MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2026 ಫೈನಲ್‌ ಟೈಮ್‌ ಔಟ್ ವೇಳೆ ಡಿಕೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ವೈರಲ್ ಆಯ್ತು ಕಿಂಗ್‌ ಕೊಹ್ಲಿ ಆತ್ಮವಿಶ್ವಾಸದ ಮಾತು

IPL 2026 ಫೈನಲ್‌ ಟೈಮ್‌ ಔಟ್ ವೇಳೆ ಡಿಕೆಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ವೈರಲ್ ಆಯ್ತು ಕಿಂಗ್‌ ಕೊಹ್ಲಿ ಆತ್ಮವಿಶ್ವಾಸದ ಮಾತು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಐಪಿಎಲ್ ಫೈನಲ್ ವೇಳೆ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಗೆ ಹೇಳಿದ ಮಾತೊಂದು ಇದೀಗ ವೈರಲ್ ಆಗಿದೆ. 

2 Min read
Author : Naveen Kodase
Published : Jun 23 2026, 01:24 PM IST
Share this Photo Gallery
  • FB
  • TW
  • Linkdin
  • Whatsapp
16
RCB ರನ್ ಮಷೀನ್ ವಿರಾಟ್ ಕೊಹ್ಲಿ
Image Credit : Asianet News

RCB ರನ್ ಮಷೀನ್ ವಿರಾಟ್ ಕೊಹ್ಲಿ

2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಆರ್‌ಸಿಬಿ ಗೆಲುವಿನಲ್ಲಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. 19ನೇ ಸೀಸನ್ ಐಪಿಎಲ್‌ನಲ್ಲಿ ಕೊಹ್ಲಿ ಆರ್‌ಸಿಬಿ ಪರ 16 ಪಂದ್ಯಗಳನ್ನಾಡಿ 675 ರನ್ ಸಿಡಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಐಪಿಎಲ್ ಫೈನಲ್ ವೇಳೆ ಒತ್ತಡಕ್ಕೆ ಒಳಗಾಗಿದ್ದ ಆರ್‌ಸಿಬಿ
Image Credit : X@ipl

ಐಪಿಎಲ್ ಫೈನಲ್ ವೇಳೆ ಒತ್ತಡಕ್ಕೆ ಒಳಗಾಗಿದ್ದ ಆರ್‌ಸಿಬಿ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 155 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಸ್ಪೋಟಕ ಆರಂಭ ಪಡೆಯಿತಾದರೂ, ಒಂದು ಹಂತದಲ್ಲಿ 29 ರನ್‌ಗಳ ಅಂತರದಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಆತಂಕ್ಕೆ ಒಳಗಾಗಿತ್ತು.

Related Articles

Related image1
ಭಾರತ ಎದುರಿನ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ; ಮೂವರು ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಸ್ಥಾನ
Related image2
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ರಿಸಲ್ಟ್ ಪ್ರಕಟ; ಪಾಸೋ? ಫೇಲೋ?
36
ಐಪಿಎಲ್ ಫೈನಲ್ ಟೈಮ್ ಔಟ್ ವೇಳೆ ಡಿಕೆಗೆ ಕೊಹ್ಲಿ ಹೇಳಿದ್ದೇನು?
Image Credit : ANI

ಐಪಿಎಲ್ ಫೈನಲ್ ಟೈಮ್ ಔಟ್ ವೇಳೆ ಡಿಕೆಗೆ ಕೊಹ್ಲಿ ಹೇಳಿದ್ದೇನು?

ಈ ಸಂದರ್ಭದಲ್ಲಿ ಟೈಮ್ ಔಟ್ ತೆಗೆದುಕೊಂಡಾಗ ದಿನೇಶ್ ಕಾರ್ತಿಕ್ ಬಳಿ, ಉಳಿದ ಬ್ಯಾಟರ್‌ಗಳು ಅವರ ಪಾಡಿಗೆ ಅವರು ಬ್ಯಾಟ್ ಮಾಡಲು ಹೇಳಿ. ನಾನು ಕೊನೆಯವರೆಗೂ ನಾಟೌಟ್ ಆಗದೇ ಆಡುತ್ತೇನೆ. ಹೀಗಾಗಿ ಸಹ ಆಟಗಾರರು ತಮ್ಮ ಪಾಡಿಗೆ ತಾವು ನಿರ್ಭಯವಾಗಿ ಆಡಲು ಹೇಳಿ ಎಂದು ವಿರಾಟ್ ಕೊಹ್ಲಿ ಹೇಳಿದ್ದರು ಎಂದು ಆ ಘಟನೆಯನ್ನು ಡಿಕೆ ಮೆಲುಕು ಹಾಕಿದ್ದಾರೆ.

46
ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದ ಕಿಂಗ್ ಕೊಹ್ಲಿ
Image Credit : ANI

ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದ ಕಿಂಗ್ ಕೊಹ್ಲಿ

2026ರ ಐಪಿಎಲ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 42 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 75 ರನ್ ಸಿಡಿಸಿದರು. ಈ ಮೂಲಕ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ಆರ್‌ಸಿಬಿ ತಂಡವನ್ನು ಅನಾಯಾಸವಾಗಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು.

56
ಕೆಕೆಆರ್ ಎದುರು ಆತ್ಮವಿಶ್ವಾಸ ತುಂಬಿದ್ದ ಕೊಹ್ಲಿ
Image Credit : Social Media

ಕೆಕೆಆರ್ ಎದುರು ಆತ್ಮವಿಶ್ವಾಸ ತುಂಬಿದ್ದ ಕೊಹ್ಲಿ

ಇನ್ನು ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದ ವೇಳೆಯಲ್ಲಿಯೂ ಕೊಹ್ಲಿ ಹೀಗೆಯೇ ಹೇಳಿದ್ದರು ಎಂದು ಡಿಕೆ ಸ್ಮರಿಸಿಕೊಂಡಿದ್ದಾರೆ. ನಾವು ಟಾರ್ಗೆಟ್ ಬೆನ್ನತ್ತಿದ್ದೆವು, ಮೊದಲ ಟೈಮ್‌ ಔಟ್ ವೇಳೆ ವಿರಾಟ್ ಕೊಹ್ಲಿ ನನ್ನ ಬಳಿ, 'ಡೋಂಟ್ ವರಿ ಡಿಕೆ, ನಾನು ನನ್ನ ಕೆಲಸವನ್ನು ಮಾಡುತ್ತೇನೆ' ಎಂದು ಹೇಳಿದ್ದರು ಎಂದು ಸಂದರ್ಶನವೊಂದರಲ್ಲಿ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

66
ಕೊಹ್ಲಿಯನ್ನು GOAT ಅನ್ನೋದೇಕೆ?
Image Credit : IPL MEDIA

ಕೊಹ್ಲಿಯನ್ನು GOAT ಅನ್ನೋದೇಕೆ?

ಐಪಿಎಲ್‌ನಲ್ಲಿ ಕೊಹ್ಲಿ ಈ ರೀತಿಯ ಆತ್ಮವಿಶ್ವಾಸವನ್ನು ನಮ್ಮಲ್ಲಿ ತುಂಬುತ್ತಿದ್ದರು. ಅವರ ಮೈಂಡ್‌ಸೆಟ್ ಹಾಗಿತ್ತು. ಇದಷ್ಟೇ ಅಲ್ಲದೇ ಅವರು ಏನು ಪ್ರಾಮೀಸ್ ಮಾಡುತ್ತಿದ್ದರೋ, ಅದನ್ನು ತಪ್ಪದೇ ಸಾಕಾರ ಮಾಡುತ್ತಿದ್ದರು. ಹೀಗಾಗಿಯೇ ಅವರನ್ನು GOAT ಅನ್ನೋದು ಎಂದು ಡಿಕೆ ಹೇಳಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿ ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದರು. ಕಳೆದೆರಡು ಸೀಸನ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ವಿರಾಟ್ ಕೊಹ್ಲಿ

Latest Videos
Recommended Stories
Recommended image1
India vs Ireland T20: ಐರ್ಲೆಂಡ್ ಟೂರ್‌ಗೆ ಮುನ್ನವೇ ಭಾರತಕ್ಕೆ ಆಘಾತ! ಸ್ಟಾರ್ ಆಲ್‌ರೌಂಡರ್ ತಂಡದಿಂದ ಔಟ್
Recommended image2
ಸಂಜು ಇನ್, ಸೂರ್ಯವಂಶಿ ಔಟ್; ಐರ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ
Recommended image3
ಲಂಡನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಮಾಲೀಕ ಲಕ್ಷ್ಮಿ ಮಿತ್ತಲ್ ಭೇಟಿಯಾದ ವೈಭವ್ ತಂದೆ; ಫೋಟೋ ವೈರಲ್!
Related Stories
Recommended image1
ಭಾರತ ಎದುರಿನ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ; ಮೂವರು ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಸ್ಥಾನ
Recommended image2
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ರಿಸಲ್ಟ್ ಪ್ರಕಟ; ಪಾಸೋ? ಫೇಲೋ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved