- Home
- Sports
- Cricket
- ಮೊದಲು ಕೆಣಕಿದ್ದೇ Virat Kohli; ರೇಷ್ಮೆ ಶಾಲಿನಲ್ಲಿ ಸುತ್ತಿ ಹೊಡೆದಿದ್ದ Travis Head ಈಗ ಹೇಳೋದು ಬೇರೆ ಕಥೆ!
ಮೊದಲು ಕೆಣಕಿದ್ದೇ Virat Kohli; ರೇಷ್ಮೆ ಶಾಲಿನಲ್ಲಿ ಸುತ್ತಿ ಹೊಡೆದಿದ್ದ Travis Head ಈಗ ಹೇಳೋದು ಬೇರೆ ಕಥೆ!
Travis Head statement on Virat Kohli: ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಮ್ಯಾಚ್‌ನಲ್ಲಿ ವಿರಾಟ್ ಕೊಹ್ಲಿ ವಾಗ್ವಾದಕ್ಕೆ ಇಳಿದಿದ್ದು ಭಾರೀ ಸುದ್ದಿ ಆಗಿತ್ತು. ಈ ಬಗ್ಗೆ ಈಗ ಟ್ರಾವಿಸ್ ಹೆಡ್ ಮಾತನಾಡಿದ್ದಾರೆ.

ಟ್ರೋಲ್ ಆಗಿದ್ದ ಆಸ್ಟ್ರೇಲಿಯಾ ಆಟಗಾರ
ಆರ್‌ಸಿಬಿ ದಿಗ್ಗಜ ವಿರಾಟ್ ಕೊಹ್ಲಿ, ಎಸ್‌ಆರ್‌ಹೆಚ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿ ಆಯ್ತು, ಆಮೇಲೆ ಟ್ರಾವಿಸ್ ಪತ್ನಿಯನ್ನು ಕೆಲವರು ಟ್ರೋಲ್ ಮಾಡಿದರು. ಅಷ್ಟೇ ಅಲ್ಲದೆ ಕೊನೆಯಲ್ಲಿ ಕೊಹ್ಲಿ ಹ್ಯಾಂಡ್‌ಶೇಕ್ ಕೂಡ ಕೊಡಲಿಲ್ಲ. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಮಾತನಾಡಿದ್ದಾರೆ.
ಅಂದು ಮೈದಾನದಲ್ಲಿ ಏನು ನಡೆಯಿತು?
ಪಂದ್ಯದಲ್ಲಿ ಎಸ್‌ಆರ್‌ಹೆಚ್ ನೀಡಿದ್ದ 256 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಈ ಘಟನೆ ಆಯ್ತು. ಆರಂಭದಲ್ಲಿ ವಿರಾಟ್ ಕೊಹ್ಲಿ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದ ಟ್ರಾವಿಸ್ ಹೆಡ್ ಅವರನ್ನು ಕೆಣಕಲು ಅಂಪೈರ್ ಮಾದರಿಯಲ್ಲಿ ಕೈ ಸನ್ನೆ ಮಾಡಿ, "ಮೈದಾನಕ್ಕೆ ಬಂದು ಬೌಲಿಂಗ್ ಮಾಡುವಂತೆ" ಸವಾಲು ಹಾಕಿದ್ದರು. ಇದು ಆರಂಭದಲ್ಲಿ ತಮಾಷೆಯಾಗಿ ಕಂಡರೂ, ಕೊಹ್ಲಿ 15 ರನ್‌ಗಳಿಗೆ ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಹೆಡ್, "ಕೊಹ್ಲಿ ನೀನು ನಾನು ಬೌಲಿಂಗ್ ಮಾಡಲು ಬರುವ ಮುನ್ನವೇ ಔಟ್ ಆಗಿದ್ದೀಯ" ಎಂದು ಟಾಂಗ್ ನೀಡಿದ್ದರು. ಈ ಮಾತಿನಿಂದ ಕೊಹ್ಲಿ ತೀವ್ರ ಸಿಟ್ಟು ಮಾಡಿಕೊಂಡಿದ್ದರು ಎನ್ನಲಾಗಿದೆ. ಗೇಮ್ ಮುಗಿದಮೇಲೆ ವಾಡಿಕೆಯಂತೆ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಳ್ಳಬೇಕು. ಆದರೆ ಕೊಹ್ಲಿ ಹ್ಯಾಂಡ್‌ಶೇಕ್ ಮಾಡಲು ರೆಡಿ ಆಗಿಲ್ಲ.
ಹೆಡ್ ಹೇಳಿದ್ದೇನು?
ಹೆಡ್ ಮಾತನಾಡಿ, "ಅದೆಲ್ಲಾ ಆಟದ ಒಂದು ಭಾಗ ಅಷ್ಟೇ. ಮೈದಾನದಲ್ಲಿ ಸ್ವಲ್ಪ ಮಟ್ಟಿನ ಸ್ಲೆಡ್ಜಿಂಗ್ ಯಾವಾಗಲೂ ನಡೆಯುತ್ತಿರುತ್ತದೆ. ಇದರಲ್ಲಿ ವೈಯಕ್ತಿಕ ದ್ವೇಷವಾಗಲಿ ಅಥವಾ ಗಂಭೀರವಾದದ್ದು ಏನೂ ಇಲ್ಲ. ನನಗೂ, ವಿರಾಟ್ ಕೊಹ್ಲಿಗೂ ಪರಸ್ಪರ ಅಪಾರ ಗೌರವವಿದೆ. ನಾವು ಮೈದಾನದ ಹೊರಗೆ ನಿಜಕ್ಕೂ ಒಳ್ಳೆಯ ಸ್ನೇಹಿತರು. ಹೌದು, ನಾವು ಕೆಲವೊಮ್ಮೆ ವಾಟ್ಸಾಪ್‌ನಲ್ಲೂ ಮಾತನಾಡುತ್ತೇವೆ" ಎಂದು ಹೇಳಿದ್ದಾರೆ.
ಮೈದಾನದಲ್ಲೇ ಬಿಟ್ಟುಬಿಡಿ
"ಇಂತಹ ಸಣ್ಣ ಕ್ಷಣಗಳನ್ನು ಒಮ್ಮೊಮ್ಮೆ ದೊಡ್ದಾಗಿ ಬಿಂಬಿಸೋದುಂಟು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮ್ಮ ಮನಸ್ಸಿನಲ್ಲಿ ಅಂತಹ ಯಾವುದೇ ಕಹಿ ಭಾವನೆಗಳಿಲ್ಲ. ಮೈದಾನದಲ್ಲಿ ನಡೆದದ್ದು ಮೈದಾನದಲ್ಲೇ ಉಳಿಯುತ್ತದೆ. ಪಂದ್ಯ ಮುಗಿದ ಮೇಲೆ ಪರಸ್ಪರ ಗೌರವ ಇದ್ದೇ ಇರುತ್ತದೆ" ಎಂದು ಹೇಳುವ ಮೂಲಕ ವಿವಾದಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.
ಕೊಹ್ಲಿಗೆ ಬೆಂಬಲ
ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸೇರಿದಂತೆ ಹಲವು ವಿಶ್ಲೇಷಕರು ಕೂಡ ಕೊಹ್ಲಿ ಅವರ ಈ ಆಕ್ರಮಣಕಾರಿ ಶೈಲಿಯನ್ನು ಬೆಂಬಲಿಸಿದ್ದು, ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿ ಇಂತಹ ಪೈಪೋಟಿ ಮತ್ತು ಭಾವನೆಗಳು ಸಹಜ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

