- Home
- Entertainment
- Cine World
- Upcoming South Movies 2026: ಹೊಸ ವರ್ಷಕ್ಕೆ ಸ್ಟಾರ್‌ಗಳ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ದಿನಾಂಕ
Upcoming South Movies 2026: ಹೊಸ ವರ್ಷಕ್ಕೆ ಸ್ಟಾರ್‌ಗಳ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ದಿನಾಂಕ
South Stars Movie 2026: ಸೌತ್ ಸೂಪರ್ ಸ್ಟಾರ್‌ಗಳ ಹವಾ ಜೋರಾಗಿರಲಿದೆ. 2026ರಲ್ಲಿ ಹಲವು ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ. ಹಾಗಿದ್ರೆ ಆ ಸಿನಿಮಾಗಳು ಯಾವುವು? ಯಾವಾಗ ರಿಲೀಸ್ ಆಗಲಿವೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ರಾಜಾಸಾಬ್
ಮಾರುತಿ ದೇಸಾಯಿ ನಿರ್ದೇಶನದ 'ರಾಜಾಸಾಬ್' ಚಿತ್ರದಲ್ಲಿ ಪ್ರಭಾಸ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ 2026ರ ಜನವರಿ 9 ರಂದು ಬಿಡುಗಡೆಯಾಗಲಿದೆ.
ಜನ ನಾಯಗನ್
'ಜನ ನಾಯಗನ್' ಸಿನಿಮಾವು ದಳಪತಿ ವಿಜಯ್ ಅವರ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಈ ಚಿತ್ರ ಪ್ರಭಾಸ್ ಅವರ 'ರಾಜಾಸಾಬ್' ಜೊತೆ ಕ್ಲ್ಯಾಶ್ ಆಗಲಿದೆ, ಯಾಕಂದ್ರೆ ಇದೂ ಕೂಡ ಜನವರಿ 9 ರಂದು ರಿಲೀಸ್ ಆಗಲಿದೆ.
ಜೈಲರ್ 2
'ಜೈಲರ್ 2' ಚಿತ್ರದ ಹೆಸರು ಕೂಡ ಈ ಲಿಸ್ಟ್‌ನಲ್ಲಿದೆ. ಇದು 2023ರಲ್ಲಿ ಬಿಡುಗಡೆಯಾದ ಚಿತ್ರದ ಸೀಕ್ವೆಲ್ ಆಗಿದ್ದು, 2026ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲಿದೆ.
ಸ್ಪಿರಿಟ್
ಸಂದೀಪ್ ರೆಡ್ಡಿ ವಂಗಾ ಅವರ ಆಕ್ಷನ್ ಥ್ರಿಲ್ಲರ್ 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಲಿದ್ದಾರೆ. ಈ ಸಿನಿಮಾ 2026ರ ಮಧ್ಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಟಾಕ್ಸಿಕ್: ಅ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್
'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಟೊವಿನೋ ಥಾಮಸ್, ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2026ರಲ್ಲಿ ಬಿಡುಗಡೆಯಾಗಲಿದೆ.
ಪೆದ್ದಿ
'ಪೆದ್ದಿ' ಚಿತ್ರದಲ್ಲಿ ರಾಮ್ ಚರಣ್ ಜೊತೆಗೆ ಶಿವರಾಜ್‌ಕುಮಾರ್, ಜಾನ್ವಿ ಕಪೂರ್, ದಿವ್ಯೇಂದು ಶರ್ಮಾ, ಜಗಪತಿ ಬಾಬು ಮತ್ತು ವಿಜಯ್ ಚಂದ್ರಶೇಖರ್ ಕೂಡ ಧಮಾಲ್ ಮಾಡಲಿದ್ದಾರೆ. ಈ ಚಿತ್ರ 2026ರಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

