ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿಗೆ ಶಾಕ್,ಶಿಕ್ಷೆಗೆ ಗುರಿಯಾದ ಟಿಮ್ ಡೇವಿಡ್
ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿಗೆ ಶಾಕ್,ಶಿಕ್ಷೆಗೆ ಗುರಿಯಾದ ಟಿಮ್ ಡೇವಿಡ್, ಮುಂಬೈ ವಿರುದ್ದ ಗೆದ್ದ ಆರ್‌ಸಿಬಿಗೆ ಸಮಸ್ಯೆಗಳು ಎದುರಾಗಿದೆ. ಮುಂದಿನ ಪಂದ್ಯಕ್ಕೆ ಟಿಮ್ ಡೇವಿಡ್ ಲಭ್ಯರಿದ್ದಾರಾ?

ಪಂದ್ಯ ಗೆದ್ದ ಬೆನ್ನಲ್ಲೇ ಬಂತು ಶಾಕಿಂಗ್ ನ್ಯೂಸ್
ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವಿನ ಮೂಲಕ ಮತ್ತೆ ಲಯ ಕಂಡುಕೊಂಡಿದೆ. ಈ ಮೂಲಕ ಟೂರ್ನಿಯಲ್ಲಿ ಘರ್ಜನೆ ಜೊತೆಗೆ ಎದುರಾಳಿಗಳಿಗೆ ವಾರ್ನಿಂಗ್ ನೀಡಿದೆ. ಇತ್ತ ಮುಂಬೈ ಇಂಡಿಯನ್ಸ್ ಸತತ ಸೋಲಿನೊಂದಿಗೆ ಕಂಗಾಲಾಗಿದೆ. ಮುಂಬೈ ವಿರುದ್ದ ಗೆದ್ದ ಆರ್‌ಸಿಬಿಗೆ ಆತಂಕ ಎದುರಾಗಿದೆ. ಪಂದ್ಯ ಗೆದ್ದ ಬೆನ್ನಲ್ಲೇ ಆರ್‌ಸಿಬಿ ಕೀ ಪ್ಲೇಯರ್ ಟಿಮ್ ಡೇವಿಡ್ ಶಿಕ್ಷೆಗೆ ಗುರಿಯಾಗಿದ್ದಾರೆ.
17.2 ಓವರ್‌ನಲ್ಲಿ ನಡೆದಿದ್ದೇನು
ಆರ್‌ಸಿಬಿ ಬ್ಯಾಟಿಂಗ್ ನಡುವೆ ಅನಿವಾರ್ಯವಾಗಿ ಬಾಲ್ ಬದಲಿಸಬೇಕಾಗಿ ಬಂದಿತ್ತು. 17.2ನೇ ಎಸೆತದ ಬಳಿಕ ಬಾಲ್ ಬದಲಿಸಲಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಟಿಮ್ ಡೇವಿಡ್ ಬಾಲ್ ಚೆಕ್ ಮಾಡಲು ಅಂಪೈರ್‌ನಿಂದ ಪಡೆದುಕೊಂಡಿದ್ದಾರೆ. ನಿಯಮದ ಪ್ರಕಾರ ಕ್ರೀಸ್‌ನಲ್ಲಿರುವ ಕ್ರಿಕೆಟಿಗ ಬಾಲ್ ಪರಿಶೀಲಿಸಿ ಕೆಲವೇ ಸೆಕೆಂಡ್‌ಗಳಲ್ಲಿ ಹಿಂದಿರುಗಿಸಬೇಕು.
ಟಿಮ್ ಡೇವಿಡ್ ಮಾಡಿದ ತಪ್ಪೇನು?
ಟಿಮ್ ಡೇವಿಡ್ ಬಾಲ್ ಪಡೆದು ಚೆಕ್ ಮಾಡಿದ್ದಾರೆ. ಬಳಿಕ ಪದೇ ಪದೇ ಮೇಲಕ್ಕೆ ಎಸೆದು ಪರಿಶೀಲಿಸಿದ್ದಾರೆ. ಟಿಮ್ ಡೇವಿಡ್ ನಡೆಯನ್ನು ಅಂಪೈರ್ ಖಂಡಿಸಿದ್ದು ಮಾತ್ರವಲ್ಲ, ಇದಕ್ಕೆ ಅವಕಾಶವಿಲ್ಲ ಬಾಲ್ ಹಿಂದಿರುಗಿಸುವಂತೆ ಸೂಚಿಸಿದ್ದಾರೆ. ಅಂಪೈರ್ ಹತ್ತಕ್ಕೂ ಹೆಚ್ಚು ಬಾರಿ ಕೇಳಿದರೂ ಟಿಮ್ ಡೇವಿಡ್ ಬಾಲ್ ಹಿಂದಿರುಗಿಸದೆ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಐಪಿಎಲ್ ನಿಯಮ ಲೆವೆಲ್ 1 ಉಲ್ಲಂಘನೆ
ಟಿಮ್ ಡೇವಿಡ್ ಐಪಿಎಲ್ ಕೋಡ್ ಆಫ್ ಕಂಡಕ್ಟ್‌ನ 2.4 ಆರ್ಟಿಕಲ್ ಉಲ್ಲಂಘಿಸಿದ್ದಾರೆ. ಇದು ಮೊದಲ ಹಂತದ ಉಲ್ಲಂಘನೆಯಾಗಿದೆ. ಲೆವಲ್ 1 ಉಲ್ಲಂಘನೆಯಾಗಿದೆ. ಹೀಗಾಗಿ ಟಿಮ್ ಡೇವಿಡ್‌ಗೆ ಪಂದ್ಯದ ಸಂಭಾವನೆಯ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ.
ಮುಂದಿನ ಪಂದ್ಯಕ್ಕೆ ಲಭ್ಯವಿದ್ದಾರಾ ಟಿಮ್ ಡೇವಿಡ್?
ಟಿಮ್ ಡೇವಿಡ್ ಲೆವಲ್ 1 ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯ ಆಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಇದೇ ರೀತಿ ಉಲ್ಲಂಘನೆ ಮುಂದುವರಿದರೆ ದಂಡ ಕಠಿಣವಾಗಲಿದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕಾಗುತ್ತದೆ. ಪ್ರಮುಖವಾಗಿ ಟಿಮ್ ಡೇವಿಡ್ ಆರ್‌ಸಿಬಿ ತಂಡ ಕೀ ಬ್ಯಾಟರ್ ಆಗಿರುವ ಕಾರಣ ಪ್ರತಿ ಪಂದ್ಯಕ್ಕೂ ಲಭ್ಯತೆ ಪ್ರಮುಖವಾಗಿದೆ.
ತಪ್ಪು ಒಪ್ಪಿಕೊಂಡ ಟಿಮ್ ಡೇವಿಡ್
ಮ್ಯಾಚ್ ಅಂಪೈರ್ಸ್ ಪಂದ್ಯ ಮುಗಿದ ಬೆನ್ನಲ್ಲೇ ಟಿಮ್ ಡೇವಿಡ್ ವಿರುದ್ಧ ಶಿಕ್ಷೆಗೆ ಮ್ಯಾಚ್ ರೆಫ್ರಿಗೆ ಶಿಫಾರಸ್ಸು ಮಾಡಿದ್ದರು. ಇತ್ತ ಮ್ಯಾಚ್ ರೆಫ್ರಿ, ಟಿಮ್ ಡೇವಿಡ್ ನಿಯಮ ಉಲ್ಲಂಘನೆ ಕುರಿತು ವಿವರಣೆ ನೀಡಿದ್ದಾರೆ. ಇದೇ ವೇಳೆ ಟಿಮ್ ಡೇವಿಡ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.
ತಪ್ಪು ಒಪ್ಪಿಕೊಂಡ ಟಿಮ್ ಡೇವಿಡ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

