ಐಶ್ವರ್ಯಾ ರೈ ಡೆಬ್ಯುಟ್ ಸಿನಿಮಾ ಬಾಲಿವುಡ್ ಅಲ್ಲ: ಮೋಹನ್‌ಲಾಲ್ ಜೊತೆಗಿನ ಈ ಸಿನಿಮಾ
ಐಶ್ವರ್ಯಾ ರೈ ಬಾಲಿವುಡ್‌ನಲ್ಲಿ ಭದ್ರವಾದ ನೆಲೆ ಕಂಡಿರುವ ನಟಿ. ಆದರೆ ಅವರ ಸಿನಿಮಾ ಕೆರಿಯರ್ ಆರಂಭಿಸಿದ್ದು, ದಕ್ಷಿಣ ಭಾರತದ ಸಿನಿಮಾಗಳಿಂದ ಎಂಬುದು ಬಹುತೇಕರಿಗೆ ಗೊತ್ತಿಲ್ಲ, ಐಶ್ವರ್ಯಾ ರೈ ಚೊಚ್ಚಲ ಸಿನಿಮಾ ಯಾವುದು, ಆ ಸಿನಿಮಾದ ಹೀರೋ ಯಾರು ಈ ಎಲ್ಲಾ ಡಿಟೇಲ್ ಈ ಫೋಟೋ ಗ್ಯಾಲರಿಯಲ್ಲಿದೆ ನೋಡಿ.
ಐಶ್ವರ್ಯಾ ರೈ ಬಾಲಿವುಡ್‌ನಲ್ಲಿ ಭದ್ರವಾದ ನೆಲೆ ಕಂಡಿರುವ ನಟಿ. ಗಂಡ ಅಭಿಷೇಕ್ ಬಚ್ಚನ್ ನಡುವಣ ಕೌಟುಂಬಿಕ ಸಮಸ್ಯೆಯ ಕಾರಣಕ್ಕೆ ಹಲವು ವರ್ಷಗಳಿಂದ ಸುದ್ದಿಯಲ್ಲಿರುವ ಐಶ್ವರ್ಯಾ ರೈ ಮೂಲತಃ ದಕ್ಷಿಣದವರು ಹಾಗೂ ದಕ್ಷಿಣದಿಂದಲೇ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿದವರು. ಈ ವಿಚಾರ ಅನೇಕರಿಗೆ ಗೊತ್ತಿಲ್ಲ, ದಕ್ಷಿಣದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿರುವ ಐಶ್ವರ್ಯಾ ರೈ ಅವರ ಹಲವು ಕುತೂಹಲಕಾರಿ ವಿಚಾರ ಇಲ್ಲಿವೆ.
ಐಶ್ವರ್ಯಾ ರೈ ತಮ್ಮ ಚಿತ್ರರಂಗದ ಪಯಣವನ್ನು ಮಣಿರತ್ನಂ ನಿರ್ದೇಶನದ 'ಇರುವರ್' (1997) ಚಿತ್ರದ ಮೂಲಕ ಆರಂಭಿಸಿದರು. ಈ ಚಿತ್ರದಲ್ಲಿ ಅವರು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಜೊತೆ ನಟಿಸಿದ್ದರು. ಈ ಸಿನಿಮಾ 1997ರಲ್ಲಿ ತೆರೆ ಕಂಡಿತ್ತು.
ಎಂ.ಜಿ.ಆರ್, ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತಾ ಅವರ ಜೀವನದಿಂದ ಸ್ಫೂರ್ತಿ ಪಡೆದ ರಾಜಕೀಯ ಕಥಾ ಹಿನ್ನೆಲೆ ಇರುವ ಚಿತ್ರ 'ಇರುವರ್'. ಆಗಿದ್ದು, ಈ ಚಿತ್ರದಲ್ಲಿ ಮೋಹನ್‌ಲಾಲ್ ಎಂಜಿಆರ್ ಪಾತ್ರದಲ್ಲಿ ಹಾಗೂ ಐಶ್ವರ್ಯಾ ರೈ ಪುಷ್ಪವಲ್ಲಿ ಮತ್ತು ಕಲ್ಪನಾ ಎಂಬ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ.
ಮೋಹನ್‌ಲಾಲ್ ನಟನೆ ದೇವರ ವರ
ಐಶ್ವರ್ಯಾ ರೈ ಬಚ್ಚನ್ ಆಗಾಗ್ಗೆ ದಕ್ಷಿಣದ ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನಂ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅವರು ಮೋಹನ್‌ಲಾಲ್ ಅವರನ್ನು ಕೂಡ ಅಷ್ಟೇ ಗೌರವಿಸುತ್ತಾರೆ. ಮೋಹನ್‌ಲಾಲ್ ನಟನೆ ದೇವರ ವರ ಎಂದು ಐಶ್ವರ್ಯಾ ರೈ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹಾಗೆಯೇ ತನ್ನ ಕೋ ಸ್ಟಾರ್ ಆದ ಐಶ್ವರ್ಯಾ ರೈ ಬಗ್ಗೆಯೂ ಮೋಹನ್‌ಲಾಲ್ ಮೆಚ್ಚುಗೆಯ ಮಾತನಾಡಿದ್ದರು, ಇತ್ತ ನಿರ್ದೇಶಕ ಮಣಿರತ್ನಂ ಅವರು ಐಶ್ವರ್ಯಾ ರೈ ನಟನೆಯನ್ನು ಹಾಡಿ ಹೊಗಳಿದ್ದಾರೆ. ಅತ್ತ ಮೋಹನ್‌ಲಾಲ್ ಕೂಡ ಐಶ್ವರ್ಯಾ ಅವರ ಸೌಂದರ್ಯ ಮತ್ತು ಪ್ರತಿಭೆಯನ್ನು ಶ್ಲಾಘಿಸಿದ್ದರು.