Dhurandhar 2 ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ: ಯಶ್ ಮಾತಿನ ಮರ್ಮವೇನು?
ಯಶ್ ಯಾವತ್ತೂ ಧುರಂಧರ್ 2 ಸಿನಿಮಾ ಟೀಮ್ ಅನ್ನು ವೈರಿಯಂತೆ ಕಂಡಿಲ್ಲ. ಬದಲಿಗೆ ಅವರು ಸಿನಿಮಾ ನೋಡಲು ಕುತೂಹಲದಿಂದಿದ್ದರು. ಆ ಸಿನಿಮಾದ ತೀವ್ರ ಸ್ಪರ್ಧೆಗೆ ಹೆದರಿ ಟಾಕ್ಸಿಕ್ ಸಿನಿಮಾ ಮುಂದಕ್ಕೆ ಹೋಗಿದೆ ಅನ್ನುವುದು ಸತ್ಯಕ್ಕೆ ದೂರದ ಮಾತು.

ಯಾವುದೇ ಭಿನ್ನಭಿಪ್ರಾಯವಿಲ್ಲ
ಧುರಂಧರ್ 2 ಸಿನಿಮಾ ನೋಡಲು ತಾನು ಉತ್ಸುಕನಾಗಿರುವುದಾಗಿ ಯಶ್ ಹೇಳಿದ್ದಾರೆ. ಧುರಂಧರ್ 2 ಚಿತ್ರತಂಡ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಭಿಪ್ರಾಯವಿಲ್ಲ.
ವೈರಿಯಂತೆ ಕಂಡಿಲ್ಲ
ದ್ವೇಷ, ಸ್ಪರ್ಧೆ ಇತ್ಯಾದಿಗಳೆಲ್ಲಾ ಹೊರಗಿನವರ ಸೃಷ್ಟಿಯಷ್ಟೇ ಎಂದೂ ಅವರು ಹೇಳಿದ್ದಾರೆ. ಯಶ್ ಆಪ್ತರು ಈ ಬಗ್ಗೆ ಹೇಳಿಕೆ ನೀಡಿ, ಯಶ್ ಯಾವತ್ತೂ ಧುರಂಧರ್ 2 ಸಿನಿಮಾ ಟೀಮ್ ಅನ್ನು ವೈರಿಯಂತೆ ಕಂಡಿಲ್ಲ.
ಸತ್ಯಕ್ಕೆ ದೂರದ ಮಾತು
ಬದಲಿಗೆ ಅವರು ಸಿನಿಮಾ ನೋಡಲು ಕುತೂಹಲದಿಂದಿದ್ದರು. ಆ ಸಿನಿಮಾದ ತೀವ್ರ ಸ್ಪರ್ಧೆಗೆ ಹೆದರಿ ಟಾಕ್ಸಿಕ್ ಸಿನಿಮಾ ಮುಂದಕ್ಕೆ ಹೋಗಿದೆ ಅನ್ನುವುದು ಸತ್ಯಕ್ಕೆ ದೂರದ ಮಾತು.
ಬ್ಯಾನ್ ಮಾಡಿದ್ದಾರೆ
ಮಧ್ಯಪ್ರಾಚ್ಯದ ಮುಸ್ಲಿಂ ರಾಷ್ಟ್ರಗಳಲ್ಲಿ ಧುರಂಧರ್ ಮೊದಲ ಭಾಗದಂತೆ ಎರಡನೇ ಭಾಗದ ರಿಲೀಸ್ ಅನ್ನೂ ಬ್ಯಾನ್ ಮಾಡಿದ್ದಾರೆ. ಹೀಗಾಗಿ ಯುದ್ಧದ ಬಿಸಿ ಆ ಟೀಮ್‌ಗೆ ತಟ್ಟಿಲ್ಲ.
ನಷ್ಟ ಕಟ್ಟಿಟ್ಟಬುತ್ತಿ
ಆದರೆ ಟಾಕ್ಸಿಕ್ ಸಿನಿಮಾ ಅಲ್ಲೂ ಸಾಕಷ್ಟು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಕಾರಣ ಸದ್ಯದ ಸ್ಥಿತಿಯಲ್ಲಿ ರಿಲೀಸ್ ಮಾಡಿದರೆ ನಷ್ಟ ಕಟ್ಟಿಟ್ಟಬುತ್ತಿ. ಹೀಗಾಗಿ ರಿಲೀಸ್ ಮುಂದಕ್ಕೆ ಹಾಕುವ ತೀರ್ಮಾನಕ್ಕೆ ಬರಲಾಗಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

