MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 2027ರ ವಿಶ್ವಕಪ್ ಭವಿಷ್ಯದ ಕುರಿತು ಕೊನೆಗೂ ಮೌನ ಮುರಿದ ಬಿಸಿಸಿಐ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 2027ರ ವಿಶ್ವಕಪ್ ಭವಿಷ್ಯದ ಕುರಿತು ಕೊನೆಗೂ ಮೌನ ಮುರಿದ ಬಿಸಿಸಿಐ

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡ್ತಾರಾ? ಇಬ್ಬರನ್ನು ಬಿಸಿಸಿಐ ಆಯ್ಕೆ ಮಾಡುತ್ತಾ? ಈ ಕುರಿತು ಹಲವು ಪ್ರಶ್ನೆಗಳಿಗೆ ಕೊನೆಗೂ ಬಿಸಿಸಿಐ ಮೌನ ಮುರಿದಿದೆ. ಇವರ ಭವಿಷ್ಯ ಏನು? 

2 Min read
Author : Chethan Kumar
Published : Jun 19 2026, 08:07 PM IST
Share this Photo Gallery
  • FB
  • TW
  • Linkdin
  • Whatsapp
16
ರೋಹಿತ್ ಶರ್ಮಾ, ಕೊಹ್ಲಿ ಭವಿಷ್ಯವೇನು?
Image Credit : our own

ರೋಹಿತ್ ಶರ್ಮಾ, ಕೊಹ್ಲಿ ಭವಿಷ್ಯವೇನು?

ಟೀಂ ಇಂಡಿಯಾ ಈಗಾಗಲೇ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿದೆ. ಆಟಗಾರರ ಆಯ್ಕೆ ಕಸರತ್ತುಗಳು ಶುರುವಾಗಿದೆ. ಇನ್ನು ಒಂದೂವರೆ ವರ್ಷವಿರುವ ವಿಶ್ವಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಅನ್ನೋ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಈ ಕುರಿತು ಕೊನೆಗೂ ಬಿಸಿಸಿಐ ಮೌನ ಮುರಿದಿದೆ. ಹಲವು ಪ್ರಶ್ನೆಗಳಿಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದೇವಜಿತ್ ಹೇಳಿದ್ದೇನು?
Image Credit : ANI

ದೇವಜಿತ್ ಹೇಳಿದ್ದೇನು?

ರೋಹಿತ್ ಶರ್ಮಾ ವಯಸ್ಸು 39, ಕೊಹ್ಲಿ ವಯಸ್ಸು 37. ಇಬ್ಬರು ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಟಿ20 ಹಾಗೂ ಟೆಸ್ಟ್ ಮಾದರಿಯಿಂದ ನಿವೃತ್ತರಾಗಿದ್ದಾರೆ. 2027ರ ವಿಶ್ವಕಪ್ ತಂಡದಲ್ಲಿ ಕೊಹ್ಲಿ, ರೋಹಿತ್ ಸ್ಥಾನದ ಕುರಿತು ಪ್ರತಿಕ್ರಿಯಿಸಿದ ದೇವಜಿತ್, ಇಬ್ಬರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಜೊತೆಗೆ ಇಬ್ಬರೂ 2027ರ ವಿಶ್ವಕಪ್ ಆಡಲು ಬಯಸಿದ್ದಾರೆ. ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ದೇವಜಿತ್ ಹೇಳಿದ್ದಾರೆ. ಇದೇ ವೇಳೆ ತಂಡದ ಆಯ್ಕೆ ಕುರಿತು ಕೆಲ ಮಾಹಿತಿ ನೀಡಿದ್ದಾರೆ.

Related Articles

Related image1
ಆಫ್ಘಾನ್ ವಿರುದ್ದ ಪಂದ್ಯದಲ್ಲಿ ಇತಿಹಾಸ ರಚಿಸಿದ ರೋಹಿತ್ ಶರ್ಮಾ, ಭಾರತೀಯ ಕ್ರಿಕೆಟ್‌ನಲ್ಲಿ ಮೈಲಿಗಲ್ಲು
Related image2
ವಿರಾಟ್ ಕೊಹ್ಲಿ ಇನ್ನೆಷ್ಟು ಐಪಿಎಲ್ ಟೂರ್ನಿ ಆಡ್ತಾರೆ? ಕೊನೆಗೂ ಬೆಂಗಳೂರು ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ RCB CEO
36
ಆಯ್ಕೆಯಾಗ್ತಾರ ಕೊಹ್ಲಿ, ರೋಹಿತ್ ಶರ್ಮಾ
Image Credit : our own

ಆಯ್ಕೆಯಾಗ್ತಾರ ಕೊಹ್ಲಿ, ರೋಹಿತ್ ಶರ್ಮಾ

2027ರ ವಿಶ್ವಕಪ್ ಟೂರ್ನಿಗೆ ತಂಡ ಆಯ್ಕೆಯಲ್ಲಿ ಹಿರಿಯ ಆಟಗಾರರನ್ನು ಪರಿಗಣಿಸುವ ಕುರಿತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ತಂಡದ ಕೋಚ್ ಗೌತಮ್ ಗಂಭೀರ್ ನಿರ್ಧರಿಸುತ್ತಾರೆ. ಹೀಗಾಗಿ ಇವರ ಆಯ್ಕೆ ಕುರಿತು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ದೇವಜಿತ್ ಹೇಳಿದ್ದಾರೆ.

46
ಕೆಲ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದ ದೇವಜಿತ್
Image Credit : our own

ಕೆಲ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದ ದೇವಜಿತ್

ಬಿಸಿಸಿಐನಲ್ಲಿ ಚರ್ಚೆಯಾಗಿರುವ ವಿಚಾರಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ಮಾಧ್ಯಮಕ್ಕೆ ಬಹಿರಂಗಪಡಿಸು ಅಧಿಕಾರ ನನಗಿಲ್ಲ. ಕೆಲ ಚರ್ಚೆಗಳು ನಡೆದಿದೆ. ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಈ ಕುರಿತು ಬಿಸಿಸಿಐ ಬಹಿರಂಗವಾಗಿ ಯಾವುದೇ ಹೇಳಿಕ ನೀಡುವ ಸಾಧ್ಯತೆ ಇಲ್ಲ ಎಂದು ದೇವಜಿತ್ ತಲೆಗೆ ಹುಳ ಬಿಟ್ಟಿದ್ದಾರೆ.

56
ವೈಟ್ ಬಾಲ್ ಲೆಜೆಂಡ್ಸ್‌ಗೆ ಸ್ಥಾನ ಇದೆಯಾ
Image Credit : Getty

ವೈಟ್ ಬಾಲ್ ಲೆಜೆಂಡ್ಸ್‌ಗೆ ಸ್ಥಾನ ಇದೆಯಾ

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರು ವೈಟ್ ಬಾಲ್ ಲೆಜೆಂಡ್ಸ್. ಇವರಿಗೆ 2027ರ ವಿಶ್ವಕಪ್ ತಂಡದಲ್ಲಿ ಸ್ಥಾನವಿದೆಯಾ ಅನ್ನೋ ಕುರಿತು ಆಯ್ಕೆ ಪ್ರಕ್ರಿಯೆ ವೇಳೆ ಬಿಸಿಸಿಐ ಅರ್ಹ ವಿಭಾಗಳು, ಸಮಿತಿ ನಿರ್ಧರಸಿಲಿದೆ ಎಂದು ದೇವಜಿತ್ ಹೇಳಿದ್ದಾರೆ. ಈ ಮೂಲಕ ಕೊಹ್ಲಿ ಹಾಗೂ ರೋಹಿತ್ 2027ರ ಏಕದಿನ ವಿಶ್ವಕಪ್ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡಲು ದೇವಜಿತ್ ನಿರಾಕರಿಸಿದ್ದಾರೆ.

66
ಫಾರ್ಮ್ ಹಾಗೂ ಫಿಟ್ನೆಸ್
Image Credit : Getty

ಫಾರ್ಮ್ ಹಾಗೂ ಫಿಟ್ನೆಸ್

ಐಪಿಎಲ್ ಟೂರ್ನಿ ಬಳಿಕ ರೋಹಿತ್ ಶರ್ಮಾ ಆಫ್ಘಾನಿಸ್ತಾನ ವಿರುದ್ದಧ ಏಕದಿನ ಸರಣಿ ಆಡುತ್ತಿದ್ದರೆ, ವಿರಾಟ್ ಕೊಹ್ಲಿ ಇಂಜುರಿ ಕಾರಣದಿಂದ ವಿಶ್ರಾಂತಿ ಪಡೆದಿದ್ದಾರೆ. ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟರ್ ಅನ್ನೋದರಲ್ಲಿ ಅನುಮಾನವಿಲ್ಲ. ಆದರೆ ಇನ್ನೂ ಒಂದೂವರೆ ವರ್ಷ ಇದೇ ಫಿಟ್ನೆಸ್, ಇದೇ ಫಾರ್ಮ್ ಉಳಿಸಿಕೊಳ್ಳುತ್ತಾರಾ ಅನ್ನೋ ಪ್ರಶ್ನೆಯೂ ಎದುರಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬಿಸಿಸಿಐ
ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ
ವಿಶ್ವಕಪ್
ಟೀಮ್ ಇಂಡಿಯಾ

Latest Videos
Recommended Stories
Recommended image1
ವಿರಾಟ್ ಕೊಹ್ಲಿ ಇನ್ನೆಷ್ಟು ಐಪಿಎಲ್ ಟೂರ್ನಿ ಆಡ್ತಾರೆ? ಕೊನೆಗೂ ಬೆಂಗಳೂರು ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ RCB CEO
Recommended image2
ಭಾರತ ಮಹಿಳಾ ತಂಡದ ಟಾಪ್ 5 ಮೋಸ್ಟ್ ಬ್ಯೂಟಿಫುಲ್ ಕ್ರಿಕೆಟರ್ಸ್, ಲಿಸ್ಟ್‌ನಲ್ಲಿದ್ದಾರೆ ನ್ಯಾಶಲ್ ಕ್ರಶ್
Recommended image3
ಮಹಿಳಾ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರಿನ ಪಂದ್ಯಕ್ಕೂ ಮುನ್ನ ಶ್ರೇಯಾಂಕ ಪಾಟೀಲ್ ಟೂರ್ನಿಯಿಂದಲೇ ಔಟ್! RCB ಆಟಗಾರ್ತಿ ಸೇರ್ಪಡೆ
Related Stories
Recommended image1
ಆಫ್ಘಾನ್ ವಿರುದ್ದ ಪಂದ್ಯದಲ್ಲಿ ಇತಿಹಾಸ ರಚಿಸಿದ ರೋಹಿತ್ ಶರ್ಮಾ, ಭಾರತೀಯ ಕ್ರಿಕೆಟ್‌ನಲ್ಲಿ ಮೈಲಿಗಲ್ಲು
Recommended image2
ವಿರಾಟ್ ಕೊಹ್ಲಿ ಇನ್ನೆಷ್ಟು ಐಪಿಎಲ್ ಟೂರ್ನಿ ಆಡ್ತಾರೆ? ಕೊನೆಗೂ ಬೆಂಗಳೂರು ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ RCB CEO
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved