ಗೆಲುವು ಸಾಧಿಸುವ ಮೂಲಕ ತಮ್ಮ ವಿಜಯದ ಓಟವನ್ನು ಆರ್‌ಸಿಬಿ ಮುಂದುವರಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡು ಬೆಂಗಳೂರು ತಂಡ, ಆಕ್ರಮಣಕಾರಿ ಬೌಲಿಂಗ್ ಮೂಲಕ ಲಖೌನ್ ತಂಡವನ್ನು ಕೇವಲ 162 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯ್ತು.
ನವದೆಹಲಿ: ಬೆಂಗಳೂರಿನಲ್ಲಿನ ಸೋಲಿಗೆ ದೆಹಲಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇಡು ತೀರಿಸಿಕೊಂಡಿದೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ 6 ವಿಕೆಟ್ ಅಂತರದಿಂದ ಗೆಲುವು ಸಾಧಿಸುವ ಮೂಲಕ ತಮ್ಮ ವಿಜಯದ ಓಟವನ್ನು ಮುಂದುವರಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡು ಬೆಂಗಳೂರು ತಂಡ, ಆಕ್ರಮಣಕಾರಿ ಬೌಲಿಂಗ್ ಮೂಲಕ ಲಖೌನ್ ತಂಡವನ್ನು 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 162 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯ್ತು.
ದೆಹಲಿ ಕ್ಯಾಪ್ಟಿಲ್ಸ್ ತಂಡದ ಪರವಾಗಿ ಕೆಎಲ್ ರಾಹುಲ್ 41, ಟ್ರಿಸ್ಟಾನ್ ಸ್ಟಬ್ಸ್ 34, ಅಭಿಷೇಕ್ ಪೊರೆಲ್ 28 ರನ್ ಪೇರಿಸಿದರು. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಭುವನೇಶ್ವರ್ ಕುಮಾರ್ 33 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಜೋಶ್ ಹ್ಯಾಜಲ್‌ವುಡ್ 2 ಮತ್ತು ಕೃನಾಲ್ ಪಾಂಡ್ಯ ಮತ್ತು ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ: ಬುಮ್ರಾ ಬಿರುಗಾಳಿಗೆ ಲಖನೌ ಧೂಳೀಪಟ; ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಲಾಂಗ್ ಜಂಪ್!
ಲಖೌನ್ ತಂಡ ನೀಡಿದ 162 ರನ್ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲಿಯೇ ಎಡವಿತ್ತು. ಪವರ್ ಪ್ಲೇನಲ್ಲಿಯೇ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ಆರ್‌ಸಿಬಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ನಂತರ ಲಖೌನ್ ಬೌಲರ್‌ಗಳಿಗೆ ತಡೆಗೋಡೆಯಾಗಿ ನಿಂತ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ತಮ್ಮ ಅರ್ಧ ಶತಕ ದಾಖಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ದಡಕ್ಕೆ ತೆಗೆದುಕೊಂಡು ಬರುವಲ್ಲಿ ಯಶಸ್ವಿಯಾದರು. ದೇವದತ್ ಪಡಿಕಲ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಅಭಿಮಾನಿಗಳಲ್ಲಿ ತೀವ್ರ ನಿರಾಸೆಯನ್ನು ಮೂಡಿಸಿದರು. ಜೇಕಬ್ ಬೆತೆಲ್ 12, ರಜತ್ ಪಾಟೀದಾರ್ 6 ರನ್ ಗಳಿಸಿ ಪೆವಿಲಿಯನ್ ಸೇರಿದರು. ವಿರಾಟ್ ಕೊಹ್ಲಿ 51 (47) ಗಳಿಸಿ ಔಟ್ ಆದರು.
ಇದನ್ನೂ ಓದಿ: ಇದು ನಿನ್ನ ತವರು ಮನೆನಾ? ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಈ ಮಾತು ಹೇಳಿದ್ಯಾರಿಗೆ?
