- Home
- Entertainment
- Cine World
- ಬಾಕ್ಸ್ ಆಫೀಸ್ ಸುಲ್ತಾನ್‌ಗಳಾದ ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಲಿಲ್ಲ?
ಬಾಕ್ಸ್ ಆಫೀಸ್ ಸುಲ್ತಾನ್‌ಗಳಾದ ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಲಿಲ್ಲ?
Director SS Rajamouli Movies: ತೆಲುಗಿನಲ್ಲಿ ಸಣ್ಣ, ದೊಡ್ಡ ಹೀರೋಗಳ ಜೊತೆ ಸಿನಿಮಾ ಮಾಡಿರೋ ರಾಜಮೌಳಿ, ಪವನ್ ಕಲ್ಯಾಣ್ ಮತ್ತು ಅಲ್ಲು ಅರ್ಜುನ್ ಜೊತೆ ಯಾಕೆ ಸಿನಿಮಾ ಮಾಡಿಲ್ಲ ಗೊತ್ತಾ? ಇನ್ಮುಂದೆ ಇವರ ಕಾಂಬೋದಲ್ಲಿ ಸಿನಿಮಾ ಬರೋದು ಕಷ್ಟನಾ?

ರಾಜಮೌಳಿ ಜೊತೆ ಸಿನಿಮಾ ಅಂದ್ರೆ ಹಬ್ಬಾನೇ
ರಾಜಮೌಳಿ ಜೊತೆ ಸಿನಿಮಾ ಮಾಡಿದ್ರೆ ಹೀರೋಗಳ ರೇಂಜ್ ಬದಲಾಗುತ್ತೆ. ಜಕ್ಕಣ್ಣ ಬಹುತೇಕ ಎಲ್ಲ ಟಾಪ್ ಸ್ಟಾರ್‌ಗಳ ಜೊತೆ ಕೆಲಸ ಮಾಡಿದ್ದಾರೆ. ಆದ್ರೆ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ಯಾಕೆ ಸಿನಿಮಾ ಮಾಡಿಲ್ಲ?
ಪವನ್ - ರಾಜಮೌಳಿ ಕಾಂಬೋದಲ್ಲಿ ಮಿಸ್ ಆದ ಸಿನಿಮಾ?
ಪವನ್ ಕಲ್ಯಾಣ್‌ಗಾಗಿ ರಾಜಮೌಳಿ ಕಥೆ ಸಿದ್ಧಪಡಿಸಿದ್ದರು. ಆದರೆ ಪವನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರಿಂದ, ಸಿನಿಮಾಕ್ಕೆ ಹೆಚ್ಚು ಸಮಯ ಕೊಡಲು ಆಗಲಿಲ್ಲ. ಹೀಗಾಗಿ ಈ ಬಹುನಿರೀಕ್ಷಿತ ಕಾಂಬಿನೇಷನ್‌ನ ಸಿನಿಮಾ ಸೆಟ್ಟೇರಲೇ ಇಲ್ಲ.
ಅಲ್ಲು ಅರ್ಜುನ್‌ಗೆ ಕಥೆ ಹೇಳಿದ್ದ ಜಕ್ಕಣ್ಣ
ಅಲ್ಲು ಅರ್ಜುನ್‌ಗೆ ರಾಜಮೌಳಿ ಒಂದು ಕಥೆ ಹೇಳಿದ್ದರಂತೆ. ಆದರೆ ಅದು ಬನ್ನಿಗೆ ಇಷ್ಟವಾಗದ ಕಾರಣ ರಿಜೆಕ್ಟ್ ಮಾಡಿದ್ದರು ಎನ್ನಲಾಗಿದೆ. ನಂತರ ಅಜಿತ್ ಜೊತೆ ಮಲ್ಟಿಸ್ಟಾರರ್ ಪ್ಲಾನ್ ಇತ್ತಾದರೂ, ಅದೂ ಕೂಡ ಕೈಗೂಡಲಿಲ್ಲ.
ರಾಜಮೌಳಿ ಜೊತೆ ಇಬ್ಬರು ಹೀರೋ?
ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿರುವುದರಿಂದ ರಾಜಮೌಳಿ ಜೊತೆ ಸಿನಿಮಾ ಮಾಡುವುದು ಕಷ್ಟ. ಆದರೆ, ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಭವಿಷ್ಯದಲ್ಲಿ ಈ ಕಾಂಬೋ ಒಂದಾಗುವ ಸಾಧ್ಯತೆ ಹೆಚ್ಚಿದೆ.
ವಾರಣಾಸಿ ಮೇಲೆ ಭಾರಿ ನಿರೀಕ್ಷೆಗಳು
ಸದ್ಯ ರಾಜಮೌಳಿ, ಮಹೇಶ್ ಬಾಬು ಜೊತೆ 'ವಾರಣಾಸಿ' ಸಿನಿಮಾ ಮಾಡುತ್ತಿದ್ದಾರೆ. 1500 ಕೋಟಿ ಬಜೆಟ್‌ನ ಈ ಅಡ್ವೆಂಚರ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ. 2027ಕ್ಕೆ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

