ಸಚಿನ್, ಗವಾಸ್ಕರ್ ಬಳಿಕ ಸೆಹ್ವಾಗ್ ಹೆಸರಿನಲ್ಲಿದ್ದ ಅತೀ ದೊಡ್ಡ ದಾಖಲೆ ಮುರಿದ ರೋಹಿತ್ ಶರ್ಮಾ
ಆಫ್ಘಾನಿಸ್ತಾನ ವಿರುದ್ಧ ಸರಣಿಯಲ್ಲಿ ರೋಹಿತ್ ಶರ್ಮಾ ಈಗಾಗಲೇ ಕೆಲ ದಾಖಲೆ ಬರೆದಿದ್ದಾರೆ. ಇದೀಗ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ಅತೀ ದೊಡ್ಡ ದಾಖಲೆಯನ್ನು ರೋಹಿತ್ ಶರ್ಮಾ ಬ್ರೇಕ್ ಮಾಡಿದ್ದಾರೆ.

ದಾಖಲೆ ವೀರ ರೋಹಿತ್ ಶರ್ಮಾ
ಆಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯುತ್ತಿದ್ದಂತೆ ದಾಖಲೆಯೊಂದು ನಿರ್ಮಾಣವಾಗಿತ್ತು. ಟೀಂ ಇಂಡಿಯಾ ಪರ ಆಡಿದ ಅತೀ ಹಿರಿಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. 31 ವರ್ಷದ ರೋಹಿತ್ ಶರ್ಮಾ ಮೊಹಿಂದರ್ ಅಮರನಾಥ್ ದಾಖೆಲೆ ಮುರಿದಿದ್ದರು. ಇದೇ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ ಇದೀಗ ವೀರೇಂದ್ರ ಸೆಹ್ವಾಗ್ ಬರೆದ ದಾಖಲೆ ಮುರಿದಿದ್ದಾರೆ.
ಭಾರತದ ಆರಂಭಿಕನಾಗಿ ಗರಿಷ್ಠ ರನ್ ದಾಖಲೆ
ರೋಹಿತ್ ಶರ್ಮಾ ಆಫ್ಘಾನಿಸ್ತಾನ ವಿರುದ್ಧದ 3ನೇ ಪಂದ್ಯದಲ್ಲಿ 79 ರನ್ ಸಿಡಿಸುವ ಮೂಲಕ ಭಾರತದ ಆರಂಭಿಕನಾಗಿ ಗರಿಷ್ಠ ರನ್ ದಾಖಳೆ ಬರೆದಿದ್ದಾರೆ. ಆರಂಭಿಕನಾಗಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಹಿಂದಿಕ್ಕಿದ್ದ ರೋಹಿತ್ ಶರ್ಮಾ, ಆಫ್ಘಾನ್ ವಿರುದ್ಧದ ಮೂರನೇ ಏಕದಿನದಲ್ಲಿ ವಿರೇಂದ್ರ ಸೆಹ್ವಾಗ್ ದಾಖಲೆ ಮುರಿದು ಭಾರತದ ಆರಂಭಿಕನಾಗಿ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ.
ಭಾರತದ ಆರಂಭಿಕರ ಗರಿಷ್ಠ ರನ್ ಸಾಧನೆ
- ರೋಹಿತ್ ಶರ್ಮಾ: 16,137 ರನ್
- ವಿರೇಂದ್ರ ಸೆಹ್ವಾಗ್: 16,119 ರನ್
- ಸಚಿನ್ ತೆಂಡೂಲ್ಕರ್: 15,335 ರನ್
- ಸುನಿಲ್ ಗವಾಸ್ಕರ್: 12,258 ರನ್
- ಶಿಖರ್ ಧವನ್: 10,867 ರನ್
ಏಕದಿನದಲ್ಲಿ ಫಿಫ್ಟ್ ದಾಖಲೆ ಬರೆದ ರೋಹಿತ್ ಶರ್ಮಾ
ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಹಿರಿಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.ಆಫ್ಘಾನಿಸ್ತಾನ ವಿರುದ್ಧದ ಏಕದಿನದಲ್ಲಿ ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಭಾರತದ ಮಾಜಿ ಕ್ರಿಕೆಟಿಗ ಮೊಹಿಂದರ್ ಅಮರನಾಥ್ ಹೆಸರಿನಲ್ಲಿದ್ದ ಹಿರಿಯ ಕ್ರಿಕೆಟಿನ ಫಿಫ್ಟಿ ದಾಖಲೆ ಮುರಿದಿದ್ದಾರೆ. ರೋಹಿತ್ ಶರ್ಮಾ 39 ವರ್ಷ 51 ದಿನಕ್ಕೆ ಹಾಫ್ ಸೆಂಚುರಿ ಸಿಡಿಸಿದ್ದರೆ, ಮೊಹಿಂದರ್ ಅಮರನಾಥ್ 39 ವರ್ಷ 21 ದಿನಕ್ಕೆ ಹಾಫ್ ಸೆಂಚುರಿ ಸಿಡಿಸಿದ್ದರು.
9 ಬೌಂಡರಿ, 3 ಸಿಕ್ಸರ್ ಧಮಾಕ
ಆಫ್ಘಾನಿಸ್ತಾನ ವಿರುದ್ದದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 69 ಎಸೆತದಲ್ಲಿ 79 ರನ್ ಸಿಡಿಸಿ ಅಬ್ಬರಿಸಿದ್ದರು. 9 ಬೌಂಡರಿ ಹಾಗೂ ಮೂರು ಸಿಕ್ಸರ್ ಮೂಲಕ ರೋಹಿತ್ ಶರ್ಮಾ 114.99 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಹಿರಿಯ ಕ್ರಿಕೆಟಿಗನಾದರೂ ರೋಹಿತ್ ಶರ್ಮಾ ಬ್ಯಾಟಿಂಗ್ ಯುವಕರನ್ನೇ ನಾಚಿಸುವಂತಿದೆ.
2027ರ ವಿಶ್ವಕಪ್ ಭವಿಷ್ಯ
ರೋಹಿತ್ ಶರ್ಮಾ ದಿಟ್ಟ ಹೋರಾಟದ ಮೂಲಕ ತಾವು 2027ರ ಏಕದಿನ ವಿಶ್ವಕಪ್ ಟೂರ್ನಿಗೆ ರೆಡಿ ಅನ್ನೋ ಸಂದೇಶ ರವಾನಿಸಿದ್ದಾರೆ. ಆದರೆ ರೋಹಿತ್ ಶರ್ಮಾ ಆಯ್ಕೆ ಕುರಿತು ಯಾವುದೇ ಸ್ಪಷ್ಟೆತೆ ಬಿಸಿಸಿಐನಿಂದ ಬಂದಿಲ್ಲ. ವಯಸ್ಸಿನ ಕಾರಣದಿಂದ ರೋಹಿತ್ ಶರ್ಮಾಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

