆವೃತ್ತಿಗಳಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದೆ. ಇನ್ನು ಲಖನೌ ಮಾಲೀಕ ಬಹಿರಂಗವಾಗಿ ರಿಷಬ್ ಪಂತ್ ಮುಂದೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಫೋಟೋ, ವಿಡಿಯೋಗಳು ಭಾರಿ ವೈರಲ್ ಆಗಿತ್ತು.

66
ನಾಯಕತ್ವ ತ್ಯಜಿಸಿದ್ದ ಪಂತ್
Image Credit : Insta/indiancricketteam

ನಾಯಕತ್ವ ತ್ಯಜಿಸಿದ್ದ ಪಂತ್

ಐಪಿಎಲ್ 2026ರ ಟೂರ್ನಿ ಅಂತ್ಯಗೊಂಡ ಬೆನ್ನಲ್ಲೇ ರಿಷಬ್ ಪಂತ್, ತನ್ನನ್ನು ಲಖನೌ ನಾಯಕ ಸ್ಥಾನದಿಂದ ಮುಕ್ತಿಗೊಳಿಸಬೇಕು ಎಂದು ಫ್ರಾಂಚೈಸಿಗೆ ಮನವಿ ಮಾಡಿದ್ದರು. ಹೀಗಾಗಿ ಫ್ರಾಂಚೈಸಿ ಪಂತ್ ನಿರ್ಧಾರವನ್ನು ಗೌರವಿಸಿ ನಾಯಕ್ವದಿಂದ ಮುಕ್ತಿಗೊಳಿಸಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ರಿಷಭ್ ಪಂತ್
ಐಪಿಎಲ್
ಕ್ರಿಕೆಟ್
ಡೆಲ್ಲಿ ಕ್ಯಾಪಿಟಲ್ಸ್

Latest Videos
Recommended Stories
Recommended image1
IPL 2027 ಟೂರ್ನಿಗೂ ಮುನ್ನ ಅಧಿಕೃತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ ರಿಷಭ್ ಪಂತ್; LSG ಪಾಲಾದ ಡೆಲ್ಲಿ ಗೇಮ್‌ ಚೇಂಜರ್!
Recommended image2
IPL 2027: 'ಆ ಪ್ಲೇಯರ್‌ ನಮಗೆ ಬೇಡ..' ಐಪಿಎಲ್‌ಗೂ ಮುನ್ನ ಟೀಮ್‌ ಇಂಡಿಯಾ ಸ್ಟಾರ್‌ ಆಲ್ರೌಂಡರ್‌ಗೆ ಇದೆಂಥಾ ಸಂಕಷ್ಟ
Recommended image3
IPL 2026 ಫೈನಲ್‌ ಟೈಮ್‌ ಔಟ್ ವೇಳೆ ಡಿಕೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ವೈರಲ್ ಆಯ್ತು ಕಿಂಗ್‌ ಕೊಹ್ಲಿ ಆತ್ಮವಿಶ್ವಾಸದ ಮಾತು
Related Stories
Recommended image1
ಮುಂದಿನ ಐಪಿಎಲ್‌ಗೂ ಮೊದಲೇ ತಂಡ ಬದಲಿಸುತ್ತಿರುವ ಟಾಪ್ 5 ಪ್ಲೇಯರ್, ಎಲ್ಲರಿಗೂ ಇದೆ ಕೆಟ್ಟ ಅನುಭವ
Recommended image2
ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗ್ತಾರಾ? ಸಂಚಲನ ಮೂಡಿಸಿದ ಎಸ್ ಬದ್ರಿನಾಥ್ ಮೆಗಾ ಟ್ರೇಡ್ ಐಡಿಯಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved