ಗುಜರಾತ್‌ ಟೈಟಾನ್ಸ್‌ ವಿರುದ್ಧದ ಕ್ವಾಲಿಫೈಯರ್‌-2 ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ 96 ರನ್‌ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ಶತಕದಿಂದ ವಂಚಿತರಾದರು. ಈ ಮೂಲಕ ಹಾಲಿ ಐಪಿಎಲ್ ಆವೃತ್ತಿಯಲ್ಲಿ ಮೂರನೇ ಬಾರಿಗೆ 90ರ ಗಡಿಯಲ್ಲಿ ಔಟಾದರು.

ಚಂಡೀಗಢ (ಮೇ.29): ಹಾಲಿ ವರ್ಷದ ಐಪಿಎಲ್‌ನಲ್ಲಿ ತನ್ನ ಬ್ಯಾಟಿಂಗ್‌ ಪ್ರಹಾರದ ಮೂಲಕ ವಿಶ್ವದ ಗಮನ ಸೆಳೆದಿರುವ ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಸತತ 2ನೇ ಪಂದ್ಯದಲ್ಲಿ ಶತಕದಿಂದ ವಂಚಿತರಾಗಿದ್ದಾರೆ. ಎಲಿಮಿನೇಟರ್‌ ಪಂದ್ಯದಲ್ಲಿ 97 ರನ್‌ಗೆ ಔಟಾಗಿದ್ದ ವೈಭವ್‌ ಸೂರ್ಯವಂಶಿ, ಶುಕ್ರವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಕ್ವಾಲಿಫೈಯರ್‌-2 ಪಂದ್ಯದಲ್ಲಿ ಪ್ರಬುದ್ಧ ಆಟವಾಡಿದರೂ 96 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು. ಹಾಲಿ ವರ್ಷದ ಐಪಿಎಲ್‌ನಲ್ಲಿ ಒಂದು ಶತಕ ಬಾರಿಸಿರುವ ವೈಭವ್‌ ಸೂರ್ಯವಂಶಿ, ಮೂರು ಬಾರಿ 90 ಪ್ಲಸ್‌ ರನ್‌ಗೆ ಔಟಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಜ ಯಾದವಿಂದ್ರ ಸಿಂಗ್‌ ಸ್ಟೇಡಿಯಂನಲ್ಲಿ ವಿವಾದಿತ ಟಾಸ್‌ ರಾಜಸ್ಥಾನ ರಾಯಲ್ಸ್‌ ಮೊದಲು ಬ್ಯಾಟಿಂಗ್‌ ಮಾಡುವ ನಿರ್ಧಾರ ಮಾಡಿತು. ಎಂದಿನಂತೆ ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ 6 ವಿಕೆಟ್‌ಗೆ 214 ರನ್‌ ಪೇರಿಸಿದ್ದು, ಗುಜರಾತ್‌ ಗೆಲುವಿಗೆ 215 ರನ್‌ ಟಾರ್ಗೆಟ್‌ ನೀಡಿದೆ. ಐಪಿಎಲ್‌ನಲ್ಲಿ 90 ಪ್ಲಸ್‌ ರನ್‌ಗೆ 3 ಬಾರಿ ಔಟಾದ ಪ್ಲೇಯರ್ಸ್‌ಗಳ ಪಟ್ಟಿಯಲ್ಲಿ ವೈಭವ್‌ ಸೂರ್ಯವಂಶಿ ಕೂಡ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಡೇವಿಡ್‌ ವಾರ್ನರ್‌, ಕೆಎಲ್‌ ರಾಹುಲ್‌, ಗ್ಲೆನ್‌ ಮ್ಯಾಕ್ಸ್‌ವೆಲ್,‌ ಹಾಗೂ ರುತುರಾಜ್‌ ಗಾಯಕ್ವಾಡ್‌ ಈ ಕುಖ್ಯಾತಿ ಗಳಿಸಿದ್ದರು. ಒಂದೇ ಆವೃತ್ತಿಯಲ್ಲಿ ಮೂರನೇ ಬಾರಿಗೆ 90 ಪ್ಲಸ್‌ಗೆ ಔಟಾದ ಪಟ್ಟಿಯಲ್ಲಿ ವೈಭವ್‌ ಸೂರ್ಯವಂಶಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಮಿಚೆಲ್‌ ಮಾರ್ಷ್‌ರೊಂದಿಗೆ ಸ್ಥಾನ ಪಡೆದಿದ್ದಾರೆ.

ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ ರಾಯಲ್ಸ್‌ಗೆ ಈ ಬಾರಿ ಎಂದಿನ ಆರಂಭ ಸಿಗಲಿಲ್ಲ. 9 ರನ್‌ ಗಳಿಸುವ ವೇಳೆಗಾಗಲೇ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಹಾಗೂ ವನ್‌ಡೌನ್‌ ಬ್ಯಾಟ್ಸ್‌ಮನ್‌ ಧ್ರುವ್‌ ಜುರೇಲ್‌ ವಿಕೆಟ್‌ ಕಳೆದುಕೊಂಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ವೈಭವ್‌ ಸೂರ್ಯವಂಶಿಗೆ ಜೀವದಾನ ಕೂಡ ಪಡೆದುಕೊಂಡರು. ಸಾಮಾನ್ಯವಾಗಿ ಪವರ್‌ ಪ್ಲೇ ಓವರ್‌ಗಳಲ್ಲಿ ಅಬ್ಬರಿಸುವ ರಾಜಸ್ಥಾನ ರಾಯಲ್ಸ್‌ ಆರಂಭಿಕ ವಿಕೆಟ್‌ ಕಳೆದುಕೊಂಡಿದ್ದರಿಂದ ಮೊದಲ 6 ಓವರ್‌ಗಳಲ್ಲಿ 70 ರನ್‌ ಬಾರಿಸಲಷ್ಟೇ ಸಾಧ್ಯವಾಯಿತು. ಇದರಲ್ಲಿ ಹೆಚ್ಚಿನ ಕಾಣಿಕೆ ಇದ್ದಿದ್ದು ವೈಭವ್‌ ಸೂರ್ಯವಂಶಿಯಿಂದ.

ವೈಭವ್‌ ಸೂರ್ಯವಂಶಿಗೆ ಮೂರನೇ ವಿಕೆಟ್‌ ರವೀಂದ್ರ ಜಡೇಜಾ ಕೆಲ ಹೊತ್ತು ಸಾಥ್‌ ನೀಡಿದರೂ. ಬಳಿಕ ಗಾಯದ ಕಾರಣದಿಂದಾಗೊ ಹೊರಗುಳಿದರು. ನಾಯಕ ರಿಯಾನ್‌ ಪರಾಗ್‌ರಿಂದ ದೊಡ್ಡ ಇನ್ನಿಂಗ್ಸ್‌ ಬರದ ಕಾರಣ ರಾಜಸ್ಥಾನ ತಂಡ ತನ್ನ 3ನೇ ವಿಕೆಟ್‌ಅನ್ನು 101 ರನ್‌ಗೆ ಕಳೆದುಕೊಂಡಿತು.ಇದರ ಬೆನ್ನಲ್ಲಿಯೇ ದಸುನ್‌ ಶನಕ, ಜೋಫ್ರಾ ಆರ್ಚರ್‌ ಕೂಡ ಔಟಾದಾಗ ರಾಜಸ್ಥಾನ ಪರಿಸ್ಥಿತಿ 12.4 ಓವರ್‌ಗಳಲ್ಲಿ 118 ರನ್‌ ಬಾರಿಸಿ ಶೋಚನೀಯವಾಗಿತ್ತು. ಒಂದಡೆಯಿದ್ದ ವೈಭವ್‌ ಸೂರ್ಯವಂಶಿಗೆ ಈ ಹಂತದಲ್ಲಿ ಮತ್ತೆ ಸಾಥ್‌ ನೀಡಿದ್ದಯ ರವೀಂದ್ರ ಜಡೇಜಾ.

ಜಡೇಜಾ ಅವರೊಂದಿಗೆ ಕ್ರೀಸ್‌ನಲ್ಲಿದ್ದ ಅಬ್ಬರಿಸಿದ್ದ ವೈಭವ್‌ ಸೂರ್ಯವಂಶಿ ಈಗ ಮತ್ತೊಮ್ಮೆ ಅದೇ ರೀತಿಯ ಆಟಕ್ಕೆ ಇಳಿದಿದ್ದರು. ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದು ಶತಕದ ಸನಿಹ ಧಾವಿಸಿದ್ದರು. 18ನೇ ಓವರ್‌ ಎಸೆದ ರಬಾಡ ಅವರ 2ನೇ ಎಸೆತವನ್ನು ಸಿಕ್ಸರ್‌ಗಟ್ಟಿ ಶತಕ ಬಾರಿಸುವ ಹಾದಿಯಲ್ಲಿ ವೈಭವ್‌ ಸೂರ್ಯವಂಶಿ ಥರ್ಡ್‌ಮ್ಯಾನ್‌ನಲ್ಲಿ ಮತ್ತೊಮ್ಮೆ ಅದೇ ರೀತಿಯ ಕ್ಯಾಚ್‌ ನೀಡಿ ನಿರಾಸೆಯಿಂದ ನಿರ್ಗಮಿಸಿದರು.

ಕೊನೆಯಲ್ಲಿ ರವೀಂದ್ರ ಜಡೇಜಾಗೆ ಜೊತೆಯಾಗಿದ್ದ ದೊನೊವನ್‌ ಫೆರಿರಾ 11 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್‌ಗಳಿದ್ದ ಅಜೇಯ 38 ರನ್‌ ಬಾರಿಸಿ ತಂಡದ ಮೊತ್ತವನ್ನು 214ಕ್ಕೆ ಏರಿಸುವಲ್ಲಿ ಯಶಸ್ವಿಯಾದರು. ಜಡೇಜಾ 35 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ ಇದ್ದ ಅಜೇಯ 45 ರನ್‌ ಬಾರಿಸಿದರು.