- Home
- Entertainment
- Cine World
- ಮಹಿಳಾ ಪ್ರಧಾನ ಸಿನಿಮಾಗಳೇ ಇಲ್ಲ ಅನ್ನಬೇಡಿ… ಇಲ್ಲಿದೆ ನೋಡಿ ನೀವು ನೋಡಲೇಬೇಕಾದ ಬೆಸ್ಟ್ ಚಿತ್ರಗಳು
ಮಹಿಳಾ ಪ್ರಧಾನ ಸಿನಿಮಾಗಳೇ ಇಲ್ಲ ಅನ್ನಬೇಡಿ… ಇಲ್ಲಿದೆ ನೋಡಿ ನೀವು ನೋಡಲೇಬೇಕಾದ ಬೆಸ್ಟ್ ಚಿತ್ರಗಳು
ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳೇ ಬರುತ್ತಿಲ್ಲ ಎನ್ನು ಹೇಳುತ್ತಿರುವವರೇ ಹೆಚ್ಚು. ನೀವು ಹಾಗೆ ಹೇಳುತ್ತಿದ್ದರೆ, ನೀವು ಈ ಸಿನಿಮಾಗಳನ್ನು ನೋಡಿಲ್ಲ ಎಂದು ಅರ್ಥ. ಇಲ್ಲಿದೆ ನೋಡಿ, ನೀವು ನೋಡಲೇ ಬೇಕಾದ ಅದ್ಭುತ ಕಥೆ ಹೊಂದಿರುವ ಮಹಿಳಾ ಪ್ರಧಾನ ಸಿನಿಮಾಗಳು.

ಮಹಿಳಾ ಪ್ರಧಾನ ಸಿನಿಮಾಗಳು
ನಾಯಕ ಪ್ರಧಾನ ಸಿನಿಮಾಗಳೇ ಬರ್ತಿವೆ, ಮಹಿಳಾ ಪ್ರಧಾನ ಸಿನಿಮಾಗಳೇ ಇಲ್ಲ ಎನ್ನುವವರಿಗಾಗಿ ಈ ಸಿನಿಮಾಗಳು. ಇವು ಅದ್ಭುತ ಕಥೆಗಳನ್ನು ಹೇಳಿದ ಮಹಿಳೆಯರೇ ಹೀರೋ ಆಗಿರುವಂತಹ ಸಿನಿಮಾಗಳು ಮಿಸ್ ಮಾಡ್ದೇ ನೋಡಿ.
ಲೋಕಾ ಚಾಪ್ಟರ್ 1 - ಚಂದ್ರ
ಈ ಚಿತ್ರ ಕಳೆದ ವರ್ಷದ ಅತಿ ಹೆಚ್ಚು ಗಳಿಸಿದ ಮಹಿಳಾ ಪ್ರಧಾನ ಸಿನಿಮಾವಾಗಿದೆ. ಕಲ್ಯಾಣಿ ಪ್ರಿಯದರ್ಶನ್ ಈ ಸಿನಿಮಾದ ನಾಯಕಿ. ಈ ಸಿನಿಮಾದಲ್ಲಿ ಹಳೆ ಕಾಲದ ಕಥೆ, ಹಾರರ್, ಸೂಪರ್ ವುಮೆನ್, ಸಮಾಜದ ಅವ್ಯವಸ್ಥೆ ಎಲ್ಲವನ್ನೂ ತೋರಿಸಲಾಗಿದೆ. ಒಂದಿಂಚೂ ಬೋರ್ ಹೊಡೆಸದೆ ಅದ್ಭುತವಾಗಿ ಸಾಗುವಂತಹ ಸಿನಿಮಾ.
ದಿ ಗರ್ಲ್ ಫ್ರೆಂಡ್
ಇವತ್ತಿನ ಸಮಾಜಕ್ಕೆ ತಕ್ಕುದಾದ, ಅರ್ಥಗರ್ಭಿತವಾದ, ಸರಳ ಕಥೆಯನ್ನು ಒಳಗೊಂಡಿರುವ ಸಿನಿಮಾ ‘ದಿ ಗರ್ಲ್ ಫ್ರೆಂಡ್’. ಈ ಸಿನಿಮಾದಲ್ಲಿ ಯಾವ ರೀತಿ ಪುರುಷರು ಮಹಿಳೆಯರನ್ನು ತಮ್ಮ ಕಂಟ್ರೋಲ್’ಗೆ ತೆಗೆದುಕೊಂಡು, ಅದನ್ನೇ ಪ್ರೀತಿ ಎನ್ನುತ್ತಾರೆ. ಹಾಗೂ ಹುಡುಗಿಯ ಆಯ್ಕೆಗಳು, ಆಸೆಗಳು, ಭಾವನೆಗಳನ್ನ ಯಾವ ರೀತಿ ತನಗೆ ಬೇಕಾದಂತೆ ಬದಲಾಯಿಸುತ್ತಾರೆ ಹಾಗೂ ಅದರಿಂದ ಹುಡುಗಿ ಹೇಗೆ ಹೊರಗೆ ಬರುತ್ತಾಳೆ, ಅನ್ನೋದನ್ನ ತೋರಿಸುವಂತಹ ಸಿನಿಮಾ ಇದಾಗಿದೆ.
ಬ್ಯಾಡ್ ಗರ್ಲ್
ಈ ಸಿನಿಮಾ ಕಥೆ ಬರೆದದ್ದು ಹಾಗೂ ನಿರ್ದೇಶನ ಮಾಡಿದ್ದು ಸಹ ಒಬ್ಬ ಮಹಿಳೆ. ಮಹಿಳೆಯೊಬ್ಬರು ಇನ್ನೊಬ್ಬ ಮಹಿಳೆಯ ಕಥೆಯನ್ನ ಬರೆಯೋದು ಖಂಡಿತವಾಗಿಯೂ ತುಂಬಾನೇ ಸುಂದರವಾಗಿರುತ್ತದೆ. ಸಮಾಜದಲ್ಲಿರುವ ಪ್ರತಿಯೊಬ್ಬ ಮನುಷ್ಯನಂತೆ ಒಬ್ಬ ಮಹಿಳೆ ಕೂಡ ಯಾವ ರೀತಿ ದುರ್ಗುಣಗಳನ್ನು, ವಿರೋಧಗಳನ್ನು, ಕೆಟ್ಟ ಅಭ್ಯಾಸಗಳನ್ನು ಅಥವಾ ಅಪೂರ್ಣತೆಯೊಂದಿಗೆ ಬದುಕಬಹುದು ಅನ್ನೋದನ್ನ ಸುಂದರವಾಗಿ ಈ ಚಿತ್ರ ಚಿತ್ರಿಸಿದೆ.
ಮಿಸಸ್
ಈ ಸಿನಿಮಾ ಮಲಯಾಳಂನ ಸೂಪರ್ ಹಿಟ್ ಚಿತ್ರ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಯಾವ ರೀತಿ ಒಬ್ಬ ಮಾಡೆಲ್ ಭಾರತೀಯ ಮಹಿಳೆ ತನ್ನ ಕುಟುಂಬದ ಕಟ್ಟು ಪಾಡುಗಳನ್ನು ಭೇದಿಸಿ ಹೊರಗೆ ಬರುತ್ತಾಳೆ ಅನ್ನೋದನ್ನ ತೋರಿಸುತ್ತದೆ.
ಜಂಟಲ್ ವುಮೆನ್
ಈ ಸಿನಿಮಾದಲ್ಲಿ ಎರಡು ಮಲ್ಟಿ ಲೇಯರ್, ಮಲ್ಟಿ ಡೈಮೆನ್ಶನ್ ಇರುವ ಮಹಿಳಾ ಪಾತ್ರಗಳನ್ನ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಯಾಕೆ ಮಹಿಳೆಯರು ಒಂದು ಬಾಕ್ಸ್ ನಲ್ಲಿ ತಮ್ಮನ್ನು ಬಂಧಿಸಬಾರದು ಅನ್ನೋದನ್ನ ಹಾಗೂ ಮಹಿಳೆಯರು ಯಾವ ರೀತಿ ಸಮಾಜದ ನಿರೀಕ್ಷೆಗಳನ್ನು ದಾಟಿ ಹೊರಬರಬಹುದು ಅನ್ನೋದನ್ನು ತೋರಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

