ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌರವ್ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷನಿಗೆ ಎದುರಾದ ಸಂಕಷ್ಟವೇನು?
ಮಾಜಿ ಕ್ರಿಕೆಟಗ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪೊಲೀಸ್ ಠಾಣೆ ಮೆಟ್ಟೆಲೇರಿದ್ದಾರೆ. ಗಂಗೂಲಿ ದಿಡೀರ್ ಪೊಲೀಸರ ಬಳಿ ತೆರಳಿದ್ದೇಕೆ? ಮೈದಾನದಲ್ಲಿ ಅಗ್ರೆಸ್ಸೀವ್ ಆಗಿದ್ದ ಗಂಗೂಲಿ ಇದೀಗ ಆಫ್ ದಿ ಫೀಲ್ಡ್‌ನಲ್ಲಿ ಕೆರಳಿದ್ದೇಕೆ?

ಕೆರಳಿದ ಸೌರವ್ ಗಂಗೂಲಿ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಗರಂ ಆಗಿದ್ದಾರೆ. ಬಂಗಾಳ ಕ್ರಿಕೆಟ್ ಅಧ್ಯಕ್ಷ ಸೌರವ್ ಗಂಗೂಲಿ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಕೋಲ್ಕತಾ ಪೊಲೀಸರಿಗೆ ದೂರು ನೀಡಿರುವ ಸೌರವ್ ಗಂಗೂಲಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಏನಿದು ಪ್ರಕರಣ?
ಸೌರವ್ ಗಂಗೂಲಿ ದೂರು ನೀಡಿದ್ದೇಕೆ
ಸೌರವ್ ಗಂಗೂಲಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ಮಾಡುತ್ತಿರುವ ಅಪಪ್ರಚಾರದ ವಿರುದ್ದ ಕೆರಳಿದ್ದಾರೆ. ಸೌರವ್ ಗಂಗೂಲಿ ಫ್ಯಾನ್ಸ್ ಅನ್ನೋ ಫೇಸ್‌ಬುಕ್ ಪೇಜ್ ವಿರುದ್ದ ಗಂಗೂಲಿ ದೂರು ನೀಡಿದ್ದಾರೆ. ಗಂಗೂಲಿ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ. ಇಷ್ಟೇ ಅಲ್ಲ ಕಠಿಣ ಕ್ರಮದ ಭರವಸೆ ನೀಡಲಾಗಿದೆ.
ಫ್ಯಾನ್ ಪೇಜ್ ವಿರುದ್ದ ದೂರು ಯಾಕೆ
ಸೌರವ್ ಗಂಗೂಲಿ ಹೆಸರಿನಲ್ಲಿ ಇರುವ ಸೌರವ್ ಗಂಗೂಲಿ ಫ್ಯಾನ್ ಪೇಜ್‌ನಲ್ಲಿ ತಪ್ಪು ಮಾಹಿತಿ, ಅಪಪ್ರಚಾರ ಮಾಡಲಾಗುತ್ತಿದೆ. ಟೀಕೆ ಟಿಪ್ಪಿಗಳಿಗೆ ಸ್ವಾಗತ. ಆದರೆ ಇಲ್ಲದ ಸಲ್ಲದ ಮಾಹಿತಿ, ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ತಮ್ಮ ಘನೆತೆಗೆ ಧಕ್ಕೆಯಾಗುತ್ತಿದೆ ಎಂದು ದೂರಿನಲ್ಲಿ ಸೌರವ್ ಗಂಗೂಲಿ ಉಲ್ಲೇಖಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಟೀಕೆ ಟಿಪ್ಪಣಿ
ಸಾರ್ವಜನಿಕ ಜೀವನದಲ್ಲಿ ಟೀಕೆ, ವಿರೋಧಗಳು ಇದ್ದೇ ಇರುತ್ತದೆ. ಇದನ್ನು ನಾನು ಅರಿತಿದ್ದೇನೆ. ಆದರೆ ತಪ್ಪು ಮಾಹಿತಿ, ತಪ್ಪು ವಿಚಾರಗಳನ್ನು ಪ್ರಚಾರ ಮಾಡುವುದು, ವ್ಯಕ್ತಿಯ ಘನತೆಗೆ ಧಕ್ಕೆ ತರುವುದು, ಸುಳ್ಳು ಸುದ್ದಿ ಹಬ್ಬಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಸೌರವ್ ಗಂಗೂಲಿ ಫ್ಯಾನ್ ಪೇಜ್ ಮೂಲಕ ನಿರಂತರವಾಗಿ ಈ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೌರವ್ ಗಂಗೂಲಿ ಆಗ್ರಹಿಸಿದ್ದಾರೆ.
ರಾಜಕೀಯ ಸೇರೋ ಕುರಿತು ಅಪ್ರಪ್ರಚಾರ
ಪಶ್ಚಿಮ ಬಂಗಾಳ ಕ್ರಿಕೆಟ್ ಅಧ್ಯಕ್ಷನಾಗಿರುವ ಸೌರವ್ ಗಂಗೂಲಿ, ಬಂಗಾಳ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದರ ನಡುವೆ ಸೌರವ್ ಗಂಗೂಲಿ ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷ ಸೇರುತ್ತಿದ್ದಾರೆ. ಯೂಸೂಫ್ ಪಠಾಣ್ ರಾಜೀನಾಮೆ ಕೊಡಿಸಿ ಅವರ ಸ್ಥಾನದಲ್ಲಿ ಸೌರವ್ ಗಂಗೂಲಿಯನ್ನು ಸ್ಪರ್ಧೆ ಮಾಡಿಸಲಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಊಹಾಪೋಗಳಿಗೆ ಗಂಗೂಲಿ ಸ್ಪಷ್ಟನೆ ನೀಡಿದ್ದರು.
ಟೀಂ ಇಂಡಿಯಾದ ಯಶಸ್ವಿ ನಾಯಕ
ಸೌರವ್ ಗಂಗೂಲಿ ಭಾರತ ತಂಡದ ನಾಯಕನಾಗಿ ಮಹತ್ತರ ಬದಲಾವಣೆಗೆ ಕಾರಣಾಗಿದ್ದಾರೆ. ಹೊಸ ತಂಡ ಕಟ್ಟಿದ, ವಿಶ್ವವೇ ತಿರುಗಿ ನೋಡುವಂತೆ ತಂಡ ಕಟ್ಟಿದ ಹೆಮ್ಮೆ ಸೌರವ್ ಗಂಗೂಲಿಗಿದೆ. ಯುವ ಕ್ರಿಕೆಟಿಗರನ್ನು ಬೆಳೆಸಿ ಭಾರತ ತಂಡಕ್ಕೆ ಹೊಸ ಹಿರಿಮೆ ನೀಡಿದ ಕೀರ್ತಿ ಸೌರವ್ ಗಂಗೂಲಿಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

