IND vs PAK No Handshake: ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಬೇಟೆಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರು ಬದುರು ಆಗಿವೆ. ಈ ಪಂದ್ಯದ ವೇಳೆಯೂ ಪಾಕಿಸ್ತಾನ ಅವಮಾನಕ್ಕೆ ಒಳಗಾಗಿದೆ.. ಆಗಿದ್ದೇನು? ಸ್ಟೋರಿ ಓದಿ..

IND vs PAK No Handshake: ಪಾಕಿಸ್ತಾನ ಮತ್ತೆ ಅವಮಾನಕ್ಕೆ ಒಳಗಾಗಿದೆ.. ಏಷ್ಯನ್‌ ಗೇಮ್ಸ್‌ನ ಚಿನ್ನದ ಪದಕ್ಕಾಗಿ ಜಪಾನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಿವೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಟಾಸ್‌ ಪ್ರಕ್ರಿಯೆ ವೇಳೆ ಪಾಕಿಸ್ತಾನ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ. ಟಾಸ್ ಮುಗಿದ ತಕ್ಷಣ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್‌.. ಪಾಕ್ ನಾಯಕನಿಗೆ ಹ್ಯಾಂಡ್‌ಶೇಕ್ ಮಾಡಲಿಲ್ಲ. ಅಲ್ಲಿಂದ ನೇರವಾಗಿ ಹೊರಟು ಹೋಗಿದ್ದಾರೆ!

ಆಗಿದ್ದೇನು?

ಟಾಸ್‌ ಗೆದ್ದ ಅಯ್ಯರ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಇನ್ನು ಈ ಟಾಸ್‌ ಪ್ರಕ್ರಿಯೆ ವೇಳೆ ಪಾಕ್‌ ನಾಯಕ ಫರ್ಹಾನ್ ಜೊತೆ ಹ್ಯಾಂಡ್‌ಶೇಕ್ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ. ನಂತರ ನೇರವಾಗಿ ಡ್ರೆಸ್ಸಿಂಗ್ ರೂಮ್ ಕಡೆಗೆ ಹೆಜ್ಜೆ ಹಾಕಿದ್ದಾರೆ. ಆ ಮೂಲಕ ಭಾರತ ತಂಡವು ಪಾಕಿಸ್ತಾನದ ವಿರುದ್ಧ ʼನೋ-ಹ್ಯಾಂಡ್‌ಶೇಕ್ʼ ನೀತಿಯನ್ನು ಮುಂದುವರಿಸಿದೆ. ಅಂದ್ಹಾಗೆ ಭಾರತ ತಂಡವು ಪಾಕ್ ಆಟಗಾರರ ಜೊತೆ ಕೈಕುಲುಕದಿರಲು ನಿರ್ಧರಿಸಿ ಇಂದಿಗೆ 384 ದಿನಗಳು ಕಳೆದಿವೆ.

ಕಳೆದ ವರ್ಷದ ಏಷ್ಯಾ ಕಪ್‌ನಲ್ಲಿ ಈ ವಿವಾದ ಮೊದಲ ಬಾರಿಗೆ ಶುರುವಾಯಿತು. 2025ರ ಸೆಪ್ಟೆಂಬರ್ 14ರಂದು ನಡೆದ ಪಂದ್ಯದಲ್ಲಿ ಅಂದಿನ ನಾಯಕ ಸೂರ್ಯಕುಮಾರ್ ಯಾದವ್, ಪಾಕ್‌ ನಾಯಕ ಸಲ್ಮಾನ್ ಅಲಿ ಆಘಾ ಜೊತೆ ಹ್ಯಾಂಡ್‌ಶೇಕ್ ಮಾಡಿರಲಿಲ್ಲ. ಪಂದ್ಯ ಮುಗಿದ ಬಳಿಕವೂ ಕೈಕುಲುಕದೆ ನೇರವಾಗಿ ಪೆವಿಲಿಯನ್‌ಗೆ ಮರಳಿದ್ದರು. ಅವತ್ತಿನಿಂದ ಇವತ್ತಿಗೂ ಪಾಕ್‌ ಆಟಗಾರರ ಜೊತೆ ಭಾರತ ಹ್ಯಾಂಡ್‌ಶೇಕ್‌ ಮಾಡುತ್ತಿಲ್ಲ.

ಈ 384 ದಿನಗಳಲ್ಲಿ ಭಾರತ ಮತ್ತು ಪಾಕ್‌ ತಂಡಗಳು ನಾಲ್ಕು ಬಾರಿ ಮುಖಾಮುಖಿ ಆಗಿವೆ. ಏಷ್ಯಾ ಕಪ್‌ನಲ್ಲಿ 3 ಪಂದ್ಯ ಹಾಗೂ 2026ರ ಟಿ20 ವಿಶ್ವಕಪ್‌ನಲ್ಲಿ 1 ಪಂದ್ಯದಲ್ಲಿ ಮುಖಾಮುಖಿ ಆಗಿವೆ. ಈ ಎಲ್ಲಾ ಪಂದ್ಯಗಳಲ್ಲೂ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರಿಗೆ ಹ್ಯಾಂಡ್‌ಶೇಕ್ ಮಾಡಿಲ್ಲ. ಇದೀಗ ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ಪಾಕಿಸ್ತಾನ ನಾಯಕನೊಂದಿಗೆ ಕೈಕುಲುಕಲು ನಿರಾಕರಿಸಿದರು. ಇವತ್ತಿನ ಟಾಸ್‌ ವೇಳೆ ನಡೆದ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಭಾರತದ ನಿಲುವು ಏನು?

ಇನ್ನು, ಕೇಂದ್ರ ಕ್ರೀಡಾ ಸಚಿವಾಲಯ ತನ್ನ ಸಂದೇಶವನ್ನು ಸ್ಪಷ್ಟಪಡಿಸಿದೆ. ಏಷ್ಯನ್ ಗೇಮ್ಸ್, ವಿಶ್ವಕಪ್ ಅಥವಾ ಏಷ್ಯಾ ಕಪ್‌ನಂತಹ ಬಹುರಾಷ್ಟ್ರಗಳ ಟೂರ್ನಿಗಳಲ್ಲಿ ಅಂತರರಾಷ್ಟ್ರೀಯ ನಿಯಮಗಳನ್ನು ಗೌರವಿಸಿ ಪಾಕಿಸ್ತಾನದ ವಿರುದ್ಧ ಆಡಲು ಭಾರತಕ್ಕೆ ಅಭ್ಯಂತರವಿಲ್ಲ. ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಸರಣಿ ಆಡುವುದಿಲ್ಲ ಎಂದು ಹೇಳಿದೆ. ಮೈದಾನದಲ್ಲಿ ಆಟಕ್ಕಷ್ಟೇ ಸೀಮಿತವಾಗಿದ್ದು, ಯಾವುದೇ ಸೌಹಾರ್ದತೆಯ ಹಸ್ತಲಾಘವ ಪಾಕ್‌ಗೆ ಸಿಗುವುದಿಲ್ಲ ಅಂತಾ ಆಟಗಾರರು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ.

2022ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ. ಹೀಗಾಗಿ ಭಾರತ ಹಾಲಿ ಚಾಂಪಿಯನ್‌ ತಂಡ. ಇವತ್ತಿನ ಹೈವೋಲ್ಟೇಜ್‌ ಪಂದ್ಯವನ್ನ ಗೆದ್ದ ಚಾಫಿಯನ್‌ ಪಟ್ಟವನ್ನ ಭದ್ರವಾಗಿ ಉಳಿಸಿಕೊಳ್ಳಲಿದೆ.