ಮದುವೆಯಾದ 6 ತಿಂಗಳಿಗೆ ಮತ್ತೊಬ್ಬರ ಜತೆ ವಿಕ್ಕಿ ಕೌಶಾಲ್; ಉತ್ತರ ಕೊಟ್ಟ ಪತ್ನಿ ಕತ್ರಿನಾ ಕೈಫ್!

ಪತಿ ಇನ್‌ಸ್ಟಾಗ್ರಾಂ ಪೋಟೋ ಹಂಚಿಕೊಂಡು ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದ ಕತ್ರಿಕಾ ಕೈಫ್...

Katrina Kaif reaction for Farah Khan with Vicky Kaushal photo vcs

ಬಾಲಿವುಡ್ ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್‌ ದಿ ಮೋಸ್ಟ್‌ ಹ್ಯಾಪೆನಿಂಗ್ ಆಂಡ್ ಪಾಪ್ಯೂಲರ್ ಕಪಲ್‌. ಮದುವೆಯಾದ ದಿನದಿಂದಲ್ಲೂ ಅವರಿಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪ್ರತಿಯೊಂದು ಫೋಟೋ ಮತ್ತು ವಿಡಿಯೋವನ್ನು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. 2021ರ ಡಿಸೆಂಬರ್‌ನಲ್ಲಿ ಕತ್ರಿಕಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಈಗ ನೋಡಿದರೆ ವಿಕ್ಕಿ ಮತ್ತೊಬ್ಬರನ್ನು ನೋಡಿಕೊಂಡಿದ್ದಾರೆಂದು ಹರಿದಾಡುತ್ತಿದೆ. ಏನಿದು ಗಾಸಿಪ್?

ಫರಾ ಖಾನ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಕ್ಕಿ ಕೌಶಾಲ್ ಜೊತೆ ಫೋಟೋ ಹಂಚಿಕೊಂಡಿದ್ದಾರೆ. ಕ್ರೊಯೇಷಿಯಾ ಎಂಬ ಸ್ಥಳಕ್ಕೆ ಭೇಟಿ ನೀಡಿ 'ಕ್ಷಮಿಸು ಕತ್ರಿನಾ. ವಿಕ್ಕಿ ಕೌಶಾಲ್‌ಗೆ ಮತ್ತೊಬ್ಬರನ್ನು ಹುಡುಕಿಕೊಂಡಿದ್ದಾರೆ' ಎಂದು ಫರಾ ಬರೆದುಕೊಂಡಿದ್ದಾರೆ.  ಗಾಸಿಪ್‌ಗಳಿಗೆ ದಾರಿ ಮಾಡಿಕೊಡಬಾರದು ಎಂದು ಕತ್ರಿನಾ ಫೋಟೋವನ್ನು ತಕ್ಷಣವೇ ರೀ-ಶೇರ್ ಮಾಡಿಕೊಂಡು 'ನೀವು ಅವರ ಜೊತೆಗಿರಬಹುದು'ಎಂದು ಬರೆದುಕೊಂಡಿದ್ದಾರೆ. ಕಲ್ ಹೋ ನಾ ಹೋ ಚಿತ್ರದ ಕುಚ್ ತೋ ಹುವಾ ಹೈ ಹಾಡನ್ನು ಆಕೆಯ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೇರಿಸಲಾಗಿದೆ. ಫರಾ ಫೋಟೋವನ್ನು ವಿಕ್ಕಿ ಹಂಚಿಕೊಂಡು 'ನಾವು ಒಳ್ಳೆಯ ಸ್ನೇಹಿತರು' ಎಂದು ಬರೆದುಕೊಂಡಿದ್ದಾರೆ.

Katrina Kaif reaction for Farah Khan with Vicky Kaushal photo vcs

ವಿಕ್ಕಿ ಸಿನಿಮಾ:

ವಿಕ್ಕಿ ಕೌಶಾಲ್, ಭೂಮಿ ಪೆಡ್ನೆಕರ್ ಮತ್ತು ಕಿಯಾರಾ ಗೋವಿಂದ ನಾಮ್ ಮೇರಾ ಸಿನಿಮಾದಲ್ಲಿ ಅಭಿನಯಿಸಿದ್ದು ಜೂನ್ 10ರಂದು ಬಿಡುಗಡೆಯಾಗಿದೆ. ಸಾರಾ ಅಲಿ ಖಾನ್‌ ಜೊತೆ ಸ್ಪೆಷಲ್‌ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ಎರಡು ಹೆಸರಿಡದ ಸಿನಿಮಾಗೆ ಸಹಿ ಮಾಡಿದ್ದಾರೆ. 

ಕತ್ರಿನಾ ಸಿನಿಮಾ:

ಶ್ರೀರಾಮ್ ರಾಘವನ್‌ ಅವರ ಮೆರಿ ಕ್ರಿಸ್ಮಸ್‌ ಸಿನಿಮಾದಲ್ಲಿ ವಿಜಯ್ ಸೇತುಪತಿಗೆ ಜೋಡಿಯಾಗಿ ಕತ್ರಿನಾ ಕಾಣಿಸಿಕೊಳ್ಳಲಿದ್ದಾರೆ. ಇದಾದ ನಂತರ ಸಲ್ಮಾನ್ ಖಾನ್ ಜೊತೆ ಟೈಗರ್ 3 ಸಿನಿಮಾದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಕೂಡ ಅಭಿನಯಿಸಿದ್ದು 2023 ಹಿದ್‌ ಹಬ್ಬದನ್ನು ಬಿಡುಗಡೆಯಾಗಲಿದೆ. ಸಿದ್ಧಾರ್ಥ್‌ ಮತ್ತು ಇಶಾನ್‌ ಜೊತೆ ಫೋನ್‌ ಬೂತ್ ಸಿನಿಮಾದಲ್ಲಿ ನಟಿಸಿದ್ದಾರೆ. ಫರ್ಹಾನ್‌ ಅಖ್ತರ್ ನಿರ್ದೇಶನ ಮಾಡುತ್ತಿರುವ ಜೀ ಲೇ ಝರಾ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್‌ ಜೊತೆ ಕತ್ರಿನಾ ಅಭಿನಯಿಸುತ್ತಿದ್ದಾರೆ.  

ಸೂಪರ್‌ಸ್ಟಾರ್ಸ್ ಸಿನಿಮಾ ಸೋಲಿಸಿದ ಕಡಿಮೆ ಬಜೆಟ್‌ನ ಬಾಲಿವುಡ್‌ ಚಿತ್ರಗಳಿವು

ರೊಮ್ಯಾಂಟಿಕ್ ಫೋಟೋ:

ವಿಕ್ಕಿ ಕೌಶಲ್ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಜೊತೆ ಹಸೆಮಣೆ ಏರಿದ ಬಳಿಕ ಮೊದಲ ಹುಟ್ಟುಹಬ್ಬ ಒಟ್ಟಿಗೆ ಆಚರಿಸಿಕೊಂಡಿದ್ದಾರೆ.ಅಂದಹಾಗೆ ಈ ಸ್ಟಾರ್ ಜೋಡಿ ಸದ್ಯ ನ್ಯೂಯಾರ್ಕ್ ನಲ್ಲಿದ್ದಾರೆ. ಅಲ್ಲೇ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ನಟಿ ಕತ್ರಿನಾ ಪತಿ ವಿಕ್ಕಿ ಕೌಶಲ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ವಿಕ್ಕಿ ಕೌಶಲ್ ಪತ್ನಿ ಕತ್ರಿನಾಗೆ ಮುತ್ತಿಡುತ್ತಿರುವ ಫೋಟೋ ಶೇರ್ ಮಾಡಿ ಕತ್ರಿನಾ ನ್ಯೂಯಾರ್ಕ್ ಬರ್ತಡೇ ಎಂದು ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿರುವ ಕತ್ರಿನಾ, ನ್ಯೂಯಾರ್ಕ್ ವಾಲಾ ಹುಟ್ಟುಹಬ್ಬ ನಾನು ಸರಳವಾಗಿ ಹೇಳುವುದಾದರೆ ನೀವು ಎಲ್ಲವನ್ನು ಉತ್ತಮಗೊಳಿಸುತ್ತೀರಿ ಎಂದು ಕತ್ರಿನಾ ಪ್ರೀತಿಯ್ಸಾಲ ಬರೆದು ಹಾರ್ಟ್ ಇಮೋಜಿ ಇರಿಸಿದ್ದಾರೆ.

IIFA 2022: ಅತ್ಯುತ್ತಮ ನಟಿ ಕೃತಿ, ನಟ ವಿಕ್ಕಿ ಕೌಶಲ್; ಇನ್ನು ಯಾರೆಲ್ಲ ಪ್ರಶಸ್ತಿ ಗೆದ್ದು ಬೀಗಿದ್ದಾರೆ, ಇಲ್ಲಿದೆ ಲಿಸ್ಟ್

ಗರ್ಭಿಣಿ ವದಂತಿ:

ಸ್ಟಾರ್ ದಂಪತಿ ಆಗಾಗ ಪ್ರವಾಸ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಕತ್ರಿನಾ ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ.ಈ ಬಗ್ಗೆ ವಿಕ್ಕಿ ಕೌಶಲ್ ಟೀಂ ಪ್ರತಿಕ್ರಿಯೆ ನೀಡಿದೆ. ಗರ್ಭಿಣಿ ವದಂತಿ ಬಗ್ಗೆ ಕತ್ರಿನಾ ಅಥವಾ ವಿಕ್ಕಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿಕ್ಕಿ ಟೀಂ ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ.ಕತ್ರಿನಾ ಕೈಫ್ ಗರ್ಭಿಣಿಯಲ್ಲ. ಸದ್ಯ ಅವರು ತಮ್ಮ ವೃತ್ತಿ ಜೀವನದ ಕಡೆ ಮತ್ತು ವಿಕ್ಕಿ ಕೌಶಲ್ ಜೊತೆ ದಾಂಪತ್ಯ ಜೀವನದ ಕಡೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಹೇಳಿದ್ದಾರೆ. ಈ ರೀತಿಯ ಸುದ್ದಿಯಿಂದ ಕತ್ರಿನಾ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios