Lata Mangeshkar: ಧರ್ಮೇಂದ್ರ, ಅಮಿತಾಭ್ ಲತಾ ಅಂತ್ಯಕ್ರಿಯೆ ತಪ್ಪಿಸಿಕೊಂಡಿದ್ದೇಕೆ?
ಮುಂಬೈನ (Mumbai) ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ (Lata Mangeshkar) ಅವರ ಅಂತ್ಯಕ್ರಿಯೆ ನೆರವೇರಿತು. ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಈ ಸಮಯದಲ್ಲಿ ಭಾಗವಹಿಸಿ ನಮನ ಸಲ್ಲಿಸಿದರು. ಆದರೆ ಧರ್ಮೇಂದ್ರ (Dharmendra) ಮತ್ತು ಅಮಿತಾರ್ಭ ಬಚ್ಚನ್ (Amitabh Bachchan). ಈ ಇಬ್ಬರೂ ಸೂಪರ್‌ಸ್ಟಾರ್ಸ್ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಗೆ ಬರಲಾಗಲಿಲ್ಲ.
ರೋಗಲಕ್ಷಣಗಳೊಂದಿಗೆ ಕೊರೋನಾ ವೈರಸ್ ಟೆಸ್ಟ್ ರಿಸಲ್ಟ್ ಪಾಸಿಟಿವ್ ಬಂದ ನಂತರ ಲತಾಜೀ ಅವರನ್ನು ಜನವರಿ 8 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ನಿಧನರಾದರು.
ಫೆಬ್ರವರಿ 06 ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ 'ಭಾರತದ ನೈಟಿಂಗೇಲ್' ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಉದ್ಧವ್ ಠಾಕ್ರೆ, ಶರದ್ ಪವಾರ್, ಆದಿತ್ಯ ಠಾಕ್ರೆ, ನಿತಿನ್ ಗಡ್ಕರಿ ಸೇರಿದಂತೆ ಇನ್ನೂ ಅನೇಕರು ಅಂತಿಮ ನಮನ ಸಲ್ಲಿಸಿದರು.
ಲತಾ ಮಂಗೇಶ್ಕರ್ ಅವರು 20 ಭಾಷೆಗಳಲ್ಲಿ 30,000 ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಅನೇಕ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಸಂದಿವೆ. ಲತಾ ಮಂಗೇಶ್ಕರ್ ಅವರು ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನಕ್ಕೂ ಪಾತ್ರವಾಗಿದ್ದಾರೆ
ಲತಾ ಮಂಗೇಶ್ಕರ್ ಅವರಿಗೆ ತುಂಬಾ ಆತ್ಮೀಯರಾಗಿದ್ದ ಧರ್ಮೇಂದ್ರ ಅವರು ಅಂತ್ಯಕ್ರಿಯೆಯಲ್ಲಿ ಇರಲಿಲ್ಲ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ನಟ ಅಂತಿಮ ನಮನ ಸಲ್ಲಿಸಲು ಏಕೆ ಹಾಜರಾಗಲಿಲ್ಲ ಎಂದು ಚರ್ಚಿಸಲು ಪ್ರಾರಂಭಿಸಿದರು. ನಂತರ ಧರ್ಮೇಂದ್ರ ಅವರು ಅಂತ್ಯಕ್ರಿಯೆಗೆ ಹೋಗಲು ಮೂರು ಬಾರಿ ತಯಾರಿ ನಡೆಸಿದರು ಆದರೆ ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
'ಇಡೀ ಜಗತ್ತು ದುಃಖವಾಗಿದೆ, ನೀವು ನಮ್ಮನ್ನು ತೊರೆದಿದ್ದೀರಿ ಎಂದು ನಂಬಲು ಸಾಧ್ಯವಿಲ್ಲ !!! ನಾವು ನಿಮ್ಮನ್ನು ಕಳೆದುಕೊಳ್ಳುತ್ತೇವೆ ಲತಾ ಜೀ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ' ಎಂದು ಧರ್ಮೇಂದ್ರ ಟ್ವೀಟ್ ಮಾಡಿದ್ದರು.
ಮತ್ತೊಂದೆಡೆ, ಲತಾ ಮಂಗೇಶ್ಕರ್ ಅವರ ದೊಡ್ಡ ಅಭಿಮಾನಿಯಾದ ಅಮಿತಾಭ್ ಬಚ್ಚನ್ ಅವರ ಪೆದ್ದಾರ್ ರಸ್ತೆಯ ನಿವಾಸಕ್ಕೆ ತೆರಳಿ ಗಾಯಕಿಯ ಕುಟುಂಬವನ್ನು ಭೇಟಿ ಮಾಡಿದ್ದುರ.ಈ ಸಮಯದಲ್ಲಿ ಅವರು ತಮ್ಮ ಮಗಳು ಶ್ವೇತಾ ಬಚ್ಚನ್ ಇದ್ದರು. .
ವರದಿಗಳ ಪ್ರಕಾರ, ಕೋವಿಡ್ -19 ಕಾರಣ ಮತ್ತು ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿರುವುದರಿಂದ ಆರೋಗ್ಯದ ಕಾರಣಕ್ಕೆ ಬಿಗ್ ಬಿ ಬಂದಿಲ್ಲ.