- Home
- Sports
- Cricket
- ಮದುವೆ ಮುಂದೂಡಿಕೆ ಬೆನ್ನಲ್ಲೇ ಪಲಾಶ್ ಅನ್‌ಫಾಲೋ ಮಾಡಿದ ಸ್ಮೃತಿ ಫ್ರೆಂಡ್ಸ್, ಬೇರೆ ಏನೋ ಕಾರಣವಿದೆಯೆಂದ ನೆಟ್ಟಿಗರು
ಮದುವೆ ಮುಂದೂಡಿಕೆ ಬೆನ್ನಲ್ಲೇ ಪಲಾಶ್ ಅನ್‌ಫಾಲೋ ಮಾಡಿದ ಸ್ಮೃತಿ ಫ್ರೆಂಡ್ಸ್, ಬೇರೆ ಏನೋ ಕಾರಣವಿದೆಯೆಂದ ನೆಟ್ಟಿಗರು
Radha Yadav unfollows Palaash Muchhal: ಇಷ್ಟೆಲ್ಲಾ ಗೊಂದಲಗಳು ಆರಂಭವಾಗುವ ಮುನ್ನವೇ ಸ್ಮೃತಿ ಮಂಧಾನಾ ತಮ್ಮ ಮದುವೆ ಮುಂದೂಡಲ್ಪಟ್ಟ ಮರುದಿನ ಯಾರೂ ನೀರಿಕ್ಷೆ ಮಾಡದೆ ಇರುವಂತಹ ಕೆಲಸ ಮಾಡಿದರು.

ನ. 23 ರಂದು ನಿಗದಿಯಾಗಿತ್ತು ವಿವಾಹ
ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ನವೆಂಬರ್ 23 ರಂದು ನಿಗದಿಯಾಗಿತ್ತು. ಆದರೆ ಮದುವೆಗೆ ಸ್ವಲ್ಪೇ ಸಮಯದ ಮೊದಲು ಸ್ಮೃತಿ ತಂದೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕಾರಣದಿಂದಾಗಿ ವಿವಾಹ ಸಮಾರಂಭ ಮುಂದೂಡಲಾಯಿತು.
ಊಹಾಪೋಹಗಳು ಪ್ರಾರಂಭ
ಆ ನಂತರ ಪಲಾಶ್ ಮುಚ್ಚಲ್ ಅವರನ್ನು ಸಹ ಅನಾರೋಗ್ಯದ ಕಾರಣ ಸಾಂಗ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಪಲಾಶ್ ಪ್ರಸ್ತುತ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸರಣಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಊಹಾಪೋಹಗಳು ಪ್ರಾರಂಭವಾಗಿವೆ.
ಅಧಿಕೃತ ದೃಢೀಕರಣವಿಲ್ಲ
ಮದುವೆ ಮುಂದೂಡಲ್ಪಟ್ಟ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವಿಷಯವೊಂದು ಚರ್ಚೆಯಾಗುತ್ತಿದೆ. ಸ್ಮೃತಿ ಮಂಧಾನ ಅವರ ಆಪ್ತ ಮಿತ್ರರಾದ ಭಾರತೀಯ ಸ್ಪಿನ್ನರ್ ರಾಧಾ ಯಾದವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪಲಾಶ್ ಮುಚ್ಚಲ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ಬಳಕೆದಾರರು ಅನೇಕ ಪೋಸ್ಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಈ ಸುದ್ದಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.
Smriti Mandhana best friend Radha Yadav unfollowed Palash Muchhal. pic.twitter.com/g1oEA1sKwa
— Rahul kumar (@Kumar_rahul_raj) November 25, 2025
ಇಬ್ಬರು ಮಾತ್ರ ಅನ್‌ಫಾಲೋ ಮಾಡಿಲ್ಲ
ರಾಧಾ ಯಾದವ್ ಜೊತೆಗೆ ಜೆಮಿಮಾ ರೋಡ್ರಿಗಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಮಂಧಾನ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ರಾಧಾ ಯಾದವ್ ಪಲಾಶ್‌ರನ್ನು ಅನ್‌ಫಾಲೋ ಮಾಡಿದ್ದರೂ ಇತರ ಇಬ್ಬರು ಕ್ರಿಕೆಟಿಗರು ಇನ್ನೂ ಪಲಾಶ್ ಅವರನ್ನು ಫಾಲೋ ಮಾಡುತ್ತಿದ್ದಾರೆ.
ಪ್ರಶ್ನೆ ಕೇಳಿದ ನೆಟಿಜನ್ಸ್
ಇಷ್ಟೆಲ್ಲಾ ಗೊಂದಲಗಳು ಆರಂಭವಾಗುವ ಮುನ್ನವೇ ಸ್ಮೃತಿ ಮಂಧಾನಾ ತಮ್ಮ ಮದುವೆ ಮುಂದೂಡಲ್ಪಟ್ಟ ಮರುದಿನ ಯಾರೂ ನಿರೀಕ್ಷಿಸದೆ ಇರುವಂತಹ ಕೆಲಸ ಮಾಡಿದರು. ಅದೇ ವಿವಾಹ ಪೂರ್ವ ಸಮಾರಂಭದ ಸಮಯದಲ್ಲಿ ಪೋಸ್ಟ್ ಮಾಡಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಡಿಲೀಟ್ ಮಾಡಿದರು. ಈ ನಡೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಅನುಮಾನಗಳನ್ನು ಹುಟ್ಟುಹಾಕಿತು. ಇದರಿಂದ ಏನಾಯಿತು? ಮದುವೆಯಲ್ಲಿ ಏನಾದರೂ ಸಮಸ್ಯೆಗಳಿವೆಯೇ? ನೆಟಿಜನ್‌ಗಳು ವಿವಿಧ ಪ್ರಶ್ನೆಗಳನ್ನು ಎತ್ತಲು ಪ್ರಾರಂಭಿಸಿದರು.
ಪಲಾಶ್ ಮುಚ್ಚಲ್ ತಾಯಿ ಹೇಳಿದ್ದೇನು?
ಈ ಊಹಾಪೋಹಗಳ ನಡುವೆ ಪಲಾಶ್ ಮುಚ್ಚಲ್ ತಾಯಿ ಅಮಿತ್ ಮುಚ್ಚಲ್ ಮಾಧ್ಯಮಗಳೊಂದಿಗೆ ಮಾತನಾಡಿ ಸತ್ಯವನ್ನು ಬಹಿರಂಗಪಡಿಸಿದರು. ಮಂಧಾನ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದಾಗ ಪಲಾಶ್ ಮೊದಲು ಮದುವೆಯನ್ನು ನಿಲ್ಲಿಸಲು ನಿರ್ಧರಿಸಿದರು ಎಂದು ಹೇಳಿದರು. "ಪಲಾಶ್ ಅವರಿಗೆ ಮಂಧಾನ ಅವರ ತಂದೆಯೊಂದಿಗೆ ಹೆಚ್ಚಿನ ಬಾಂಧವ್ಯವಿದೆ. ಅವರು ಸ್ಮೃತಿಗಿಂತಲೂ ಹತ್ತಿರ. ಅದಕ್ಕಾಗಿಯೇ ಸ್ಮೃತಿ ಹೇಳುವ ಮೊದಲೇ ಅವರ ತಂದೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಮದುವೆಯಾಗದಿರಲು ಪಲಾಶ್ ನಿರ್ಧರಿಸಿದರು" ಎಂದು ಅಮಿತ್ ತಿಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

