MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • MI vs RCB ಮ್ಯಾಚ್‌ ವೇಳೆ ಹೊಟ್ಟೆಗೆ ಬಿದ್ದ ಚೆಂಡು; ಗಾಯಗೊಂಡ ಸಿಂಹದ ಆರ್ಭಟ ತೋರಿಸಿದ ಕೃನಾಲ್ ಪಾಂಡ್ಯ!

MI vs RCB ಮ್ಯಾಚ್‌ ವೇಳೆ ಹೊಟ್ಟೆಗೆ ಬಿದ್ದ ಚೆಂಡು; ಗಾಯಗೊಂಡ ಸಿಂಹದ ಆರ್ಭಟ ತೋರಿಸಿದ ಕೃನಾಲ್ ಪಾಂಡ್ಯ!

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಹೊಟ್ಟೆಯ ಚೆಂಡು ಬಿದ್ದು ತೀವ್ರ ಗಾಯ ಮತ್ತು ಸ್ನಾಯು ಸೆಳೆತದ ನಡುವೆಯೂ ಆಲ್-ರೌಂಡರ್  ಕೃನಾಲ್ ಪಾಂಡ್ಯ 73 ರನ್ ಗಳಿಸಿ ಆರ್‌ಸಿಬಿಗೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೀಗ ಗಾಯ ತೋರಿಸಿದ್ದಾರೆ.

2 Min read
Author : Sathish Kumar KH
Published : May 11 2026, 04:45 PM IST
Share this Photo Gallery
  • FB
  • TW
  • Linkdin
  • Whatsapp
16
ಗಾಯದ ಗುರುತುಗಳು
Image Credit : Instagram

ಗಾಯದ ಗುರುತುಗಳು

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ರೋಚಕ ಜಯ ತಂದುಕೊಟ್ಟ ಆಲ್-ರೌಂಡರ್ ಕೃನಾಲ್ ಪಾಂಡ್ಯ, ಪಂದ್ಯದ ನಂತರ ತಮ್ಮ ಗಾಯದ ಗುರುತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಕೆಲವು ಗಾಯದ ಗುರುತುಗಳು ನಾವು ನಡೆಸಿದ ಹೋರಾಟಕ್ಕೆ ಯೋಗ್ಯವಾದ ಪುರಾವೆಗಳಾಗಿವೆ' ಎಂದು ಬರೆಯುವ ಮೂಲಕ ತಮ್ಮ ಹೋರಾಟದ ಹಾದಿಯನ್ನು ಅವರು ವಿವರಿಸಿದ್ದಾರೆ.

Add Asianetnews Kannada as a Preferred SourcegooglePreferred
26
ಕ್ರುನಾಲ್ ಪಾಂಡ್ಯ ಸಾಹಸಗಾಥೆ
Image Credit : x

ಕ್ರುನಾಲ್ ಪಾಂಡ್ಯ ಸಾಹಸಗಾಥೆ

ಮುಂಬೈ ಇಂಡಿಯನ್ಸ್ ನೀಡಿದ್ದ 167 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಒಂದು ಹಂತದಲ್ಲಿ 39 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅನುಭವೀ ಬ್ಯಾಟರ್ ವಿರಾಟ್ ಕೊಹ್ಲಿ ಸತತ ಎರಡನೇ ಬಾರಿಗೆ 'ಗೋಲ್ಡನ್ ಡಕ್' ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

ಈ ವೇಳೆ ಕ್ರೀಸ್‌ಗೆ ಬಂದ ಕೃನಾಲ್ ಪಾಂಡ್ಯ ಅಕ್ಷರಶಃ ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ತೀವ್ರವಾದ ಸ್ನಾಯು ಸೆಳೆತ (Cramps) ಮತ್ತು ನೋವಿನ ನಡುವೆಯೂ ಕೇವಲ 46 ಎಸೆತಗಳಲ್ಲಿ 73 ರನ್ ಚಚ್ಚಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳಿದ್ದವು. ಅವರ ಈ ಸಾಹಸಮಯ ಇನ್ನಿಂಗ್ಸ್ ಆರ್‌ಸಿಬಿಗೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

Related Articles

Related image1
ಹಾರ್ದಿಕ್ ಪಾಂಡ್ಯ ಔಟಾಗುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ಕೃನಾಲ್ ಪಾಂಡ್ಯ! ದಾಯಾದಿಗಳಾದ್ರಾ ಅಣ್ತಮ್ಮಾಸ್? ವಿಡಿಯೋ ವೈರಲ್
Related image2
ಬೆಂಗಳೂರಲ್ಲಿ ಅಬ್ಬರಿಸಿದ್ದ ದೆಹಲಿ ತಂಡದ ಬೆವರಿಳಿಸಿದ ಕೊಹ್ಲಿ-ಕೃನಾಲ್ ಜೋಡಿ
36
ಮೈದಾನದಲ್ಲೇ ಕುಸಿದ ಕೃನಾಲ್ ಪಾಂಡ್ಯ
Image Credit : Instagram

ಮೈದಾನದಲ್ಲೇ ಕುಸಿದ ಕೃನಾಲ್ ಪಾಂಡ್ಯ

ದೀಪಕ್ ಚಹರ್ ಎಸೆದ ಚೆಂಡು ಹೊಟ್ಟೆಗೆ ಬಡಿದು ಅವಾಂತರ! ಮುಂಬೈ: ಐಪಿಎಲ್ ಪಂದ್ಯವೊಂದರ ವೇಳೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕೃನಾಲ್ ಪಾಂಡ್ಯ ಮೈದಾನದಲ್ಲೇ ನೋವಿನಿಂದ ಕುಸಿದು ಬಿದ್ದ ಘಟನೆ ನಡೆದಿದೆ. ದೀಪಕ್ ಚಹರ್ ಎಸೆದ ವೇಗದ ಚೆಂಡು ನೇರವಾಗಿ ಕೃನಾಲ್ ಅವರ ಹೊಟ್ಟೆಯ ಭಾಗಕ್ಕೆ ಬಡಿದಿದ್ದೇ ಈ ಅವಾಂತರಕ್ಕೆ ಕಾರಣವಾಯಿತು.

ಘಟನೆಯ ವಿವರ: ಪಂದ್ಯದ 17ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ದೀಪಕ್ ಚಹರ್ ಎಸೆದ 16.1ನೇ ಎಸೆತವು ತುಸು ನಿಧಾನಗತಿಯಿಂದ ಕೂಡಿತ್ತು (Slower Ball). ಶಾರ್ಟ್ ಲೆಂತ್‌ನಲ್ಲಿ ಬಂದ ಈ ಚೆಂಡನ್ನು ಕೃನಾಲ್ ಪಾಂಡ್ಯ ಪುಲ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ, ಚೆಂಡಿನ ವೇಗವನ್ನು ಅಂದಾಜಿಸುವಲ್ಲಿ ಕೃನಾಲ್ ವಿಫಲರಾದರು. ಬ್ಯಾಟಿಗೆ ಸಿಗದ ಚೆಂಡು ನೇರವಾಗಿ ಅವರ ಹೊಟ್ಟೆಯ ಭಾಗಕ್ಕೆ (Abdomen) ಬಡಿಯಿತು.

ಚೆಂಡು ಬಡಿದ ತಕ್ಷಣ ಕೃನಾಲ್ ಪಾಂಡ್ಯ ಮೈದಾನದಲ್ಲೇ ಮಲಗಿ ನೋವಿನಿಂದ ವಿಲವಿಲನೆ ಒದ್ದಾಡಿದರು. ಇದನ್ನು ಕಂಡು ತಕ್ಷಣವೇ ಫಿಸಿಯೋ ಮೈದಾನಕ್ಕೆ ಓಡಿ ಬಂದರು. ಕೃನಾಲ್ ಅವರ ಸ್ಥಿತಿ ಕಂಡು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಕ್ಷಣಕಾಲ ಆತಂಕಕ್ಕೊಳಗಾಗಿದ್ದರು.

46
ಪಂದ್ಯದ ಗತಿ ಹೇಗಿತ್ತು?
Image Credit : ANI

ಪಂದ್ಯದ ಗತಿ ಹೇಗಿತ್ತು?

ಟಾಸ್ ಗೆದ್ದ ಆರ್‌ಸಿಬಿ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಭುವನೇಶ್ವರ್ ಕುಮಾರ್ (4/23) ಅವರ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ 28 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆದರೆ ನಮನ್ ಧೀರ್ (47) ಮತ್ತು ತಿಲಕ್ ವರ್ಮಾ (57) ಅವರ ಜವಾಬ್ದಾರಿಯುತ ಆಟದಿಂದ ಮುಂಬೈ ತಂಡ 20 ಓವರ್‌ಗಳಲ್ಲಿ 166 ರನ್ ಗಳಿಸಿತು.

ಆರ್‌ಸಿಬಿ ಪರ ರನ್ ಬೆನ್ನಟ್ಟುವಾಗ ಅಗ್ರ ಕ್ರಮಾಂಕ ವೈಫಲ್ಯ ಕಂಡರೂ, ಕ್ರುನಾಲ್ ಪಾಂಡ್ಯ ಮತ್ತು ಜಾಕೋಬ್ ಬೆಥೆಲ್ (26) ಜೋಡಿ 55 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿತು. ಕೊನೆಯಲ್ಲಿ ಜಿತೇಶ್ ಶರ್ಮಾ (18) ನೆರವು ನೀಡಿದರು. ಕೊನೆಯ ಓವರ್‌ನಲ್ಲಿ 12 ರನ್ ಬೇಕಿದ್ದಾಗ, ಭುವನೇಶ್ವರ್ ಕುಮಾರ್ ಬಾರಿಸಿದ ಒಂದು ಸಿಕ್ಸರ್ ಮತ್ತು ರಾಸಿಖ್ ಸಲಾಮ್ ದಾರ್ ಅವರ ಸಮಯೋಚಿತ ಆಟದಿಂದ ಆರ್‌ಸಿಬಿ ಪಂದ್ಯವನ್ನು ಗೆದ್ದುಕೊಂಡಿತು.

56
ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ:
Image Credit : Getty

ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ:

ಈ ಅದ್ಭುತ ಗೆಲುವಿನೊಂದಿಗೆ ಆರ್‌ಸಿಬಿ ತಂಡ ಒಟ್ಟು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಆಡಿದ 11 ಪಂದ್ಯಗಳಲ್ಲಿ 7 ಗೆಲುವು ಮತ್ತು 4 ಸೋಲುಗಳೊಂದಿಗೆ ಪ್ಲೇ ಆಫ್ ಹಂತಕ್ಕೆ ತನ್ನ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದೆ. ಇತ್ತ ಸೋಲು ಕಂಡ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿವೆ.

66
150ರ ಸ್ಟ್ರೈಕ್ ರೇಟ್
Image Credit : Sales Team

150ರ ಸ್ಟ್ರೈಕ್ ರೇಟ್

ಕೃನಾಲ್ ಪಾಂಡ್ಯ ಈ ಋತುವಿನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, 6 ಇನ್ನಿಂಗ್ಸ್‌ಗಳಲ್ಲಿ 141 ರನ್ ಗಳಿಸಿದ್ದಾರೆ. 150ರ ಸ್ಟ್ರೈಕ್ ರೇಟ್ ಮತ್ತು 35.50ರ ಸರಾಸರಿಯಲ್ಲಿ ಬ್ಯಾಟ್ ಮಾಡುತ್ತಿರುವ ಅವರು, ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿದ್ದಾರೆ. ಅವರ ಹೋರಾಟದ ಗುಣವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು 'ಯಾರೀ ಈ ಕಲಿ' ಎಂದು ಶ್ಲಾಘಿಸುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಆರ್‌ಸಿಬಿ
ಮುಂಬೈ ಇಂಡಿಯನ್ಸ್
ಕ್ರಿಕೆಟ್
ಐಪಿಎಲ್

Latest Videos
Recommended Stories
Recommended image1
Team India Captain: ಸೂರ್ಯಕುಮಾರ್‌ಗೆ ಶಾಕ್;‌ ಅಂದು ಸಿಕ್ಸ್‌ ಮಳೆ ಸುರಿಸಿದ್ದವರೇ ಟಿ20 ಕ್ಯಾಪ್ಟನ್?
Recommended image2
ಕ್ರುನಾಲ್ ಪಾಂಡ್ಯ ಅಲ್ಲೇ ಸಾಯಲಿ, RCB ವಿರುದ್ದ ಕಮೆಂಟ್ರಿ ಹೇಳಿದ ಬದ್ರಿನಾಥ್ ವಜಾಗೆ ಹೆಚ್ಚಿದ ಆಕ್ರೋಶ
Recommended image3
ಇವರೇ ಕ್ರಿಕೆಟ್ ಇತಿಹಾಸದ ಅಪಾಯಕಾರಿ ಬ್ಯಾಟರ್ಸ್! ಕ್ರೀಸ್‌ಗೆ ಬಂದ್ರೆ ಬೌಲರ್‌ಗಳಿಗೆ ನಡುಕ!
Related Stories
Recommended image1
ಹಾರ್ದಿಕ್ ಪಾಂಡ್ಯ ಔಟಾಗುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ಕೃನಾಲ್ ಪಾಂಡ್ಯ! ದಾಯಾದಿಗಳಾದ್ರಾ ಅಣ್ತಮ್ಮಾಸ್? ವಿಡಿಯೋ ವೈರಲ್
Recommended image2
ಬೆಂಗಳೂರಲ್ಲಿ ಅಬ್ಬರಿಸಿದ್ದ ದೆಹಲಿ ತಂಡದ ಬೆವರಿಳಿಸಿದ ಕೊಹ್ಲಿ-ಕೃನಾಲ್ ಜೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved