ಮದುವೆಯಾದ ಮೇಲೆ ಕತ್ರಿನಾ ಕೈಫ್ ಪತ್ತೆಯೇ ಇಲ್ಲ, ತಾಯಿಯಾಗಲಿದ್ದಾರಾ ನಟಿ
ಆಲಿಯಾ ಭಟ್ ತಾಯಿಯಾಗಲಿರುವ ಘೋಷಣೆಯ ನಂತರ ಈಗ ಕತ್ರಿನಾ ಕೈಫ್ ಪ್ರೆಗ್ನೆಂಸಿಯ ಸುದ್ದಿ ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಕತ್ರಿನಾ ಕೈಫ್ ಅವರು ಸಾರ್ವಜನಿಕ ಪ್ರದರ್ಶನಗಳು, ವಿಮಾನ ನಿಲ್ದಾಣದ ಮತ್ತು ಬಿ-ಟೌನ್ ಕಾರ್ಯಕ್ರಮಗಳಿಂದ ಸಂಪೂರ್ಣವಾಗಿ ಗೈರುಹಾಜರಾಗಿದ್ದಾರೆ. ಈ ಕಾರಣದಿಂದ ನಟಿ ನಿಜವಾಗಿಯೂ ಗರ್ಭಿಣಿಯೇ ಎಂದು ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸಿದ್ದಾರೆ. ಈ ವರದಿಗಳಲ್ಲಿ ಎಷ್ಟು ಸತ್ಯವಿದೆ ಎಂಬ ವಿವರ ಇಲ್ಲಿದೆ.
Vicky Kaushal
ಇಂಟರ್ನೆಟ್ ವದಂತಿಗಳ ಪ್ರಕಾರ, ಕತ್ರಿನಾ ಕೈಫ್ ಅವರ ಅನುಪಸ್ಥಿತಿಯು ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸೂಚಿಸುತ್ತದೆ. ಜುಲೈ 16 ರಂದು ಬರುವ ತನ್ನ ಹುಟ್ಟುಹಬ್ಬದಂದು ನಟಿ ಪ್ರಮುಖ ಸುದ್ದಿಗಳನ್ನು ಬಹಿರಂಗಪಡಿಸುತ್ತಾರೆ ಎಂದು ಒಬ್ಬ ಬಳಕೆದಾರರು ಭವಿಷ್ಯ ನುಡಿದಿದ್ದಾರೆ.
ಕೆಲವು ಅಭಿಮಾನಿಗಳು ಕಾಫಿ ವಿತ್ ಕರಣ್ 7 ನ ಶೋನಲ್ಲಿನ ಕತ್ರಿನಾ ಅನುಪಸ್ಥಿತಿಗೂ ಅವರ ಗರ್ಭಧಾರಣೆಯ ಕಾರಣ ಎಂದು ಊಹಿಸಿದ್ದಾರೆ. ಕರಣ್ ಜೋಹರ್ ಅವರ 50 ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕತ್ರಿನಾ ಕೊನೆಯದಾಗಿ ಕಾಣಿಸಿಕೊಂಡರು.
ಕರಣ್ ಅವರ ಪಾರ್ಟಿಯಲ್ಲಿ ತನ್ನ ಪತಿ ವಿಕ್ಕಿ ಕೌಶಲ್ ಜೊತೆಗೆ ಕತ್ರಿನಾ ಕೈಫ್ ಅವರು ಬೆರಗುಗೊಳಿಸುವ ಬಿಳಿಯ ಉಡುಪನ್ನು ಧರಿಸಿ ತುಂಬಾ ಸ್ಟನ್ನಿಂಗ್ ಆಗಿ ಕಾಣಿಸಿಕೊಂಡಿದ್ದರು.ಅದರ ನಂತರ ನಟಿ ಹಲವು ಇವೆಂಟ್‌ಗಳನ್ನು ತಪ್ಪಿಸಿಕೊಂಡಿದ್ದಾರೆ.
ವರ್ಷದ ಆರಂಭದಿಂದಲೂ, ಕತ್ರಿನಾ ಅವರ ಪ್ರೆಗ್ನೆಂಸಿ ಬಿ'ಟೌನ್‌ನಲ್ಲಿ ದೊಡ್ಡ ವಿಷಯವಾಗಿದೆ ಮತ್ತು ನಟಿ ಮತ್ತು ಅವರ ಕುಟುಂಬದ ನಿರಾಕರಣೆಗಳ ಹೊರತಾಗಿಯೂ, ಇಂಡಿಯಾ.ಕಾಮ್ ಅವರು ತಾಯಿಯಾಗುತ್ತಿರುವ ವಿಷಯವನ್ನು ಈಗಾಗಲೇ ವರದಿ ಮಾಡಿದೆ.
ಕೆಲವು ತಿಂಗಳ ಹಿಂದೆ, ನಟಿಯ ಅಭಿಮಾನಿಗಳು ಮತ್ತು ಇಂಟರ್ನೆಟ್ ಬಳಕೆದಾರರು ವಿಮಾನ ನಿಲ್ದಾಣದಲ್ಲಿ ಸಡಿಲವಾದ ಭಾರತೀಯ ಉಡುಪಿನಲ್ಲಿ ಕಾಣಿಸಿಕೊಂಡ ನಂತರ ಅವಳು ಗರ್ಭಿಣಿ ಎಂದು ಊಹಿಸಿದ್ದರು. ವಿಕ್ಕಿ ಕೌಶಲ್ ಅವರ ತಂಡವು ಇದ ನಿರಾನ್ನು ಕರಿಸಿತು, ಅವುಗಳನ್ನು ಆಧಾರರಹಿತ ಎಂದು ಕರೆದಿದೆ.
ಮುಂದಿನ ಚಿತ್ರ, ಫೋನ್ ಭೂತ್ ನಲ್ಲಿ, ಕತ್ರಿನಾ ಕೈಫ್ ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಅವರೊಂದಿಗೆ ನಟಿಸಲಿದ್ದಾರೆ. ಅಕ್ಟೋಬರ್ 7 ರಂದು, ಫೋನ್ ಭೂತ್ ಸಿನಿಮಾಡುಗಡೆಗೆ ನಿಗದಿಯಾಗಿದೆ.
ಕತ್ರಿನಾ ಫರ್ಹಾನ್ ಅಖ್ತರ್ ಅವರ ರೋಡ್ ಟ್ರಿಪ್ ಡ್ರಾಮಾ ಜೀ ಲೇ ಜರಾ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ನಿರ್ಮಾಣ ಪ್ರಾರಂಭವಾಗಲಿರುವ ಈ ಸಿನಿಮಾದಲ್ಲಿ, ಕತ್ರಿನಾ ಅವರು ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಅವರೊಂದಿಗೆ ಜೊತೆಯಾಗಲಿದ್ದಾರೆ.