MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವಿರಾಟ್ ಕೊಹ್ಲಿ ಇನ್ನೆಷ್ಟು ಐಪಿಎಲ್ ಟೂರ್ನಿ ಆಡ್ತಾರೆ? ಕೊನೆಗೂ ಬೆಂಗಳೂರು ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ RCB CEO

ವಿರಾಟ್ ಕೊಹ್ಲಿ ಇನ್ನೆಷ್ಟು ಐಪಿಎಲ್ ಟೂರ್ನಿ ಆಡ್ತಾರೆ? ಕೊನೆಗೂ ಬೆಂಗಳೂರು ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ RCB CEO

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಇನ್ನೆಷ್ಟು ವರ್ಷ ಐಪಿಎಲ್ ಆಡುತ್ತಾರೆ ಎನ್ನುವ ಕುತೂಹಲಕ್ಕೆ ಆರ್‌ಸಿಬಿ ತಂಡದ ಸಿಇಒ ತೆರೆ ಎಳೆದಿದ್ದಾರೆ. 

2 Min read
Author : Naveen Kodase
Published : Jun 19 2026, 06:27 PM IST
Share this Photo Gallery
  • FB
  • TW
  • Linkdin
  • Whatsapp
16
ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ
Image Credit : ANI

ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ

17 ಐಪಿಎಲ್ ಸೀಸನ್‌ನಲ್ಲಿ ಟ್ರೋಫಿ ಬರ ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದೆ. ಇನ್ನು ಕಳೆದೆರಡು ಸೀಸನ್‌ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಲು ಕಾರಣ ವಿರಾಟ್ ಕೊಹ್ಲಿ. ಯಾಕೆಂದರೆ ಕೊಹ್ಲಿ ಕಳೆದೆರಡು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕೊಹ್ಲಿ ಐಪಿಎಲ್ ಭವಿಷ್ಯದ ಬಗ್ಗೆ ತುಟಿಬಿಚ್ಚಿದ ಆರ್‌ಸಿಬಿ ಸಿಇಒ
Image Credit : X

ಕೊಹ್ಲಿ ಐಪಿಎಲ್ ಭವಿಷ್ಯದ ಬಗ್ಗೆ ತುಟಿಬಿಚ್ಚಿದ ಆರ್‌ಸಿಬಿ ಸಿಇಒ

ಈಗಾಗಲೇ ಭಾರತ ಪರ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿರುವ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದ ಸಂಧ್ಯಾಕಾಲದಲ್ಲಿರುವ ಕೊಹ್ಲಿ ಇನ್ನೆಷ್ಟು ವರ್ಷಗಳ ಕಾಲ ಐಪಿಎಲ್ ಆಡಬಹುದು ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆಯಾಗಿತ್ತು. ಈ ಬಗ್ಗೆ ಆರ್‌ಸಿಬಿಯ ಕಾರ್ಯನಿರ್ವಾಹಕ ಅಧಿಕಾರಿ ಕೊನೆಗೂ ತುಟಿಬಿಚ್ಚಿದ್ದಾರೆ.

Related Articles

Related image1
ಮಹಿಳಾ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರಿನ ಪಂದ್ಯಕ್ಕೂ ಮುನ್ನ ಶ್ರೇಯಾಂಕ ಪಾಟೀಲ್ ಟೂರ್ನಿಯಿಂದಲೇ ಔಟ್! RCB ಆಟಗಾರ್ತಿ ಸೇರ್ಪಡೆ
Related image2
IPL 2027 ಆರಂಭ ಯಾವಾಗಿನಿಂದ? ಫೈನಲ್ ಮ್ಯಾಚ್ ಯಾವಾಗ? ಮುಂಬರುವ ಐಪಿಎಲ್‌ನ ಮಹತ್ವದ ಅಪ್‌ಡೇಟ್ಸ್‌ ಇಲ್ಲಿದೆ
36
ಕೊಹ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ರಾಜೇಶ್ ಮೆನನ್
Image Credit : ANI

ಕೊಹ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ರಾಜೇಶ್ ಮೆನನ್

ಈ ಕುರಿತಂತೆ ಮಾತನಾಡಿರುವ ಆರ್‌ಸಿಬಿ ಸಿಇಒ ರಾಜೇಶ್ ಮೆನನ್, ವಿರಾಟ್ ಕೊಹ್ಲಿ ಏನಿಲ್ಲವೆಂದರೂ ಕನಿಷ್ಟಪಕ್ಷ ಮೂರರಿಂದ ನಾಲ್ಕು ವರ್ಷಗಳ ಕಾಲ ಐಪಿಎಲ್ ಆಡಲಿದ್ದಾರೆ ಎಂದಿದ್ದಾರೆ. ಇದು ಕೊಹ್ಲಿ ಅಭಿಮಾನಿಗಳ ಪಾಲಿಗೆ ನಿಜಕ್ಕೂ ಸಿಹಿಸುದ್ದಿಯಾಗಲಿದೆ ಎಂದರೆ ಅತಿಶಯೋಕ್ತಿಯಲ್ಲ.

46
ಕೊಹ್ಲಿ ಮೂರರಿಂದ ನಾಲ್ಕು ವರ್ಷ ಐಪಿಎಲ್ ಆಡ್ತಾರೆ
Image Credit : IPL MEDIA

ಕೊಹ್ಲಿ ಮೂರರಿಂದ ನಾಲ್ಕು ವರ್ಷ ಐಪಿಎಲ್ ಆಡ್ತಾರೆ

'ವಿರಾಟ್ ಕೊಹ್ಲಿ ಖಂಡಿತವಾಗಿಯೂ ಮುಂದಿನ ಮೂರರಿಂದ ನಾಲ್ಕು ವರ್ಷಗಳ ಕಾಲ ಐಪಿಎಲ್ ಆಡಲಿದ್ದಾರೆ. ಅವರು ತುಂಬಾನೆ ಫಿಟ್ ಆಗಿದ್ದು, ರನ್ ಗಳಿಸುವ ಹಸಿವು ಇನ್ನೂ ಇದೆ. ಈ ಬಾರಿಯ ಐಪಿಎಲ್‌ನಲ್ಲೂ ಅವರು ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರು ಇನ್ನೂ ಕೆಲವು ವರ್ಷಗಳ ಕಾಲ ಐಪಿಎಲ್ ಆಡುವುದಕ್ಕೆ ಯಾವುದೇ ತೊಂದರೆಯಿಲ್ಲ' ಎಂದು ರಾಜೇಶ್ ಮೆನನ್ ಹೇಳಿದ್ದಾರೆ

56
ಒಂದೇ ತಂಡದ 19 ಸೀಸನ್ ಐಪಿಎಲ್ ಆಡಿದ ಏಕೈಕ ಆಟಗಾರ
Image Credit : ANI

ಒಂದೇ ತಂಡದ 19 ಸೀಸನ್ ಐಪಿಎಲ್ ಆಡಿದ ಏಕೈಕ ಆಟಗಾರ

ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, ಒಂದೇ ತಂಡದ ಪರ ಅತಿಹೆಚ್ಚು ಐಪಿಎಲ್ ಸೀಸನ್ ಆಡಿದ ಆಟಗಾರ ಎನ್ನುವ ವಿಶಿಷ್ಠ ಹೆಗ್ಗಳಿಕೆ ಕೊಹ್ಲಿಗಿದೆ. ಇದೀಗ ವಿರಾಟ್ ಕೊಹ್ಲಿ ಬಹುತೇಕ ಐಪಿಎಲ್‌ನಲ್ಲಿ 20ನೇ ಬಾರಿ ಆರ್‌ಸಿಬಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

66
ಗಾಳಿ ಸುದ್ದಿಗೆ ತೆರೆ ಎಳೆದ ಆರ್‌ಸಿಬಿ ಸಿಇಒ
Image Credit : ANI

ಗಾಳಿ ಸುದ್ದಿಗೆ ತೆರೆ ಎಳೆದ ಆರ್‌ಸಿಬಿ ಸಿಇಒ

ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಐಪಿಎಲ್‌ಗೆ ವಿದಾಯ ಹೇಳಿ, ಕುಟುಂಬದ ಜತೆ ಕ್ವಾಲಿಟಿ ಸಮಯ ಕಳೆಯಲು ಮುಂದಾಗಿದ್ದಾರೆ ಎನ್ನುವ ರೂಮರ್ಸ್ ನಡುವೆ ಇದೀಗ ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಅವರ ಹೇಳಿಕೆ ಕೊಹ್ಲಿ ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ವಿರಾಟ್ ಕೊಹ್ಲಿ

Latest Videos
Recommended Stories
Recommended image1
ಭಾರತ ಮಹಿಳಾ ತಂಡದ ಟಾಪ್ 5 ಮೋಸ್ಟ್ ಬ್ಯೂಟಿಫುಲ್ ಕ್ರಿಕೆಟರ್ಸ್, ಲಿಸ್ಟ್‌ನಲ್ಲಿದ್ದಾರೆ ನ್ಯಾಶಲ್ ಕ್ರಶ್
Recommended image2
ಮಹಿಳಾ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರಿನ ಪಂದ್ಯಕ್ಕೂ ಮುನ್ನ ಶ್ರೇಯಾಂಕ ಪಾಟೀಲ್ ಟೂರ್ನಿಯಿಂದಲೇ ಔಟ್! RCB ಆಟಗಾರ್ತಿ ಸೇರ್ಪಡೆ
Recommended image3
ʻಧೈರ್ಯವಿದ್ರೆ ರಿಂಗ್ ಗೆ ಬನ್ನಿʼ ಹರ್ಭಜನ್ ಸಿಂಗ್‌ ಗೆ ಬಹಿರಂಗ ಸವಾಲು ಹಾಕಿದ ಶ್ರೀಶಾಂತ್
Related Stories
Recommended image1
ಮಹಿಳಾ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರಿನ ಪಂದ್ಯಕ್ಕೂ ಮುನ್ನ ಶ್ರೇಯಾಂಕ ಪಾಟೀಲ್ ಟೂರ್ನಿಯಿಂದಲೇ ಔಟ್! RCB ಆಟಗಾರ್ತಿ ಸೇರ್ಪಡೆ
Recommended image2
IPL 2027 ಆರಂಭ ಯಾವಾಗಿನಿಂದ? ಫೈನಲ್ ಮ್ಯಾಚ್ ಯಾವಾಗ? ಮುಂಬರುವ ಐಪಿಎಲ್‌ನ ಮಹತ್ವದ ಅಪ್‌ಡೇಟ್ಸ್‌ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved