MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Sports
  • Cricket
  • 11 ಎಸೆತಗಳಲ್ಲಿ ಫಿಫ್ಟಿ, 29 ಎಸೆತಗಳಲ್ಲಿ 94 ರನ್..! ಲಂಕಾ ನೆಲದಿಂದಲೇ BCCI ಸೆಲೆಕ್ಟರ್ಸ್‌ಗೆ ವೈಭವ್ ಸೂರ್ಯವಂಶಿ ಖಡಕ್ ಮೆಸೇಜ್

11 ಎಸೆತಗಳಲ್ಲಿ ಫಿಫ್ಟಿ, 29 ಎಸೆತಗಳಲ್ಲಿ 94 ರನ್..! ಲಂಕಾ ನೆಲದಿಂದಲೇ BCCI ಸೆಲೆಕ್ಟರ್ಸ್‌ಗೆ ವೈಭವ್ ಸೂರ್ಯವಂಶಿ ಖಡಕ್ ಮೆಸೇಜ್

ದಂಬುಲ್ಲಾ: ಬಾಲ್ ಇರುವುದೇ ದಂಡಿಸುವುದಕ್ಕೆ ಎನ್ನುವ ರೀತಿಯಲ್ಲಿ ಬ್ಯಾಟ್ ಬೀಸುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ಅಬ್ಬರಿಸಿದ್ದಾರೆ. ಲಂಕಾ ನೆಲದಲ್ಲಿ ಸ್ಪೋಟಕ ಆಟವಾಡಿದ ವೈಭವ್ ಸೂರ್ಯವಂಶಿ, ಬಿಸಿಸಿಐ ಸೆಲೆಕ್ಟರ್ಸ್‌ಗೆ ಖಡಕ್ ಮೆಸೇಜ್ ರವಾನಿಸಿದ್ದಾರೆ. 

2 Min read
Author : Naveen Kodase
Published : Jun 22 2026, 01:42 PM IST
Share this Photo Gallery
  • FB
  • TW
  • Linkdin
  • Whatsapp
16
ಐಪಿಎಲ್ ಲಯ ಮುಂದುವರೆಸಿರುವ ವೈಭವ್ ಸೂರ್ಯವಂಶಿ
Image Credit : ANI

ಐಪಿಎಲ್ ಲಯ ಮುಂದುವರೆಸಿರುವ ವೈಭವ್ ಸೂರ್ಯವಂಶಿ

2026ರ ಐಪಿಎಲ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಗರಿಷ್ಠ ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದಿರುವ ವೈಭವ್ ಸೂರ್ಯವಂಶಿ, ಇದೀಗ ಭಾರತ 'ಎ' ಪರ ತ್ರಿಕೋನ ಸರಣಿಯಲ್ಲೂ ಅಬ್ಬರಿಸಿದ್ದಾರೆ. ಲೀಗ್ ಹಂತದಲ್ಲಿ ದೊಡ್ಡ ಮೊತ್ತ ಬಾರಿಸಲು ವಿಫಲವಾಗಿದ್ದ ವೈಭವ್ ಸೂರ್ಯವಂಶಿ, ಫೈನಲ್‌ನಲ್ಲಿ ಲಂಕಾ 'ಎ' ಬೌಲರ್‌ಗಳು ಕನಸಿನಲ್ಲೂ ಬೆಚ್ಚಿಬೀಳುವ ಇನ್ನಿಂಗ್ಸ್ ಆಡಿ ಗಮನ ಸೆಳೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
11 ಎಸೆತಗಳಲ್ಲಿ ಅರ್ಧಶತಕ ಚಚ್ಚಿ ಹೊಸ ದಾಖಲೆ ಬರೆದ ವೈಭವ್
Image Credit : X/@WG_RumblePants

11 ಎಸೆತಗಳಲ್ಲಿ ಅರ್ಧಶತಕ ಚಚ್ಚಿ ಹೊಸ ದಾಖಲೆ ಬರೆದ ವೈಭವ್

ಹೌದು, ಶ್ರೀಲಂಕಾ 'ಎ' ವಿರುದ್ದ ಭಾನುವಾರ ನಡೆದ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಲಿಸ್ಟ್ 'ಎ' ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದರು. ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಬಿಹಾರ ಮೂಲದ ಕ್ರಿಕೆಟಿಗ ಕೇವಲ 29 ಎಸೆತಗಳಲ್ಲಿ 94 ರನ್ ಸಿಡಿಸಿದರು.

Related Articles

Related image1
'ಪ್ರತಿಭೆ ಅನ್ನೋದು ಗಿಫ್ಟ್, ಟೆಂಪರ್‌ಮೆಂಟ್ ಅನ್ನೋದು ಆಯ್ಕೆ': ವೈಭವ್ ಸೂರ್ಯವಂಶಿ ಆಟಕ್ಕೆ ಫಿದಾ ಆದ ಆನಂದ್ ಮಹೀಂದ್ರಾ!
Related image2
'ಬೇಕಿದ್ರೆ ಕಡಿಮೆ ಬೆಲೆಗೆ ಶೂ ಕೊಡ್ತೇನೆ, ಆದ್ರೆ...': ಟೆಸ್ಟ್‌ ಕ್ರಿಕೆಟ್‌ ಕಮ್‌ಬ್ಯಾಕ್ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
36
ನಾನು ಸಾಕಷ್ಟು ಏಕದಿನ ಮ್ಯಾಚ್ ಆಡಿದ್ದೇನೆ ಎಂದ ವೈಭವ್
Image Credit : X/@InqalabNewsIN

ನಾನು ಸಾಕಷ್ಟು ಏಕದಿನ ಮ್ಯಾಚ್ ಆಡಿದ್ದೇನೆ ಎಂದ ವೈಭವ್

ಪಂದ್ಯ ಮುಕ್ತಾಯದ ಬಳಿಕ ಮ್ಯಾಚ್ ಪ್ರೆಸೆಂಟೇಟರ್, ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಲಯದಲ್ಲಿರುವ ನೀವು, ಏಕದಿನ ಮಾದರಿಗೆ ಹೇಗೆ ಅಡ್ಜೆಸ್ಟ್ ಆಗಿದ್ದೀರಾ ಎಂದು ಕೇಳುತ್ತಾರೆ. ಆಗ ವೈಭವ್, ಈ ಸರಣಿಯಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ಆದರೆ ನಾನು ಸಾಕಷ್ಟು ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದೇನೆ. ಆದರೆ ನಾನು ಏಕದಿನ ಕ್ರಿಕೆಟ್ ಮ್ಯಾಚ್ ಆಡಿರುವ ಬಗ್ಗೆ ಯಾರಿಗೆ ಎಷ್ಟು ಗೊತ್ತಿದೆಯೋ ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ.

46
ಬಿಸಿಸಿಐ ಸೆಲೆಕ್ಟರ್ಸ್‌ಗೆ ವೈಭವ್ ಸೂರ್ಯವಂಶಿ ಖಡಕ್ ಸಂದೇಶ
Image Credit : X/@Maina_Singhx77

ಬಿಸಿಸಿಐ ಸೆಲೆಕ್ಟರ್ಸ್‌ಗೆ ವೈಭವ್ ಸೂರ್ಯವಂಶಿ ಖಡಕ್ ಸಂದೇಶ

ವೈಭವ್ ಸೂರ್ಯವಂಶಿಯವರ ಈ ಹೇಳಿಕೆ ಸಾಕಷ್ಟು ವೈರಲ್ ಆಗಿದ್ದು, ತಾವು ಮುಂಬರುವ ದಿನಗಳಲ್ಲಿ ಏಕದಿನ ಕ್ರಿಕೆಟ್‌ ಆಡಲು ರೆಡಿಯಿದ್ದೇನೆ ಎಂದು ಬಿಸಿಸಿಐ ಸೆಲೆಕ್ಟರ್ಸ್‌ಗೆ ಲಂಕಾ ನೆಲದಿಂದಲೇ ಖಡಕ್ ಸಂದೇಶ ರವಾನಿಸಿದ್ದಾರೆ. ಅಂದಹಾಗೆ ವೈಭವ್ ಸೂರ್ಯವಂಶಿ ಇದುವರೆಗೂ 38 ಸೀನಿಯರ್ ಹಾಗೂ ಯೂಥ್ ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ 25 ಯೂಥ್ ಏಕದಿನ ಪಂದ್ಯಗಳಲ್ಲಿ ವೈಭವ್ 3 ಶತಕಗಳ ಸಹಿತ 1,412 ರನ್ ಸಿಡಿಸಿದ್ದಾರೆ.

56
ಟೀಂ ಇಂಡಿಯಾ ಆರಂಭಿಕ ಸ್ಥಾನದ ಮೇಲೆ ಕಣ್ಣಿಟ್ಟ ವೈಭವ್
Image Credit : Getty

ಟೀಂ ಇಂಡಿಯಾ ಆರಂಭಿಕ ಸ್ಥಾನದ ಮೇಲೆ ಕಣ್ಣಿಟ್ಟ ವೈಭವ್

ವೈಭವ್ ಸೂರ್ಯವಂಶಿ, ಕಳೆದ ವರ್ಷ ನಡೆದ ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 175 ರನ್ ಸಿಡಿಸುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ಅದ್ಭುತ ಲಯದಲ್ಲಿರುವ ವೈಭವ್, ಭಾರತ ಸೀನಿಯರ್ಸ್ ಏಕದಿನ ತಂಡದ ಆರಂಭಿಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

66
ಭಾರತ ಸೀನಿಯರ್ಸ್ ತಂಡಕ್ಕೆ ಪಾದಾರ್ಪಣೆ ಮಾಡಲು ವೈಭವ್ ಸೂರ್ಯವಂಶಿ ರೆಡಿ
Image Credit : Getty

ಭಾರತ ಸೀನಿಯರ್ಸ್ ತಂಡಕ್ಕೆ ಪಾದಾರ್ಪಣೆ ಮಾಡಲು ವೈಭವ್ ಸೂರ್ಯವಂಶಿ ರೆಡಿ

ಸದ್ಯ ವೈಭವ್ ಸೂರ್ಯವಂಶಿ, ಇದೀಗ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು, ಭಾರತ ಸೀನಿಯರ್ಸ್ ತಂಡಕ್ಕೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಎಲ್ಲರ ಕಣ್ಣು ಇದೀಗ ಮತ್ತೊಮ್ಮೆ ವೈಭವ್ ಸೂರ್ಯವಂಶಿ ಮೇಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಬಿಸಿಸಿಐ

Latest Videos
Recommended Stories
Recommended image1
ಕೊಲೊಂಬೊ ಟೆಸ್ಟ್: ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು, WTC ಫೈನಲ್ ಆಸೆಯೂ ಜೀವಂತ
Recommended image2
Cricket: 149 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲೇ ಮಹಾ ದಾಖಲೆ: ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಆರು ವೇಗಿಗಳು ಇವರೇ!
Recommended image3
'Gen Z' ಮನಸ್ಸಿನಲ್ಲಿ ಯಾರಿಗೆ ಜಾಗ ; ಬಿಜೆಪಿಗೋ, ಕಾಂಗ್ರೆಸ್‌ಗೋ? ಇಲ್ಲಿದೆ ಅಸಲಿ ಲೆಕ್ಕಾಚಾರ!
Related Stories
Recommended image1
'ಪ್ರತಿಭೆ ಅನ್ನೋದು ಗಿಫ್ಟ್, ಟೆಂಪರ್‌ಮೆಂಟ್ ಅನ್ನೋದು ಆಯ್ಕೆ': ವೈಭವ್ ಸೂರ್ಯವಂಶಿ ಆಟಕ್ಕೆ ಫಿದಾ ಆದ ಆನಂದ್ ಮಹೀಂದ್ರಾ!
Recommended image2
'ಬೇಕಿದ್ರೆ ಕಡಿಮೆ ಬೆಲೆಗೆ ಶೂ ಕೊಡ್ತೇನೆ, ಆದ್ರೆ...': ಟೆಸ್ಟ್‌ ಕ್ರಿಕೆಟ್‌ ಕಮ್‌ಬ್ಯಾಕ್ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved