MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL Playoffs: ಕ್ಯಾಲ್ಕುಲೇಟರ್ ಟೈಂ! 7 ಮ್ಯಾಚ್ ಸೋತರೇನಂತೆ ಈಗಲೂ ಇದೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ಲೇ ಆಫ್‌ಗೇರುವ ಚಾನ್ಸ್!

IPL Playoffs: ಕ್ಯಾಲ್ಕುಲೇಟರ್ ಟೈಂ! 7 ಮ್ಯಾಚ್ ಸೋತರೇನಂತೆ ಈಗಲೂ ಇದೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ಲೇ ಆಫ್‌ಗೇರುವ ಚಾನ್ಸ್!

ಬೆಂಗಳೂರು: ಪ್ಲೇಆಫ್‌ನಲ್ಲಿ ಇರೋದು ಒಂದೇ ಒಂದು ಸ್ಪಾಟ್. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಬೇಜಾರ್ ಆಗ್ಬೇಡಿ. ನಿಮ್ಮ ಕ್ಯಾಲ್ಕುಲೇಟರ್‌ಗಳನ್ನು ಹೊರತೆಗೆಯಿರಿ. ಯಾಕಂದ್ರೆ, CSK ಪ್ಲೇಆಫ್‌ಗೆ ಹೋಗೋ ಚಾನ್ಸ್ ಇನ್ನೂ ಮುಗಿದಿಲ್ಲ. 

1 Min read
Author : Naveen Kodase
Published : May 19 2026, 06:28 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿವೆ ಮೂರು ತಂಡಗಳು
Image Credit : ANI

ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿವೆ ಮೂರು ತಂಡಗಳು

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಅಧಿಕೃತವಾಗಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿವೆ.

Add Asianetnews Kannada as a Preferred SourcegooglePreferred
26
ಇನ್ನೊಂದು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ಫೈಟ್
Image Credit : X/@CricCrazyJohns

ಇನ್ನೊಂದು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ಫೈಟ್

ಇನ್ನೊಂದು ಸ್ಥಾನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಹೀಗೆ ಈ ಐದು ತಂಡಗಳ ನಡುವೆ ಪೈಪೋಟಿ ಇದೆ. ಇನ್ನು ಟೂರ್ನಿಯಲ್ಲಿ ಏಳು ಸೋಲು ಕಂಡಿರುವ ಸಿಎಸ್‌ಕೆಗೆ ಈಗಲೂ ಪ್ಲೇ ಆಫ್‌ಗೇರುವ ಅವಕಾಶವಿದೆ.

Related Articles

Related image1
ಚೆಪಾಕ್‌ನ ಕೊನೆಯ ಐಪಿಎಲ್‌ ಪಂದ್ಯದಲ್ಲೂ ಆಡಲಿಲ್ಲ ಧೋನಿ! IPL ಗೆ ಗುಡ್‌ ಬೈ ಹೇಳ್ತಾರಾ ಮಹಿ?
Related image2
3 ತಂಡ IPL ಪ್ಲೇ-ಆಫ್‌ಗೆ ಲಗ್ಗೆ: ಇನ್ನು 1 ಸ್ಥಾನಕ್ಕೆ 5 ತಂಡಗಳ ನಡುವೆ ಬಿಗ್ ಫೈಟ್, ಯಾರಿಗಿದೆ ಬೆಸ್ಟ್ ಚಾನ್ಸ್?
36
ಮಾಡು ಇಲ್ಲವೇ ಮಡಿ ಮ್ಯಾಚ್‌ಗೆ ಸಜ್ಜಾದ ಸಿಎಸ್‌ಕೆ
Image Credit : ANI

ಮಾಡು ಇಲ್ಲವೇ ಮಡಿ ಮ್ಯಾಚ್‌ಗೆ ಸಜ್ಜಾದ ಸಿಎಸ್‌ಕೆ

ಚೆನ್ನೈ ತಂಡಕ್ಕೆ ಈಗ ಒಂದು ಮ್ಯಾಚ್ ಬಾಕಿ ಇದೆ, ಅವರ ಖಾತೆಯಲ್ಲಿ 12 ಪಾಯಿಂಟ್ಸ್ ಇದೆ. ಋತುರಾಜ್ ಗಾಯಕ್ವಾಡ್ ನಾಯಕತ್ವದ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಪಂದ್ಯ ಆಡಲಿದೆ. ಈ ಮ್ಯಾಚ್ ಗೆದ್ದರೆ ಮಾತ್ರ CSK ಪಾಯಿಂಟ್ಸ್ 14ಕ್ಕೆ ಏರುತ್ತೆ. ಒಂದು ವೇಳೆ ಸೋತರೆ, ಟೂರ್ನಿಯಿಂದ ಹೊರಬೀಳೋದು ಪಕ್ಕಾ.

46
ಬೇರೆ ತಂಡಗಳ ಫಲಿತಾಂಶಗಳ ಮೇಲೂ ಅವಲಂಬಿತವಾಗಿದೆ ಸಿಎಸ್‌ಕೆ
Image Credit : ANI

ಬೇರೆ ತಂಡಗಳ ಫಲಿತಾಂಶಗಳ ಮೇಲೂ ಅವಲಂಬಿತವಾಗಿದೆ ಸಿಎಸ್‌ಕೆ

ಇಲ್ಲಿಂದ ಮುಂದೆ ಬೇರೆ ತಂಡಗಳ ಫಲಿತಾಂಶ ಕೂಡ ಚೆನ್ನೈ ಪಾಲಿಗೆ ಮುಖ್ಯವಾಗುತ್ತೆ. ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ - ಈ ನಾಲ್ಕು ತಂಡಗಳು ಚೆನ್ನೈಗಿಂತ ಹೆಚ್ಚು ಅಥವಾ ಸಮನಾದ ಪಾಯಿಂಟ್ಸ್ ಪಡೆಯುವ ಸಾಧ್ಯತೆ ಇದೆ.

56
CSK ಪ್ಲೇ ಆಫ್‌ ಲೆಕ್ಕಾಚಾರ ಹೀಗಿದೆ:
Image Credit : ANI

CSK ಪ್ಲೇ ಆಫ್‌ ಲೆಕ್ಕಾಚಾರ ಹೀಗಿದೆ:

ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳು ತಮ್ಮ ಉಳಿದ ಎಲ್ಲಾ ಮ್ಯಾಚ್‌ಗಳನ್ನು ಸೋಲಬೇಕು. ಕೋಲ್ಕತ್ತಾ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬೇಕು. ಹೀಗಾದ್ರೆ, ಕೋಲ್ಕತ್ತಾ ಮತ್ತು ಪಂಜಾಬ್ 13 ಪಾಯಿಂಟ್ಸ್‌ನೊಂದಿಗೆ ಸೀಸನ್ ಮುಗಿಸಿದರೆ, ರಾಜಸ್ಥಾನ್ ಮತ್ತು ಡೆಲ್ಲಿ 12 ಪಾಯಿಂಟ್ಸ್‌ನಲ್ಲೇ ಉಳಿಯುತ್ತವೆ.

66
ಸಿಎಸ್‌ಕೆಗೆ ಈಗಲೂ ಇದೆ ಪ್ಲೇ ಆಫ್‌ಗೇರುವ ಚಾನ್ಸ್
Image Credit : ANI

ಸಿಎಸ್‌ಕೆಗೆ ಈಗಲೂ ಇದೆ ಪ್ಲೇ ಆಫ್‌ಗೇರುವ ಚಾನ್ಸ್

ಆಗ, 14 ಪಾಯಿಂಟ್ಸ್‌ನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಸುಲಭವಾಗಿ ಪ್ಲೇಆಫ್‌ಗೆ ಎಂಟ್ರಿ ಕೊಡಬಹುದು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ವಿರುದ್ಧ ಗೆದ್ದರೂ, ಉತ್ತಮ ನೆಟ್ ರನ್‌ರೇಟ್ CSK ಕೈಹಿಡಿಯುವ ಸಾಧ್ಯತೆ ಇದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಚೆನ್ನೈ ಸೂಪರ್ ಕಿಂಗ್ಸ್

Latest Videos
Recommended Stories
Recommended image1
'ಮುಂದಿನ ವರ್ಷ ನೀನು ಆಡಲೇಬೇಕು'; ಧೋನಿಗೆ ಸುರೇಶ್ ರೈನಾ ಒತ್ತಾಯ, 'ತಲಾ' ಕೊಟ್ಟ ಉತ್ತರಕ್ಕೆ ಫ್ಯಾನ್ಸ್ ಶಾಕ್!
Recommended image2
ಚೆಪಾಕ್‌ನ ಕೊನೆಯ ಐಪಿಎಲ್‌ ಪಂದ್ಯದಲ್ಲೂ ಆಡಲಿಲ್ಲ ಧೋನಿ! IPL ಗೆ ಗುಡ್‌ ಬೈ ಹೇಳ್ತಾರಾ ಮಹಿ?
Recommended image3
ಅಫ್ಘಾನಿಸ್ತಾನ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಟೆಸ್ಟ್‌ ತಂಡದಲ್ಲಿ ಮೂವರು ಕನ್ನಡಿಗರು; 3 ವರ್ಷಗಳ ಬಳಿಕ ಏಕದಿನಕ್ಕೆ ಇಶಾನ್‌!
Related Stories
Recommended image1
ಚೆಪಾಕ್‌ನ ಕೊನೆಯ ಐಪಿಎಲ್‌ ಪಂದ್ಯದಲ್ಲೂ ಆಡಲಿಲ್ಲ ಧೋನಿ! IPL ಗೆ ಗುಡ್‌ ಬೈ ಹೇಳ್ತಾರಾ ಮಹಿ?
Recommended image2
3 ತಂಡ IPL ಪ್ಲೇ-ಆಫ್‌ಗೆ ಲಗ್ಗೆ: ಇನ್ನು 1 ಸ್ಥಾನಕ್ಕೆ 5 ತಂಡಗಳ ನಡುವೆ ಬಿಗ್ ಫೈಟ್, ಯಾರಿಗಿದೆ ಬೆಸ್ಟ್ ಚಾನ್ಸ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved