ಮುಂದಿನ ಐಪಿಎಲ್‌ಗೂ ಮೊದಲೇ ತಂಡ ಬದಲಿಸುತ್ತಿರುವ ಟಾಪ್ 5 ಪ್ಲೇಯರ್, ಎಲ್ಲರಿಗೂ ಇದೆ ಕೆಟ್ಟ ಅನುಭವ
2027ರ ಐಪಿಎಲ್ ಟೂರ್ನಿಗೂ ಮೊದಲೇ ಕೆಲ ತಂಡದಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ಕೆಟ್ಟ ಅನುಭವ, ಕಳಪೆ ಫಾರ್ಮ್, ಅಪಮಾನ, ಜಗಳಗಳಿಂದ ಪ್ರಮುಖ ಸ್ಟಾರ್ ಪ್ಲೇಯರ್ಸ್ ಟ್ರೇಡ್ ಮೂಲಕ ತಂಡ ಬದಲಿಸುತ್ತಿದ್ದಾರೆ.

ಹೊಸ ತಂಡ ಸೇರಿಕೊಳ್ಳುತ್ತಿದ್ದಾರೆ ಐವರು ಪ್ಲೇಯರ್ಸ್
ಐಪಿಎಲ್ 2026 ಟೂರ್ನಿ ಹಲವು ಕಾರಣಗಳಿಂದ ವಿಶೇಷವಾಗಿತ್ತು. ಒಂದು ಆರ್‌ಸಿಬಿ ಸತತ 2ನೇ ಬಾರಿಗೆ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಇತ್ತ ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾ ಅವಕಾಶ ನೀಡಿದೆ. ಜೊತೆಗೆ ಹಲವು ದಾಖಲೆಗಳು ನಿರ್ಮಾಣವಾಗಿದೆ. ಆದರೆ ಇದೇ ಐಪಿಎಲ್ ಕೆಲ ಸ್ಟಾರ್ ಕ್ರಿಕೆಟಿಗರಿಗೆ ಕೆಟ್ಟ ಅನುಭವ ನೀಡಿದೆ. ಪರಿಣಾಮ ಪ್ರಮುಖ ಐವರು ಆಟಗಾರರು 2027ರ ಐಪಿಎಲ್ ಟೂರ್ನಿಗೂ ಮೊದಲೇ ಟ್ರೇಡ್ ಮೂಲಕ ತಂಡ ಬದಲಿಸುತ್ತಿದ್ದಾರೆ, ಹೊಸ ತಂಡ ಸೇರಿಕೊಳ್ಳುತ್ತಿದ್ದಾರೆ.
ಯಶಸ್ವಿ ಜೈಸ್ವಾಲ್ ಮುಂಬೈ ತಂಡಕ್ಕೆ ಟ್ರೇಡ್?
ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ದಿಟ್ಟ ಹೋರಾಟ ನೀಡಿದರೂ ವೈಭವ್ ಅಬ್ಬರದಲ್ಲಿ ಮರೆಯಾಗಿದ್ದಾರೆ. ಇಷ್ಟೇ ಅಲ್ಲ ಇದೀಗ ಇಂಗ್ಲೆಂಡ್ ಏಕದಿನ ಸರಣಿಯಿಂದಲೂ ಔಟ್ ಆಗಿದ್ದಾರೆ. ಯಶಸ್ವಿ ಜೈಸ್ವಾಲ್ ಟ್ರೇಡ್ ಮೂಲಕ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳಿವೆ. ಈ ಕುರಿತು ಮಾತುಕತೆ ಅಂತಿಮ ಹಂತ ತಲುಪಿದೆ.
ಹಾರ್ದಿಕ್ ಪಾಂಡ್ಯ ಮುಂಬೈಗೆ ಗುಡ್ ಬೈ
ಮುಂಬೈ ಇಂಡಿಯನ್ಸ್ ನಾಯಕನಾಗಿ ಬಂದ ಬಳಿಕ ಮುಂಬೈ ತಂಡ ಸೋಲನ್ನೇ ಹಾಸುಹೊದ್ದು ಮಲಗಿದೆ. ತಂಡ ನಿರೀಕ್ಷೆತ ಪ್ರದರ್ಶನ ನೀಡುತ್ತಿಲ್ಲ, ತಂಡದೊಳಗೆ ಜಟಾಪಟಿ, ಮನಸ್ತಾಪಗಳು ಹೆಚ್ಚಾಗಿದೆ. ಹಲವು ಬಾರಿ ಮೈದಾನದಲ್ಲೇ ಇದು ಸ್ಪಷ್ಟವಾಗಿದೆ. ಮುಂಬೈ ಇಂಡಿಯನ್ಸ್ ತಂಡ ತೊರೆಯಲು ಹಾರ್ದಿಕ್ ಪಾಂಡ್ಯ ಮನಸ್ಸು ಮಾಡಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಹಾರ್ದಿಕ್ ಪಾಂಡ್ಯ ಮುಂಬೈಗೆ ಗುಡ್ ಬೈ ಹೇಳಲಿದ್ದಾರೆ. ಬಳಿಕ ರಾಜಸ್ಥಾನ ರಾಯಲ್ಸ್ ಸೇರಿಕೊಳ್ಳುವ ಸಾಧ್ಯತೆ ಇದೆ.
ಅಪಮಾನ, ಕಳಪೆ ಪ್ರದರ್ಶನದಿಂದ ರಿಷಬ್ ಪಂತ್ ಲಖನೌಗೆ ಗುಡ್ ಬೈ
27 ಕೋಟಿ ರೂಪಾಯಿಗೆ ಲಖನೌ ತಂಡ ಸೇರಿಕೊಂಡ ರಿಷಬ್ ಪಂತ್ ಸಂಕಷ್ಟ ಅನುಭವಿಸಿದ್ದಾರೆ. ತಂಡದಲ್ಲಿ ಅಪಮಾನ, ಕಳಪೆ ಪ್ರದರ್ಶನ, ತಂಡ ಅಂಕಪಟ್ಟಿಯಲ್ಲಿ ಕೊನಯ ಸ್ಥಾನದಿಂದ ಪಂತ್ ತಂಡ ತೊರೆಯಲು ನಿರ್ಧರಿಸಿದ್ದಾರೆ. ರಿಷಬ್ ಪಂತ್ ಟ್ರೇಡ್ ಮೂಲಕ ಮರಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.
ಸೂರ್ಯಕುಮಾರ್ ಮರಳಿ ಕೆಕೆಆರ್ ತಂಡಕ್ಕೆ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಳಪೆ ಪ್ರದರ್ಶನ ನೀಡಿದ ಸೂರ್ಯಕುಮಾರ್ ಟ್ರೇಡ್ ಮೂಲಕ ಮರಳಿ ಕೆಕೆಆರ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸೂರ್ಯಕುಮಾರ್ ಯಾದವ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹಲವು ಘಟಾನುಘಟಿ ಆಟಗಾರರ ನಡುವೆ ಸೂರ್ಯಕುಮಾರ್ ಯಾದವ್ ಮಂಕಾಗಿ ಹೋಗಿದ್ದಾರೆ.
ಕುಲ್ದೀಪ್ ಯಾದವ್ ಲಖನೌ ತಂಡಕ್ಕೆ
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಕುಲ್ದೀಪ್ ಯಾದವ್ ಟ್ರೇಡ್ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡ ಸೇರಿಕೊಳ್ಳುವ ಮಾತುಕತೆಗಳು ನಡೆದಿದೆ. ರಿಷಬ್ ಪಂತ್ ಹಾಗೂ ಕುಲ್ದೀಪ್ ಯಾದವ್ ಟ್ರೇಡ್ ಮೂಲಕ ತಂಡ ಅದಲು ಬದಲು ಮಾಡುವ ಮಾತುಕತೆ ಅಂತಿಮ ಹಂತದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

