- Home
- Sports
- Cricket
- ಗೊತ್ತಲ್ಲ ಸಚಿನ್ ಕರಿಯರ್ ಖತಂ ಆಗುವಂತಿತ್ತು, ವೈಭವ್ ಸೂರ್ಯವಂಶಿಗೆ ಬಗ್ಗೆ ಸೌತ್ ಆಫ್ರಿಕಾ ದಿಗ್ಗಜನ ಆತಂಕ
ಗೊತ್ತಲ್ಲ ಸಚಿನ್ ಕರಿಯರ್ ಖತಂ ಆಗುವಂತಿತ್ತು, ವೈಭವ್ ಸೂರ್ಯವಂಶಿಗೆ ಬಗ್ಗೆ ಸೌತ್ ಆಫ್ರಿಕಾ ದಿಗ್ಗಜನ ಆತಂಕ
ಸಚಿನ್ ತೆಂಡೂಲ್ಕರ್ ಕರಿಯರ್ ಬಹುತೇ ಕೊನೆಗೊಳ್ಳುವ ಹಂತಕ್ಕೆ ತಲುಪಿತ್ತು. ಇದೀಗ ವೈಭವ್ ಆಟದ ಬಗ್ಗೆ ನನಗೆ ಅಚ್ಚರಿ ಜೊತೆಗೆ ಸಂತೋಷವಿದೆ. ಆದರೆ ಆತಂಕವೂ ಹೆಚ್ಚಿದೆ ಎಂದು ಸೌತ್ ಆಫ್ರಿಕಾ ದಿಗ್ಗಜನ ಹೇಳಿಕೆ ಇದೀಗ ಅಭಿಮಾನಿಗಳ ಆತಂಕವನ್ನೂ ಹೆಚ್ಚಿಸಿದೆ.

ಸೌತ್ ಆಫ್ರಿಕಾ ದಿಗ್ಗಜನ ಹೇಳಿಕೆಯಿಂದ ಆತಂಕ
ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಹಲವು ದಿಗ್ಗಜರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಪಾಕಿಸ್ತಾನ ವೇಗಿ ಶೋಯೆಬ್ ಅಕ್ತರ್ ಕೂಡ ವೈಭವ್ ಅಬ್ಬರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಭವಿಷ್ಯದ ಸ್ಟಾರ್ ಎಂದೇ ಬಿಂಬಿಸಿದ್ದಾರೆ. ಇದೀಗ ಸೌತ್ ಆಫ್ರಿಕಾ ಕ್ರಿಕೆಟ್ ದಿಗ್ಗಜ, ಡರಿಲ್ ಕಲಿನಾನ್ ಮೆಚ್ಚುಗೆ ಡೊತೆಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕಲಿನನ್ ಹೇಳಿಕೆ ಬಳಿಕ ಇದೀಗ ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
ಸಚಿನ್ ಕರಿಯರ್ ಕೊನೆಗಳ್ಳುವ ಹಂತಕ್ಕೆ ತಲುಪಿತ್ತು
ಶ್ರೀಲಂಕಾ ಎ ವಿರುದ್ದಧ ಪೈನಲ್ ಪಂದ್ಯದಲ್ಲಿ ವೈಭವ್ ಕೇವಲ 11 ಎಸೆತದಲ್ಲಿ ಹಾಫ್ ಸೆಂಚುರಿ ಹಾಗೂ 29 ಎಸೆತದಲ್ಲಿ 94 ರನ್ ಸಿಡಿಸಿದ ವೈಭವ್ ಆಟಕ್ಕೆ ಹಲವು ಫಿದಾ ಆಗಿದ್ದಾರೆ.ವೈಭವ್ ಸ್ಫೋಟಕ ಬ್ಯಾಟಿಂಗ್ ಗುರಿತು ಮಾತನಾಡಿದ ಡರಿಲ್, ಮಾಸ್ಟರ್ ಸಚಿನ್ ತೆಂಡೂಲ್ಕರ್ ಉದಾಹರಣೆ ನೀಡಿದ್ದಾರೆ. ಸಚಿನ್ ಕರಿಯರ್ ಕೊನೆಗೊಳ್ಳುವ ಹಂತಕ್ಕೆ ತಲುಪಿರುವ ಘಟನೆ ನೆನಪಿದೆಯಾ ಎಂದು ಪ್ರಶ್ನಿಸಿದ್ದಾರೆ.
ಯುವಕನ ಆಟ ನೋಡಿ ಅಚ್ಚರಿಯಾಗಿದೆ, ಆದರೆ ಕಳಕಳಿ ಹೆಚ್ಚಾಗಿದೆ
ಎಲ್ಲರೂ ವೈಭವ್ ಆಟ ಕೊಂಡಾಡುತ್ತಿದ್ದಾರೆ. ಆದರೆ ನನಗೆ ಆತಂಕ ಹೆಚ್ಚಾಗುತ್ತಿದೆ. 15ರ ಹರೆಯದಲ್ಲಿ ವೈಬವ್ ದೊಡ್ಡ ಬ್ಯಾಟ್ ಹಿಡಿದು ಅತೀ ವೇಗವಾಗಿ ಬ್ಯಾಟ್ ಬೀಸುತ್ತಿದ್ದಾನೆ. ಸಿಕ್ಸರ್ ಸಿಡಿಸಿ ಅಬ್ಬರಿಸುತ್ತಿದ್ದಾನೆ. ವೈಭವ್ ಬ್ಯಾಟ್ ಬೀಸುವ ಶೈಲಿ ನೋಡಿದರೆ ಆತನ ಮಣಿಕಟ್ಟು, ಕೀಲು, ಮೊಣಕೈಗಳ ಬಗ್ಗೆ ಆತಂಕ ಎದುರಾಗುತ್ತಿದೆ. ಇಂಜುರಿ ಸಮಸ್ಯೆ ನನ್ನ ಆತಂಕ ಹೆಚ್ಚಿಸಿದೆ ಎಂದು ಡರಿಲ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಉದಾಹರಣೆ ನೀಡಿದ ಡರಿಲ್
ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಕ್ಲಾಸಿಕ್ ಆಗಿತ್ತು. ವೈಭವ್ ರೀತಿ ಅಷ್ಟು ವೇಗವಾಗಿ ಬ್ಯಾಟ್ ಬೀಸುತ್ತಿರಲಿಲ್ಲ. ಆದರೆ ಒಂದು ಹಂತದಲ್ಲಿ ಸಚಿನ್ ತೆಂಡೂಲ್ಕರ್ ಟೆನ್ನಿಸ್ ಎಲ್‌ಬೋ (ಮೊಣಕೈ ) ಗಾಯದಿಂದ ಕರಿಯರ್ ಕೊನೆಗೊಳ್ಳುವ ಹಂತಕ್ಕೆ ಹೋಗಿತ್ತು. ಅಭಿಮಾನಿಗಳು ತೀವ್ರ ಆತಂಕಗೊಂಡಿದ್ದರು. 2004ರಲ್ಲಿ ಸಚಿನ್ ಇಂಜುರಿ ತಮ್ಮ ವೃತ್ತಿ ಬದುಕಿನಲ್ಲೇ ಅತ್ಯಂತ ಕಠಿಣ ದಿನಗಳನ್ನು ಎದುರಿಸುವಂತೆ ಮಾಡಿತ್ತು ಎಂದು ಡರಿಲ್ ಹೇಳಿದ್ದಾರೆ.
ದೇಹದ ಮೇಲೆ ಪರಿಣಾಮ
ವೈಭವ್ ಸೂರ್ಯವಂಶಿ ಬೆಳೆಯುವ ಹಂತದ ಹುಡುಗ. ಅವರ ಕೀಲು, ಮೊಣಕೈ, ಎಲುಬುಗಳು ಬಲಿಷ್ಠಗೊಳ್ಳುವ ಹಂತ ಇದು. ಆದರೆ ಅತೀಯಾದ ಪವರ್ ಹಿಟ್ಟಿಂಗ್‌ನಿಂದ ಸಮಸ್ಯೆ ತೀವ್ರಗೊಳ್ಳುವ, ದೇಹದ ಮೇಲೆ ಪರಿಮಾಮ ಬೀರುವ ಸಾಧ್ಯತೆ ಇದೆ. ನಮ್ಮ ಕಾಲದಲ್ಲಿ ಕಡಿಮೆ ತೂಕದ ಬ್ಯಾಟ್ ಬಳಸುತ್ತಿದ್ದರೂ ಇಂಜುರಿ ಸಮಸ್ಯೆ ಇತ್ತು. ಇದೀಗ ಹೆಚ್ಚು ತೂಕದ ಬ್ಯಾಟ್ ಬಳಸುವ ಕಾರಣ ಆತಂಕ ಹೆಚ್ಚಿದೆ ಎಂದು ಡರಿಲ್ ಹೇಳಿದ್ದಾರೆ.
ಸತತ ಟೂರ್ನಿ, ಬಿಡುವಿಲ್ಲದ ಪಂದ್ಯ
ಐಪಿಎಲ್, ನಿರಂತರ ಟೂರ್ನಿ, ಸತತ ವೇಳಾಪಟ್ಟಿಗಳಿಂದ ಯುವ ಕ್ರಿಕೆಟಿಗರು ಹೈರಣಾಗುವ ಸಾಧ್ಯತೆ ಇದೆ. ಸಚಿನ್ ತೆಂಡೂಲ್ಕರ್ ರೀತಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಹಲವು ದಿಗ್ಗಜರಂತೆ ಸುದೀರ್ಘ ಕರಿಯರ್ ಕಂಡುಕೊಳ್ಳಲು ಇಂಜುರಿ ಸಮಸ್ಯೆಗಳು ಅಡ್ಡಗಾಲಾಗುವ ಸಾಧ್ಯತೆ ಇದೆ ಎಂದು ಡರಿಲ್ ಎಚ್ಚರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

