MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಐಪಿಎಲ್ ರೀತಿ ಎಲಿಮಿನೇಟರ್, ಸೂಪರ್ 7, ಹೊಸ ಮಾದರಿಯಲ್ಲಿ ಮುಂದಿನ ಐಸಿಸಿ ವಿಶ್ವಕಪ್ ಟೂರ್ನಿ

ಐಪಿಎಲ್ ರೀತಿ ಎಲಿಮಿನೇಟರ್, ಸೂಪರ್ 7, ಹೊಸ ಮಾದರಿಯಲ್ಲಿ ಮುಂದಿನ ಐಸಿಸಿ ವಿಶ್ವಕಪ್ ಟೂರ್ನಿ

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಹೊಸ ಮಾದರಿಯಲ್ಲಿ ಆಯೋಜನೆಯಾಗುತ್ತಿದೆ. ಐಪಿಎಲ್ ರೀತಿಯಲ್ಲಿ ಎಲಿಮಿನೇಟರ್, ಸೂಪರ್ 7 ಹಂತ ಸೇರಿದಂತೆ ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ ಮಾದರಿಯಲ್ಲಿ ಹೇಗೆ ನಡೆಯಲಿದೆ ಪಂದ್ಯ?

2 Min read
Author : Chethan Kumar
| Updated : Jul 15 2026, 06:51 PM IST
Share this Photo Gallery
  • FB
  • TW
  • Linkdin
  • Whatsapp
16
ಹೊಸ ಮಾದರಿಯಲ್ಲಿ ಐಸಿಸಿ ವಿಶ್ವಕಪ್
Image Credit : Getty

ಹೊಸ ಮಾದರಿಯಲ್ಲಿ ಐಸಿಸಿ ವಿಶ್ವಕಪ್

ಕಳೆದ ಹಲವು ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿ ಲೀಗ್ ಹಂತ, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ಮಾದರಿಯಲ್ಲಿ ನಡೆಯುತ್ತಿದೆ. ಇದೀಗ ಈ ಮಾದರಿ ಬದಲಿಸಿ ಸೂಪರ್ 7 ಹಂತ, ಐಪಿಎಲ್ ಟೂರ್ನಿ ರೀತಿ ಎಲಿಮಿನೇಟರ್ ಮಾದರಿಯಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಆಯೋಜಿಸಲಾಗುತ್ತಿದೆ. ಹೊಸ ಟೂರ್ನಿ ಸ್ವರೂಪ ಹೇಗಿರುತ್ತೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
2027ರ ಏಕದಿನ ವಿಶ್ವಕಪ್ ಟೂರ್ನಿಗೆ ಹೊಸ ಮಾದರಿ
Image Credit : AFP

2027ರ ಏಕದಿನ ವಿಶ್ವಕಪ್ ಟೂರ್ನಿಗೆ ಹೊಸ ಮಾದರಿ

ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಆಯೋಜಿಸುತ್ತಿದೆ. ಈ ಟೂರ್ನಿಯಿಂದ ಐಸಿಸಿ ಟೂರ್ನಿಯಲ್ಲಿ ಸೂಪರ್ 7 ಹಂತ ಜಾರಿಗೆ ಬಲಿದೆ. ಇನ್ನು 2028ರ ಟಿ20 ವಿಶ್ವಕಪ್ ಟೂರ್ನಿ ಸೂಪರ್ 10 ಹಾಗೂ ಐಪಿಎಲ್ ಮಾದರಿಯಲ್ಲಿ ಎಲಿಮಿನೇಟರ್ ಮಾದರಿಯಲ್ಲಿ ನಡೆಯಲಿದೆ.

Related Articles

Related image1
ಭಾರತಕ್ಕೆ ಡ್ರಗ್ಸ್ ಸಪ್ಲೇ ಮಾಡಿ ಸಿಕ್ಕಿಬಿದ್ದ ಪಾಕಿಸ್ತಾನದ ಈ ಕ್ರಿಕೆಟಿಗರು, ರಹಸ್ಯ ಬಿಚ್ಚಿ ಮಾಜಿ MHA ಅಧಿಕಾರಿ
Related image2
ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!
36
ಹೊಸ ಮಾದರಿ ಹೊಸ ಶೈಲಿ
Image Credit : Getty

ಹೊಸ ಮಾದರಿ ಹೊಸ ಶೈಲಿ

ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ಮೂರು ತಂಡಗಳು ಪರಸ್ವರ ಹೋರಾಟ ನಡೆಸಲಿದೆ. ಬಳಿಕ ಒಂದು ತಂಡ ಮಾತ್ರ ಪ್ರಮುಖ ಹಂತದ ಟೂರ್ನಿಗೆ ಅರ್ಹತೆ ಪಡೆಯಲಿದೆ. ಈ ಮೂಲಕ ಒಟ್ಟು 12 ತಂಡಗಳಿರುವ ಐಸಿಸಿ ಏಕದಿನ ಟೂರ್ನಿ ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಎರಡೂ ಗುಂಪಿನಿಂದ ಟಾಪ್ 3 ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ. ಇನ್ನುಳಿದ ಕೊನೆಯ 7ನೇ ಸ್ಥಾನವನ್ನು ಉಭಯ ಗ್ರೂಪ್‌ಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ತಂಡಕ್ಕೆ ನೀಡಲಾಗುತ್ತದೆ.

46
ರೌಂಡ್ ರಾಬಿನ್ ಲೀಗ್
Image Credit : X/@BCCI

ರೌಂಡ್ ರಾಬಿನ್ ಲೀಗ್

ಸೂಪರ್ ಸಿಕ್ಸ್ ಬದಲು ಸೂಪರ್ 7 ಮಾದರಿಯಲ್ಲಿ ಟೂರ್ನಿ ನಡೆಸಲಾಗುತ್ತದೆ. ಒಂದೇ ಟೇಬಲ್‌ನಲ್ಲಿ 7 ತಂಡಗಳ ರೌಂಡ್-ರಾಬಿನ್ ಲೀಗ್ ಆಯೋಜಿಸಲಾಗುತ್ತದೆ. ಪ್ರತಿ ತಂಡವು ಉಳಿದ 6 ತಂಡಗಳ ವಿರುದ್ಧ ಆಡಲಿದ್ದು, ಈ ಸಿಂಗಲ್ ಲೀಗ್ ಟೇಬಲ್‌ನಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.

56
ಹೊಸ ಮಾದರಿ ಬದಲಾವಣೆ ಏನು
Image Credit : Getty

ಹೊಸ ಮಾದರಿ ಬದಲಾವಣೆ ಏನು

ಈ ಹಿಂದೆ 14 ತಂಡಗಳ ಟೂರ್ನಿಯಲ್ಲಿ ಒಟ್ಟು 54 ಪಂದ್ಯಗಳು ಆಯೋಜನೆಯಾಗುತ್ತಿತ್ತು. ಆದರೆ ಹೊಸ ಸ್ವರೂಪದ ಅಡಿಯಲ್ಲಿ ಪಂದ್ಯಗಳ ಸಂಖ್ಯೆ 57 ಕ್ಕೆ ಏರಿಕೆಯಾಗಲಿದೆ (ಸೂಪರ್ ಸೀರೀಸ್‌ನಲ್ಲಿ 3 ಪಂದ್ಯಗಳು, ಗ್ರೂಪ್ ಹಂತದಲ್ಲಿ 30 ಪಂದ್ಯಗಳು, ಸೂಪರ್ 7 ನಲ್ಲಿ 21 ಪಂದ್ಯಗಳು, 2 ಸೆಮಿಫೈನಲ್ ಮತ್ತು 1 ಫೈನಲ್).

66
ಟಿ20 ವಿಶ್ವಕಪ್‌ನಲ್ಲಿ ಎಲಿಮಿನೇಟಕರ್
Image Credit : Getty

ಟಿ20 ವಿಶ್ವಕಪ್‌ನಲ್ಲಿ ಎಲಿಮಿನೇಟಕರ್

ಗ್ರೂಪ್ 'ಎ' ನಲ್ಲಿ 2 ಮತ್ತು 3ನೇ ಸ್ಥಾನ ಪಡೆದ ತಂಡಗಳು, ಗ್ರೂಪ್ 'ಬಿ' ನ 3 ಮತ್ತು 2ನೇ ಸ್ಥಾನ ಪಡೆದ ತಂಡಗಳೊಂದಿಗೆ ಕ್ರಾಸ್-ಓವರ್ ಎಲಿಮಿನೇಟರ್ಸ್ (Eliminators) ಪಂದ್ಯಗಳನ್ನಾಡಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐಪಿಎಲ್ ರೀತಿ ಎಲಿಮಿನೇಟರ್ ಮಾದರಿ ಅನುಸರಿಸಲಾಗುತ್ತದೆ. ಹೊಸ ಮಾದರಿಯಲ್ಲಿ 4 ತಂಡಗಳಂತೆ 5 ಗ್ರೂಪ್ ಮಾಡಲಾಗುತದೆ. ಲೀಗ್‌ನಲ್ಲಿ ಗೆದ್ದ ಟಾಪ್ 10 ತಂಡಗಳನ್ನು ಎರಡು ಗುಂಪು ಮಾಡಿ ಸೂಪರ್ 10 ಪಂದ್ಯಗಳು ನಡೆಯಲಿದೆ. ಸೂಪರ್ 10 ರ ಪ್ರತಿ ಗ್ರೂಪ್‌ನ ಅಗ್ರ ತಂಡಗಳು ಮಾತ್ರ ನೇರವಾಗಿ ಸೆಮಿಫೈನಲ್‌ಗೆ ಹೋಗಲಿವೆ. ಗೆದ್ದ ಎರಡು ತಂಡಗಳು ಸೆಮಿಫೈನಲ್ ಲೈನ್-ಅಪ್ ಪೂರ್ಣಗೊಳಿಸಲಿವೆ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಐಸಿಸಿ ಟಿ20 ವಿಶ್ವಕಪ್
ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ)
ವಿಶ್ವಕಪ್
ಕ್ರಿಕೆಟ್

Latest Videos
Recommended Stories
Recommended image1
IND vs ENG 2nd ODI: ಶುಭ್‌ಮನ್ ಗಿಲ್ ಅಲಭ್ಯರಾದರೆ ಯಾರು ಓಪನರ್? ಭಾರತ ಸಂಭಾವ್ಯ XI ಬಹಿರಂಗ
Recommended image2
ಭಾರತಕ್ಕೆ ಡ್ರಗ್ಸ್ ಸಪ್ಲೇ ಮಾಡಿ ಸಿಕ್ಕಿಬಿದ್ದ ಪಾಕಿಸ್ತಾನದ ಈ ಕ್ರಿಕೆಟಿಗರು, ರಹಸ್ಯ ಬಿಚ್ಚಿ ಮಾಜಿ MHA ಅಧಿಕಾರಿ
Recommended image3
ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!
Related Stories
Recommended image1
ಭಾರತಕ್ಕೆ ಡ್ರಗ್ಸ್ ಸಪ್ಲೇ ಮಾಡಿ ಸಿಕ್ಕಿಬಿದ್ದ ಪಾಕಿಸ್ತಾನದ ಈ ಕ್ರಿಕೆಟಿಗರು, ರಹಸ್ಯ ಬಿಚ್ಚಿ ಮಾಜಿ MHA ಅಧಿಕಾರಿ
Recommended image2
ಬರ್ಮಿಂಗ್‌ಹ್ಯಾಮ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved