ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಪತಿ ವಿಕ್ಕಿ ಕೌಶಲ್‌ಗೆ ಕತ್ರಿನಾ ಕೈಫ್ ಬರ್ತಡೇ ವಿಶ್
ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಲ್‌ಗೆ ಇಂದು (ಮೇ 16) ಹುಟ್ಟುಹಬ್ಬದ ಸಂಭ್ರಮ. 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ವಿಕ್ಕಿ ಕೌಶಲ್ ಅವರಿಗೆ ಈ ಬಾರಿಯ ಹುಟ್ಟುಹಬ್ಬ ತುಂಬಾನೆ ವಿಶೇಷವಾಗಿದೆ.
ಬಾಲಿವುಡ್ ಸ್ಟಾರ್ ನಟ ವಿಕ್ಕಿ ಕೌಶಲ್‌ಗೆ ಇಂದು (ಮೇ 16) ಹುಟ್ಟುಹಬ್ಬದ ಸಂಭ್ರಮ. 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ವಿಕ್ಕಿ ಕೌಶಲ್ ಅವರಿಗೆ ಈ ಬಾರಿಯ ಹುಟ್ಟುಹಬ್ಬ ತುಂಬಾನೆ ವಿಶೇಷವಾಗಿದೆ.
ಹೌದು, ವಿಕ್ಕಿ ಕೌಶಲ್ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಜೊತೆ ಹಸೆಮಣೆ ಏರಿದ ಬಳಿಕ ಮೊದಲ ಹುಟ್ಟುಹಬ್ಬ ಇದಾಗಿದೆ. ಅಂದಹಾಗೆ ಈ ಸ್ಟಾರ್ ಜೋಡಿ ಸದ್ಯ ನ್ಯೂಯಾರ್ಕ್ ನಲ್ಲಿದ್ದಾರೆ. ಅಲ್ಲೇ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.
ನಟಿ ಕತ್ರಿನಾ ಪತಿ ವಿಕ್ಕಿ ಕೌಶಲ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ವಿಕ್ಕಿ ಕೌಶಲ್ ಪತ್ನಿ ಕತ್ರಿನಾಗೆ ಮುತ್ತಿಡುತ್ತಿರುವ ಫೋಟೋ ಶೇರ್ ಮಾಡಿ ಕತ್ರಿನಾ ನ್ಯೂಯಾರ್ಕ್ ಬರ್ತಡೇ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿರುವ ಕತ್ರಿನಾ, ನ್ಯೂಯಾರ್ಕ್ ವಾಲಾ ಹುಟ್ಟುಹಬ್ಬ ನಾನು ಸರಳವಾಗಿ ಹೇಳುವುದಾದರೆ ನೀವು ಎಲ್ಲವನ್ನು ಉತ್ತಮಗೊಳಿಸುತ್ತೀರಿ ಎಂದು ಕತ್ರಿನಾ ಪ್ರೀತಿಯ್ಸಾಲ ಬರೆದು ಹಾರ್ಟ್ ಇಮೋಜಿ ಇರಿಸಿದ್ದಾರೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರೂ ಪ್ರೀತಿಸಿ ಮದುವೆಯಾದವರು. ಮೂರ್ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದ ಕತ್ರಿನಾ ಮತ್ತು ವಿಕ್ಕಿ ಇಬ್ಬರೂ 2021 ಡಿಸೆಂಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕತ್ರಿನಾ ಮತ್ತು ವಿಕ್ಕಿ ಮದುವೆ ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನೆರವೇರಿತು. ಇಬ್ಬರೂ ತಮ್ಮ ಮದುವೆ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಮದುವೆ ಬಳಿಕ ಫೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದರು.
ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಗಿಂತ 5 ವರ್ಷ ದೊಡ್ಡವರು. ಬಣ್ಣದ ಲೋಕದಲ್ಲೂ ಕತ್ರಿನಾ ಸೀನಿಯರ್. ಕತ್ರಿನಾ ಕೈಫ್ 2003ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರೆ ವಿಕ್ಕಿ ಕೌಶಲ್ 2012ರಲ್ಲಿ ಸಿನಿ ಪಯಣ ಪ್ರಾರಂಭ ಮಾಡಿದರು.