MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 16 ವರ್ಷ ಬಳಿಕ ಭಾರತಕ್ಕೆ ಮರಳುತ್ತಿದ್ದಾರೆ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ, ಆರಂಭವಾಗುತ್ತಾ ಹೊಸ ಲೀಗ್?

16 ವರ್ಷ ಬಳಿಕ ಭಾರತಕ್ಕೆ ಮರಳುತ್ತಿದ್ದಾರೆ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ, ಆರಂಭವಾಗುತ್ತಾ ಹೊಸ ಲೀಗ್?

ಐಪಿಎಲ್ ಆರಂಭಿಸಿದ ಮೂರನೇ ವರ್ಷಕ್ಕೆ ದೇಶ ತೊರೆದ ಕ್ರಿಕೆಟ್ ಲೀಗ್ ಸಂಸ್ಥಾಪಕ ಲಲಿತ್ ಮೋದಿ ಇದೀಗ ಭಾರತಕ್ಕೆ ಮರಳುತ್ತಿದ್ದಾರೆ. ಇಂಡಿಯಾ ರಿಟರ್ನ್ ಖಚಿತಪಡಿಸಿರುವ ಲಲಿತ್ ಮೋದಿ, ಐಪಿಎಲ್‌ಗೆ ಪ್ರತಿಯಾಗಿ ಹೊಸ ಲೀಗ್ ಆರಂಭಿಸುತ್ತಾರ?

2 Min read
Author : Chethan Kumar
Published : Jul 22 2026, 06:30 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತಕ್ಕೆ ರಿಟರ್ನ್ ಖಚಿತಪಡಿಸಿದ ಲಲಿತ್ ಮೋದಿ
Image Credit : stockPhoto

ಭಾರತಕ್ಕೆ ರಿಟರ್ನ್ ಖಚಿತಪಡಿಸಿದ ಲಲಿತ್ ಮೋದಿ

ಐಪಿಎಲ್ ಟೂರ್ನಿ ವಿಶ್ವದ ಅತೀ ಶ್ರೀಮಂತ ಹಾಗೂ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್. ಬಹುತೇಕ ಕ್ರಿಕೆಟ್ ದೇಶಗಳು ತಮ್ಮದೇ ಆದ ಲೀಗ್ ಟೂರ್ನಿ ನಡೆಸುತ್ತಿದೆ. ಆದರೆ ಯಾವುದೂ ಕೂಡ ಐಪಿಎಲ್ ಹತ್ತಿರಕ್ಕೂ ಸುಳಿದಿಲ್ಲ. ಬಹುತೇಕ ಲೀಗ್ ಟೂರ್ನಿಗಳು ಐಪಿಎಲ್ ಟೂರ್ನಿಯ ಒಂದು ಫ್ರಾಂಚೈಸಿ ತಂಡ ಖರ್ಚು ಮಾಡುವ ಹಣದಲ್ಲಿ ಇಡೀ ಟೂರ್ನಿ ನಡೆಯುತ್ತದೆ. ಅಷ್ಟರಮಟ್ಟಿಗೆ ಐಪಿಎಲ್ ಜನಪ್ರಿಯತೆ, ಮೌಲ್ಯ ಪಡೆದುಕೊಂಡಿದೆ. ಈ ಐಪಿಎಲ್ ಟೂರ್ನಿ ಆರಂಭಿಸಿದ ಲಲಿತ್ ಮೋದಿ 16 ವರ್ಷ ಬಳಿಕ ಭಾರತಕ್ಕೆ ಮರಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕಾನೂನು ಹೋರಾಟದಲ್ಲಿ ಲಲಿತ್ ಮೋದಿಗೆ ಗೆಲುವು
Image Credit : Getty

ಕಾನೂನು ಹೋರಾಟದಲ್ಲಿ ಲಲಿತ್ ಮೋದಿಗೆ ಗೆಲುವು

ದಕ್ಷಿಣಾ ಆಪ್ರಿಕಾದಲ್ಲಿ ಆಯೋಜಿಸಿದ ಐಪಿಎಲ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಸಂಬಂಧ ಇಡಿ ದಂಡ ವಿಧಿಸಿತ್ತು. ಜೊತೆಗೆ ಗಂಭೀರ ಆರೋಪಗಳ ಕುರಿತು ಪಟ್ಟಿ ಮಾಡಿತ್ತು. ಈ ಆರೋಪಗಳನ್ನು ಮೇಲ್ಮನವಿ ನ್ಯಾಯಾಧಿಕರಣ ರದ್ದುಗೊಳಿಸಿ ತೀರ್ಪು ನೀಡಿದೆ. ಈ ಮೂಲಕ ಲಲತ್ ಮೋದಿ ಪರವಾಗಿ ತೀರ್ಪು ಹೊರಬಂದಿದೆ. ಅತೀ ದೊಡ್ಡ ಕಾನೂನು ಹೋರಾಟದಲ್ಲಿ ಲಲಿತ್ ಮೋದಿಗೆ ಗೆಲುವು ಸಿಕ್ಕ ಕಾರಣ ಇದೀಗ ಭಾರತಕ್ಕೆ ಮರಳಲು ಸಜ್ಜಾಗಿದ್ದಾರೆ.

Related Articles

Related image1
ವಿರಾಟ್ ಕೊಹ್ಲಿ ಆಟೋಗ್ರಾಫ್ ಸಿಗಲಿಲ್ಲ ಎಂದು ಕಣ್ಣೀರಿಟ್ಟ ಅಭಿಮಾನಿಗೆ ಲಲಿತ್ ಮೋದಿ ಸರ್ಪ್ರೈಸ್ ಗಿಫ್ಟ್!
Related image2
ಟಿ20ಯಲ್ಲಿ ಡಬಲ್ ಸೆಂಚುರಿ ಬಾರಿಸೋ ಮೊದಲ ಆಟಗಾರ ಇವನೇ ನೋಡಿ! ಲಲಿತ್ ಮೋದಿ ಅಚ್ಚರಿ ಭವಿಷ್ಯ
36
ಸೌತ್ ಆಫ್ರಿಕಾದಲ್ಲಿ ಐಪಿಎಲ್ ನಡೆಸಿದ ಬಳಿಕ ಭಾರತ ತೊರೆದ ಲಲಿತ್ ಮೋದಿ
Image Credit : Getty

ಸೌತ್ ಆಫ್ರಿಕಾದಲ್ಲಿ ಐಪಿಎಲ್ ನಡೆಸಿದ ಬಳಿಕ ಭಾರತ ತೊರೆದ ಲಲಿತ್ ಮೋದಿ

2009ರ ಲೋಕಸಭಾ ಚುನಾವಣೆ ಕಾರಣ ಐಪಿಎಲ್ ಟೂರ್ನಿಯನ್ನು ಸೌತ್ ಆಫ್ರಿಕಾದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಆರೋಪಗಳು ಲಲತಿ ಮೋದಿ ವಿರುದ್ಧ ಕೇಳಿಬಂದಿತ್ತು. ಪರಿಣಾಮ 2010ರಲ್ಲಿ ಭಾರತ ತೊರೆದ ಲಲಿತ್ ಮೋದಿ ವಿರುದ್ದ ಹಲವು ಕಾನೂನು ಹೋರಾಟಗಳು, ಗಡೀಪಾರು ಹೋರಾಟಗಳು ನಡೆಯುತ್ತಲೇ ಇದೆ.

46
243 ಕೋಟಿ ರೂಪಾಯಿ ಅಕ್ರಮ
Image Credit : ANI

243 ಕೋಟಿ ರೂಪಾಯಿ ಅಕ್ರಮ

ಸೌತ್ ಆಫ್ರಿಕಾದಲ್ಲಿ ಐಪಿಎಲ್ ಟೂರ್ನಿ ಆಯೋಜನೆ ವೇಳೆ ಐಪಿಎಲ್ ಸಂಸ್ಥಾಪಕ, ಐಪಿಎಲ್ ಚೇರ್ಮೆನ್ ಲಲಿತ್ ಮೋದಿ ಬಿಸಿಸಿಐ ಖಾತೆಯಿಂದ 243 ಕೋಟಿ ರೂಪಾಯಿ ಹಣವನ್ನು ವಿದೇಶಕ್ಕೆ ವರ್ಗಾಯಿಸಿದ್ದರು. ಈ ಮೂಲಕ ಆರ್‌ಬಿಐ ಹಾಗೂ ಫೆಮಾ ಕಾಯ್ದೆ ಉಲ್ಲಂಘಿಸಿದೆ ಎಂದು ಇಡಿ ಲಲಿತ್ ಮೋದಿ ಹಾಗೂ ಬಿಸಿಸಿಐ ಪ್ರಮುಖರ ವಿರುದ್ಧ ದಂಡ ವಿಧಿಸಿತ್ತು. ಈ ಪ್ರಕರಣ ಸಂಬಂಧ ಲಲಿತ್ ಮೋದಿ ಬಂಧನ ಸಾಧ್ಯತೆ ದಟ್ಟವಾಗುತ್ತಿದ್ದಂತೆ ದೇಶ ತೊರೆದು ಲಂಡನ್‌ನಲ್ಲಿ ಬೀಡು ಬಿಟ್ಟಿದ್ದರು.

56
ತೀರ್ಪಿನ ಬೆನ್ನಲ್ಲೇ ಭಾರತಕ್ಕೆ ಮರಳುವುದಾಗಿ ಹೇಳಿದ ಲಲಿತ್ ಮೋದಿ
Image Credit : Social Media

ತೀರ್ಪಿನ ಬೆನ್ನಲ್ಲೇ ಭಾರತಕ್ಕೆ ಮರಳುವುದಾಗಿ ಹೇಳಿದ ಲಲಿತ್ ಮೋದಿ

ಕಳೆದ 16 ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟ ಮಾಡುತ್ತಿದ್ದೇನೆ. ಈ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಐಪಿಎಲ್ ಟೂರ್ನಿಯ ಒಳಿತಾಗಿ ಕೆಲಸ ಮಾಡಿದ್ದೇನೆ. ಯಾವತ್ತೂ ಅಕ್ರಮ ಮಾಡಿಲ್ಲ. ನಾನು ಪದೇ ಪದೇ ಮಾಧ್ಯಮಗಳಿಗೆ ಹೇಳುತ್ತಾ ಬಂದಿರುವ ಮಾತು ಇದೀಗ ಸತ್ಯ ಅನ್ನೋದು ಸಾಬೀತಾಗಿದೆ. ನಾನು ಪರಾರಿ ಅಲ್ಲ, ವಂಚಕ ಅಲ್ಲ, ಪಲಾಯನವಾದಿ ಅಲ್ಲ ಎಂದು ಲಲಿತ್ ಮೋದಿ ಹೇಳಿದ್ದಾರೆ.

66
ಬೇರೆ ಲೀಗ್ ಆರಂಭಿಸುತ್ತಾರಾ ಲಲಿತ್ ಮೋದಿ
Image Credit : Twitter

ಬೇರೆ ಲೀಗ್ ಆರಂಭಿಸುತ್ತಾರಾ ಲಲಿತ್ ಮೋದಿ

ಭಾರತಕ್ಕೆ ಮರಳುವಿಕೆ ಖಚಿತಪಡಿಸಿರುವ ಲಲಿತ್ ಮೋದಿ ವಿರುದ್ಧ ಇತರ ಕೆಲ ಪ್ರಕರಣಗಳಿವೆ. ಈ ಪ್ರಕರಣದ ಕಾನೂನು ಹೋರಾಟ ನಡೆಯುತ್ತಿದೆ. ಇತ್ತ ಲಲಿತ್ ಮೋದಿ ಸದ್ಯ ಬಿಸಿಸಿಐ, ಅಥವಾ ಯಾವುದೇ ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯರಲ್ಲ. ಇಷ್ಟೇ ಅಲ್ಲ ಭಾರತದಲ್ಲಿ ಕ್ರಿಕೆಟ್ ಲೀಗ್ ಬಿಸಿಸಿಐ ಅಡಿಯಲ್ಲಿ ಮಾತ್ರ ಆಯೋಜಿಸಲು ಸಾಧ್ಯ. ಹೊರಗಿನ ವ್ಯಕ್ತಿಗಳಿಗೆ ಸಾಧ್ಯವಿಲ್ಲ. ಆಯೋಜಿಸಿದರೂ ಟೀಂ ಇಂಡಿಯಾ ಕ್ರಿಕೆಟಿಗರು, ವಿದೇಶಗಳ ಹಾಲಿ ಕ್ರಿಕೆಟಿಗರ ಹರಾಜು, ಸೇರ್ಪಡೆ ಸಾಧ್ಯವಿಲ್ಲ. ಹೀಗಾಗಿ ಲಲಿತ್ ಮೋದಿ ಮತ್ತೊಂದು ಲೀಗ್ ಆರಂಭಿಸಲು ಸಾಧ್ಯವಿಲ್ಲ. ಮತ್ತೆ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವ ಪ್ರಯತ್ನ ಮಾಡಬಹುದು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಐಪಿಎಲ್
ಕ್ರಿಕೆಟ್
ನ್ಯಾಯಾಲಯ
ಜಾರಿ ನಿರ್ದೇಶನಾಲಯ
Latest Videos
Recommended Stories
Recommended image1
ಟೀಂ ಇಂಡಿಯಾದಿಂದ ಸತತ ನಿರ್ಲಕ್ಷ್ಯ, ಬೇಸತ್ತ ಸ್ಟಾರ್ ಕ್ರಿಕೆಟರ್ ಇಂಗ್ಲೆಂಡ್ ಕೌಂಟಿ ಆಡಲು ಒಪ್ಪಂದಕ್ಕೆ ಸಹಿ
Recommended image2
6,6,6,6,6 ಪಾಕ್‌ ಬೌಲರ್ ಅಬ್ರಾರ್‌ ಚೆಂಡಾಡಿದ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ತಂಡದ ವಿಸ್ಪೋಟಕ ಬ್ಯಾಟರ್! ವಿಡಿಯೋ ವೈರಲ್
Recommended image3
IND vs ZIM T20: ಐರ್ಲೆಂಡ್, ಇಂಗ್ಲೆಂಡ್ ಎದುರು ಸೋತು ಬಂದಿರುವ ಭಾರತಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಜಿಂಬಾಬ್ವೆ ಕ್ಯಾಪ್ಟನ್ ಸಿಕಂದರ್ ರಾಜಾ!
Related Stories
Recommended image1
ವಿರಾಟ್ ಕೊಹ್ಲಿ ಆಟೋಗ್ರಾಫ್ ಸಿಗಲಿಲ್ಲ ಎಂದು ಕಣ್ಣೀರಿಟ್ಟ ಅಭಿಮಾನಿಗೆ ಲಲಿತ್ ಮೋದಿ ಸರ್ಪ್ರೈಸ್ ಗಿಫ್ಟ್!
Recommended image2
ಟಿ20ಯಲ್ಲಿ ಡಬಲ್ ಸೆಂಚುರಿ ಬಾರಿಸೋ ಮೊದಲ ಆಟಗಾರ ಇವನೇ ನೋಡಿ! ಲಲಿತ್ ಮೋದಿ ಅಚ್ಚರಿ ಭವಿಷ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved